ಚರ್ಚಾಸ್ಪದವಾದ ಟ್ವೀಟ್‌ಗಳು (Tweet) ಹಾಗೂ ಬಾಲಿವುಡ್ ನಟ ನಟಿಯರ ಕುರಿತಾಗಿ ಮುಕ್ತವಾಗಿ ಹಾಗೂ ಅಹಿತಕರವಾಗಿ ಮಾಡುವ ಟೀಕೆಗಳಿಂದಾಗಿ ಕಮಾಲ್ ಆರ್ ಖಾನ್ (Kamaal R Khan) ಆಗಾಗ್ಗೆ ತೊಂದರೆಗೆ ಸಿಲುಕಿರುವುದೇ ಹೆಚ್ಚು. ಕೆಆರ್‌ಕೆ (KRK) ಎಂದೇ ಖ್ಯಾತರಾಗಿರುವ ನಟ ವಿಮರ್ಶಕ ಕಮಾಲ್ ಅವರನ್ನು 2020 ರಲ್ಲಿ ಮಾಡಿದ ವಿವಾದಾತ್ಮಕ ಟ್ವೀಟ್ (Controversial tweet) ಕಾರಣ ಮಲಾಡ್ ಪೊಲೀಸರು ಬಂಧಿಸಿದ್ದಾರೆ. ವಿಮಾನ ನಿಲ್ದಾಣದಲ್ಲಿ (Airport) ಕೆಆರ್‌ಕೆ ಯನ್ನು ತಡೆಹಿಡಿಯಲಾಯಿತು ಹಾಗೂ ವಿಚಾರಣೆಯ ನಂತರ ಬಂಧಿಸಲಾಯಿತು (Arrest). ಯುವ ಸೇನಾ ಸದಸ್ಯರಾದ ರಾಹುಲ್ ಕನಾಲ್ ಮಲಾಡ್ ಠಾಣೆಯಲ್ಲಿ ಕೆಆರ್‌ಕೆ ವಿರುದ್ಧ ದೂರು ದಾಖಲಿಸಿದ್ದು ಈ ಹಿನ್ನಲೆಯಲ್ಲಿ ಮಲಾಡ್ ಪೊಲೀಸರು ಕೆಆರ್‌ಕೆ ಯನ್ನು ಬಂಧಿಸಿದ್ದಾರೆ.
ಕೆಆರ್‌ಕೆ 2020 ರಲ್ಲಿ ಇರ್ಫಾನ್ ಹಾಗೂ ರಿಶಿ ಕಪೂರ್ ಕುರಿತು ಅವಹೇಳನಕಾರಿ ಟ್ವೀಟ್‌ಗಳನ್ನು ಮಾಡಿದ್ದರು. ನಟರ ಬಗ್ಗೆ ಕೆಆರ್‌ಕೆ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದಕ್ಕಾಗಿ ನಟನನ್ನು ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
2020 ರಲ್ಲಿ ಇರ್ಫಾನ್ ಹಾಗೂ ರಿಶಿ ಕಪೂರ್ ಕುರಿತು ವಿವಾದಾತ್ಮಕ ಹೇಳಿಕೆ
ವಿವಾದಾತ್ಮಕ ಟ್ವೀಟ್‌ಗಳಿಂದ ಹೆಸರುವಾಸಿಯಾಗಿರುವ ಕೆಆರ್‌ಕೆ ಆಲಿಯಾಸ್ ಕಮಾಲ್ ಆರ್ ಖಾನ್ 2020 ರಲ್ಲಿ ಇರ್ಫಾನ್ ಹಾಗೂ ರಿಶಿ ಕಪೂರ್‌ರನ್ನು ಗುರಿಯಾಗಿರಿಸಿಕೊಂಡು ಸಾಮಾಜಿಕ ಮಾಧ್ಯಮದಲ್ಲಿ ಅವಹೇಳನಕಾರಿ ಟ್ವೀಟ್‌ಗಳ ಸುರಿಮಳೆಗೈದಿದ್ದರು. ಈ ಸಂಬಂಧಿತವಾಗಿ 2020 ರಲ್ಲಿ ಕೆಆರ್‌ಕೆ ವಿರುದ್ಧ ನಿಗಾವಣೆ ನೋಟೀಸ್ ಜಾರಿ ಮಾಡಲಾಯಿತು ಹಾಗೂ ನಟನ ವಿರುದ್ಧ ಎಫ್‌ಐಆರ್ ದಾಖಲಿಸಲಾಯಿತು. ಯುವ ಸೇನಾ ಸದಸ್ಯರಾದ ರಾಹುಲ್ ಕನಾಲ್ ಕೆಆರ್‌ಕೆ ವಿರುದ್ಧ ದೂರು ದಾಖಲಿಸಿದ್ದಾರೆ. ಕೆಆರ್‌ಕೆಯನ್ನು ರಾತ್ರಿ 11 ಗಂಟೆಗೆ ಬೋರಿವಿಲಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತದೆ. ಕೆಆರ್‌ಕೆಯನ್ನು ಐಪಿಸಿ ಸೆಕ್ಷನ್ 153A, 294, 500, 501, 505, 67, 98 ಅಡಿಯಲ್ಲಿ ಬಂಧಿಸಲಾಗಿದೆ.
ಇದನ್ನೂ ಓದಿ: Harish Raj: ಜೊತೆ ಜೊತೆಯಲಿ ಆರ್ಯವರ್ಧನ್ ಪಾತ್ರಕ್ಕೆ ಹರೀಶ್ ರಾಜ್ ಬರೋದು ಪಕ್ಕಾ! ಬಲ್ಲ ಮೂಲಗಳಿಂದ ಮಾಹಿತಿ
ನನ್ನ ದೂರಿನ ಅನ್ವಯ ಕಮಾಲ್ ಆರ್ ಖಾನ್ ಅವರನ್ನು ಇಂದು ಬಂಧಿಸಲಾಗಿದೆ. ಮುಂಬೈ ಪೊಲೀಸರ ಈ ನಡೆಯನ್ನು ನಾನು ಶ್ಲಾಘಿಸುತ್ತೇನೆ. ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಕಾಮೆಂಟ್ ಮಾಡುವ ಕೆಆರ್‌ಕೆ ಕಾಮೆಂಟ್‌ಗಳಲ್ಲಿ ಬಳಸುವ ಪದ ಪ್ರಯೋಗ ಕೂಡ ಅಸಭ್ಯವಾಗಿರುತ್ತದೆ. ಸಮಾಜದಲ್ಲಿ ಈ ರೀತಿಯ ನಡವಳಿಕೆ ಸ್ವೀಕಾರಾರ್ಹವಲ್ಲ. ಆತನನ್ನು ಬಂಧಿಸುವ ಮೂಲಕ, ಮುಂಬೈ ಪೊಲೀಸರು ಇಂತಹ ವ್ಯಕ್ತಿಗಳು ಹಾಗೂ ಕೃತ್ಯವೆಸಗುವವರ ವಿರುದ್ಧ ಬಲವಾದ ಸಂದೇಶ ಸಾರಿದ್ದಾರೆ ಎಂದು ರಾಹುಲ್ ಕನಾಲ್ ತಿಳಿಸಿದ್ದಾರೆ.
ಕಮಾಲ್ ಆರ್ ಖಾನ್ ಯಾರು
ಕಮಾಲ್ ಆರ್ ಖಾನ್ ಬಾಲಿವುಡ್‌ನಲ್ಲಿ ಮುಕ್ತವಾದ ಟೀಕೆಗಳನ್ನು ಮಾಡುವ ಮೂಲಕ ಖ್ಯಾತರಾಗಿದ್ದಾರೆ. ಹಿಂದಿ ಹಾಗೂ ಭೋಜ್‌ಪುರಿ ಚಿತ್ರಗಳಲ್ಲಿ ಬಣ್ಣ ಹಚ್ಚಿರುವ ಕೆಆರ್‌ಕೆ ಹಲವಾರು ಚಿತ್ರಗಳನ್ನು ನಿರ್ಮಿಸಿದ್ದಾರೆ. ಬಿಗ್ ಬಾಸ್ 3 ಯಲ್ಲೂ ಕೆಆರ್‌ಕೆ ಭಾಗವಹಿಸಿದ್ದರು. ಸೆಲೆಬ್ರಿಟಿಗಳ ಕುರಿತು ಕೆಟ್ಟದಾಗಿ ಟ್ವೀಟ್ ಮಾಡುವ ಚಾಳಿ ಕೂಡ ಈ ನಟನಿಗಿದೆ. ಇದರಿಂದ ಸದಾ ವಿವಾದಗಳ ಸುಳಿಯಲ್ಲೇ ಕಮಾಲ್ ಇರುತ್ತಾರೆ.
ಚಿತ್ರೋದ್ಯಮದಲ್ಲಿ ಸೋಲು ಕಂಡ ನಟ
ಮೂಲಗಳ ಪ್ರಕಾರ ಚಿತ್ರೋದ್ಯಮದಲ್ಲಿ ಕಮಾಲ್ ಬರೇ ಸೋಲನ್ನೇ ಕಂಡಿದ್ದಾರೆ. ಹೀಗಾಗಿ ಬೇರೆ ನಟ ನಟಿಯರ ಚಿತ್ರಗಳ ಬಗ್ಗೆ ಅವಹೇಳನಕಾರಿಯಾಗಿ ಕಾಮೆಂಟ್ ಮಾಡುವುದು ಟ್ವೀಟ್ ಮಾಡುವುದು, ಅಸಭ್ಯ ಭಾಷೆಗಳನ್ನು ಬಳಸುವುದನ್ನು ಕೆಆರ್‌ಕೆ ಕಾಯಕವನ್ನಾಗಿ ಮಾಡಿಕೊಂಡಿದ್ದಾರೆ. ತಮ್ಮದೇ ಯೂಟ್ಯೂಬ್ ಚಾನೆಲ್ ಹೊಂದಿರುವ ಕೆಆರ್‌ಕೆ 'ದೇಶದ್ರೋಹಿ' ಸಿನಿಮಾ ನಿರ್ದೇಶಿಸಿ ತಾವೇ ನಟಿಸಿದ್ದರು. ಆದರೆ ಹೀನಾಯವಾಗಿ ಸೋಲುಂಡ ಈ ಚಿತ್ರವನ್ನು ಚಿತ್ರ ವಿಮರ್ಶಕರು ಅತ್ಯಂತ ಕೆಟ್ಟ ಸಿನಿಮಾ ಎಂದು ಜರೆದಿದ್ದಾರೆ.
ಇದನ್ನೂ ಓದಿ: Bollywood: ಏನಿಲ್ಲ ಏನಿಲ್ಲ ಟೈಗರ್ ಶ್ರಾಫ್- ದಿಶಾ ಪಾಟ್ನಿ ನಡುವೆ ಏನಿಲ್ಲ! ಶಾಕಿಂಗ್ ಹೇಳಿಕೆ ಕೊಟ್ಟ ಕೃಷ್ಣ ಶ್ರಾಫ್
ಬಾಲಿವುಡ್‌ನ ಪ್ರತಿಭಾವಂತ ನಟ ನಟಿಯರ ಬಗ್ಗೆ ಎಗ್ಗಿಲ್ಲದೆ ವಿಮರ್ಶಾತ್ಮಕವಾಗಿ ಕಾಮೆಂಟ್ ಮಾಡುವ ಕೆಆರ್‌ಕೆ ತಮ್ಮ ಯೂಟ್ಯೂಬ್ ಚಾನಲ್‌ನಲ್ಲಿ ವಿಮರ್ಶೆಗಳನ್ನು ಮಾಡುತ್ತಾರೆ. ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ಸಕ್ರಿಯರಾಗಿರುವ ಕಮಾಲ್ ಆರ್ ಖಾನ್ ದಿನವೂ ಹಲವಾರು ಪೋಸ್ಟ್‌ಗಳನ್ನು ಹಾಕುತ್ತಿರುತ್ತಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ