ನವರಸ ನಾಯಕ ಜಗ್ಗೇಶ್​ ಮಾಂಸಾಹಾರ ತ್ಯಜಿಸಲು ಕಾರಣ ಯಾರು ಗೊತ್ತಾ?

news18
Updated:June 28, 2018, 3:04 PM IST
ನವರಸ ನಾಯಕ ಜಗ್ಗೇಶ್​ ಮಾಂಸಾಹಾರ ತ್ಯಜಿಸಲು ಕಾರಣ ಯಾರು ಗೊತ್ತಾ?
ಜಗ್ಗೇಶ್
news18
Updated: June 28, 2018, 3:04 PM IST
ನ್ಯೂಸ್​ 18 ಕನ್ನಡ 

ಈ ನಟ ಹುಟ್ಟುತ್ತಲೇ ಮಾಂಸಹಾರಿ. ಮಾಂಸಾಹಾರದ ಊಟ ಎಂದರೆ ಪಂಕ್ತಿಯಲ್ಲಿ ಮೊದಲೇ ಇರುತ್ತಿದ್ದವರು. ಮನೆಯ ಹಬ್ಬ-ಹರಿ ದಿನಗಳಲ್ಲಿ ಹೆಚ್ಚು ಕಡಿಮೆ ಮಾಂಸದೂಟವೇ ಖಾಯಂ ಆಗಿತ್ತು. ಆದರೆ ಇದ್ದಕ್ಕಿದಂತೆ ಇವರು ಮಾಂಸಾಹಾರವನ್ನು ತ್ಯಜಿಸಿದ್ದಾರೆ. ಅವರ ಈ ನಿರ್ಧಾರದ ಹಿಂದೆ ಒಂದು ಕರುಣಾಜನಕ ಕಥೆ ಕೂಡ ಇದೆ. ಅದೇನು ಅಂತ ತಿಳಿಯೋಕೆ ಈ ವರದಿ ಓದಿ.

ತನ್ನ ನಟನೆ, ಹಾಸ್ಯದ ಮೂಲಕವೇ ಕನ್ನಡಿಗರ ಮನೆ ಮಾತಾಗಿರೋ ನಟ ನವರಸ ನಾಯಕ ಜಗ್ಗೇಶ್. ಇವರೇ ಮಾಂಸಾಹಾರವನ್ನ ಬಿಟ್ಟು ಇದೀಗ ಸಸ್ಯಹಾರಿ ಆಗಿದ್ದಾರೆ. ಇತ್ತೀಚೆಗೆ ಊರ ಹಬ್ಬದಲ್ಲಿ ಕುರಿ ತಲೆ ಕಡಿಯಲು ವ್ಯಕ್ತಿಯೊಬ್ಬರು ಮುಂದಾದಾಗ ಮತ್ತೊಂದು ಕುರಿ ಅದನ್ನ ವಿರೋಧಿಸುತ್ತಾ ರೋಧಿಸುತ್ತಿತ್ತಂತೆ. ಇದನ್ನ ನೋಡಿದ ಜಗ್ಗೇಶ್ ಕಣ್ಣಲ್ಲಿ ನೀರು ಸುರಿಸಿದ್ದಾರೆ. ಅಂದು ಅಲ್ಲಿ ಬಲಿಯಾಗಿದ್ದು ಮಗ, ರೋಧಿಸಿದ್ದು ತಾಯಿ ಕುರಿ. ಈ ಘಟನೆಯ ನಂತರ ಜಗ್ಗೇಶ್​ ಇನ್ನುಮುಂದೆ ಮಾಂಸಹಾರ ಸೇವಿಸುವುದಿಲ್ಲ ಎಂದು ಪಣ ತೊಟ್ಟಿದ್ದಾರೆ.

Why i Became vegetarian.!

ಊರ ಹಬ್ಬಕ್ಕೆ ಕುರಿ ಕಡಿಯಲು ಕಟುಕ ಅಣಿಯಾದಾಗ ಮಾತ್ತೊಂದು ಕುರಿ ರೋಧಿಸುತ್ತಿತ್ತು ವಿಷಯ ತಿಳಿದಾಗ ನಾನು ಅತ್ತುಬಿಟ್ಟಿ.!
ಕಟುಕನಿಗೆ ತಲೆಕೊಟ್ಟದ್ದು ಮಗ ರೋಧಿಸುತ್ತಿದ್ದದ್ದು ಅಮ್ಮ.!
ಪ್ರಾಣಿಗಳಲ್ಲು ಭಾವನಾತ್ಮಕ ಸಂಬಂಧವಿರುತ್ತದೆ.!

Loading...

4ಘಂಟೆಗೆ ಮಲವಾಗುವ ಊಟಕ್ಕೆ ಯಾಕೆ ಬೇಕು ಭಾವನೆ ಕೊಂದ ಊಟ.!
ದಯೇ ಧರ್ಮದ ಮೂಲ.!


— ನವರಸನಾಯಕ ಜಗ್ಗೇಶ್ (@Jaggesh2) June 27, 2018ಹಾಗೆ ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತು ಬರೆದುಕೊಂಡಿರೋ ಇವರು, ಪ್ರಾಣಿಗಳಿಗೂ ಭಾವನಾತ್ಮಕ ಸಂಬಂಧ ಇರುತ್ತದೆ. ಒಂದೊತ್ತಿನ ಊಟಕ್ಕೆ ಯಾಕೆ ಬೇಕು ಪ್ರಾಣಿಗಳನ್ನ ಕೊಂದ ಪಾಪ ಎಂದು ಹೇಳಿಕೊಂಡಿದ್ದಾರೆ. ಜಗ್ಗೇಶ್ ಅವರ ಈ ನಿರ್ಧಾರಕ್ಕೆ ಸಾಕಷ್ಟು ಮೆಚ್ಚುಗೆ ಕೂಡ ವ್ಯಕ್ತವಾಗುತ್ತಿದೆ.

 
First published:June 28, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...