Kiccha Sudeep: ಆ್ಯಸಿಡ್​ ದಾಳಿ ಸಂತ್ರಸ್ತೆಯ ಆಸೆ ಈಡೇರಿಸಿದ ಕಿಚ್ಚ, ಇದಕ್ಕೆ ಹೇಳೋದು ಸುದೀಪ ಅಭಿಮಾನಿಗಳ ಬಾಳಿಗೆ ನಂದಾದೀಪ!

ಆ್ಯಸಿಡ್ ದಾಳಿಗೆ ತುತ್ತಾಗಿದ್ದ ಸಂತ್ರಸ್ತೆಯೊಬ್ಬರ ಆಸೆಯನ್ನು ಕಿಚ್ಚ ಸುದೀಪ ಈಡೇರಿಸಿದ್ದಾರೆ. ನಟ ಕಿಚ್ಚ ಸುದೀಪ್ ಆಕೆಗೆ ಹುರಿದುಂಬಿಸುವ ಮೂಲಕ ಆತ್ಮ ಸ್ಥೈರ್ಯ ತುಂಬುವ ಕಾರ್ಯ ಮಾಡಿದ್ದಾರೆ.

  • Share this:
ಆ್ಯಸಿಡ್ ದಾಳಿಗೆ ತುತ್ತಾಗಿದ್ದ ಸಂತ್ರಸ್ತೆಯೊಬ್ಬರ ಆಸೆಯನ್ನು ಕಿಚ್ಚ ಸುದೀಪ ಈಡೇರಿಸಿದ್ದಾರೆ. ನಟ ಕಿಚ್ಚ ಸುದೀಪ್ ಆಕೆಗೆ ಹುರಿದುಂಬಿಸುವ ಮೂಲಕ ಆತ್ಮ ಸ್ಥೈರ್ಯ ತುಂಬುವ ಕಾರ್ಯ ಮಾಡಿದ್ದಾರೆ.

24 ವರ್ಷದ ಆಶಾ (ಹೆಸರು ಬದಲಾಯಿಸಲಾಗಿದೆ) ಮೇಲೆ ಆಸಿಡ್ ದಾಳಿಯಾಗಿತ್ತು. ಬಳಿಕ ನಿರಂತರ ಚಿಕಿತ್ಸೆಯ ಬಳಿಕ ಆಕೆ ಪ್ರಾಣಾಪಾಯದಿಂದ ಪಾರಾಗಿದ್ದರು. ಗ್ರಾಫ್ಟಿಂಗ್, ನ್ಯೂಟ್ರಿಷನ್ ಥೆರಪಿ, ಡ್ರೆಸ್ಸಿಂಗ್, ಫಿಸಿಯೋಥೆರಪಿಯ ಹಲವಾರು ಚಿಕಿತ್ಸೆಗಳನ್ನು ಈ ಯುವತಿ ಪಡೆಯುತ್ತಿದ್ದಾರೆ.

ಈ ನಡುವೆ ಸಂತ್ರಸ್ತೆ ತಮ್ಮ ನೆಚ್ಚಿನ ನಟ ಕಿಚ್ಚ ಸುದೀಪ್ ರನ್ನು ನೋಡಬೇಕು ಎಂದು ತನ್ನ ತಂದೆ-ತಾಯಿ ಬಳಿ ಹೇಳಿಕೊಂಡಿದ್ದಾರೆ. ಇದಕ್ಕೆ ಸ್ಪಂದಿಸಿದ ಕಿಚ್ಚ ಸುದೀಪ್​ ಅವರ ಆಸೆಯನ್ನು ಈಡೇರಿಸಿದ್ದಾರೆ.

ಸಂತ್ರಸ್ತೆ ಆಶಾ ಎರಡು ತಿಂಗಳ ನಿರಂತಕ ಚಿಕಿತ್ಸೆ ಬಳಿಕ ಆಕೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಗುಣಮುಖರಾದ ಬಳಿಕ ಸಂತ್ರಸ್ಥೆ ಆಶಾ ಸುದೀಪ್ ರೊಂದಿಗೆ ಮಾತನಾಡಿದ್ದು, ಅವರ ಮಹದಾಸೆ ಈಡೇರಿದ ಬಳಿಕ ಸಂತ್ರಸ್ಥೆಯ ಮುಖದಲ್ಲಿ ನಗು ಮರಳಿದೆ.

ನಟ ಸುದೀಪ್ ಅವರು ಆಶಾರೊಂದಿಗೆ ಮಾತನಾಡಿದರು. ಸುದೀಪ್ ಜೊತೆ ಮಾತನಾಡಿದ ಬಳಿಕ ಆಶಾ ಸಂತಸದಿಂದ್ದಾಳೆ ಎಂದು ಆಶಾ ಅವರ ಚಿಕ್ಕಪ್ಪ ಸುಂದರೇಶ್ ಹೇಳಿದರು. ಇನ್ನೂ ಕಿಚ್ಚ ಸುದೀಪ್​ ಆದಷ್ಟು ಬೇಗ ಭೇಟಿಯಾಗುತ್ತೇನೆ ಎಂದು ಹೇಳಿದ್ದಾರೆ.

ಆ್ಯಸಿಡ್ ದಾಳಿ ಸಂತ್ರಸ್ತೆ ಆರೋಪಿಯನ್ನು ಬಂಧಿಸಲಾಗಿದೆ ಎಂದು ನಾವು ಅವಳಿಗೆ ಸುಳ್ಳು ಹೇಳಿದ್ದರೂ, ಆಕೆಗೆ ಈಗ ಸತ್ಯ ತಿಳಿದಿದೆ. ಆಘಾತದಿಂದ ಚೇತರಿಸಿಕೊಂಡಿದ್ದಾಳೆ ಎಂದು ಕುಟುಂಬಸ್ಥರು ಹೇಳಿದ್ದಾರೆ

ಇನ್ನೂ ಆಕೆಗೆ ಸ್ವಂತವಾಗಿ ನಡೆಯಲು ಮತ್ತು ವಾಶ್ ರೂಂ ಬಳಸಲು ಸಾಧ್ಯವಾಗುತ್ತಿಲ್ಲ. ಅವಳ ಎಡಗಣ್ಣಿನ ಮೇಲಿನ ಗಾಯವು ಅವಳನ್ನು ಇನ್ನೂ ಕಾಡುತ್ತಿದೆ.

ಅವಳು ತನ್ನನ್ನು ತೊಡಗಿಸಿಕೊಳ್ಳಲು ಪುಸ್ತಕಗಳನ್ನು ಓದುತ್ತಿದ್ದಾಳೆ, ಸಂಗೀತವನ್ನು ಕೇಳುತ್ತಿದ್ದಾಳೆ” ಎಂದು ಆಕೆಯ ಚಿಕ್ಕಪ್ಪ ಸುಂದರೇಶ್ ಹೇಳಿದರು.
Published by:Vasudeva M
First published: