Jaggesh: 777 ಚಾರ್ಲಿ ಸಿನಿಮಾ ನೋಡಿ ರಕ್ಷಿತ್ ಬಗ್ಗೆ ಏನಂದ್ರು ಗೊತ್ತಾ ಜಗ್ಗೇಶ್? ಸಿಂಪಲ್​ ಸ್ಟಾರ್​ಗೆ ನವರಸ ನಾಯಕನಿಂದ ಬಿರುದು

ನವರಸ ನಾಯಕ ಜಗ್ಗೇಶ್ 777 ಚಾರ್ಲಿ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಲ್ಲದೇ, ರಕ್ಷಿತ್ ಶೆಟ್ಟಿಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ. ಅವರನ್ನು ಕನ್ನಡದ ಅಮೀರ್ ಖಾನ್ ಎಂದು ಹಾಡಿ ಹೊಗಳಿದ್ದಾರೆ.

ಜಗ್ಗೇಶ್ ಮತ್ತು ರಕ್ಷಿತ್ ಶೆಟ್ಟಿ

ಜಗ್ಗೇಶ್ ಮತ್ತು ರಕ್ಷಿತ್ ಶೆಟ್ಟಿ

  • Share this:
ಚ್ಸ್ಯಾಂಡಲ್​​ವುಡ್​​ನ (Sandalwood) ಹಿರಿಯ ನಟ, ನವರಸ ನಾಯಕ ಜಗ್ಗೇಶ್ (Jaggesh) ಅಭಿನಯದ ಬಹುನಿರೀಕ್ಷಿತ ರಾಘವೇಂದ್ರ ಸ್ಟೋರ್ (Raghavendra Stores) ಮತ್ತು ತೋತಾಪುರಿ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಇದರ ನಡುವೆ ಸದ್ಯ ಸ್ಯಾಂಡಲ್​ ವುಡ್​ ಮತ್ತು ಭಾರತೀಯ ಚಿತ್ರರಂಗದಲ್ಲಿ ಟ್ರೆಂಡಿಂಗ್​ ನಲ್ಲಿರುವ ರಕ್ಷಿತ್ ಶೆಟ್ಟಿ (Rakshit Shetty) ಅಭಿನಯದ '777 ಚಾರ್ಲಿ' (777 Charlie) ಚಿತ್ರವನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ರಕ್ಷಿತ್ ಶೆಟ್ಟಿ ಹಾಗೂ ಚಾರ್ಲಿ ನಡುವಿನ ಕೆಮೆಸ್ಟ್ರಿ ಅದೆಷ್ಟೋ ಪ್ರೇಕ್ಷಕರ ಕಣ್ಣಂಚನ್ನು ಒದ್ದೆ ಮಾಡಿದೆ. ಅದರಲ್ಲಿಯೂ ಪ್ರಾಣಿ ಪ್ರಿಯರಿಗೆ '777 ಚಾರ್ಲಿ' ಒಂದು ಭಾವನಾತ್ಮಕ ಸಿನಿಮಾವಾಗಿದೆ. ಸೆಲೆಬ್ರೆಟಿಗಳಿಂದ ಹಿಡಿದು, ಸಿನಿಪ್ರಿಯರಿಗೆ ಈ ಸಿನಿಮಾ ಭಾವನಾತ್ಮಕವಾಗಿ ಇದು ಕನೆಕ್ಟ್ ಆಗುತ್ತಿದೆ ಎಂದರೂ ತಪ್ಪಾಗಲಾರದು. ಹೀಗಾಗಿ 777 ಚಾರ್ಲಿ ಚಿತ್ರವನ್ನು ನೋಡಿದ ಸಿ ಎಂ ಬಸವರಾಜ ಬೊಮ್ಮಾಯಿ (Basavaraj Bommai) ಸಹ ಕಣ್ಣೀರು ಹಾಕಿದ್ದರು.

ಇದೇ ವೇಳೆ ಇವರೊಂದಿಗೆ ಸಿನಿಮಾ ನೋಡಿದ ಸ್ಯಾಂಡಲ್​ವುಡ್​ ನ ನವರಸ ನಾಯಕ ಜಗ್ಗೇಶ್ ಕೂಡ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಲ್ಲದೇ, ರಕ್ಷಿತ್ ಶೆಟ್ಟಿಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ. ಅವರನ್ನು ಕನ್ನಡದ ಅಮೀರ್ ಖಾನ್ ಎಂದು ಹಾಡಿ ಹೊಗಳಿದ್ದಾರೆ.

ರಕ್ಷಿತ್ ಕನ್ನಡದ ಅಮೀರ್ ಖಾನ್ ಇದ್ದಂತೆ:

777 ಚಾರ್ಲಿ ಸಿಬಿಮಾ ವೀಕ್ಷಿಸಿದ ನಂತರ ಭಾವುಕರಾಗಿ ಮಾತನಾಡಿದ ನವರಸ ನಾಯಕ ಜಗ್ಗೇಶ್, ‘ಯಾವುದೇ ಕಲ್ಲು ಹೃದಯವೂ ಕೂಡ ಈ ಚಿತ್ರವನ್ನು ನೋಡಿದರೆ ಕರಗಿ ಹೋಗುತ್ತದೆ. ನಾನು ನನ್ನ ಜೀವಮಾನದಲ್ಲಿ ಕೇವಲ 2 ಅನಿಮಲ್ ಚಿತ್ರವನ್ನು ನೋಡಿದ್ದೇನೆ. ಅದರಲ್ಲಿಇಂಗ್ಲಿಷ್ ಒಂದು, ಆದರೆ ಆ ರೀತಿಯಲ್ಲಿ ಕನ್ನಡದಲ್ಲಿ ಯಾರು ಮಾಡುತ್ತಾರೆ ಎಂದು ಕಾಯುತ್ತಿದ್ದೆ. ಅದನ್ನು ರಕ್ಷಿತ್ ಶೆಟ್ಟಿ ಮಾಡುವ ಮೂಲಕ ವಿಭಿನ್ನವಾಗಿ ಗುರುತಿಸಿಕೊಂಡಿದ್ದಾರೆ.

ಅದರಲ್ಲಿಯೂ ಯಾರು ಪ್ರಾಣಿ ಪ್ರೇಮಿಗಳೋ ಅವರಿಗೆ ಚಾರ್ಲಿ ತುಂಬಾನೇ ಕಾಡುತ್ತದೆ. ಇದರಿಂದಾಗಿ ಕ್ಷಿತ್ ಶೆಟ್ಟಿ ಒಂದು ಅದ್ಭುತವಾದ ಪ್ರಯತ್ನ ಮಾಡಿದ್ದಾರೆ ಎಂದು ಹೇಳಬಹುದು. ಕೊನೆಯದಾಗ ಒಂದು ಮಾತು ಹೇಳಲು ಇಷ್ಟ ಪಡುತ್ತೇನೆ. ಅದೇನೆಂದರೆ ನಮ್ಮ ರಕ್ಷಿತ್ ಶೆಟ್ಟಿ ಕನ್ನಡದ ಆಮಿರ್ ಖಾನ್ ಇದ್ದಂತೆ‘ ಎಂದು ಹೇಳುವ ಮೂಲಕ ಸಿಂಪಲ್​ ಸ್ಟಾರ್​ ಅನ್ನು ಹಾಡಿ ಹೊಗಳಿದ್ದಾರೆ.

ಇದನ್ನೂ ಓದಿ: Rakshit Shetty: ಕನ್ನಡದಲ್ಲಿಯೂ ಬರಲಿದೆಯಂತೆ RRR ಸಿನಿಮಾ, ರಕ್ಷಿತ್ ಶೆಟ್ಟಿ ಏನ್ ಹೇಳ್ತಿದ್ದಾರೆ ಕೇಳಿ

ವರಮಹಾಲಕ್ಷ್ಮಿ ಹಬ್ಬಕ್ಕೆ ರಾಘವೇಂದ್ರ ಸ್ಟೋರ್ ಚಿತ್ರ ರಿಲೀಸ್:

ಇನ್ನು, ಜಗ್ಗೇಶ್ ನಟನೆಯ ರಾಘವೇಂದ್ರ ಸ್ಟೋರ್ ಚಿತ್ರವು ಇದೇ ವರ್ಷ ಆಗಷ್ಟ್ 5ರಂದು ಅಂದರೆ ವರಮಹಾಲಕ್ಷ್ಮಿ ಹಬ್ಬದಂದು ಬಿಡುಗಡೆಯಾಗುತ್ತಿರುವುದಾಗಿ ಚಿತ್ರತಂಡ ತಿಳಿಸಿದೆ. ಈ ಕುರಿತು ಚಿತ್ರ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ಅಧಿಕೃತವಾಗಿ ಟ್ವೀಟ್​ ಮಾಡಿದ್ದು, ‘ವರಮಹಾಲಕ್ಷ್ಮಿಗೆ ನವರಸಗಳ ರಸದೌತಣ ಸವಿಯಲು ಸಿದ್ಧರಾಗಿ, ಇದೇ ಆಗಸ್ಟ್ 05, 2022ರಿಂದ!‘ ಎಂದು ಬರೆದುಕೊಂಡಿದೆ.

ಇನ್ನು, ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಟೀಸರ್​ ನಲ್ಲಿ ಜಗ್ಗೇಶ್ ಅಡುಗೆ ಭಟ್ಟನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಮೂಲಕ ಈ ಪಾತ್ರದ ಚಿಕ್ಕ ಪರಿಚಯವನ್ನು ಮಾಡಲಾಗಿದ್ದು, ಚಿತ್ರ ಮೇಲಿನ ನಿರೀಕ್ಷೆ ಹೆಚ್ಚಿಸಿದೆ. ಅಲ್ಲದೇ ರಾಘವೇಂದ್ರ ಸ್ಟೋರ್ಸ್ ಸಿನಿಮಾದಲ್ಲಿ 40 ವರ್ಷ ದಾಟಿದರೂ ಮದುವೆಯಾಗದ ಅಡುಗೆ ಭಟ್ಟರ ಪಾತ್ರದಲ್ಲಿ ಜಗ್ಗೇಶ್ ಕಚಗುಳಿ ಇಟ್ಟಿದ್ದಾರೆ.

ಇದನ್ನೂ ಓದಿ: Raghavendra Stores: ರಾಘವೇಂದ್ರ ಸ್ಟೋರ್ಸ್​ನ ಅಡುಗೆ ಸವಿಯಲು ಸಿದ್ಧರಾಗಿ, ಚಿತ್ರದ ರಿಲೀಸ್​ ಡೇಟ್​ ಅನೌನ್ಸ್

777 ಚಾರ್ಲಿ ಕಲೆಕ್ಷನ್:

ಸಿನಿಮಾ ಮೊದಲ ದಿನ 6 ಕೋಟಿ, ಎರಡನೇ ದಿನ 8 ಕೋಟಿ ಹಾಗೂ ಮೂರನೇ ದಿನ 10 ಕೋಟಿ ಮತ್ತು 4ನೇ ದಿನ  5 ಕೋಟಿ ಗಳಿಕೆ ಮಾಡಿದೆ ಎಂದು ತಿಳಿದುಬಂದಿದ್ದು, ಚಿತ್ರವು  ಕನ್ನಡ, ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂನಲ್ಲಿ ಈ ಸಿನಿಮಾ ಬಿಡುಗಡೆಯಾಗಿದ್ದು, ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ.  ಎಲ್ಲೆಡೆ ಚಾರ್ಲಿ ಹವಾ ಇದೆ ಎನ್ನುವುದು ಸುಳ್ಳಲ್ಲ.
Published by:shrikrishna bhat
First published: