ಬಹಳ ವರ್ಷಗಳ ನಂತರ ನೆಗೆಟೀವ್​ ಶೇಡ್​ನಲ್ಲಿ ಜಗ್ಗೇಶ್..!

news18
Updated:September 7, 2018, 2:21 PM IST
ಬಹಳ ವರ್ಷಗಳ ನಂತರ ನೆಗೆಟೀವ್​ ಶೇಡ್​ನಲ್ಲಿ ಜಗ್ಗೇಶ್..!
news18
Updated: September 7, 2018, 2:21 PM IST
ನ್ಯೂಸ್​ 18 ಕನ್ನಡ 

ನವರಸ ನಾಯಕ ಜಗ್ಗೇಶ್ ಅಂದರೆ ಸಾಕು, ಚಿತ್ರರಸಿಕರ ಮೊಗದಲ್ಲಿ ನಗು ಅರಳುತ್ತೆ. ರಫ್ ಅಂತ ಅವರ ವಿಚಿತ್ರ ಮ್ಯಾನರಿಸಂ, ವಿಶಿಷ್ಟ ಡೈಲಾಗ್ ಡೆಲಿವರಿ ಮೈಂಡ್‍ನಲ್ಲಿ ಸ್ಕ್ರೀನ್ ಆಗುತ್ತೆ. ಆದರೆ ಇದೇ ಮೊದಲ ಬಾರಿಗೆ ಜಗ್ಗೇಶ್ ಇದುವರೆಗೂ ನೋಡದಂತಹ ಪಾತ್ರದ ಮೂಲಕ ನಿಮ್ಮೆದುರು ಬರೋಕೆ ಸಜ್ಜಾಗಿದ್ದಾರೆ. ಇಲ್ಲಿ ನಗಿಸೋ ನಾಯಕನ ಕೈಯಲ್ಲಿ ಗನ್ ಇದೆ. ವ್ಯವಸ್ಥೆಯ ವಿರುದ್ಧ ಸಿಡಿದು ನಿಂತ ಆಕ್ರೋಶವಿದೆ.

ಪ್ರತಿಯೊಬ್ಬ ಕಲಾವಿದನಿಗೂ, ತನ್ನಲ್ಲಿರೋ ಕಲಾವಿದನಿಗೆ ಒಂದು ಮಟ್ಟಕ್ಕೆ ತೃಪ್ತಿ ನೀಡುವಂತಹ ಪಾತ್ರ ಮಾಡಬೇಕು ಅನ್ನೋ ಹಪಹಪಿ ಇರುತ್ತದೆ. ನವರಸ ನಾಯಕ ಜಗ್ಗೇಶ್ ಇಲ್ಲಿಯವರೆಗೂ ಬಹುತೇಕ ನಗಿಸೋ ಪಾತ್ರಗಳಲ್ಲೇ ಕಾಣಿಸಿಕೊಂಡಿದ್ದಾರೆ. ಆದರೆ ಇದೇ ಮೊದಲ ಬಾರಿಗೆ ಅವರೊಳಗಿನ ಕಲಾವಿದನ ಹಸಿವನ್ನು ನೀಗಿಸೋ ಪಾತ್ರವೊಂದು '8ಎಂಎಂ' ಎಂಬ ಚಿತ್ರದಲ್ಲಿ ಸಿಕ್ಕಿದೆಯಂತೆ. ಅದು ಅವರ ಮಾತಲ್ಲಷ್ಟೇ ಅಲ್ಲ, ನಮಗೂ ಟೀಸರ್, ಫಸ್ಟ್​ಲುಕ್ ರೂಪದಲ್ಲಿಯೇ ಕಾಣಿಸುತ್ತದೆ.ಜಗ್ಗೇಶ್‍ರನ್ನ ಈ ಚಿತ್ರದಲ್ಲಿ ಸಂಪೂರ್ಣ ವಿಭಿನ್ನವಾಗಿ ಕಾಣಬಹುದು. ಇಷ್ಟು ದಿನ ಚಿತ್ರರಸಿಕರನ್ನ ಕಚಗುಳಿ ಇಡೋ ಕಾಮಿಡಿಯಿಂದ ನಗಿಸೋ ಪಾಸಿಟಿವ್ ಪಾತ್ರದಲ್ಲಿ ಅಭಿನಯಿಸಿದ್ದ ಜಗ್ಗೇಶ್, ಈ ಬಾರಿ ಪಕ್ಕಾ ನೆಗೆಟಿವ್ ಶೇಡ್‍ನಲ್ಲಿ ತೆರೆ ಮೇಲೆ ರಾರಾಜಿಸಲಿದ್ದಾರೆ.

ಇದು ಜಪಾನೀಸ್ ಚಿತ್ರದ ಸ್ಪೂರ್ತಿಯಲ್ಲಿ ಅರಳಿರೋ ಚಿತ್ರವಾಗಿದ್ದು, ಕನ್ನಡ ಮಣ್ಣಿನ ಸೊಗಡಿಗೆ ತಕ್ಕಂತೆ ಚಿತ್ರಕಥೆಯನ್ನ ರೂಪಿಸಲಾಗಿದೆಯಂತೆ. ಹರಿಕೃಷ್ಣ ಎಂಬ ಚಿಗುರು ಮೀಸೆಯ ಹುಡುಗ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದು, ನವರಸ ನಾಯಕನ ಸಿನಿ ಜೀವನದಲ್ಲಿ ಮೈಲಿಗಲ್ಲಾಗುವ ಸೂಚನೆಯನ್ನ ಈಗಾಗಲೇ ಬಿಡುಗಡೆಯಾಗಿರೋ ಕಂಟೆಂಟೆ ಗ್ಯಾರಂಟಿ ಕೊಡುತ್ತಿದೆಯಂತೆ.
Loading...

ಈ ಚಿತ್ರದಲ್ಲಿ ಕಂಚಿನ ಕಂಠದ ನಟ ವಶಿಷ್ಟ ಸಿಂಹ ಪೊಲೀಸ್ ಕಾಪ್ ಆಗಿ ಅಭಿನಯಿಸಿದ್ದು, ಮೊದಲ ಬಾರಿ ಪಾಸಿಟಿವ್ ರೋಲ್‍ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರಂತೆ. ಇನ್ನು ಇವರಿಗೆ ನಾಯಕಿಯಾಗಿ ಕೃಷ್ಣಲೀಲಾ ಖ್ಯಾತಿಯ ಮಯೂರಿ ಜತೆಯಾಗಿದ್ದಾರೆ. ಒಟ್ಟಾರೆ ಸಾಕಷ್ಟು ಕಾರಣಗಳಿಂದ ಸುದ್ದಿ ಮಾಡುತ್ತಿರೋ '8ಎಂಎಂ' ಸದ್ಯ ಹಾಡುಗಳನ್ನ ಕೇಳುಗರಿಗೆ ಅರ್ಪಿಸಿದೆ. ತನ್ಮೂಲಕ ತೆರೆಮೇಲೆ ಬರೋ ದಿನಕ್ಕೆ ಇನ್ನಷ್ಟು ಹತ್ತಿರವಾಗುತ್ತಿದೆ.
First published:September 7, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...