ನಟ ಜಗ್ಗೇಶ್(Jaggesh).. ಈ ಹೆಸರು ಕೇಳಿದರೆ ಸಾಕು ನಿಮ್ಮ ತಲೆಯಲ್ಲಿ ಇವರ ನೂರಾರು ಕಾಮಿಡಿ ಸಿನಿಮಾ(Comedy Movie)ಗಳು ನೆನಪಾಗುತ್ತವೆ. ಅವರ ಡೈಲಾಗ್ಗಳು ನೆನಪಿಗೆ ಬಂದು ನಿಮಗೆ ತಿಳಿಯದ ಹಾಗೇ ಮುಖದ ಮೇಲೆ ಸ್ಮೈಲ್(Smile) ಬಂದಿರುತ್ತೆ. ಹೌದು, ಅಂದಿನಿಂದ ಇಂದಿನ ಕಾಲದ ಜನರಿಗೂ ನಗು ತರಿಸುವ ಶಕ್ತಿ ಇರುವ ಏಕೈಕ ನಟ ಅಂದರೆ ಅದು ಜಗ್ಗೇಶ್. ಆ ಕಾಲದಲ್ಲಿ ಕಾಮಿಡಿ ಸಿನಿಮಾಗಳನ್ನು ಮಾಡಿಕೊಂಡು ಬಂದ ಜಗ್ಗೇಶ್, ಇಂದಿಗೂ ಸ್ಯಾಂಡಲ್ವುಡ್(Sandalwood)ನಲ್ಲಿ ಅದೇ ಖದರ್ ಉಳಿಸಿಕೊಂಡಿದ್ದಾರೆ. ಜಗ್ಗೇಶ್ ಅಂದರೆ, ದೊಡ್ಡವರಿಂದ ಪುಟ್ಟು ಪುಟ್ಟ ಮಕ್ಕಳಿಗೂ ಇಷ್ಟ. ಸದ್ಯ ಕನ್ನಡ ಚಿತ್ರರಂಗದಲ್ಲಿ ಇರುವ ಹಿರಿಯ ಕಲಾವಿದರಲ್ಲಿ ನಟ ಜಗ್ಗೇಶ್ ಕೂಡ ಒಬ್ಬರು. ಜಗ್ಗೇಶ್ ಚಿತ್ರರಂಗದ ಹಿರಿಯ(Senior)ಣ್ಣನ ಸ್ಥಾನದಲ್ಲಿ ಇದ್ದಾರೆ. ಚಿತ್ರರಂಗದಲ್ಲಿ ಏನೆ ಆಗು ಹೋಗುಗಳಿದ್ದರೂ ಕೂಡ ನಟ ಜಗ್ಗೇಶ್ ಧ್ವನಿ ಎತ್ತುತ್ತಾರೆ. ಜಗ್ಗೇಶ್ ಅವರ ಸಿನಿಮಾಗಳ ಮೂಲಕ ಮಾತ್ರವಲ್ಲ, ಸಾಮಾಜಿಕ ಜಾಲತಾಣದ ಮೂಲಕ ಜನರ ಜೊತೆಗೆ ಸದಾ ಕನೆಕ್ಟ್ ಆಗಿ ಇರುತ್ತಾರೆ. ತಮ್ಮ ಬದುಕಿನ ಹಲವು ವಿಚಾರಗಳನ್ನು ಆಗಾಗ ರಿವೀಲ್(Reveal) ಮಾಡುತ್ತಾ ಇರುತ್ತಾರೆ. ಇತ್ತೀಚೆಗೆ ಇಲ್ಲ ಸಲ್ಲದ ವಿವಾದಗಳನ್ನು ಮೈ ಮೇಲೆ ಎಳೆದುಕೊಂಡಿದ್ದರು. ಇದೀಗ ಅವರ ಮತ್ತೊಂದು ವಿಡಿಯೋ(Video) ಜನರಿಗೆ ಸಿಕ್ಕಾಪಟ್ಟೆ ನಗು ತರಿಸುತ್ತಿದೆ.
ನವರಸನಾಯಕನ ಕಾಮಿಡಿ ವಿಡಿಯೋ ವೈರಲ್!
ಈಗ ಜಗ್ಗೇಶ್ ಅವರ ಬಗ್ಗೆ ಮಾತನಾಡಲು ಕಾರಣ ಅವರು ಹಂಚಿಕೊಂಡಿರುವ ಒಂದು ವಿಡಿಯೋ. ಈ ವಿಡಿಯೋದಲ್ಲಿ ನಟ ಜಗ್ಗೇಶ್ ಅವರಿಗೆ 18ನೇ ವರ್ಷ ವಯಸ್ಸು ಇದ್ದಾಗ ಏನು ಮಾಡ್ತಿದ್ದರು, ಚಿತ್ರರಂಗಕ್ಕೆ ಎಂಟ್ರಿ ಕೊಡಲು ಯಾವ ಟ್ರಿಕ್ ಬಳಸುತ್ತಿದ್ದರು ಎನ್ನುವುದನ್ನು ಹೇಳಿಕೊಂಡಿದ್ದಾರೆ. ಫೇಸ್ ಆ್ಯಪ್ ಮೂಲಕ ತಮ್ಮ ಮುಖವನ್ನು ಎಡಿಟ್ ಮಾಡಿದ್ದಾರೆ. 18 ವರ್ಷದಂತೆ ಯುವಕನಂತೆ ಕಾಣುವ ಜಗ್ಗೇಶ್ ಸಖತ್ ಡೈಲಾಗ್ಸ್ ಹೊಡೆದಿದ್ದಾರೆ. ಜಗ್ಗೇಶ್ ಸಿನಿಮಾಗೆ ಬರುವ ಮುನ್ನ ಹೇಗೆಲ್ಲಾ ಡವ್ ಮಾಡುತ್ತಿದ್ದರು ಎದು ವಿಡಿಯೋದಲ್ಲಿ ಹೇಳಿದ್ದಾರೆ. ಈ ವಿಡಿಯೋ ಇದಿಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.
ಇದನ್ನು ಓದಿ : ಅಪ್ಪು,ಕಿಚ್ಚನ ಸ್ಟೈಲ್ನಲ್ಲಿ `ಮೀಟ್ ಮಾಡೋಣ’ ಅಂತಿದ್ದಾರೆ ಡಿಂಪಲ್ ಕ್ವೀನ್ ರಚಿತಾ!
ಇನ್ಸ್ಟಾಗ್ರಾಂನಲ್ಲಿ ವಿಡಿಯೋ ಹಂಚಿಕೊಂಡ ಜಗ್ಗೇಶ್!
ನಟ ಜಗ್ಗೇಶ್ ಸದ್ಯ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ.. " ನನಗೂ ಫೀಲಂನಲ್ಲಿ ಸೇರಬೇಕು ಅಂತ ತುಂಬಾ ಆಸೆ ಇದೆ ಸರ್, ನಾನು ಟ್ರೈನಿಂಗ್ ತಗೋತಾ ಇದಿನಿ, ಆಮೇಲೆ ಸ್ವಿಮ್ಮಿಂಗ್ ಹೋಗ್ತೀನಿ, ಹಾರ್ಸ್ ರೈಡಿಂಗ್ ಮಾಡ್ತೀನಿ, ನನಗೆ ತುಂಬಾ ಇಷ್ಟ ಆ್ಯಕ್ಟ್ ಮಾಡಬೇಕು ಅಂತ, ಚಾನ್ಸ್ ಇದ್ದರೆ ಕೊಡಿ ಸರ್, ತುಂಬಾ ಆಸೆ ಸರ್" ಎಂದು ಜಗ್ಗೇಶ್ ಕೇಳುತ್ತಿದ್ದರಂತೆ. ಇದನ್ನೇ ಅವರು ವಿಡಿಯೋದಲ್ಲಿ ಹಂಚಿಕೊಂಡಿದ್ದಾರೆ. ಈ ಫನ್ನಿ ವಿಡಿಯೋ ನೋಡಿದ ಜನ ಹೊಟ್ಟೆ ಹುಣ್ಣಾಗುಷ್ಟು ನಗುತ್ತಿದ್ದಾರೆ.‘ನಾನು 18ವರ್ಷ ಇದ್ದಾಗ ಹೀಗೆ ಸಿನಿಮದಲ್ಲಿ ಅವಕಾಶ ಕೇಳುತ್ತಿದ್ದದ್ದು..!
ಆಧುನಿಕ ಅವಿಷ್ಕಾರದಲ್ಲಿ ನಿಮ್ಮ ನಗಿಸಲು ಈ ಯತ್ನ..just fun’ ಎಂದು ಜಗ್ಗೇಶ್ ಬರೆದುಕೊಂಡಿದ್ದಾರೆ.
ಇದನ್ನು ಓದಿ : ಪ್ರಶ್ನೆ ಪತ್ರಿಕೆಯಲ್ಲಿ ಕರೀನಾ ಕಪೂರ್ ಮಗನ ಬಗ್ಗೆ ಪ್ರಶ್ನೆ: ತಬ್ಬಿಬ್ಬಾದ 6ನೇ ಕ್ಲಾಸ್ ವಿದ್ಯಾರ್ಥಿಗಳು!
ರಾಘವೇಂದ್ರ ಸ್ಟೋರ್ ಶೂಟಿಂಗ್ನಲ್ಲಿ ಜಗ್ಗೇಶ್ ಬ್ಯುಸಿ!
ಸದ್ಯ ನಟ ಜಗ್ಗೇಶ್ ರಾಘವೇಂದ್ರ ಸ್ಟೋರ್ ಸಿನಿಮಾದ ಶೂಟಿಂಗ್ನಲ್ಲಿ ಬ್ಯುಸಿಯಾಗಿದ್ದಾರೆ. ಈ ಸೆಟ್ನಲ್ಲಿ ಜಗ್ಗೇಶ್ ಸಖತ್ ಎಂಜಾಯ್ ಮಾಡುತ್ತಿದ್ದಾರೆ.ಬಿಡುವಿನ ಸಮಯದಲ್ಲಿ ಈ ರೀತಿಯ ವಿಡಿಯೋಗಳನ್ನು ಹಾಕಿ ಜನರನ್ನು ರಂಜಿಸುವ ಕೆಲಸ ಮಾಡುತ್ತಿದ್ದಾರೆ. ಇದರ ಜೊತೆಗೆ ಶೂಟಿಂಗ್ ಬಿಡುವಿನ ಸಮಯದಲ್ಲಿ ಸಹ ನಟರಾದ ಮಿತ್ರ ಮತ್ತು ರವಿಗೌಡರ ಜೊತೆಗೆ ಜಗ್ಗೇಶ್ ಕಾಲ ಕಳೆಯುತ್ತಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ