Jaggesh: ನಡುರಸ್ತೆಯಲ್ಲಿ ಬೂಟಿನಿಂದ ಹೊಡೆತ ತಿಂದು ಆತ್ಮಹತ್ಯೆಗೆ ಯತ್ನಿಸಿದ್ದ ನಟ ಜಗ್ಗೇಶ್​..!

ಎಸ್​ಎಸ್​ಎಲ್​ಸಿ ಪರೀಕ್ಷೆಯಲ್ಲಿ ಕಡಿಮೆ ಅಂಕ ಗ. ಳಿಸಿದ್ದಕ್ಕೆ ಜಗ್ಗೇಶ್ ಅವರಿಗೆ ಅವರ ತಂದೆ ಬೂಟಿನಲ್ಲಿ ನಡುರಸ್ತೆಯಲ್ಲಿ ಹೊಡೆದಿದ್ದರಂತೆ. ಆಗ ಅವಮಾನದಿಂದಾಗಿ ಆತ್ಮಹತ್ಯೆಗೆ ಯತ್ನಿಸಿದ್ದರಂತೆ. ಆ ಘಟನೆಯನ್ನು ನೆನಪಿಸಿಕೊಂಡಿರುವ ಜಗ್ಗೇಶ್ ಅವರು ಈಗಿನ ಪೋಷಕರಿಗೆ ಒಂದು ಕಿವಿ ಮಾತು ಹೇಳಿದ್ದಾರೆ.

ನಟ ಜಗ್ಗೇಶ್​

ನಟ ಜಗ್ಗೇಶ್​

  • Share this:
ನವರಸನಾಯಕ ಜಗ್ಗೇಶ್​ ಸಾಮಾಜಿ ಜಾಲತಾಲಣದಲ್ಲಿ ಸಿಕ್ಕಾಪಟ್ಟೆ ಸಕ್ರಿಯವಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸದಾ ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿರುವ ಈ ನಟ ತಮ್ಮ ವೈಯಕ್ತಿಕ ವಿಷಯಗಳನ್ನು ಹೆಚ್ಚಾಗಿ ಹಂಚಿಕೊಳ್ಳುತ್ತಿರುತ್ತಾರೆ. ಹಳ್ಳಿಯ ನೆನಪುಗಳು, ಅಪ್ಪ-ಅಮ್ಮನ ಜೊತೆ ಕಳೆದ ಕ್ಷಣಗಳು, ಮನೆಯಿಂದ ಓಡಿ ಹೋದ ದಿನಗಳು, ಮೈಸೂರಿನಲ್ಲಿ ಕಳೆದ ಆ ದಿನಗಳು ಹೀಗೆ ನೆನಪಾದಾಗಲೆಲ್ಲ ತಮ್ಮ ಜೀವನಕ್ಕೆ ಸಂಬಂಧಿಸಿದ ಘಟನೆಗಳ ಬಗ್ಗೆ ವಿವರವಾಗಿ ತಮ್ಮ ಇನ್​ಸ್ಟಾಗ್ರಾಂನಲ್ಲಿ ಶೇರ್ ಮಾಡುತ್ತಿರುತ್ತಾರೆ. ಈಗಳೂ ಸಹ ಜಗ್ಗೇಶ್​ ಅವರು ಶಾಲಾ ದಿನಗಳ ಬಗ್ಗೆ ಬರೆದುಕೊಂಡಿದ್ದಾರೆ. ಜೊತಗೆ ತಮ್ಮ ಎಸ್​ಎಸ್​ಎಲ್​ಸಿ ಅಂಕಪಟ್ಟಿಯ ಪ್ರತಿಯನ್ನು ತಮ್ಮ ಇನ್​ಸ್ಟಾಗ್ರಾಂನಲ್ಲಿ ಶೇರ್​ ಮಾಡಿದ್ದು, ಅದರ ಜೊತೆಗಿನ ಘಟನೆಗಳನ್ನೂ ಹಂಚಿಕೊಂಡಿದ್ದಾರೆ. ಜೊತೆಗೆ ಇಂದಿನ ಪೋಷಕರಿಗೂ ಒಂದು ಕಿವಿ ಮಾತು ಹೇಳಿದ್ದಾರೆ.  

ಈ ಹಿಂದೆಯೂ ಜಗ್ಗೇಶ್​ ಅವರು ತಮ್ಮ ಕುಟುಂಬ ಇದ್ದ ಸ್ಥಿತಿ ಹಾಗೂ ಪಡುತತಿದ್ದ ಕಷ್ಟದ ಬಗ್ಗೆ ಸಾಕಷ್ಟು ಸಲ ಹೇಳಿಕೊಂಡಿದ್ದಾರೆ. ಬಡತನದಲ್ಲಿ ಬೆಳದ ಜಗ್ಗೇಶ್​ ಅವರು ವಿದ್ಯಾಭ್ಯಾಸದ ವಿಷಯದಲ್ಲಿ ಕನ್ನಡವನ್ನು ಹೊರತುಪಡಿಸಿ ಉಳಿದೆಲ್ಲ ವಿಷಯಗಳಲ್ಲೂ ಕೊಂಚ ಹಿಂದೆ ಇದ್ದರಂತೆ. 1979ರಲ್ಲಿ ಎಸ್​ಎಸ್​ಎಲ್​ಸಿ ಪರೀಕ್ಷೆ ಬರೆದಿದ್ದು, ಸೆಕೆಂಡ್​ ಕ್ಲಾಸ್​ನಲ್ಲಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರು. ಜಗ್ಗೇಶ್​ ಅವರು ಪಡೆದ ಅಂಕಗಳಿಂದಾಗಿ ಅವರ ಮನೆಯಲ್ಲಿ ಏನೆಲ್ಲ ಆಗಿತ್ತಂತೆ ಗೊತ್ತಾ.?

Jaggesh SSLC marks, Jaggesh SSLC marks card, Jaggesh Education, Jaggesh Marks in 10th class, ಜಗ್ಗೇಶ್ 10ನೇ ತರಗತಿ ಅಂಕಗಳು, ಜಗ್ಗೇಶ್ ಎಸ್‌ ಎಸ್‌ ಎಲ್‌ ಸಿ ಅಂಕಪಟ್ಟಿ, ಜಗ್ಗೇಶ್ ಮಾರ್ಕ್ಸ್‌ಕಾರ್ಡ್
ಜಗ್ಗೇಶ್​ ಅವರ ಅಂಕಪಟ್ಟಿ


ಸದಾ ಕನ್ನಡ ಕನ್ನಡ ಎನ್ನು ಜಗ್ಗೇಶ್ ಅವರು ಎಸ್​ಎಸ್​ಎಲ್​ಸಿ ಪರೀಕ್ಷೆಯಲ್ಲೂ ಕನ್ನಡದಲ್ಲೇ ಹೆಚ್ಚು ಅಂಕ ಗಳಿಸಿದ್ದಾರೆ ಅನ್ನೋದು ವಿಶೇಷ. ಕನ್ನಡದಲ್ಲಿ 101 ಅಂಕ ಗಳಿಸಿದರೆ, ಹಿಂದಿಯಲ್ಲಿ ಕೇವಲ 20 ಅಂಕ ಪಡೆದಿದ್ದಾರೆ. ಇನ್ನು ಜಗ್ಗೇಶ್ ಅವರು ತಮ್ಮ ಅಂಕಪಟ್ಟಿಯನ್ನು ಮನೆಗೆ ತೆಗೆದುಕೊಂಡು ಹೋಗುತ್ತಿದ್ದಂತೆಯೇ ಅವರ ಅಪ್ಪನ ಕೈಯಲ್ಲಿ ಹೊಡೆತ ತಿನ್ನುವಂತಾಗಿತ್ತಂತೆ. ಇನ್ನು ಜಗ್ಗೇಶ್ ಅವರ ಹೆಸರು ಆಗ ಈಶ್ವರ ಎಂದಾಗಿತ್ತಂತೆ.

ಇದನ್ನೂ ಓದಿ: Raj Kundra Arrest: ರಾಜ್​ ಕುಂದ್ರಾ ಪೊಲೀಸ್​ ಕಸ್ಟಡಿ ಅವಧಿ ವಿಸ್ತರಣೆ: ಮೌನ ಮುರಿದ ನಟಿ ಶಿಲ್ಪಾ ಶೆಟ್ಟಿ..!

ಅಂದು ಈ ಜಗ್ಗೇಶ ಶಾಲೆಯಲ್ಲಿ ಈಶ್ವರ. ತಾತ ರಾಜಣ್ಣನಂತೆ ನಟನಾಗು ಎಂದು ತಲೆಯಲ್ಲಿ ಹುಳಬಿಟ್ಟ. ಅದು ನನ್ನ ಚಿಂತನೆಯ ಚಿತೆಯಾಯಿತು.ಪರೀಕ್ಷೆ ಅರ್ಧ ಮನಸ್ಸಲ್ಲೆ ಓದಿಬರೆದೆ. ಯಾಕೋ ಕನ್ನಡಮಾತ್ರ ನನ್ನ ಅಚ್ಚುಮೆಚ್ಚಿನ ವಿಷಯವಾಯಿತು. ಕನ್ನಡ ವ್ಯಾಕರಣ ಸಿಹಿ ತಿನಿಸಂತೆ ಪ್ರೀತಿ. ಬಾಲ್ಯದಿಂದ ಕನ್ನಡ ಭಾಷೆ ಪ್ರೀತಿ ಹುಟ್ಟಿದರೆ, ಸಾಯುವವರೆಗು ಅದು ಅವನ ಹೃದಯದ ನಾಡಿಬಡಿತದಂತೆ ಜೊತೆ ಉಳಿಯುತ್ತದೆ. ಸ್ವಾರ್ಥಕ್ಕೆ ಬಳಕೆಯಾದರೆ ಆತ್ಮಧ್ರೋಹವಾಗುತ್ತದೆ. ಈ ಅಂಕ ನೋಡಿದ ಅಪ್ಪ ನಡುರೋಡಲ್ಲಿ ಜನನೋಡುವಂತೆ ಬೂಟಿನಲ್ಲಿ ಹೊಡೆದುಬಿಟ್ಟರು. ಅಪಮಾನ ಸಹಿಸಲಾಗದೆ ಆತ್ಮಹತ್ಯಗೆ ಯತ್ನಿಸಿದ್ದೆ. ಆಗ ದಿವಂಗತ ಶ್ರೀರಾಮಪುರದ ಕಿಟ್ಟಿ (ಆ ದಿನಗಳು ಕುಖ್ಯಾತಿ)ನನ್ನ ಬಾಚಿ ಎಳೆದು ರೈಲಿನ ಅನಾಹುತ ತಪ್ಪಿಸಿದ. ಆ ವಿಷಯ ತಿಳಿದು ಅಪ್ಪನಿಗೆ ದುಃಖವಾಗಿ ಮನನೊಂದು ಬಂಧುಮಿತ್ರರ ಮುಂದೆ ಕಣ್ಣೀರು ಇಟ್ಟು ಪಶ್ಚಾತಾಪಪಟ್ಟರು.
ಅಂದು ಅನಾಹುತ ಸಂಭವಿಸಿದ್ದರೆ ಇಂದು ಈಶ್ವರ ಜಗ್ಗೇಶನಾಗಿ ಇರುತ್ತಿರಲಿಲ್ಲಾ. ಬದಲಾಗಿ ಸತ್ತ ಕೋಟಿ ಜನರಲ್ಲಿ ಒಬ್ಬನಾಗುತ್ತಿದ್ದೆ ಎಂದು ಅಪ್ಪ ಬೂಟಿನಿಂದ ಹೊಡೆದ ಕಾರಣಕ್ಕೆ ಆತ್ಮಹತ್ಯೆಗೆ ಯತ್ನಿಸಿದ ವಿಷಯದ ಬಗ್ಗೆ ಬರೆದುಕೊಂಡಿದ್ದಾರೆ ಜಗ್ಗೇಶ್​.


ಪೋಷಕರಿಗೆ ಎಸ್​ಎಸ್​ಎಲ್​ಸಿ ಫಲಿತಾಂಶದ ಕುರಿತು ಕಿವಿ ಮಾತು ಹೇಳಿದ ಜಗ್ಗೇಶ್​

ತಂದೆತಾಯಿ ಮಕ್ಕಳನ್ನ ಬರಿ ಓದಿನ ಯಂತ್ರವಾಗಿ ಬೆಳಸದೆ ಜಗದಪಾಠ ಕಲಿಸುವ ಯತ್ನಮಾಡಿ. ಓದಿದ ಮಕ್ಕಳು ಸರ್ಕಸ್ ಸಿಂಹದಂತೆ ಓದಿನ ಜೊತೆಗೆ ಜಗದಪಾಠ ಕಲಿತವರು ಬೇಟೆಯಾಡುವ ಕಾಡಿನಸಿಂಹದಂತೆ. ಇಂದಿನ ಜಗತ್ತಿಗೆ ಮಕ್ಕಳು ಬೇಟೆಯಾಡುವ ಸಿಂಹದಂತೆ ಬಾಳಬೇಕು. ಕಾರಣ ಜಗ ಕಾಡಿನಂತೆ ಆಗಿದೆ. ಮನುಷ್ಯ ಬೇಟೆಯಾಡುವ ಪ್ರಾಣಿಯಂತೆ. ಇಂಥ ಸಮಯದಲ್ಲಿ ಮಕ್ಕಳು ಕಾಡು ಸಿಂಹವಾದರೆ. ಕೆಣಕುವವರು ದೂರ ಉಳಿಯುತ್ತಾರೆ. ಎಸ್​ಎಸ್​ಎಲ್​ಸಿ ಫಲಿತಾಂಶ ಏನೆ ಬರಲಿ, ನಿಮ್ಮ ಮಕ್ಕಳನ್ನು ಸಿಂಹದಂತೆ ಸಾಕಿ. ಮಿಕ್ಕಂತೆ ಜಗತ್ತೆ ಮನುಜನಿಗೆ ಜೀವನಪಾಠ ಕಲಿಸುತ್ತದೆ. ಅಮರ ಹಳೆ ನೆನಪು ಎಂದು ಇಂದಿನ ಪೋಷಕರಿಗೆ ಕಿವಿ ಮಾತು ಹೇಳಿದ್ದಾರೆ.
Published by:Anitha E
First published: