Jaggesh: ಸ್ಯಾಂಡಲ್​ವುಡ್ ಡ್ರಗ್​ ಮಾಫಿಯಾ: ಕೆಲವರು ಮಾಡಿದ ತಪ್ಪಿಗೆ ಇಡೀ ಚಿತ್ರರಂಗವನ್ನು ದೂರಬೇಡಿ ಎಂದ ಜಗ್ಗೇಶ್​

ಕಳೆದ ಕೆಲವು ದಿನಗಳಿಂದ ಎಲ್ಲಿ ನೋಡಿದರೂ ಈ ಡ್ರಗ್ ಮಾಫಿಯಾದ್ದೇ ವಿಷಯ. ಅದರಲ್ಲೂ ಈ ಮಾಫಿಯಾ ಸ್ಯಾಂಡಲ್​ವುಡ್​ನಲ್ಲೂ ಬಲವಾಗಿ ಬೇರೂರಿದೆ ಎನ್ನಲಾಗುತ್ತಿದೆ. ಈ ಕುರಿತಾಗಿ ಈಗ ನಟ ಜಗ್ಗೇಶ್​ ಪ್ರತಿಕ್ರಿಯೆ ನೀಡಿದ್ದಾರೆ.

ನಟ ಜಗ್ಗೇಶ್​

ನಟ ಜಗ್ಗೇಶ್​

  • Share this:
ಸ್ಯಾಂಡಲ್​ವುಡ್​ನಲ್ಲಿ ಇದೆ ಎನ್ನಲಾಗುತ್ತಿರುವ ಡ್ರಗ್ ಮಾಫಿಯಾ ಬಗ್ಗೆ ಕಳೆದ ಕೆಲವು ದಿನಗಳಿಂದ ಚರ್ಚೆ ನಡೆಯುತ್ತಿದೆ. ಜೊತೆಗೆ ಎನ್​ಸಿಬಿ ಅಧಿಕಾರಿಗಳೂ ತನಿಖೆ ನಡೆಸುತ್ತಿದ್ದಾರೆ. ಈ ಕುರಿತಾಗಿ ಇಂದ್ರಜಿತ್​ ಲಂಕೇಶ್ ಅವರೂ ಕೆಲವರ ಹೆಸರುಗಳನ್ನು ಬಹಿರಂಗಪಡಿಸಿದ್ದಾರೆ. ಇದರ ನಡುವೆ ನಟ ನವರಸನಾಯಕ ಜಗ್ಗೇಶ್ ಸಹ ಸರಣಿ ಟ್ವೀಟ್ ಮಾಡಿದ್ದಾರೆ.

ಇಂದು ನಶೆಯದ್ದೇ ದೊಡ್ಡ ಸದ್ದಾಗಿದೆ. ಇದರ ಬಗ್ಗೆ ಮಾತನಾಡಿದರೆ ಸಾಕು, ಅದಕ್ಕೂ ಪರ ವಿರೋಧ ಅನಿಷ್ಟ, ಮನನದ ನೆಮ್ಮದಿ ಭಂಗವಾಗಿದೆ. ಇವತ್ತು ಎಲ್ಲ ಕ್ಷೇತ್ರಗಳಲ್ಲೂ ನಾನು ನನ್ನಿಷ್ಟದ ಜೀವನ ಅನ್ನೋರೇ ಹೆಚ್ಚು. 30 ಸಿನಿಮಾಗಳಲ್ಲಿ ನಟಿಸಿದ್ದರೂ ನಿರ್ಮಾಪಕರ ಮನೆ ಮುಂದೆ ನಿಂತು ಭಿಕ್ಷುಕನಂತೆ ಸಂಭಾವನೆಗೆ ಕಾದಿದ್ದೆವು. ಅವರು ಹಣ ಕೊಟ್ಟ ತಕ್ಷಣವೇ ರೇಷನ್ ಅಂಗಡಿ ಮುಂದೆ ಅಕ್ಕಿ, ಸೀಮೆಎಣ್ಣೆಗೆ ಕ್ಯೂ ನಿಂತವರು ನಾವು. ಆದರೆ ಇಂದು ಎರಡು ಸಿನಿಮಾಗಳಿಗೆ ಕುಬೇರನ ಮಕ್ಕಳಾಗ್ತಾರೆ ಕೆಲವರು ಎಂದು ಟ್ವೀಟ್​ ಮಾಡಿದ್ದಾರೆ ಜಗ್ಗೇಶ್​.

30ಸಿನಿಮ ನಟಿಸಿದರು ನಿರ್ಮಾಪಕ ಮನೆ ಮುಂದೆ ಭಿಕ್ಷುಕರಂತೆ ಸಂಭಾವನೆಗೆ ಕಾದು!ಬದುಕವ ಹಠವಿದ್ದವರು ಹಿಮಾಲಯವೇರುತ್ತಾರೆ. ಬದುಕನ್ನು ಗುರವಾಗಿ ಕಂಡವರು ಸ್ಮಶಾನ ಸೇರುತ್ತಾರೆ. ನಾನು ನಟನಾಗಿ ಅಲ್ಲ ಒಬ್ಬ ತಂದೆಯ ಸ್ಥಾನದಲ್ಲಿ ನಿಂತು ನನ್ನ ಕಲಾಬಂಧುಗಳಿಗೆ ಹೇಳುವುದೊಂದೆ, ನೀವು ಚೆನ್ನಾಗಿದ್ರೆ ಮಾತ್ರ ದುನಿಯಾ, ಬೀ ಕೇರ್ಫುಲ್. ಯಾರೋ ಕೆಲ ತಲೆಮಾಸಿದವರು ಮಾಡಿದ ತಪ್ಪಿಗೆ ಇಡೀ ಚಿತ್ರರಂಗ ಎನ್ನಬೇಡಿ. ಹಾದಿ ತಪ್ಪಿದವರ ಹೆಸರು ಬಹಿರಂಪಡಿಸಿ ಬುದ್ಧಿಕಲಿಸಿ. ಕೆಲವರ ತಪ್ಪಿಗೆ ಇಡೀ ಚಿತ್ರರಂಗದ ಪ್ರಾಮಣಿಕ ಜಲಾವಿದರು ನೊಂದಿದ್ದಾರೆ ಎಂದು ಬೇಸರದಲ್ಲಿ ಟ್ವೀಟ್​ ಮಾಡಿದ್ದಾರೆ.

ನಾನು ನಟನಾಗಿ ಅಲ್ಲ ಒಬ್ಬ ತಂದೆಸ್ಥಾನದಲ್ಲಿ ನಿಂತು ನನ್ನ ಕಲಾಬಂಧುಗಳಿಗೆ ಹೇಳುವುದೊಂದೆ ನೀವು ಚನ್ನಾಗಿದ್ದೀರ ಮಾತ್ರ ದುನಿಯ be careful!ಇನ್ನು 1981ರಲ್ಲಿ ಜಗ್ಗೇಶ್​ ತಮ್ಮ ತಂದೆಯ ಬಳಿ ಐದು ಸಾವಿರ ಕೇಳಿ ಚಪ್ಪಲಿಯಲ್ಲಿ ಏಟು ತಿಂದಿದ್ದ ಘಟನೆಯನ್ನೂ ಈಗ ನೆನಪಿಸಿಕೊಂಡಿದ್ದಾರೆ. ಇಂದಿನ ಮಕ್ಕಳಂತೆ ಆಗಿನ ತಲೆಮಾರು ಮಕ್ಕಳನ್ನು ಬೆಳೆಸುತ್ತಿರಲಿಲ್ಲ. ಹಣ ಕೇಳಿದ್ದಕ್ಕೆ ಅವಮಾನ ಮಾಡಿ, ಜೀವನ ಏನೆಂದು ಕಲಿಸಿದರು ನನ್ನ ತಂದೆ. ಆದರೆ ಇಂದಿನ ಮಕ್ಕಳ ಪರಿಸ್ಥಿತಿ ನಮ್ಮಂತಿಲ್ಲ ಎಂದಿದ್ದಾರೆ ನವರಸ ನಾಯಕ.ಇತ್ತೀಚೆಗಷ್ಟೆ ಬೆಂಗಳೂರಿನಲ್ಲಿ ಎನ್​ಸಿಬಿ ಅಧಿಕಾರಿಗಳು ಬಂಧಿಸಿರುವ ಆರೋಪಿಗಳು ಸದ್ಯ ಸ್ಯಾಂಡಲ್​ವುಡ್​ನ ಸೆಲೆಬ್ರಿಟಿಗಳಿಗೆ ಡ್ರಗ್​ ಮಾರುತ್ತಿದ್ದರು ಎಂಬ ವಿಷಯ ವಿಚಾರಣೆ ವೇಳೆ ಬಹಿರಂಗಗೊಂಡಿದೆ. ಈ ಹಿನ್ನಲೆಯಲ್ಲಿ ತನಿಖೆ ನಡೆಯುತ್ತಿದೆ.
Published by:Anitha E
First published: