Spider Man ನಟನಿಗೆ ಸೆಕ್ಸ್​ ಚಟವಂತೆ: ಆ್ಯಕ್ಟಿಂಗ್​ ಹೇಳಿಕೊಡುವ ನೆಪದಲ್ಲಿ ಸ್ಟೂಡೆಂಟ್ಸ್​ ಜೊತೆ ಸಂಭೋಗ!

ಕೆಲ ವರ್ಷಗಳ ಹಿಂದೆ ಜೇಮ್ಸ್ ಫ್ರಾಂಕೊ ನಟನಾ ಶಾಲೆ(Acting School)ಯೊಂದನ್ನು ನಡೆಸುತ್ತಿದ್ದರು. ತಮ್ಮದೇ ಶಾಲೆಯ ವಿದ್ಯಾರ್ಥಿನಿಯರೊಂದಿಗೆ ಅವರು ಸತತವಾಗಿ ಲೈಂಗಿಕ ಸಂಪರ್ಕ ಹೊಂದಿದ್ದರು. ಈ ಬಗ್ಗೆ 2019 ರಲ್ಲಿ ದೂರು ದಾಖಲಾಗಿತ್ತು. ಆದರೆ, ಇವರ ಮೇಲಿರುವ ಆರೋಪಗಳೆಲ್ಲ ನಿಜ ಎಂದು ಅವರೇ ಒಪ್ಪಿಕೊಂಡಿದ್ದಾರೆ.

ನಟ ಜೇಮ್ಸ್ ಫ್ರಾಂಕೋ

ನಟ ಜೇಮ್ಸ್ ಫ್ರಾಂಕೋ

  • Share this:
ಹಾಲಿವುಡ್(Hollywood)​ ಸಿನಿಮಾಗಳಲ್ಲಿ ಸೆಕ್ಸ್​ ಸೀನ್(Sex Scene)​ಗಳಿಗೇನು ಕಡಿಮೆ ಇರುವುದಿಲ್ಲ. ಅಲ್ಲಿ ಅದನ್ನು ಎಲ್ಲ ದೃಶ್ಯಗಳಂತೆ ಪರಿಗಣಿಸಲಾಗುತ್ತೆ. ಹೀಗಿರುವಾಗ ಕೆಲ ನಟ - ನಟಿಯರು ಸೆಕ್ಸ್​ ಚಟಕ್ಕೆ ದಾಸರಾಗಿರುತ್ತಾರೆ. ಹೀಗೆ ಹಾಲಿವುಡ್ ಜನಪ್ರಿಯ ನಟ ಜೇಮ್ಸ್ ಫ್ರಾಂಕೋ(James Franco) ತಮ್ಮ ಮೇಲಿನ ಲೈಂಗಿಕ ದೌರ್ಜನ್ಯ ಆರೋಪಗಳನ್ನು ಒಪ್ಪಿಕೊಂಡಿದ್ದಾರೆ. ತಮ್ಮ ನಟನಾ ಶಾಲೆಯ ವಿದ್ಯಾರ್ಥಿನಿಯರೊಂದಿಗೆ ತಾವು ಲೈಂಗಿಕ ಸಂಪರ್ಕ ನಡೆಸಿದ್ದು ನಿಜ ಎಂದಿದ್ದಾರೆ.ಮಗೆ ಲೈಂಗಿಕತೆ ಚಟವಾಗಿದ್ದು ಈ ಚಟದಿಂದ ಹೊರಗೆ ಬರುವ ಪ್ರಯತ್ನದಲ್ಲಿದ್ದೇನೆ ಎಂದು ನ್ಯಾಯಾಲಯ(Court)ಕ್ಕೆ ತಿಳಿಸಿದ್ದಾರೆ ಜೇಮ್ಸ್ ಫ್ರಾಂಕೋ.ಕೆಲ ವರ್ಷಗಳ ಹಿಂದೆ ಜೇಮ್ಸ್ ಫ್ರಾಂಕೊ ನಟನಾ ಶಾಲೆ(Acting School)ಯೊಂದನ್ನು ನಡೆಸುತ್ತಿದ್ದರು. ತಮ್ಮದೇ ಶಾಲೆಯ ವಿದ್ಯಾರ್ಥಿನಿಯರೊಂದಿಗೆ ಅವರು ಸತತವಾಗಿ ಲೈಂಗಿಕ ಸಂಪರ್ಕ ಹೊಂದಿದ್ದರು. ಈ ಬಗ್ಗೆ 2019 ರಲ್ಲಿ ದೂರು ದಾಖಲಾಗಿತ್ತು. ಆದರೆ, ಇವರ ಮೇಲಿರುವ ಆರೋಪಗಳೆಲ್ಲ ನಿಜ ಎಂದು ಅವರೇ ಒಪ್ಪಿಕೊಂಡಿದ್ದಾರೆ. ಜೇಮ್ಸ್​ ಹಲವಾರು ಸೂಪರ್​ ಹಿಟ್(Super Hit) ಸಿನಿಮಾಗಳಲ್ಲಿ ನಟಿಸಿದ್ದಾರೆ. ವಿಶ್ವದಾದ್ಯಂತ ಫೇಮಸ್​ ಆಗಿರುವ ನಟ ಸೆಕ್ಸ್​ ಚಟವಾಗಿದೆ ಎಂದು ಹೇಳಿಕೆ ನೀಡಿರುವುದು ಆಶ್ಚರ್ಯ ಮೂಡಿಸಿದೆ. ಅಷ್ಟೇ ಅಲ್ಲದೇ ಅವರ ಅಭಿಮಾನಿಗಳಲ್ಲಿ ಬೇಸರ ಮೂಡಿಸಿದೆ. ಆರೋಪಗಳೆಲ್ಲ ಸುಳ್ಳು ಎಂದು ಅವರ  ಫ್ಯಾನ್ಸ್​ ನಂಬಿದ್ದರು. ಆದರೆ, ಸ್ವತಃ ಜೇಮ್ಸ್​​ ತಮ್ಮ ಮೇಲಿರುವ ಆರೋಪಗಳನ್ನು ಒಪ್ಪಿಕೊಂಡಿದ್ದಾರೆ. 

ನಟನಾ ತರಗತಿ ವಿದ್ಯಾರ್ಥಿನಿಯರೊಂದಿಗೆ ಸೆಕ್ಸ್​!

ಜೇಮ್ಸ್ ಫ್ರಾಂಕೊ ತನ್ನ ನಟನಾ ತರಗತಿ ವಿದ್ಯಾರ್ಥಿನಿಯರಿಗೆ ಸಿನಿಮಾ ಪಾತ್ರ ನೀಡುವುದಾಗಿ ಸುಳ್ಳು ಹೇಳಿ, ನಟನೆ ಹೇಳಿಕೊಡುವುದಾಗಿ ಪುಸಲಾಯಿಸಿ, ಸೆಕ್ಸ್ ದೃಶ್ಯಗಳಲ್ಲಿ ನಟಿಸುವುದನ್ನು ಹೇಳಿಕೊಡುವುದಾಗಿ ನಂಬಿಸಿ ಅವರೊಟ್ಟಿಗೆ ಲೈಂಗಿಕ ಚಟುವಟಿಕೆ ನಡೆಸಿದ್ದಾನೆ ಎಂದು ಆರೋಪಿಸಲಾಗಿತ್ತು. ಈ ಆರೋಪಗಳೆಲ್ಲ ನಿಜ ಎಂದು ಜೇಮ್ಸ್​ ಒಪ್ಪಿಕೊಂಡಿದ್ದಾರೆ. ಇದೀಗ ತಮ್ಮ ತಪ್ಪನ್ನು ನ್ಯಾಯಾಲಯದಲ್ಲಿ ಒಪ್ಪಿಕೊಂಡಿರುವ ನಟ ಜೇಮ್ಸ್ ಫ್ರಾಂಕೊ ಪ್ರಕರಣ ಇತ್ಯರ್ಥಗೊಳಿಸಿಕೊಳ್ಳಲು 17 ಕೋಟಿ ಹಣ ನೀಡಲು ಒಪ್ಪಿಕೊಂಡಿದ್ದಾರೆ. ಇಷ್ಟು ದಿನ ಸುಮ್ಮನೇ ಇದ್ದು, ಈಗ ಈ ರೀತಿ ಹೇಳಿಕೆ ಕೊಟ್ಟಿರುವುದು ಯಾಕೆ ಅಂತ ಅವರ ಅಭಿಮಾನಿಗಳು ಕೇಳುತ್ತಿದ್ದಾರೆ.

ಇದನ್ನು ಓದಿ : ಕಟ್​ ಹೇಳಿದ್ರೂ ಬಿಡದೇ ಲಿಪ್​ಲಾಕ್ ಮಾಡಿದ ನರ್ಗೀಸ್​: ಕಿಸ್ಸಿಂಗ್​ ವಿಡಿಯೋ ಸಿಕ್ಕಾಪಟ್ಟೆ ವೈರಲ್​!

ಜೇಮ್ಸ್​ಗೆ ಸಣ್ಣ ವಯಸ್ಸಿನಲ್ಲೇ ಮದ್ಯಪಾನ, ಸೆಕ್ಸ್​ ಚಟ! 

ಬಹಳ ಸಣ್ಣ ವಯಸ್ಸಿನಲ್ಲಿಯೇ ಜೇಮ್ಸ್‌ಗೆ ಮದ್ಯಪಾನದ ಚಟವಿತ್ತು. ಬಹು ವರ್ಷಗಳ ಬಳಿಕ ಆ ಚಟದಿಂದ ಬಿಡುಗಡೆ ಹೊಂದಿದ ಜೇಮ್ಸ್‌ಗೆ ನಂತರ ದಿನಗಳಲ್ಲಿ ಸೆಕ್ಸ್‌ ಚಟ ಹತ್ತಿತ್ತು ಎಂದು ಜೇಮ್ಸ್ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.ಪ್ರಾಡ್‌ಕಾಸ್ಟ್‌ ಒಂದರಲ್ಲಿ ಮಾತನಾಡಿರುವ ನಟ ಜೇಮ್ಸ್ ಫ್ರಾಂಕೊ ನಾನು ನನ್ನ ಲೈಂಗಿಕತೆಯ ಚಟದಿಂದ ಹೊರಗೆ ಬರಲು ಯತ್ನಿಸುತ್ತಿದ್ದೇನೆ. 2016ರಿಂದಲೂ ಈ ಕಾರ್ಯದಲ್ಲಿ ನಾನು ನಿರತನಾಗಿದ್ದೇನೆ. ವೈದ್ಯರ ಸಹಾಯ ಪಡೆದುಕೊಳ್ಳುತ್ತಿದ್ದೇನೆ. ನನಗೆ ಬೇರೆ ವ್ಯಕ್ತಿಗಳಿಗೆ ಕಷ್ಟ ಕೊಡುವುದು ಇಷ್ಟವಿಲ್ಲ ಎಂದು ಹೇಳಿದ್ದಾರೆ.

ಇದನ್ನು ಓದಿ: ಬಾಲಿವುಡ್​ ನಟಿ Jacqueline & ಸುಕೇಶ್ ಚಂದ್ರಶೇಖರ್ ಪ್ರಕರಣ ಸಿನಿಮಾ ಆಗಲಿದೆಯೇ?

ಹಾಲಿವುಡ್​ನಲ್ಲಿ ಜೇಮ್ಸ್​ಗಿದೆ ಭಾರೀ ಬೇಡಿಕೆ!

ಜೇಮ್ಸ್ ಫ್ರಾಂಕೊ ಹಾಲಿವುಡ್‌ನ ಹಲವು ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ. 'ಸ್ಪೈಡರ್‌ಮ್ಯಾನ್' 'ಸ್ಪೈಡರ್‌ಮ್ಯಾನ್ 2', 'ಸ್ಪೈಡರ್‌ಮ್ಯಾನ್ 3', 'ದಿ ಏಪ್ಸ್', 'ಆನ್ ಅಮೆರಿಕನ್ ಕ್ರೈಂ' ಇನ್ನೂ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. 20 ಕ್ಕೂ ಹೆಚ್ಚು ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ. '127 ಹವರ್ಸ್' ಸಿನಿಮಾ ಆಸ್ಕರ್‌ಗೆ ನಾಮನಿರ್ದೇಶನಗೊಂಡಿತ್ತು. ಈ ಸಿನಿಮಾಕ್ಕೆ ಭಾರತದ ಜನಪ್ರಿಯ ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್ ಸಂಗೀತ ನೀಡಿದ್ದರು.
Published by:Vasudeva M
First published: