• Home
 • »
 • News
 • »
 • entertainment
 • »
 • Rishab Shetty-Kamal Haasan: ರಿಷಬ್​ ಶೆಟ್ಟಿ ಮನೆಗೆ ಬಂತು ಸರ್ಪ್ರೈಸ್ ಗಿಫ್ಟ್​! ಕಮಲ್​ ಹಾಸನ್​​ ಕೊಟ್ಟ ಉಡುಗೊರೆಗೆ ಕಾಂತಾರ ನಟ ಫುಲ್ ಖುಷ್​

Rishab Shetty-Kamal Haasan: ರಿಷಬ್​ ಶೆಟ್ಟಿ ಮನೆಗೆ ಬಂತು ಸರ್ಪ್ರೈಸ್ ಗಿಫ್ಟ್​! ಕಮಲ್​ ಹಾಸನ್​​ ಕೊಟ್ಟ ಉಡುಗೊರೆಗೆ ಕಾಂತಾರ ನಟ ಫುಲ್ ಖುಷ್​

ಕಮಲ್ ಹಾಸನ್​, ರಿಷಬ್ ಶೆಟ್ಟಿ

ಕಮಲ್ ಹಾಸನ್​, ರಿಷಬ್ ಶೆಟ್ಟಿ

ತಮಿಳಿನ ಸ್ಟಾರ್​ ನಟ ಕಮಲ್ ಹಾಸನ್ ಅವರು ನಟ ರಿಷಬ್ ಶೆಟ್ಟಿಗೆ ಪತ್ರವೊಂದನ್ನು ಉಡುಗೊರೆಯಾಗಿ ನೀಡಿದ್ದಾರೆ. ಕಾಂತಾರ ಸಿನಿಮಾ ಹಾಗೂ ಚಿತ್ರಕ್ಕಾಗಿ ರಿಷಬ್ ಶೆಟ್ಟಿ ಪರಿಶ್ರಮ ಎರಡೂ ವಿಚಾರಗಳ ಬಗ್ಗೆ ಬರೆದಿದ್ದಾರೆ.

 • News18 Kannada
 • 3-MIN READ
 • Last Updated :
 • Karnataka, India
 • Share this:

ಕನ್ನಡದ ಕಾಂತಾರ ಸಿನಿಮಾ (Kantara Movie) ದೇಶದೆಲ್ಲೆಡೆ ಭರ್ಜರಿ ಪ್ರದರ್ಶನ ಕಂಡಿದೆ. ತಮಿಳು, ತೆಲುಗು, ಹಿಂದಿಯಲ್ಲಿ ಕಾಂತಾರ ಸಿನಿಮಾ ತೆರೆಕಂಡು ಬಾಕ್ಸ್​ ಆಫೀಸ್ ಕೊಳ್ಳೆ ಹೊಡೆದಿದೆ. ಬಾಲಿವುಡ್​, ಟಾಲಿವುಡ್, ಕಾಲಿವುಡ್​ ನಟ-ನಟಿಯರು ಸಹ ಕಾಂತಾರ ಸಿನಿಮಾ ನೋಡಿ ಕೊಂಡಾಡಿದ್ದಾರೆ.  ಇಡೀ ದೇಶವೇ ಕನ್ನಡ ಸಿನಿಮಾದತ್ತ ತಿರುಗಿ ನೋಡುವಂತೆ ಮಾಡಿದ  ಕಾಂತಾರ ಸಿನಿಮಾ ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ (Rishab Shetty) ಬಗ್ಗೆ ಅನೇಕರು ಮೆಚ್ಚುಗೆ ಮಾತಾಡಿದ್ದಾರೆ. ನಟ ರಿಷಬ್ ಶೆಟ್ಟಿಯ ಅಭಿನಯಕ್ಕೆ ನಟ-ನಟಿಯರೇ ಫಿದಾ ಆಗಿದ್ದಾರೆ.  ಕಾಂತಾರ ಸಿನಿಮಾ ನೋಡಿ ಕಾಲ್ ಮಾಡಿ ಹೊಗಳಿದ್ದ ನಟ ಕಮಲ್ ಹಾಸನ್ (Kamal Haasan) ಇದೀಗ ಗಿಫ್ಟ್​ (Gift) ಒಂದನ್ನು ಕಳುಹಿಸಿದ್ದಾರೆ. 


ರಿಷಬ್ ಶೆಟ್ಟಿಗೆ ಕಮಾಲ್ ಹಾಸನ್ ಪತ್ರ


ತಮಿಳಿನ ಸ್ಟಾರ್​ ನಟ ಕಮಲ್ ಹಾಸನ್ ಅವರು ನಟ ರಿಷಬ್ ಶೆಟ್ಟಿಗೆ ಪತ್ರವೊಂದನ್ನು ಉಡುಗೊರೆಯಾಗಿ ನೀಡಿದ್ದಾರೆ. ಕಾಂತಾರ ಸಿನಿಮಾ ಹಾಗೂ ಚಿತ್ರಕ್ಕಾಗಿ ರಿಷಬ್ ಶೆಟ್ಟಿ ಪರಿಶ್ರಮ ಎರಡೂ ವಿಚಾರಗಳ ಬಗ್ಗೆ ಬರೆದಿದ್ದಾರೆ. ಕಾಂತಾರ ಸಿನಿಮಾ ಮೆಚ್ಚಿದ ನಟ ಕಮಲ್ ಹಾಸನ್​, ನಿರ್ದೇಶಕ ರಿಷಬ್​ ಶೆಟ್ಟಿಯನ್ನು ಕೊಂಡಾಡಿದ್ದಾರೆ.
ಕಮಾಲ್ ಬರೆದ ಪತ್ರದಲ್ಲಿ ಏನಿದೆ?


ಕಾಂತಾರ ಸಿನಿಮಾ ನೋಡಿದ ರಾತ್ರಿಯೇ ಈ ಪತ್ರ ಬರೆದಿದ್ದೇನೆ. ಕಾಂತಾರ ಸಿನಿಮಾ ಹಲವು ದಿನಗಳಿಂದ ನಿಮ್ಮಲ್ಲೇ ಅಡಗಿ ಕುಳಿತಿತ್ತು. ನಿಮ್ಮ ಮನಸ್ಸಿನಲ್ಲಿ ಅರಳಿದ ಹೂವು. ದೇವರನ್ನು ನಂಬುವ ಅನೇಕ ಹೃದಯಗಳಿಗೆ ಸಿನಿಮಾ ಇಷ್ಟವಾಗಿದೆ. ನಾನೂ ಕೂಡ ದೇವರಲ್ಲಿ ಅಪಾರ ನಂಬಿಕೆ ಇರುವವನು. ನಾವೆಲ್ಲಾ ಅನೇಕ ಪೌರಾಣಿಕ ಹಿನ್ನೆಲೆ ಇರುವ ಸಮಾಜದಲ್ಲೇ ಬದುಕುತ್ತಿದ್ದೇವೆ.


ಕೊನೆಯ ದೃಶ್ಯ ನಿಜಕ್ಕೂ ಅದ್ಭುತ


ಕಾಂತಾರ ಸಿನಿಮಾದ ಕೊನೆಯ 20 ನಿಮಿಷಗಳು ಎಲ್ಲರ ಮನದಲ್ಲೂ ಅಚ್ಚಳಿಯದೆ ಉಳಿದಿದೆ.  ಕಾಂತಾರ ಸಿನಿಮಾದ ಕೊನೆಯ ದೃಶ್ಯದ ಬಗ್ಗೆ ಬರೆದಿರುವ ಕಮಲ್ ಹಾಸನ್, ಲಾಸ್ಟ್​ ಸೀನ್ ಅದ್ಭುತ ಎಂದಿದ್ದಾರೆ. ಈ ದೃಶ್ಯದಲ್ಲಿ ದೇವರು ತಾಯಿಯಾಗಿ ಬಂದು ಇಡೀ ಊರನ್ನು ಕಾಪಾಡುತ್ತಾಳೆ ಇದು ನಿಜಕ್ಕೂ ಅದ್ಬುತ ಎಂದು ಬರೆದಿದ್ದಾರೆ.
ಈ ಮೊದಲೇ ಕಮಲ್​ ಹಾಸನ್​ ಅವರು ‘ಕಾಂತಾರ’ ಸಿನಿಮಾ ನೋಡಿದ್ದರು. ಆಗಲೂ ಅವರು ಫೋನ್ ಮೂಲಕ ರಿಷಬ್​ ಶೆಟ್ಟಿಗೆ ಪ್ರಶಂಸೆ ವ್ಯಕ್ತಪಡಿಸಿದ್ದರು. ‘ಈಗಾಗಲೇ ನಾನು ಫೋನ್​ನಲ್ಲಿ ಹೇಳಿದಂತೆ ಕಾಂತಾರ ಸಿನಿಮಾದ ದಾಖಲೆಯನ್ನು ನಿಮ್ಮ ಮುಂದಿನ ಸಿನಿಮಾದಿಂದ ಮುರಿಯಿರಿ’ ಎಂದು ಬರೆದಿದ್ದಾರೆ.


ಇದನ್ನೂ ಓದಿ: Singer Mangli: ತುಳು ಸಿನಿಮಾ ಹಾಡಿಗೆ ಧ್ವನಿಯಾದ ಮಂಗ್ಲಿ; ಯಾವ ಸಿನಿಮಾ? ಯಾವ ಹಾಡು?


ಕಮಲ್​ ಪತ್ರಕ್ಕೆ ರಿಷಬ್ ಕೃತಜ್ಞತೆ


ಕಮಲ್ ಹಾಸನ್ ಪತ್ರಕ್ಕೆ ನಟ ರಿಷಬ್​ ಶೆಟ್ಟಿ ಕೂಡ ಕೃತಜ್ಞತೆ ಸಲ್ಲಿಸಿದ್ದಾರೆ.  ಸೋಶಿಯಲ್ ಮೀಡಿಯಾ ಕಮಲ್ ಹಾಸನ್​ ಬರೆದ ಪತ್ರವನ್ನು ಹಂಚಿಕೊಂಡಿದ್ದಾರೆ. ಲೆಜೆಂಡ್ ಆಫ್ ಇಂಡಿಯನ್ ಸಿನಿಮಾದಿಂದ ಇಂತಹ ಗಿಫ್ಟ್​ ಸ್ವೀಕರಿಸಿ ಖುಷಿಯಾಗಿದೆ. ಹಾಗೆಯೇ ಕಮಲ್ ಸರ್ ಅವರ ಈ ಸರ್ಪ್ರೈಸ್ ಗಿಫ್ಟ್ ನೋಡಿ ತುಂಬಾ ಬೆಚ್ಚಿಬಿದ್ದು ಮತ್ತು ಬೆರಗಾಗಿದ್ದೇನೆ, ಕೃತಜ್ಞತೆ ಸರ್​ ಎಂದು ರಿಷಬ್ ಹೇಳಿದ್ದಾರೆ.


ಕಮಲ್ ಪತ್ರಕ್ಕೆ ಅಭಿಮಾನಿಗಳು ಕೂಡ ಮೆಚ್ಚುಗೆ  ವ್ಯಕ್ತಪಡಿಸಿದ್ದಾರೆ. ಅಂತಿಮ ನಾಮಿನೇಷನ್​ಗೆ ಈ ಸಿನಿಮಾ ಎಂಟ್ರಿ ನೀಡಲಿ ಮತ್ತು ಆಸ್ಕರ್​ ಪ್ರಶಸ್ತಿ ಗೆಲ್ಲಲಿ ಎಂದು ಅಭಿಮಾನಿಗಳು ಶುಭ ಹಾರೈಸುತ್ತಿದ್ದಾರೆ.

Published by:ಪಾವನ ಎಚ್ ಎಸ್
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು