HOME » NEWS » Entertainment » ACTOR KICHCHA SUDEEP PAILWAAN MOVIE MAKING VIDEO VIRAL IN YOUTUBE SCT

Pailwaan: ಶುರುವಾಗಿದೆ ಕಿಚ್ಚನ ಹವಾ; ವೈರಲ್ ಆಯ್ತು ಪೈಲ್ವಾನ್​ ಸಿನಿಮಾದ ಮೇಕಿಂಗ್ ವಿಡಿಯೋ

Pailwaan Making Video: ಇನ್ನು ನಾಲ್ಕೇ ನಾಲ್ಕು ದಿನಗಳಲ್ಲಿ ಪೈಲ್ವಾನ್ ಸಿನಿಮಾ ಕನ್ನಡ, ತೆಲುಗು, ತಮಿಳು, ಮಲೆಯಾಳಂ, ಹಿಂದಿ ಭಾಷೆಯಲ್ಲಿ ತೆರೆ ಕಾಣಲಿದೆ. ಈ ಸಿನಿಮಾದ ತೆಲುಗು ಅವತರಣಿಕೆಯ ಮೇಕಿಂಗ್ ವಿಡಿಯೋ ವೈರಲ್ ಆಗಿದೆ.

Sushma Chakre | news18-kannada
Updated:September 9, 2019, 9:01 AM IST
Pailwaan: ಶುರುವಾಗಿದೆ ಕಿಚ್ಚನ ಹವಾ; ವೈರಲ್ ಆಯ್ತು ಪೈಲ್ವಾನ್​ ಸಿನಿಮಾದ ಮೇಕಿಂಗ್ ವಿಡಿಯೋ
ಕಿಚ್ಚ ಸುದೀಪ್​
  • Share this:
ಕಿಚ್ಚ ಸುದೀಪ್ ಮೊದಲ ಬಾರಿಗೆ ಕುಸ್ತಿಪಟುವಾಗಿ ಕಾಣಿಸಿಕೊಳ್ಳಲಿರುವ 'ಪೈಲ್ವಾನ್'  ಸಿನಿಮಾ ಬಿಡುಗಡೆಗೆ ದಿನಗಣನೆ ಶುರುವಾಗಿದೆ. ಇನ್ನು ನಾಲ್ಕೇ ನಾಲ್ಕು ದಿನಗಳಲ್ಲಿ 'ಪೈಲ್ವಾನ್' ಸುಮಾರು 3 ಸಾವಿರಕ್ಕೂ ಅಧಿಕ ಥಿಯೇಟರ್​ಗಳಲ್ಲಿ ರಾರಾಜಿಸಲಿದ್ದಾನೆ. ಕನ್ನಡ ಮಾತ್ರವಲ್ಲದೆ ತೆಲುಗು, ತಮಿಳು, ಮಲೆಯಾಳಂ, ಹಿಂದಿ ಭಾಷೆಯಲ್ಲೂ 'ಪೈಲ್ವಾನ್' ತೆರೆ ಕಾಣಲಿದ್ದು, ತೆಲುಗು ಭಾಷೆಯ 'ಪೆಹಲ್ವಾನ್' ಸಿನಿಮಾದ ಮೇಕಿಂಗ್ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

'ಪೈಲ್ವಾನ್' ಸಿನಿಮಾದ ತೆಲುಗು ಅವತರಣಿಕೆಯನ್ನು ವಿತರಣೆ ಮಾಡಲಿರುವ ವಾರಾಹಿ ಚಲಚನಚಿತ್ರ ಸಂಸ್ಥೆ ಈ ಮೇಕಿಂಗ್ ವಿಡಿಯೋವನ್ನು ಯೂಟ್ಯೂಬ್​ನಲ್ಲಿ ಅಪ್​ಲೋಡ್ ಮಾಡಿದೆ. ಹ್ಯಾಟ್ರಿಕ್ ಹೀರೋ ಶಿವರಾಜ್​ಕುಮಾರ್ 'ಪೈಲ್ವಾನ್' ಸೆಟ್​ಗೆ ಬಂದು ಶುಭಾಶಯ ಕೋರಿರುವುದು, ಮಂಗಳೂರು ಮೂಲದ ಸುನೀಲ್ ಶೆಟ್ಟಿ ಮತ್ತು ಸುದೀಪ್ ನಡುವಿನ ದೃಶ್ಯಗಳು, ಕುಸ್ತಿಪಟುವಾಗಿ ಕಾಣಲು ಸುದೀಪ್ ಯಾವ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡರು ಎಂಬುದನ್ನು ಈ ಮೇಕಿಂಗ್ ವಿಡಿಯೋದಲ್ಲಿ ನೋಡಬಹುದು.

Pailwaan: ಕಿಚ್ಚ ಸುದೀಪ್​ ಅಭಿಮಾನಿಗಳಿಗೆ ಸಿಹಿಸುದ್ದಿ; ಪೈಲ್ವಾನ್ ಸಿನಿಮಾ ಬಗ್ಗೆ ತಿಳಿದುಕೊಳ್ಳಲು ಇಲ್ಲಿದೆ ಅವಕಾಶ!

ಕುಸ್ತಿ ಅಖಾಡದ ಸೆಟ್, ಸೆಟ್​ನಲ್ಲಿ ಸುನೀಲ್ ಶೆಟ್ಟಿ ಮತ್ತು ಸುದೀಪ್ ಕ್ರಿಕೆಟ್ ಆಟ, ನಾಯಕಿ ಆಕಾಂಕ್ಷಾ ಸಿಂಗ್ ಜೊತೆಗಿನ ಸೀನ್, ನಿರ್ಮಾಪಕಿ ಸ್ವಪ್ನಾ ಕೃಷ್ಣ ಹಾಗೂ ನಿರ್ದೇಶಕ ಕೃಷ್ಣ ಸಿನಿಮಾ ಸೆಟ್​ನಲ್ಲಿ ಹೇಗೆಲ್ಲ ಎಂಜಾಯ್ ಮಾಡಿದ್ದಾರೆ,  ಸಿನಿಮಾದ ಸಾಹಸ ದೃಶ್ಯಗಳ ಸಿದ್ಧತೆ ಈ 3 ನಿಮಿಷಗಳ ಮೇಕಿಂಗ್ ವಿಡಿಯೋದಲ್ಲಿದೆ.

Youtube Video


ಇಂದೂ ಕೂಡ ಕಿಚ್ಚನಿಗೆ ಪ್ರಶ್ನೆ ಕೇಳಬಹುದು:

ಈ ಸಿನಿಮಾ ಬಗ್ಗೆ ಅಭಿಮಾನಿಗಳಿಗೆ ಏನಾದರೂ ಪ್ರ್ರಶನೆಗಳಿದ್ದರೆ ಅವರೊಂದಿಗೆ ನೇರವಾಗಿ ಚಾಟ್ ಮಾಡಲು ನಿನ್ನೆ ಸಂಜೆ ಸುದೀಪ್ ಟ್ವಿಟ್ಟರ್​ನಲ್ಲಿ ಲೈವ್ ಬಂದಿದ್ದರು. ಆ ಲೈವ್ ಇಂದೂ ಮುಂದುವರೆಯಲಿದ್ದು, AskPailwaan ಎಂಬ ಹ್ಯಾಶ್​ಟ್ಯಾಗ್​ನೊಂದಿಗೆ ಅಭಿಮಾನಿಗಳು ತಮ್ಮ ಪ್ರಶ್ನೆಗಳನ್ನು ಕೇಳಬಹುದು.


ಶುಕ್ರವಾರ ಹೈದರಾಬಾದ್​ನಲ್ಲಿ ನಡೆದ 'ಪೈಲ್ವಾನ್' ಸಿನಿಮಾದ ಪ್ರಿ- ರಿಲೀಸ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ಕಿಚ್ಚ ಸುದೀಪ್. ಈ ಕಾರ್ಯಕ್ರಮಕ್ಕೆ ಶುಭ ಹಾರೈಸಲು ಬಂದಿದ್ದ ಬ್ಯಾಡ್ಮಿಂಟನ್ ಲೋಕದ ಚಿನ್ನದ ಹುಡುಗಿ ಪಿ.ವಿ. ಸಿಂಧು ಜೊತೆ ಕಿಚ್ಚ ಸುದೀಪ್ ಸೆಲ್ಫೀ ಕ್ಲಿಕ್ಕಿಸಿಕೊಂಡು ಅದನ್ನು ಟ್ವಿಟ್ಟರ್​ನಲ್ಲಿ ಅಪ್​ಲೋಡ್ ಮಾಡಿದ್ದರು. ನಮ್ಮ ದೇಶದ ಹೆಮ್ಮೆಯ ಆಟಗಾರ್ತಿಯೊಂದಿಗಿನ ಫೋಟೋ ಎಂದು ಟ್ವೀಟ್ ಮಾಡಿದ್ದ ಸುದೀಪ್ ಬಗ್ಗೆ ಅಭಿಮಾನಿಗಳು ಮೆಚ್ಚುಗೆಯ ಮಾತುಗಳನ್ನಾಡಿದ್ದರು. ತಾನೊಬ್ಬ ಸ್ಟಾರ್ ಆಗಿದ್ದರೂ ಕ್ರೀಡಾಲೋಕದ ಸ್ಟಾರ್ ಜೊತೆ ಫೋಟೋ ಕ್ಲಿಕ್ಕಿಸಿಕೊಂಡು ತಮ್ಮ ಪೇಜ್​ನಲ್ಲಿ ಪೋಸ್ಟ್​ ಮಾಡಿದ್ದ ಸುದೀಪ್​ಗೆ ಟ್ವಿಟ್ಟಿಗರು ಶಹಬ್ಬಾಸ್​ ಎಂದಿದ್ದರು.



5 ಭಾಷೆಗಳಲ್ಲಿ ತೆರೆಗೆ:

'ಪೈಲ್ವಾನ್' ಸಿನಿಮಾ ಮುಂದಿನ ವಾರವೇ (ಸೆ. 12) ತೆರೆ ಕಾಣಲಿದ್ದು, ಕನ್ನಡ, ತಮಿಳು, ತೆಲುಗು, ಹಿಂದಿ, ಮಲಯಾಳಂ ಭಾಷೆಗಳಲ್ಲಿ 'ಪೈಲ್ವಾನ್' ರಿಲೀಸ್ ಆಗಲಿದೆ. ಮೊದಲ ಬಾರಿಗೆ ಕುಸ್ತಿಪಟುವಿನ ಪಾತ್ರದಲ್ಲಿ ಕಾಣಿಸಿಕೊಂಡಿರುವ ಅಭಿನಯ ಚಕ್ರವರ್ತಿ ಸುದೀಪ್ ಅದಕ್ಕಾಗಿ ಜಿಮ್​ನಲ್ಲಿ ಸಾಕಷ್ಟು ಬೆವರಳಿಸಿದ್ದಾರೆ. ಈಗಾಗಲೇ ಟೀಸರ್, ಟ್ರೈಲರ್, ಹಾಡುಗಳಿಂದ ಸಾಕಷ್ಟು ನಿರೀಕ್ಷೆ ಸೃಷ್ಟಿಸಿರುವ ಪೈಲ್ವಾನ್ ಸಿನಿಮಾವನ್ನು ಗಜಕೇಸರಿ ಖ್ಯಾತಿಯ ನಿರ್ದೇಶಕ ಕೃಷ್ಣ ನಿರ್ದೇಶಿಸಿದ್ದಾರೆ. ಸ್ವಪ್ನಾ ಕೃಷ್ಣ ಈ ಸಿನಿಮಾಗೆ ಬಂಡವಾಳ ಹೂಡಿದ್ದಾರೆ.

'ಪೈಲ್ವಾನ್' ಸಿನಿಮಾಗೆ ಕನ್ನಡದ ಖ್ಯಾತ ನಟ ರಮೇಶ್ ಅರವಿಂದ್ ಹಿನ್ನೆಲೆ ಧ್ವನಿ ನೀಡಿರುವುದು ಮತ್ತೊಂದು ವಿಶೇಷ. ಆಕಾಂಕ್ಷಾ ಸಿಂಗ್​ ಪೈಲ್ವಾನ್​ ಸುದೀಪ್​ಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.

Youtube Video
First published: September 8, 2019, 9:27 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories