Jai Jagadish: ಜೈ ಜಗದೀಶ್​ ಹಲ್ಲೆ ಪ್ರಕರಣ ಸುಖಾಂತ್ಯ, ಕೈಕುಲುಕಿ ರಾಜಿ ಮಾಡಿಕೊಂಡ ದೂರುದಾರ

Sandalwood: ಜೂನ್​ 5 ರಂದು ನಟ ಜೈ ಜಗದೀಶ್​ ವಿರುದ್ದ ಜಯರಾಮೇಗೌಡ ಎನ್ನುವವರು ಹಲ್ಲೆ ಹಾಗೂ ನಿಂದನೆ ಆರೋಪ ಮಾಡಿದ್ದರು. ಆದರೆ ಅದಕ್ಕೆ ಪ್ರತಿಕ್ರಿಯಿಸಿದ್ದ ನಟ ಜೈ ಜಗದೀಶ್​ ಆರೋಪಗಳನ್ನು ತಳ್ಳಿ ಹಾಕಿದ್ದರು.

ನಟ ಜೈ ಜಗದೀಶ್​

ನಟ ಜೈ ಜಗದೀಶ್​

  • Share this:
ಕಳೆದ ಕೆಲ ದಿನದ ಹಿಂದೆ ಸುದ್ದಿಯಾಗಿದ್ದ ನಟ ಜೈ ಜಗದೀಶ್​ (Jai Jagadish) ವ್ಯಕ್ತಿಯೊಬ್ಬರ ಮೇಳೆ ಹಲ್ಲೆ ಮಾಡಿರುವ ಪ್ರಕರಣ ಸುಖಾಂತ್ಯವಾಗಿದೆ. ರಸ್ತೆಯಲ್ಲಿ (Road)  ಹೋಗುತ್ತಿದ್ದಾಗ ನಡೆದ ಘಟನೆಯ ಕುರಿತು ನಟ (Actor) ಜೈ ಜಗದೀಶ್​ ವಿರುದ್ಧ ದೂರು (Complaint) ದಾಖಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಡ್ಯ ಜಿಲ್ಲೆ, ನಾಗಮಂಗಲ ತಾಲ್ಲೂಕಿನ ಬೆಳ್ಳೂರು ಪೊಲೀಸ್ ಠಾಣೆಗೆ (Police Station) ಭಾನುವಾರ (Sunday) ತೆರಳಿ, ಅಲ್ಲಿ ರಾಜಿ ಮಾಡಿಕೊಂಡು, ಈ ಪ್ರಕರಣಕ್ಕೆ ಅಂತ್ಯ ಹಾಡಿದ್ದಾರೆ.  

ಪೊಲೀಸ್​ ಠಾಣೆಯಲ್ಲಿ ರಾಜಿ ಸಂಧಾನ

ಜೂನ್​ 5 ರಂದು ನಟ ಜೈ ಜಗದೀಶ್​ ವಿರುದ್ದ ಜಯರಾಮೇಗೌಡ ಎನ್ನುವವರು ಹಲ್ಲೆ ಹಾಗೂ ನಿಂದನೆ ಆರೋಪ ಮಾಡಿದ್ದರು. ಆದರೆ ಅದಕ್ಕೆ ಪ್ರತಿಕ್ರಿಯಿಸಿದ್ದ ನಟ ಜೈ ಜಗದೀಶ್​ ಆರೋಪಗಳನ್ನು ತಳ್ಳಿ ಹಾಕಿದ್ದರು. ಆದರೆ ಇದೀಗ ಈ ಎಲ್ಲಾ ಆರೋಪ ಪ್ರತ್ಯಾರೋಪಗಳಿಗೆ ತೆರೆ ಬಿದ್ದಿದ್ದು, ಇಬ್ಬರ ನಡುವೆ ರಾಜಿಯಾಗಿದೆ.

ಜೈ ಜಗದೀಶ್ ಯಾವಾಗಲೂ ನ್ಯಾಷನಲ್ ಹೈವೇಯಲ್ಲಿ ತಮ್ಮ ತೋಟಕ್ಕೆ ಹೋಗುತ್ತಾರೆ, ಹೀಗೆ ಹೋಗುವ ಸಂದರ್ಭದಲ್ಲಿ ಬೆಳ್ಳೂರು ಕ್ರಾಸ್ ಟೋಲ್ ಬಳಿ ಒಂದು ಬಸ್ ಬಂದು ನಿಂತಿದೆ. ಆ ಬಸ್ ನಿಂದ ವ್ಯಕ್ತಿಯೊಬ್ಬ ಬಾಟಲಿ ಬಿಸಾಡಿದ್ದು, ಅದನ್ನು ಕಂಡು ಜೈ ಜಗದೀಶ್ ಆ ವ್ಯಕ್ತಿಯನ್ನು ಪ್ರಶ್ನಿಸಿದ್ದಾರಂತೆ. ಹೀಗೆ ಅದು ಮಾತಿಗೆ ಮಾತು ಬೆಳೆದಿದೆ. ಆ ವ್ಯಕ್ತಿ ನಾನು ಬಾಟಲಿ ಬಿಸಾಡಿಲ್ಲ ಎಂದು ಹೇಳಿ ವಾದಿಸಿದ್ದಾರೆ, ಆದರೆ ಜೈ ಜಗದೀಶ್ ಮಾತ್ರ ನೀನೇ ಬಾಟಲಿ ಬಿಸಾಡಿದ್ದು ಎಂದು ಆ ವ್ಯಕ್ತಿಗೆ ಬೈದಿದ್ದಾರೆ. ಅಲ್ಲದೇ ಆ ವ್ಯಕ್ತಿಗೆ ಜೈ ಜಗದೀಶ್​ಗೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಿದ್ದರು, ಆದರೆ ನಟ ಮಾತ್ರ ಅವರೇ ನಿಂದನೆ ಮಾಡಿದ್ದು ಎಂದು ಹೇಳಿದ್ದರು.

ಇದನ್ನೂ ಓದಿ: ಬೆಂಗಳೂರಿನಲ್ಲಿ ಬಾಲಿವುಡ್​ ಸ್ಟಾರ್ ನಟನ ಮಗ ಅರೆಸ್ಟ್, ಲೇಟ್​ ನೈಟ್​ ಪಾರ್ಟಿಯಲ್ಲಿ ಡ್ರಗ್ಸ್ ಸೇವನೆ!

ಟ್ವಿಸ್ಟ್​ ಮೇಲೆ ಟ್ವಿಸ್ಟ್​ ಪಡೆದಿದ್ದ ಪ್ರಕರಣ

ಈ ಘಟನೆಯ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ನಟ ಜೈ ಜಗದೀಶ್​ ಮಾತಿಗೆ ಮಾತು ಬೆಳೆದು, ಜಗಳ ದೊಡ್ಡದಾಯಿತು. ಆಗ ಆ ವ್ಯಕ್ತಿಯೇ ಬೈಯುವುದು ಮಾತ್ರವಲ್ಲ, ಹೊಡೆಯಲು ಸಹ ಪ್ರಯತ್ನಿಸಿದ್ದಾರೆ ಎಂದು ಜೈ ಜಗದೀಶ್​  ಹೇಳಿದ್ದರು.

ಗಲಾಟೆ ಮಿತಿ ಮೀರಿದಾಗ ಜೈ ಜಗದೀಶ್ ಕಾರು ಡ್ರೈವರ್ ಆತನ್ನು ಬಿಡಿಸುವುದಕ್ಕೆ ಪ್ರಯತ್ನಿಸಿದ್ದಾರೆ. ಇಷ್ಟಕ್ಕೆ ಸುಮ್ಮನಾಗದ ವ್ಯಕ್ತಿ ನಮ್ಮ ಕಾರಿನ ಕೀ ಕಸಿದುಕೊಂಡಿದ್ದಾರೆ, ಅದನ್ನು ವಾಪಸ್ಸು ಪಡೆಯಲು ಬಹಳ ಕಷ್ಟವಾಯಿತು. ಆ ವೇಳೆ ವ್ಯಕ್ತಿಯ ಬಟ್ಟೆ ಹರಿದು ಹೋಗಿದೆ ಅಷ್ಟೇ, ಅವರು ದೂರಿನಲ್ಲಿ ನನ್ನ ಮೇಲೆ ಮಾಡಿರುವ ಆರೋಪ ಸುಳ್ಳು ಎಂದಿದ್ದರು.

ಇದನ್ನೂ ಓದಿ: ಜೈ ಜಗದೀಶ್​ ಹಲ್ಲೆ ಪ್ರಕರಣಕ್ಕೆ ಟ್ವಿಸ್ಟ್, ದೂರು ನೀಡಿದವರೇ ಹೊಡೆಯಲು ಬಂದಿದ್ರು ಎಂದ ನಟ

ಈ ಪ್ರಕರಣದ ಬಗ್ಗೆ ಜೈ ಜಗದೀಶ್​ ಈಗ ಮಾತನಾಡಿದ್ದು ಈ ಪ್ರಕರಣಕ್ಕೆ ಟ್ವಿಸ್ಟ್​  ನೀಡಿತ್ತು. ದೂರು ನೀಡಿದ ವ್ಯಕ್ತಿ ಹೇಳಿದ್ದೇ ಬೇರೆ ಕತೆಯಾಗಿತ್ತು.  ದೂರಿನಲ್ಲಿ, ಜಗಳ ಮಾತಿಗೆ ಮಾತು ಬೆಳೆದು ದೊಡ್ಡದಾಗಿದ್ದು, ಅವರು ನನ್ನ ಮೇಲೆ ಹಲ್ಲೆ ನಡೆಸಲು ಪ್ರಯತ್ನಿಸಿದ್ದಾರೆ ಎಂದು ಹೇಳಿದ್ದಾರೆ.  ಈ  ಗಲಾಟೆ ನಡೆಯುವಾಗ ಅಲ್ಲಿದ್ದ ಸ್ಥಳೀಯರು ಬಂದು ಜೈ ಜಗದೀಶ್​ ಅವರಿಗೆ ಸಮಾಧಾನ ಮಾಡಲು ಸಹ ಪ್ರಯತ್ನಿಸಿದ್ದಾರೆ. ಆದರೂ ಕೂಡ ಅವರ ಕೋಪ ಕಡಿಮೆಯಾಗಿಲ್ಲ ಎಂದು ದೂರಿನಲ್ಲಿ ಜಯರಾಮೇಗೌಡ ಉಲ್ಲೇಖಿಸಿದ್ದರು.
Published by:Sandhya M
First published: