Jaggesh: ಕೊಟ್ಟ ಮಾತಿನಂತೆ ಅಂಧ ಗಾಯಕಿಯರಿಗೆ ಮನೆ ಕಟ್ಟಿಸಿದ ನವರಸ ನಾಯಕ ಜಗ್ಗೇಶ್​..!

Jaggesh: ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಸರಿಗಮಪ ಹಾಡಿನ ಕಾರ್ಯಕ್ರಮದಲ್ಲಿ ಇತ್ತೀಚೆಗಷ್ಟೆ ತುಮಕೂರಿನ ಇಬ್ಬರು ಅಂಧ ಸಹೋದರಿಯರು ಭಾಗವಹಿಸಿದ್ದರು. ತಮ್ಮ ಮಧುರ ಕಂಠದಿಂದ ಹರಿಸಿದ ಗಾನಸುಧೆಯಿಂದ ಕೇಳುಗರನ್ನು ಮೋಡಿ ಮಾಡಿದ್ದರು. ಆದರೆ ಈ ಅಂಧ ಗಾಯಕಿಯರ ಆರ್ಥಿಕ ಸ್ಥಿತಿ ಬಗ್ಗೆ ಇದೇ ಕಾರ್ಯಕ್ರಮದಲ್ಲಿ ಹೇಳಿಕೊಂಡಿದ್ದರು. ಇದೇ ವಿಷಯವಾಗಿ ಜಗ್ಗೇಶ್​ ಈಗ ಸಿಹಿ ಸುದ್ದಿ ಕೊಟ್ಟಿದ್ದಾರೆ.

Anitha E | news18-kannada
Updated:February 25, 2020, 4:06 PM IST
Jaggesh: ಕೊಟ್ಟ ಮಾತಿನಂತೆ ಅಂಧ ಗಾಯಕಿಯರಿಗೆ ಮನೆ ಕಟ್ಟಿಸಿದ ನವರಸ ನಾಯಕ ಜಗ್ಗೇಶ್​..!
ಅಂಧ ಗಾಯಕಿಯರಿಗೆ ನೆರವಾದ ಜಗ್ಗೇಶ್
  • Share this:
ನವರಸ ನಾಯಕ ಅಭಿನಯ ಮಾತ್ರವಲ್ಲದೆರ ತಮ್ಮ ನೇರ ನುಡಿಯಿಂದ ಜನರ ಮನಸ್ಸು ಗೆದ್ದವರು. ಯಾರಾದರೂ ಕಷ್ಟದಲ್ಲಿದ್ದಾರೆ ಎಂದರೆ ಸಾಕು ಕೈಲಾದಷ್ಟು ಸಹಾಯ ಮಾಡುವ ಹೆಂಗರಳು ಅವರದ್ದು. ಇತ್ತೀಚೆಗಷ್ಟೆ ಸಹ ಕಲಾವಿದ ಕಿಲ್ಲರ್​ ವೆಂಕಟೇಶ್ ಅವರ ಚಿಕಿತ್ಸೆಗೆ ಸಹಾಯ ಮಾಡುವುದರೊಂದಿಗೆ, ಹಣದ ನೆರವು ನೀಡುವಂತೆ ಬೇರೆಯವರಲ್ಲೂ ಮನವಿ ಮಾಡಿದ್ದರು.  

ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಸರಿಗಮಪ ಹಾಡಿನ ಕಾರ್ಯಕ್ರಮದಲ್ಲಿ ಇತ್ತೀಚೆಗಷ್ಟೆ ತುಮಕೂರಿನ ಇಬ್ಬರು ಅಂಧ ಸಹೋದರಿಯರು ಭಾಗವಹಿಸಿದ್ದರು. ತಮ್ಮ ಮಧುರ ಕಂಠದಿಂದ ಹರಿಸಿದ ಗಾನಸುಧೆಯಿಂದ ಕೇಳುಗರನ್ನು ಮೋಡಿ ಮಾಡಿದ್ದರು. ಈ ಅಂಧ ಗಾಯಕಿಯರು ತಮ್ಮ ಆರ್ಥಿಕ ಸ್ಥಿತಿ ಬಗ್ಗೆ ಇದೇ ಕಾರ್ಯಕ್ರಮದಲ್ಲಿ ಹೇಳಿ ಅಳಲು ತೋಡಿಕೊಂಡಿದ್ದರು.

Actor jaggesh to help saregamapa blind contestants to build house
ಅಂಧ ಗಾಯಕಿಯರು


ಅಂಧ ಸಹೋದರಿಯರಾದ ರತ್ನಮ್ಮ ಹಾಗೂ ಮಂಜಮ್ಮ ಅವರ ಕತೆ ಕೇಳಿ ಭಾವುಕರಾಗಿದ್ದ ಜಗ್ಗೇಶ್​, ಅವರಿಗೆ  ಸೂರು ಕಲ್ಪಿಸಿಕೊಡಲು ಕೊರಟಗೆರೆ ಜಗ್ಗೇಶ್ ಅಭಿಮಾನಿಗಳ ಸಂಘದ ಫ್ರೆಂಡ್ಸ್ ಗ್ರೂಪ್​ಗೆ ಜವಾಬ್ಧಾರಿ ನೀಡಿರುವೆ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು. ಈಗ ಅದರಂತೆ ಮನೆ ಕಟ್ಟಿಸಿದ್ದಾರೆ. ಈ ಬಗ್ಗೆ ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಬರೆದುಕೊಂಡಿದ್ದಾರೆ. 
View this post on Instagram
 

@ztvkannada #saregama ದ ಖ್ಯಾತಿ ಅಂಧ ಪ್ರತಿಭೆಗಳಿಗಾಗಿ ನಿರ್ಮಿಸಿರುವ ನೂತನ ಗೃಹದ ಕೀಲಿ ಕೈಗೊಪ್ಪಿಸಲು ಮಾರ್ಚ 12 ನಾನು ಮಡದಿ ಪರಿಮಳ ಹೋಗುತ್ತೇವೆ..ತಿಂಗಳಲ್ಲಿ ನನ್ನ ಭಾವನೆ ಕಾರ್ಯರೂಪಕ್ಕೆ ತಂದು ಮುಗಿಸಿದ ನನ್ನ ಆತ್ಮೀಯ #ಕೊರಟಗೆರೆ #ಅಭಿಮಾನಿಸಂಘದ #Raviksrtc #mallanna #ಮಿತ್ರರಿಗೆ ಧನ್ಯವಾದಗಳು...ನಿಮ್ಮ ಕಾರ್ಯ ರಾಯರ ಹೃದಯಕ್ಕೆ ಅರ್ಪಣೆ.. Love you all...


A post shared by 𝐉𝐀𝐆𝐆𝐄𝐒𝐇 𝐒𝐇𝐈𝐕𝐀𝐋𝐈𝐍𝐆𝐀𝐏𝐏𝐀 (@actor_jaggesh) on


ಅಂಧ ಪ್ರತಿಭೆಗಳಿಗಾಗಿ ನಿರ್ಮಿಸಿರುವ ನೂತನ ಗೃಹದ ಕೀಲಿಯನ್ನು ಮಾರ್ಚ್​ 12ರಂದು ನೀಡಲು ಪತ್ನಿ ಸಮೇತರಾಗಿ ಜಗ್ಗೇಶ್​ ಹೋಗಲಿದ್ದಾರೆ. 'ನನ್ನ ಭಾವನೆಯನ್ನು ತಿಂಗಳಲ್ಲಿ ಕಾರ್ಯರೂಪಕ್ಕೆ ತಂದು ಮುಗಿಸಿದ ನನ್ನ ಆತ್ಮೀಯ ಕೊರಟಗೆರೆ ಅಭಿಮಾನಿ ಸಂಘದ ಮಿತ್ರರಿಗೆ ಧನ್ಯವಾದ' ಎಂದು ಪೋಸ್ಟ್​ ಮಾಡಿದ್ದಾರೆ ಜಗ್ಗೇಶ್​.

Nikhil Revathi Pre Wedding Photo Shoot: ನಿಖಿಲ್​-ರೇವತಿ ಪ್ರೀ ವೆಡ್ಡಿಂಗ್​ ಫೋಟೋಶೂಟ್​ನ ಚಿತ್ರಕ್ಕೆ ನಿಖಿಲ್​ ರೊಮ್ಯಾಂಟಿಕ್ ಕ್ಯಾಪ್ಷನ್


 

First published:February 25, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading