• Home
  • »
  • News
  • »
  • entertainment
  • »
  • Actor Jaggesh: ಜಗ್ಗೇಶ್ ಹೇಳಿದ ಪರಿಮಳದ ಕತೆ! ಪತ್ನಿ ಬಗ್ಗೆ ಹೆಮ್ಮೆಯಾಗ್ತಿದೆ ಎಂದ ನಟ

Actor Jaggesh: ಜಗ್ಗೇಶ್ ಹೇಳಿದ ಪರಿಮಳದ ಕತೆ! ಪತ್ನಿ ಬಗ್ಗೆ ಹೆಮ್ಮೆಯಾಗ್ತಿದೆ ಎಂದ ನಟ

ಜಗ್ಗೇಶ್-ಪರಿಮಳ ಜಗ್ಗೇಶ್

ಜಗ್ಗೇಶ್-ಪರಿಮಳ ಜಗ್ಗೇಶ್

ನಟ ಜಗ್ಗೇಶ್ ಫೇಸ್​ಬುಕ್​ನಲ್ಲಿ ಆ್ಯಕ್ಟಿವ್ ಆಗಿದ್ದಾರೆ. ಕೆಲವು ಪೋಸ್ಟ್ ಹಾಗೂ ಫೋಟೋಗಳನ್ನು ಅವರು ಶೇರ್ ಮಾಡುತ್ತಲೇ ಇರುತ್ತಾರೆ. ಅವರ ಇತ್ತೀಚಿನ ಪೋಸ್ಟ್​ನಲ್ಲಿ ಪತ್ನಿ ಬಗ್ಗೆ ಬರೆದಿದ್ದಾರೆ.

  • News18 Kannada
  • Last Updated :
  • Bangalore, India
  • Share this:

ಸ್ಯಾಂಡಲ್​ವುಡ್ (Sanalwood) ನಟ ಜಗ್ಗೇಶ್  ಅವರು ಸೋಷಿಯಲ್ ಮೀಡಿಯಾದಲ್ಲಿ (Social Media) ಆ್ಯಕ್ಟಿವ್ ಆಗಿದ್ದಾರೆ. ತಮ್ಮ ಸಿನಿಮಾಗಳಿಗಿಂತ ಹೆಚ್ಚಾಗಿ ಜಗ್ಗೇಶ್ ಅವರು ತಮ್ಮ ಖಾಸಗಿ ಬದುಕು, ತಮ್ಮ ಭಾವನೆಗಳನ್ನು ಫೇಸ್​ಬುಕ್ ಪೋಸ್ಟ್ ಮೂಲಕ ಶೇರ್ ಮಾಡುತ್ತಾರೆ. ಹಳೆ ಘಟನೆಗಳು, ಹೊಸ ಅಪ್ಡೇಟ್​ಗಳು, ಅಪರೂಪದ ಫೋಟೋಗಳನ್ನು ಅವರು ಶೇರ್ ಮಾಡುತ್ತಲೇ ಇರುತ್ತಾರೆ. ಕೆಲವೊಮ್ಮೆ ಪ್ರಮುಖ ಬೆಳವಣಿಗೆಗಳ ಬಗ್ಗೆ ಪ್ರತಿಕ್ರಿಯಿಸುತ್ತಾರೆ. ಇದೀಗ ಜಗ್ಗೇಶ್ ಅವರು ತಮ್ಮ ಲೇಟೆಸ್ಟ್ ಪೋಸ್ಟ್​ನಲ್ಲಿ ಪತ್ನಿ ಪರಿಮಳ ಬಗ್ಗೆ ಬರೆದಿದ್ದಾರೆ. ಪತ್ನಿ ಬಗ್ಗೆ ಹೆಮ್ಮೆಯಾಗುತ್ತಿದೆ ಎಂದು ಹೇಳಿದ್ದಾರೆ.


ಹಳೆ ಘಟನೆ ಶೇರ್ ಮಾಡಿದ ನಟ, ಇದರೊಂದಿಗೆ ಹೊಸ ಖುಷಿಯ ಅಪ್ಡೇಟ್


ಮಡದಿ ಪರಿಮಳ SSLC ಓದಿದಾಗ ನನ್ನ ಮದುವೆ ಆದದ್ದು. ಪರಿಮಳ ನನ್ನ ಕೇಳಿಕೊಂಡದ್ದು ಓದಿಸು ಎಂದು. ನಾನು ಮಾತು ಕೊಟ್ಟದ್ದು ಆಕೆಗೆ ಎಲ್ಲಿಯವರೆಗೂ
ಓದುತ್ತೀಯ ಅಲ್ಲಿಯವರೆಗೂ ಓದಿಸುವೆ ಎಂದು. ಅಂದು 1985 ಕಾಸು, ಕೆಲಸ ಇಲ್ಲದ ದಿನಗಳು ಹೇಗೆ ಅವಳ ವಿದ್ಯಾಭ್ಯಾಸಕ್ಕೆ ಹಣ ಹೊಂದಿಕೆ ಮಾಡುವೆ ದೇವರೆ ಬಲ್ಲ ಎಂಬ ಚಿಂತೆ ಇತ್ತು. PUC ಯಲ್ಲಿ ಮೆರಿಟ್ ಪಡೆದು BE ARC ಗೆ BMS ನಲ್ಲಿ Seat ಪಡದೇಬಿಟ್ಟಳು.
ಅಲ್ಲಿಂದ ಇಲ್ಲಿಯವರೆಗೂ NUTRITION ನಲ್ಲೇ 5 Certification ಪಡೆದು ತನ್ನದೇ ಸ್ವಂತ ಸಂಸ್ಥೆ ನಡೆಸುತ್ತಿದ್ದಾಳೆ. ಪ್ರಪ್ರಥಮವಾಗಿ ವಿದೇಶ ನೆಲದಲ್ಲಿ ತನ್ನ ಪ್ರತಿಭೆ ಅನಾವರಣ ಮಾಡುವ ಅದೃಷ್ಟ ಅವಳ ಪ್ರತಿಭೆಗೆ ಒದಗಿ ಬಂದಿದೆ. ಗಂಡನಾಗಿ ನನಗೆ ಮಡದಿಯ ಮೇಲೆ ಹೆಮ್ಮೆ. ಈಸಬೇಕು ಇದ್ದು ಜಯಿಸಬೇಕು ಎಂಬುದು ನನ್ನ ಉಪದೇಶ ಆಕೆಗೆ. ನಿಮ್ಮ ಶುಭಹಾರೈಕೆಯು ಇರಲಿ ಎಂದು ಅವರು ಪೋಸ್ಟ್ ಮಾಡಿದ್ದಾರೆ.


ಜನರ ಮೆಚ್ಚುಗೆ


ಜಗ್ಗೇಶ್ ಅವರ ಪೋಸ್ಟ್ ವೈರಲ್ ಆಗಿದ್ದು 5 ಸಾವಿರಕ್ಕೂ ಹೆಚ್ಚು ಜನರು ಇದಕ್ಕೆ ರಿಯಾಕ್ಟ್ ಮಾಡಿದ್ದಾರೆ. 498 ಜನರು ಈ ಪೋಸ್ಟ್​​ಗೆ ಕಮೆಂಟ್ ಮಾಡಿ ಶುಭಾಶಯಗಳನ್ನು ತಿಳಿಸಿದ್ದಾರೆ. ಜಗ್ಗೇಶ್ ಅವರ ಪೋಸ್ಟ್​​ನ್ನು 48ನ ಜನರು ಶೇರ್ ಮಾಡಿಕೊಂಡಿದ್ದು ಇದಕ್ಕೆ ವ್ಯಾಪಕವಾಗಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.




ಇದನ್ನೂ ಓದಿ: Kantara OTT Release: ಪ್ರೈಮ್ ವಿಡಿಯೋದಲ್ಲಿ ಕಾಂತಾರ! ಕಂಡೀಷನ್ಸ್ ಇವೆ


ಪ್ಯಾರಿಸ್-ಫ್ರಾನ್ಸ್​​ನಲ್ಲಿ ಭಾರತದಿಂದ ಮಾತನಾಡುವವರಾಗಿ ಪರಿಮಳ ಜಗ್ಗೇಶ್ ಆಯ್ಕೆಯಾಗಿದ್ದಾರೆ. ಸೈಂಟೆಕ್ಸ್ ಇಂಟರ್ ನ್ಯಾಷನಲ್ ಕಾನ್ಫರೆನ್ಸ್​​ನಲ್ಲಿ ಡಯಾಬಿಟಿಸ್ ಹಾಗೂ ಎಂಡೋಕ್ರಿನಾಲಜಿ ಎನ್ನುವ ವಿಚಾರದ ಬಗ್ಗೆ ಮಾತನಾಡಲಿದ್ದಾರೆ. ಪರಿಮಳ ಜಗ್ಗೇಶ್ ಅವರು ಅಲಮಿರಾಪ್ ನ್ಯೂಟ್ರಿಷನ್ ಫೌಂಡರ್ ಆಗಿದ್ದು ಗ್ಲಾಮ್ ಡಯೆಟ್ ಫೌಂಡರ್ ಕೂಡಾ ಹೌದು. ಈ ಕಾರ್ಯಕ್ರಮ ನವೆಂಬರ್ 21 ಹಾಗೂ ನವೆಂಬರ್ 23ರಂದು ನಡೆಯಲಿದೆ.


ಪತ್ನಿಗೆ ಆಹ್ವಾನ ಬಂದಾಗಲೂ ಖುಷಿ ಹಂಚಿಕೊಂಡಿದ್ದ ನಟ


ಕಠಿಣ ಪರಿಶ್ರಮ ಯಾವಾಗಲೂ ಫಲಿತಾಂಶವನ್ನು ನೀಡುತ್ತದೆ. ನನ್ನ ಹೆಂಡತಿ ಸುಮಾರು ಒಂದು ವರ್ಷದಿಂದ ಹಗಲಿರುಳು ಈ ಅಧ್ಯಯನದಲ್ಲಿ ಶ್ರಮಿಸುತ್ತಿರುವುದನ್ನು ನಾನು ನೋಡಿದ್ದೇನೆ. ಅವರ ಪೀರ್-ರಿವ್ಯೂಡ್ ಅಧ್ಯಯನವು #CDRP ನಿಯತಕಾಲಿಕದಲ್ಲಿ ಪ್ರಕಟವಾಗಿದೆ. ಅಂತಾರಾಷ್ಟ್ರೀಯ ವೇದಿಕೆಯಲ್ಲಿ ತನ್ನ ಅಧ್ಯಯನದ ವಿವರಗಳನ್ನು ಹಂಚಿಕೊಳ್ಳಲು ಗೌರವಾನ್ವಿತ ಸ್ಪೀಕರ್ ಆಗಿ ಫ್ರಾನ್ಸ್‌ಗೆ ಆಹ್ವಾನಿಸಲಾಗಿದೆ ಎಂದು ನನಗೆ ತುಂಬಾ ಹೆಮ್ಮೆ ಇದೆ. ಈ ಪೋಷಣೆಯ ಕ್ಷೇತ್ರದಲ್ಲಿ ನನ್ನ ಕುಟುಂಬದಲ್ಲಿ ಯಾರೂ ಇಲ್ಲದಿದ್ದರೂ, ಕೇವಲ ಇಚ್ಛಾಶಕ್ತಿ ಮತ್ತು ಕಠಿಣ ಪರಿಶ್ರಮದ ಮೂಲಕ, ಕೆಲವೇ ವರ್ಷಗಳಲ್ಲಿ ಅವಳು ಅಂತಹ ಅದ್ಭುತ ಮಾರ್ಗವನ್ನು ತನಗಾಗಿ ಕೆತ್ತಿಸಿಕೊಂಡಿದ್ದಾಳೆ ಎಂದು ಜಗ್ಗೇಶ್ ಅವರು ಪೋಸ್ಟ್ ಮಾಡಿದ್ದರು.

Published by:Divya D
First published: