Karthik Jayaram: ಅದೆಷ್ಟು ಬಾರಿ ನನಗೆ ವಿವಾಹ ಮಾಡಿಸುತ್ತಾರೋ ಗೊತ್ತಿಲ್ಲ, ಮದುವೆಯ ವದಂತಿಗಳ ಕುರಿತು ಸ್ಪಷ್ಟನೆ ನೀಡಿದ ಜೆಕೆ

ಕೇವಲ ಒಂದು ಇನ್ಸ್ಟಾಗ್ರಾಂ ಪೋಸ್ಟ್ ಮೂಲಕ ಜೆಕೆ ವಿವಾಹವಾಗುತ್ತಿದ್ದಾರೆ ಎಂಬ ಸುದ್ದಿ ಎಲ್ಲಡೆ ಹರಿದಾಡಿತ್ತು. ಆದರೆ ಇದರ ಕುರಿತು ಇದಿಗ ಸ್ವತಃ ಜೆಕೆ ಸ್ಪಷ್ಟನೆ ನೀಡಿದ್ದಾರೆ.

ಜೆಕೆ

ಜೆಕೆ

 • Share this:
  ಕನ್ನಡ (Kannada) ಕಿರುತೆರೆಯಲ್ಲಿ 'ಅಶ್ವಿನಿ ನಕ್ಷತ್ರ' (Ashwini Nakshatra) ಧಾರಾವಾಹಿ ಅಂದಿನ ಸಮಯಕ್ಕೆ ಭರ್ಜರಿಯಾಗಿ ಯಶಸ್ವಿಯಾಗಿತ್ತು. ಈ ಧಾರಾವಾಹಿಯಲ್ಲಿ ನಟಿಸಿದ್ದ ಜಯರಾಮ್​ ಕಾರ್ತಿಕ್ (Jayaram Karthik)​ ಅಲಿಯಾಸ್​ ಜೆಕೆ ಸಿಕ್ಕಾಪಟ್ಟೆ ಫೇಮಸ್​ ಆಗಿದ್ದರು. ಜೊತೆಗೆ ನಟಿ ಮಯೂರಿ ಕೂಡ ಈ ಸೀರಿಯಲ್​ ಮೂಲಕ ಸ್ಯಾಂಡಲ್​ವುಡ್ (Sandalwood) ​ನಲ್ಲಿ ನೆಲೆ ಕಂಡುಕೊಂಡರು. 'ಅಶ್ವಿನಿ ನಕ್ಷತ್ರ' ಸೀರಿಯಲ್ ಮೂಲಕ ಸೂಪರ್​ ಸ್ಟಾರ್​ ಜೆಕೆ (Super Star JK) ಎಂದು ಕರೆಯಲು ಎಲ್ಲರು ಶುರುಮಾಡಿದರು. ಇದೀಗ ಜೆಕೆ ಮತ್ತೆ ಸುದ್ದಿಯಲ್ಲಿದ್ದಾರೆ. ಹೌದು, ವೈಯಕ್ತಿಕ ವಿಚಾರಕ್ಕೆ ಜಯರಾಮ್​ ಕಾರ್ತಿಕ್​ ಸುದ್ದಿಯಾಗಿದ್ದರು. ಕೇವಲ ಒಂದು ಇನ್ಸ್ಟಾಗ್ರಾಂ ಪೋಸ್ಟ್ ಮೂಲಕ ಜೆಕೆ ವಿವಾಹವಾಗುತ್ತಿದ್ದಾರೆ ಎಂಬ ಸುದ್ದಿ ಎಲ್ಲಡೆ ಹರಿದಾಡಿತ್ತು. ಆದರೆ ಇದರ ಕುರಿತು ಇದಿಗ ಸ್ವತಃ ಜೆಕೆ ಸ್ಪಷ್ಟನೆ ನೀಡಿದ್ದಾರೆ.

  ವಿವಾಹದ ಕುರಿತು ಸ್ಪಷ್ಟನೆ ನೀಡಿದ ಜೆಕೆ:

  ಕೆಲ ದಿನಗಳ ಹಿಂದೆ ಜೆಕೆ ಹಂಚಿಕೊಂಡಿದ್ದ ಇನ್ಸ್ಟಾಗ್ರಾಂ ಪೋಸ್ಟ್ ಸಖತ್ ವೈರಲ್ ಆಗಿತ್ತು. ಅದಲ್ಲದೇ ಜೆಕೆ ವಿವಾಹವಅಗುತ್ತಿದ್ದಾರೆ ಎಂದು ಸುದ್ದಿಗಳು ಹರಿದಾಡಲಾರಂಭಿಸಿತು. ಆದರೆ ಈ ಕುರಿತು ಸ್ವತಃ ಅವರೇ ಸ್ಪಷ್ಟನೆ ನೀಡಿದ್ದು, ‘ಈ ಸುದ್ದಿ ಸುಳ್ಳು, ಅದೆಷ್ಟು ಬಾರಿ ನನಗೆ ವಿವಾಹ ಮಾಡಿಸ್ತಾರೋ ಗೊತ್ತಿಲ್ಲ ಎನ್ನುವ ಮೂಲಕ ಸುಳ್ಳು ಸುದ್ದಿಯ ಕುರಿತು ಬೇಸರ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಜೆಕೆ ಫ್ಯಾಶನ್ ಡಿಸೈನರ್ ಅಪರ್ಣಾ ಸಮಂತಾ ಅವರೊಂದಿಗಿನ ಫೋಟೋವನ್ನು ಹಂಚಿಕೊಂಡಿದ್ದರು. ಹೀಗಾಗಿ ಇವರಿಬ್ಬರ ವಿವಾಹವಾಗಲಿದೆ ಎಂಬ ಸುಳ್ಳು ಸುದ್ದಿಗಳು ಹರಿದಾಡಿದ್ದವು.

  ಬೇಸರ ವ್ಯಕ್ತಪಡಿಸಿದ ಜೆಕೆ:

  ಇನ್ನು, ಈ ರೀತಿ ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಿರುವುದಕ್ಕೆ ನಟ ಜಯರಾಮ್ ಕಾರ್ತಿಕ್ ಬೇಸರ ವ್ಯಕ್ತಪಡಿಸಿದ್ದಾರೆ. ಅಲ್ಲದೇ ‘ನಮ್ಮ ಪ್ರೊಫೇಷನಲ್ ಜೀವನವನ್ನು ಬಿಟ್ಟು ಕೇವಲ ತಮ್ಮ ವೈಯಕ್ತಿಕ ಜೀವನದ ಕುರಿತು ಇಲ್ಲಸಲ್ಲದ್ದನ್ನು ಬರೆಯಲಾಗುತ್ತದೆ. ಇದರ ಬದಲಾಗಿ ಸಿನಿಮಾಗಳ ಬಗ್ಗೆ ಬರೆಯಿರಿ‘ ಎಂದು ಹೇಳುವ ಮೂಲಕ ತಮ್ಮಲ್ಲಿನ ಬೇಸರವನ್ನು ತಿಳಸಿದ್ದಾರೆ.

  ಇದನ್ನೂ ಓದಿ: 777 Charlie: ಮೈಸೂರು​ ಟು ಕಾಶ್ಮೀರ, ಹೇಗಿದೆ ನೋಡಿ ಮುದ್ದು ಚಾರ್ಲಿಯ ಜರ್ನಿ

  ಇನ್ಸ್ಟಾಗ್ರಾಂ ಫೋಟೋ ಡಿಲೀಟ್:

  ಕೆಲ ದಿನಗಳ ಹಿಂದೆ ಜೆಕೆ ಫ್ಯಾಶನ್ ಡಿಸೈನರ್ ಅಪರ್ಣಾ ಸಮಂತಾ ಅವರೊಂದಿಗಿನ ಫೋಟೋವನ್ನು ಹಂಚಿಕೊಂಡಿದ್ದರು.ಆದರೆ ಅದಾದ ಬಳಿಕ ಇವಬ್ಬರ ವಿವಾಹದ ಕುರಿತು ಸುದ್ದಿಗಳು ಹರಿದಾಡಲು ಆರಂಭಿಸಿದ ತಕ್ಷಣ ಸ್ಪಷ್ಟನೆ ನೀಡುವುದರ ಜೊತೆಗೆ ಜೆಕೆ ತಾವು ಹಂಚಿಕೊಂಡಿದ್ದ ಫೋಸ್ಟ್ ಅನ್ನು ಡಿಲೀಟ್ ಮಾಡಿದ್ದಾರೆ. ಈ ಮೂಲಕ ಎಲ್ಲಾ ಅನುಮಾನಗಳಿಗೂ ಅಧಿಕೃತವಾಗಿ ತೆರೆಎಳೆದಿದ್ದಾರೆ.

  ಇದನ್ನೂ ಓದಿ: Karthik Jayaram: ಸಿಂಗಲ್​ ಲೈಫ್​​ಗೆ ಜೆಕೆ ಟಾ ಟಾ -ಬೈ ಬೈ! ಜಯರಾಮ್​ ಜೊತೆ ಮಿಂಗಲ್​ ಆಗ್ತಿರೋವ್ರು ಇವ್ರೇ

  ಬಹುಭಾಷೆಗಳಲ್ಲಿ ಮಿಂಚುತ್ತಿರುವ ಕಾರ್ತಿಕ್:

  ಜೆಕೆ ಅಲಿಯಾಸ್ ಜಯರಾಮ್ ಕಾರ್ತಿಕ್ ಅವರು ಕನ್ನಡ ಮಾತ್ರವ್ಲಲದೇ ಅನೇಕ ಬೇರೆ ಭಾಷೆಗಳ ಸೀರಿಯಲ್​ ಗಳಲ್ಲಿಯೂ ನಟಿಸಿದ್ದಾರೆ. ಅಶ್ವೀನಿ ನಕ್ಷತ್ರ ಸೀರಿಯಲ್ ನಂತರ ಅವರು ಹೆಚ್ಚು ಪ್ರಸಿದ್ಧರಾದರು. ಬಳಿಕ ಜೆಕೆ ಹಿಂದಿನ ಪೌರಾಣಿಕ ಧಾರಾವಾಹಿ ಸಿಯಾ ಕೆ ರಾಮ್ ನಲ್ಲಿ ರಾವಣನಾಗಿ ಅಬ್ಬರಿಸಿದರು. ನಂತರದಲ್ಲಿ ಕನ್ನಡದ ಬಿಗ್​ ಬಾಸ್​ ಸೀಸನ್ 5ರಲ್ಲಿ ರನ್ನರ್ ಅಫ್ ಆಗಿ ವಿಜೇತರಾದರು. ಇವುಗಳ ಮದ್ಯೆ ಸ್ಯಾಂಡಲ್​ ವುಡ್​ ನಲ್ಲಿ ಕೆಂಪೇಗೌಡ, ವರದನಾಯಕ, ಜರಾಸಂಧ, ಆ ಕರಾಳ ರಾತ್ರಿ, ವಿಷ್ಣುವರ್ಧನ, ವಿಸ್ಮಯ, ಜಸ್ಟ್ ಲವ್, ಮೇ 1, ಬೆಂಗಳೂರು 560023 ಚಿತ್ರಗಳು ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಸಿದ್ದು, ಸದ್ಯ ಚಿತ್ರರಂಗದಲ್ಲಿ ಬ್ಯೂಸಿಯಾಗಿದ್ದಾರೆ.
  Published by:shrikrishna bhat
  First published: