Actor Jaggesh: ನನ್ನ ಮಗನ ಭವಿಷ್ಯಕ್ಕೆ ನಾನೇ ಮಣ್ಣು ಹಾಕಿದೆ- ಮಗನ ಸಿನಿ ಜರ್ನಿಯ ಬಗ್ಗೆ ನೆನೆದು ಬೇಸರ ವ್ಯಕ್ತಪಡಿಸಿದ ಜಗ್ಗೇಶ್

Jaggesh Talks About Son Gururaj: ಗುರುರಾಜ್ ನಟಿಸುತ್ತಿರುವ 'ಕಾಗೆ ಮೊಟ್ಟೆ' ಸಿನಿಮಾದ ಟ್ರೇಲರ್ ಇಂದು ಬಿಡುಗಡೆ ಆಗಿದ್ದು, ಮೂವರು ಹಳ್ಳಿ ಯುವಕರು ಬೆಂಗಳೂರಿಗೆ ಬಂದು ಇಲ್ಲಿ ಭೂಗತ ಲೋಕ ಪ್ರವೇಶಿಸಿ ರೌಡಿಗಳನ್ನು ಎದುರು ಹಾಕಿಕೊಂಡು ಅವರೊಟ್ಟಿಗೆ ಹೋರಾಡುವ ಕತೆಯನ್ನ ಹೊಂದಿದೆ ಎನ್ನಲಾಗುತ್ತಿದೆ.

ಜಗ್ಗೇಶ್ ತಮ್ಮ ಮಕ್ಕಳೊಂದಿಗೆ

ಜಗ್ಗೇಶ್ ತಮ್ಮ ಮಕ್ಕಳೊಂದಿಗೆ

  • Share this:
ಹಿರಿಯ ನಟ ಜಗ್ಗೇಶ್  (Jaggesh)ದೇವರ ಬಗ್ಗೆ ಹೆಚ್ಚು ನಂಬಿಕೆಯನ್ನು ಹೊಂದಿರುವುದು ಎಲ್ಲರಿಗೂ ತಿಳಿದಿರುವ ವಿಚಾರ. ಅವರು ಯಾವಾಗಲೂ ಸಾಮಾಜಿಕ ಜಾಲಾತಾಣದಲ್ಲಿ(Social Media) ಆಧ್ಯಾತ್ಮದ ಬಗ್ಗೆ ಆಗಾಗ ಬರೆದುಕೊಳ್ಳುತ್ತಾರೆ. ಹಾಗೆಯೇ ಅವರು ಜ್ಯೋತಿಷ್ಯವನ್ನು ಸಹ ಬಹಳ ನಂಬುತ್ತಾರೆ. ಯಾವುದೇ ಕೆಲಸವನ್ನು ಮಾಡುವುದಾದರೆ ಎಲ್ಲವನ್ನು ವಿಚಾರಿಸಿ ಮುಂದಿನ ಹೆಜ್ಜೆ ಇಡುತ್ತಾರೆ.  ಚಿತ್ರದಲ್ಲಿ ಹಲವಾರು ವರ್ಷಗಳಿಂದ ಸಕ್ರಿಯರಾಗಿರುವ ಅವರು ಇಂದಿಗೂ ಉತ್ತಮ ಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. 

ಅವರ ಮಗ ಗುರುರಾಜ್ ಸಹ ಚಿತ್ರರಂಗದಲ್ಲಿ ಕೆಲ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದರು, ಆದರೆ ಹೆಚ್ಚಿನ ಯಶಸ್ಸು ಸಿಗದೆ ಕಾರಣ ಚಿತ್ರರಂಗದಿಂದ ಹೊರಗುಳಿದಿದ್ದರು.  ಇತ್ತೀಚೆಗೆ ಗುರುರಾಜ್  ಕಾಗೆ ಮೊಟ್ಟೆ ಎನ್ನುವ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ, ಆ ಸಿನಿಮಾದ ಟ್ರೇಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ನಟ ಜಗ್ಗೇಶ್, ಮಗನ ಜಾತಕ ಹಾಗೂ ಚಿತ್ರ ಬಗ್ಗೆ ಮಾತನಾಡಿದ್ದಾರೆ.

ನನ್ನ ಮಗನಿಗೆ ಬುಧಾದಿತ್ಯ ಯೋಗವಿದೆ. ಇದು ಎರಡು ಗ್ರಹಗಳು ಒಟ್ಟಿಗೆ ಸೇರುವ ಯೋಗ ಬರುವುದು ಬಹಳ ಅಪರೂಪ . ಆದ್ದರಿಂದ ಗುರು ಮಾಡುವ ಎಲ್ಲ ಕೆಲಸಗಳು ಯಶಸ್ವಿಯಾಗುತ್ತದೆ ಎಂದಿದ್ದಾರೆ.

ಇದನ್ನೂ ಓದಿ: ಬಿಗ್​ ಬಾಸ್​ ಸೀಸನ್ ​8ರ ಖ್ಯಾತಿಯ Divya Sureshಗೆ ಸಿಕ್ತು ಹೊಸ ಪ್ರಾಜೆಕ್ಟ್​..

ಅಲ್ಲದೇ, ನನ್ನ ಮಗನಿಗೆ  ಬೇರೆ ಭಾಷೆಗಳಿಂದ ಒಳ್ಳೆಯ ಸಿನಿಮಾ ಆಫರ್‌ಗಳು ಬರುತ್ತಿದ್ದವು, ಆದರೆ ನಾನು ಅವುಗಳನ್ನು ಒಪ್ಪಿಕೊಳ್ಳದಂತೆ  ತಡೆದೆ, ಆದರೆ ಈಗ ಅನಿಸುತ್ತಿದೆ, ಹಾಗೆ ಮಾಡಬಾರದಿತ್ತು ಎಂದು. ನಾನು ಆಗ ಒಪ್ಪಿಗೆ ನೀಡಿದ್ದರೆ , ಇಂದು ನನ್ನ ಮಗ ದೊಡ್ಡ ಸ್ಟಾರ್ ಆಗಿರುತ್ತಿದ್ದ.  ಆ ಅವಕಾಶಗಳಿಗೆಲ್ಲ ನಾನೇ ಮಣ್ಣು ಎರಚಿದೆ. ನನ್ನ ಜೀವನದ ಬಹಳ ದೊಡ್ಡ ತಪ್ಪು  ಎಂದು  ಜಗ್ಗೇಶ್ ಬಹಳ ಬೇಸರ ವ್ಯಕ್ತಪಡಿಸಿದ್ದಾರೆ.

ಬಹಳ ದೊಡ್ಡ-ದೊಡ್ಡ ಬ್ಯಾನರ್‌ಗಳು ಹಾಗೂ ಫೇಮಸ್ ನಿರ್ದೇಶಕರು ಮಗನನ್ನ ತಮ್ಮ ಚಿತ್ರಗಳಲ್ಲಿ ನಟಿಸುವಂತೆ ಆಫರ್ ನೀಡಿದ್ದರು, ಆದರೆ ನಾನು ಕನ್ನಡ ಬಿಟ್ಟು ಹೋಗುವುದು ಬೇಡ, ಏನೆ ಮಾಡಿದರೂ ಇಲ್ಲೆ ಮಾಡು ಎಂದು ಹೇಳಿದ್ದೆ.  ಆ ಸಮಯದಲ್ಲಿ ಯಾಕೆ ಆ ಕೆಟ್ಟ ಬುದ್ಧಿ ಬಂತೊ ಗೊತ್ತಿಲ್ಲ. ನಾನೇ ಅವನ ಭವಿಷ್ಯಕ್ಕೆ ಮಣ್ಣು ಹಾಕಿದೆ. ಗುರು ಮನಸ್ಸಿನಲ್ಲಿ ಆ ಬಗ್ಗೆ ಬೇಸರ ಇರಬಹುದು ಎಂದಿದ್ದಾರೆ.

ಇದಲ್ಲದೇ ಗುರುರಾಜ್ ಚಿತ್ರವೊಂದನ್ನು ನಿರ್ದೇಶಿಸುತ್ತಿದ್ದು, ಈ ಚಿತ್ರದಲ್ಲಿ ಜಗ್ಗೇಶ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಅಲ್ಲದೇ, ಈ ಚಿತ್ರದ ಬಗ್ಗೆ ಮಾತನಾಡಿರುವ ಅವರು, ನನಗೆ ಕತೆ ಹೇಳಿದಾಗ ದಂಗಾಗಿಬಿಟ್ಟೆ. ಕತೆ ಬಹಳ ಚೆನ್ನಾಗಿದೆ. ಆದರೆ ನನಗೆ ಇನ್ನೂ ಒಳ್ಳೆ ಡೈಲಾಗ್ಸ್ ಬೇಕು, ಆಗ ನಾನು ನಟಿಸುತ್ತೇನೆ ಎಂದು ಹೇಳಿದ್ದೇನೆ ಎಂದಿದ್ದಾರೆ.

ಗುರುರಾಜ್ ನಟಿಸುತ್ತಿರುವ 'ಕಾಗೆ ಮೊಟ್ಟೆ' ಸಿನಿಮಾದ ಟ್ರೇಲರ್ ಇಂದು ಬಿಡುಗಡೆ ಆಗಿದ್ದು, ಮೂವರು ಹಳ್ಳಿ ಯುವಕರು ಬೆಂಗಳೂರಿಗೆ ಬಂದು ಇಲ್ಲಿ ಭೂಗತ ಲೋಕಕ್ಕೆ ಪ್ರವೇಶಿಸಿ ದೊಡ್ಡ ರೌಡಿಗಳನ್ನು ಎದುರು ಹಾಕಿಕೊಂಡು ಅವರೊಟ್ಟಿಗೆ ಹೋರಾಡುವ ಕತೆಯನ್ನ ಹೊಂದಿದೆ ಎನ್ನಲಾಗುತ್ತಿದೆ.

ಕಾಗೆ ಮೊಟ್ಟೆ ಸಿನಿಮಾವನ್ನು ಚಂದ್ರಹಾಸ ನಿರ್ದೇಶನ ಮಾಡಿದ್ದು, ಗುರುರಾಜು ಜೊತೆ ಹೇಮಂತ್ ರೆಡ್ಡಿ ಮತ್ತು ಮಾದೇಶ್ ಸಹ ಈ ಚಿತ್ರದಲ್ಲಿ ನಟಿಸಿದ್ದಾರೆ. ನಾಯಕಿಯಾಗಿ ತನುಜಾ ಅಭಿನಯಿಸುತ್ತಿದ್ದಾರೆ. ಶರತ್ ಲೋಹಿತಾಶ್ವ, ಪೊನ್ನಂಬಲಂ, ರಾಜ್ ಬಹದ್ದೂರ್​ ಸೇರಿದಂತೆ ಬಹಳಷ್ಟು ಹಿರಿಯ ನಟರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.

ಇದನ್ನೂ ಓದಿ: ಈ ಹಾಲಿವುಡ್ ನಟ ಸ್ನಾನ ಮಾಡೋದೇ ಇಲ್ಲವಂತೆ: ಈ ಬಗ್ಗೆ ಕೇಳಿದ್ರೆ ಏನ್​ ಹೇಳ್ತಾರೆ ಗೊತ್ತಾ Jake Gyllenhaal..!

ಇನ್ನು ಈ ಸಿನಿಮಾಕ್ಕೆ ನಾಗೇಂದ್ರ ಪ್ರಸಾದ್ ಸಂಭಾಷಣೆ ಬರೆದಿದ್ದು, . ಕವಿರಾಜ್ ಹಾಗೂ ಜಯಂತ್ ಕಾಯ್ಕಿಣಿ ಹಾಡುಗಳನ್ನು ಬರೆದಿದ್ದಾರೆ. ಈ ಚಿತ್ರದ ಬಗ್ಗೆ ಜಗ್ಗೇಶ್ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದ್ದು, ಹಿಟ್ ಆಗಲಿದೆ ಎಂದಿದ್ದಾರೆ.
Published by:Sandhya M
First published: