Kichcha Sudeep: ಅಕುಲ್ ಬಾಲಾಜಿಗೆ ದುಬಾರಿ ಬೈಕ್​ನನ್ನು ಉಡುಗೊರೆಯಾಗಿ ನೀಡಿದ ಕಿಚ್ಚ ಸುದೀಪ್

ಸುದೀಪ್​ ತಮ್ಮ ಹುಟ್ಟುಹಬ್ಬದಂದು ನಟ ಅಕುಲ್ ಬಾಲಾಜಿಗೆ ಉಡುಗೊರೆಯೊಂದನ್ನು ನೀಡಿದ್ದಾರೆ. ನಟ, ನಿರೂಪಕ ಅಕುಲ್ ಬಾಲಾಜಿಗೆ ಸುದೀಪ್, ತಮ್ಮ ಹುಟ್ಟುಹಬ್ಬದ ದಿನದಂದೇ ದುಬಾರಿ ಬೈಕ್ ಒಂದನ್ನು ಉಡುಗೊರೆಯನ್ನಾಗಿ ನೀಡಿದ್ದಾರೆ.

ಅಕುಲ್​ಗೆ ಬೈಕ್​ ಗಿಫ್ಟ್​ ಕೊಟ್ಟ ಸುದೀಪ್

ಅಕುಲ್​ಗೆ ಬೈಕ್​ ಗಿಫ್ಟ್​ ಕೊಟ್ಟ ಸುದೀಪ್

  • Share this:
ಸ್ಯಾಂಡಲ್​ವುಡ್​ ಬಾದ್​ಷಾ (Sandalwood Badshah) ಅಂದರೆ ಯಾರಿಗೆ ಇಷ್ಟ ಇಲ್ಲ. ಕನ್ನಡ ಚಿತ್ರರಂಗದ ಕಿಚ್ಚ ಸುದೀಪ್ (Kiccha Sudeep)​ ಅಂದರೆ ನೂರು ರೂಪಾಯಿ ನೋಟು ನೋಡಿದ ಹಾಗೇ ಇರುತ್ತೆ. ಯಾಕೆ ಗೊತ್ತಾ? 100 ರೂಪಾಯಿ ನೋಟಿನಲ್ಲಿ ಎಲ್ಲಾ ಭಾಷೆ ಇರುವ ಹಾಗೆ, ಕಿಚ್ಚನ ನೋಡಿದರೆ ಪರಿಪೂರ್ಣ ನಟ ಎಂದರೆ ಅತಿಶೋಕ್ತಿಯಲ್ಲ. ಹೀರೋ (Hero) , ವಿಲನ್ (Villain) ​, ಸಪೋರ್ಟಿಂಗ್​ ಕ್ಯಾರಕ್ಟರ್​, ಗೆಸ್ಟ್​ ಕ್ಯಾರೆಕ್ಟರ್​ ಹೀಗೆ ಕಿಚ್ಚ ಮಾಡದೇ ಇರುವ ಪಾತ್ರವೇ ಇಲ್ಲ ಅನ್ನಬಹುದು. ಇಂಥಹ ನಟನಿಗೆ ಇಂದು ಜನ್ಮದಿನ (Kiccha Sudeep Birthday) ದ ಸಂಭ್ರಮ. ಸುದೀಪ್ ಅವರ ಇಂಡಸ್ಟ್ರಿ ಸ್ನೇಹಿತರು, ಆಪ್ತರು ಸಹ ಬಾದ್‌ಶಾ ಬರ್ತಡೇಗೆ ಪ್ರೀತಿಯಿಂದ ಶುಭಕೋರಿದ್ದಾರೆ. ಗುಣದಲ್ಲಿ ಮಾಣಿಕ್ಯ, ಅಭಿನಯದಲ್ಲಿ ಚಕ್ರವರ್ತಿ, ಅಭಿಮಾನಿಗಳ ಬಾದ್​ಷಾ, ಕಿಚ್ಚ ಸುದೀಪ್ ಅವರು ಇಂದು 49ನೇ ವಸಂತಕ್ಕೆ ಸುದೀಪ್​ ಕಾಲಿಟ್ಟಿದ್ದಾರೆ. 

ಅಕುಲ್​​ ಬಾಲಾಜಿಗೆ ಬೈಕ್​ ಗಿಫ್ಟ್​ ಕೊಟ್ಟ ಸುದೀಪ್​

ನಟ ಸುದೀಪ್​ ಹುಟ್ಟುಹಬ್ಬವನ್ನು ಅಭಿಮಾನಿಗಳು ಹಬ್ಬದಂತೆ ಆಚರಿಸುತ್ತಿದ್ದಾರೆ. ಹಲವು ಅಭಿಮಾನಿಗಳು ಕಿಚ್ಚನ ಮನೆಯ ಮುಂದೆಯೇ ಜಮಾಯಿಸಿದ್ರು. ಕೇಕ್ ಕಟ್​ ಮಾಡಿಸಿ ಶುಭಕೋರಿದ್ದಾರೆ. ಆದರೆ ಇಂದು ಸುದೀಪ್​ ಮಾತ್ರ ತಮ್ಮ ಹುಟ್ಟುಹಬ್ಬದಂದು ನಟ ಅಕುಲ್ ಬಾಲಾಜಿಗೆ ಉಡುಗೊರೆಯೊಂದನ್ನು ನೀಡಿದ್ದಾರೆ. ನಟ, ನಿರೂಪಕ ಅಕುಲ್ ಬಾಲಾಜಿಗೆ ಸುದೀಪ್, ತಮ್ಮ ಹುಟ್ಟುಹಬ್ಬದ ದಿನದಂದೇ ದುಬಾರಿ ಬೈಕ್ ಒಂದನ್ನು ಉಡುಗೊರೆಯನ್ನಾಗಿ ನೀಡಿದ್ದಾರೆ. ಕಿಚ್ಚ ಸುದೀಪ್​​ ತಮಗೆ ಉಡುಗೊರೆ ನೀಡಿದ ಬೈಕ್ ಜೊತೆ ನಿಂತು ಅಕುಲ್ ವಿಡಿಯೋ ಒಂದನ್ನು ಮಾಡಿ ಅಪ್‌ಲೋಡ್ ಮಾಡಿದ್ದಾರೆ.





ಇಂದು ಕಿಚ್ಚೋತ್ಸವ ಎಂದ ಅಕುಲ್​ ಬಾಲಾಜಿ

ಇಂದು ಕಿಚ್ಚೋತ್ಸವ. ಅವರ ಹುಟ್ಟುಹಬ್ಬದಂದು ನಾವು ಅವರಿಗೆ ಉಡುಗೊರೆ ನೀಡುತ್ತೇವೆ. ಆದರೆ ಇಂದು ಅವರೇ ನನಗೆ ಉಡುಗೊರೆ ನೀಡಿದ್ದಾರೆ. ಈ ಬೈಕ್ ಉಡುಗೊರೆ ನೀಡಿದ್ದಕ್ಕೆ ನಾನು ಬಹಳ ಆಭಾರಿಯಾಗಿದ್ದೇನೆ'' ಎಂದಿದ್ದಾರೆ ಅಕುಲ್ ಬಾಲಾಜಿ. ವಿಡಿಯೋದಲ್ಲಿ ನಟ ಸುದೀಪ್ ಸಹ ಇದ್ದು, ಅಕುಲ್‌ ಅನ್ನು ತಬ್ಬಿಕೊಂಡು ಧನ್ಯವಾದ ಹೇಳಿದ್ದಾರೆ.

ಇದನ್ನೂ ಓದಿ: Radhika Pandit: ಮಕ್ಕಳ ಜೊತೆ ಗಣಪತಿ ಹಬ್ಬ ಆಚರಿಸಿದ ರಾಧಿಕಾ ಪಂಡಿತ್; ಐರಾ, ಯಥರ್ವ್ ಫುಲ್ ಬ್ಯುಸಿ!

ಬಿಎಂಡಬ್ಲುನ ಬೈಕ್ ಅನ್ನು ಕಿಚ್ಚ ಅಕುಲ್‌ ಬಾಲಾಜಿಗೆ ಉಡುಗೊರೆಯಾಗಿ ನೀಡಿದ್ದಾರೆ. ಬಿಎಂಡಬ್ಲು ಬೈಕ್‌ನ ಬೆಲೆ ಕನಿಷ್ಟ 3 ರಿಂದ ಐದು ಲಕ್ಷ ಎನ್ನಲಾಗುತ್ತದೆ. KA 05 KR 3666 ನೊಂದಣಿ ಸಂಖ್ಯೆಯ ಈ ಬೈಕ್ 2019 ರಲ್ಲಿ ದಕ್ಷಿಣ ಬೆಂಗಳೂರಿನಲ್ಲಿ ನೊಂದಣಿ ಆಗಿದ್ದು, ಬೈಕ್ ಪ್ರಸ್ತುತ ಅಕುಲ್ ಬಾಲಾಜಿ ಹೆಸರಿನಲ್ಲಿದೆ. ಈ ಬೈಕ್‌ಗೆ ಅಕುಲ್ ಬಾಲಾಜಿ ಎರಡನೇ ಮಾಲೀಕರಾಗಿರುವ ಬಗ್ಗೆಯೂ ವಾಹನ ವೆಬ್‌ಸೈಟ್‌ನಲ್ಲಿ ಮಾಹಿತಿ ಇದೆ.

ಇದನ್ನೂ ಓದಿ: Kichcha Sudeep: ಅರ್ಥಪೂರ್ಣವಾಗಿ ಹುಟ್ಟುಹಬ್ಬ ಆಚರಿಸಿಕೊಂಡ ಕಿಚ್ಚ ಸುದೀಪ್

ಅರ್ಥಪೂರ್ಣವಾಗಿ ಹುಟ್ಟುಹಬ್ಬ ಆಚರಣೆ
 ಸುದೀಪ್ ಚಾರಿಟಬಲ್ ಟ್ರಸ್ಟ್ ಮೂಲಕ ಕಾಲು ಇಲ್ಲದ ಇಬ್ಬರಿಗೆ ಕೃತಕ ಕಾಲು ಜೋಡಿಸೋ ಮೂಲಕ ಇಬ್ಬರ ಬಾಳಲ್ಲಿ ಕಿಚ್ಚ ಸುದೀಪ್​ ಬೆಳಕಾಗಿದ್ದಾರೆ. ಕಿಚ್ಚ ಚಾರಿಟಬಲ್ ಟ್ರಸ್ಟ್ ಮೂಲಕ ಈಗಾಗಲೇ ಸಾಕಷ್ಟು ಸಮಾಜ ಸೇವೆ ಮಾಡಿರೋ ಸುದೀಪ್​, ಇದೀಗ ಪುಟ್ಟ ಬಾಲಕ ಹಾಗೂ ಯುವಕನೋರ್ವನಿಗೆ ಕೃತಕ ಕಾಲು ಜೋಡಿಸಲು ನೆರವಾಗಿದ್ದಾರೆ.
Published by:Pavana HS
First published: