ನಿರ್ದೇಶನಕ್ಕೆ ಕೈಹಾಕಿದ ನಟ ಕಿಶೋರ್​; ಹೊಸ ಚಿತ್ರ ಒಟಿಟಿ ಮೂಲಕ ಬಿಡುಗಡೆ

Black and White: ಕನ್ನಡ ಮತ್ತು ತಮಿಳು ಭಾಷೆಯಲ್ಲಿ ಹೆಚ್ಚಾಗಿ ನಟಿಸಿದ್ದ ಕಿಶೋರ್​ ಮೊದಲ ಬಾರಿಗೆ ‘ಬ್ಲ್ಯಾಕ್ ಆ್ಯಂಡ್ ವೈಟ್‘​ ಸಿನಿಮಾ ಮೂಲಕ ನಿರ್ದೇಶಕರಾಗಿ ಪರಿಚಯವಾಗುತ್ತಿದ್ದಾರೆ. ಈ ಸಿನಿಮಾ ತೆಲುಗಿನಲ್ಲೂ ಡಬ್​ ಆಗುತ್ತಿದೆ, ವಿಸ್ತಾರ ಬ್ಯಾನರ್​ ಮತ್ತು ಅನುಪಮಾ ಕುಮಾರ್​​​​ ಅವರ ಪ್ರೊಡಕ್ಷನ್​​ ಹೌಸ್​​, ಲುಕಿಂಗ್​ ಗ್ಲಾಸ್​ ಸಹಯೋಗದಲ್ಲಿ ಈ ಚಿತ್ರ ನಿರ್ಮಾಣವಾಗಿದೆ.

news18-kannada
Updated:May 9, 2020, 4:23 PM IST
ನಿರ್ದೇಶನಕ್ಕೆ ಕೈಹಾಕಿದ ನಟ ಕಿಶೋರ್​; ಹೊಸ ಚಿತ್ರ ಒಟಿಟಿ ಮೂಲಕ ಬಿಡುಗಡೆ
ಕಿಶೋರ್
  • Share this:
ಸ್ಯಾಂಡಲ್​ವುಡ್​ ನಟ ಕಿಶೋರ್​ ‘ಬ್ಲ್ಯಾಕ್ ಆ್ಯಂಡ್ ವೈಟ್‘​ ಸಿನಿಮಾಗೆ ಆ್ಯಕ್ಷನ್​ ಕಟ್​ ಹೇಳಿದ್ದು, ಸದ್ಯದಲ್ಲೇ ಈ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಅಂದಹಾಗೆ, ಈ ಸಿನಿಮಾವನ್ನು ಕಿಶೋರ್​ ಒಟಿಟಿ ಫ್ಲಾಟ್​​ಫಾರ್ಮ್​ ಮೂಲಕ ಬಿಡುಗಡೆ ಮಾಡಲು ಮುಂದಾಗಿದ್ದಾರೆ.

ಕನ್ನಡ ಮತ್ತು ತಮಿಳು ಭಾಷೆಯಲ್ಲಿ ಹೆಚ್ಚಾಗಿ ನಟಿಸಿದ್ದ ಕಿಶೋರ್​ ಮೊದಲ ಬಾರಿಗೆ ‘ಬ್ಲ್ಯಾಕ್ ಆ್ಯಂಡ್ ವೈಟ್‘​ ಸಿನಿಮಾ ಮೂಲಕ ನಿರ್ದೇಶಕರಾಗಿ ಪರಿಚಯವಾಗುತ್ತಿದ್ದಾರೆ. ಈ ಸಿನಿಮಾ ತೆಲುಗಿನಲ್ಲೂ ಡಬ್​ ಆಗುತ್ತಿದೆ, ವಿಸ್ತಾರ ಬ್ಯಾನರ್​ ಮತ್ತು ಅನುಪಮಾ ಕುಮಾರ್​​​​ ಅವರ ಪ್ರೊಡಕ್ಷನ್​​ ಹೌಸ್​​, ಲುಕಿಂಗ್​ ಗ್ಲಾಸ್​ ಸಹಯೋಗದಲ್ಲಿ ಈ ಚಿತ್ರ ನಿರ್ಮಾಣವಾಗಿದೆ.

‘ಬ್ಲ್ಯಾಕ್ ಆ್ಯಂಡ್ ವೈಟ್‘​ ಸೈಕಲಾಜಿಕಲ್​ ಥ್ರಿಲ್ಲರ್​ ಕಥೆಯನ್ನು ಹೊಂದಿದ್ದು, ಅನುಪಮಾ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. 2010ರಲ್ಲಿ ಬ್ಲಾಕ್​​ ಕಾಮಿಡಿ ಚಿತ್ರ ಇಷ್ಕಿಯಾ ಮೂಲಕ ಸಿನಿ ರಂಗ ಪ್ರವೇಶಿಸಿದ ಅನುಪಮಾ, ಬೆಜಾಯ್​​​ ನಂಬಿಯಾರ್​ ಅವರ ಡೇವಿಡ್​​, ಗೌತಮ್​​​ ವಾಸುದೇವ್​ ಮೆನನ್​​ ನಿರ್ದೇಶನದ ನಿತಾನಾ ಮುಂತಾಧ ಸಿನಿಮಾದಲ್ಲಿ ನಟಿಸಿದ್ದಾರೆ. ಇದೀಗ ಮತ್ತೊಂದು ವಿಭಿನ್ನ ಪಾತ್ರದ ಮೂಲಕ ಅನುಪಮಾ ‘ಬ್ಲ್ಯಾಕ್ ಆ್ಯಂಡ್ ವೈಟ್‘​ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಬ್ಲ್ಯಾಕ್ ಆ್ಯಂಡ್ ವೈಟ್


ಇನ್ನು ‘ಬ್ಲ್ಯಾಕ್ ಆ್ಯಂಡ್ ವೈಟ್‘​ ಸಿನಿಮಾದಲ್ಲಿ ರೋಜರ್​ ನಾರಾಯಣ್​​, ಶ್ರೀಕೃಷ್ಣ ದಯಾಳ್​​, ಸುರೇಖಾ ಅವರು ನಟಿಸಿದ್ದಾರೆ. ಚಿತ್ರಕ್ಕೆ ಕೀರ್ತನ್​​​​ ಸಂಗೀತ ಸಂಯೋನೆ ಮಾಡಿದ್ದಾರೆ. ನಾಗೇಶ್​ ಆಚಾರ್ಯ ಕ್ಯಾಮೆರಾ ಹಿಡಿದಿದ್ದಾರೆ. ಸದ್ಯದಲ್ಲೇ ಕಿಶೋರ್​​ ಮೊದಲ ಬಾರಿಗೆ ಆ್ಯಕ್ಷನ್​ ಕಟ್​ ಹೇಳಿರುವ ಬ್ಲಾಕ್​ ಆ್ಯಂಡ್​ ವೈಟ್​ ಸಿನಿಮಾ ಒಟಿಟಿ ಮೂಲಕ ತೆರೆ ಮೇಲೆ ಬರಲಿದೆ. ಪ್ರೇಕ್ಷಕರ ಪ್ರತಿಕ್ರಿಯೆ ಹೇಗಿರಲಿದೆ ಎಂದು ಕಾದು ನೋಡಬೇಕಿದೆ.

ತೆಲುಗಿನಲ್ಲಿ ಯಶ್ ಸಿನಿಮಾ ಅಕ್ರಮ ಪ್ರಸಾರ; ಕಾನೂನು ಹೋರಾಟ ನಡೆಸಲು ಮುಂದಾದ ಕೆ.ಜಿ.ಎಫ್​ ಟೀಂ
First published: May 9, 2020, 4:21 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading