ಬಾಲಿವುಡ್​ ಮೀರಿ ಹಾಲಿವುಡ್​ಗೆ ಹಾರಿದರೂ, ಯಶಸ್ಸಿನ ಉತ್ತುಂಗ ಇರ್ಫಾನ್​ ಖಾನ್​ ತಲೆಗೇರಲಿಲ್ಲ

ಕಿರುತೆರೆ ಮೂಲಕ ಬಣ್ಣದ ಲೋಕಕ್ಕೆ ಪರಿಚಯವಾದ ಇರ್ಫಾನ್​ 1988ರಲ್ಲಿ ‘ಸಲಾಂ ಬಾಂಬೇ’ ಸಿನಿಮಾ ಮೂಲಕ ಬಾಲಿವುಡ್​ಗೆ ಎಂಟ್ರಿ ಕೊಟ್ಟರು. 12 ವರ್ಷಗಳಲ್ಲಿ 13 ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದ ಇರ್ಫಾನ್​ಗೆ ಹಾಲಿವುಡ್​ನಿಂದ ಕರೆ ಬಂದಿತ್ತು. ಮರುಮಾತನಾಡದೆ ಇರ್ಫಾನ್​​ ಖಾನ್​ ಇದನ್ನು ಒಪ್ಪಿದ್ದರು. 

ಇರ್ಫಾನ್​ ಖಾನ್​

ಇರ್ಫಾನ್​ ಖಾನ್​

  • Share this:
ಬಾಲಿವುಡ್​ನಲ್ಲಿ ನಟಿಸಿದ ನಂತರ ಹಾಲಿವುಡ್​ಗೆ ಕಾಲಿಟ್ಟ ನಟರ ಸಂಖ್ಯೆ ಬೆರಳೆಣಿಕೆಯಷ್ಟು  ಮಾತ್ರ. ಇಂಥ ಅಪರೂಪದ ಅವಕಾಶವನ್ನು ಗಿಟ್ಟಿಸಿಕೊಂಡು ಅದನ್ನು ಸರಿಯಾಗಿ ನಿರ್ವಹಣೆ ಮಾಡಿದ ಖ್ಯಾತಿ ನಟ ಇರ್ಫಾನ್​ ಖಾನ್​ಗೆ ಸಲ್ಲುತ್ತದೆ. ಬಾಲಿವುಡ್​ ಜೊತೆ ಜೊತೆಗೆ ಇರ್ಫಾನ್​ ಹಾಲಿವುಡ್​ ಸಿನಿಮಾಗಳಲ್ಲೂ ಬಣ್ಣ ಹಚ್ಚಿ ಭೇಷ್​​ ಎನಿಸಿಕೊಂಡಿದ್ದಾರೆ.

ಕಿರುತೆರೆ ಮೂಲಕ ಬಣ್ಣದ ಲೋಕಕ್ಕೆ ಪರಿಚಯವಾದ ಇರ್ಫಾನ್​ 1988ರಲ್ಲಿ ‘ಸಲಾಂ ಬಾಂಬೆ’ ಸಿನಿಮಾ ಮೂಲಕ ಬಾಲಿವುಡ್​ಗೆ ಎಂಟ್ರಿ ಕೊಟ್ಟರು. 12 ವರ್ಷಗಳಲ್ಲಿ 13 ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದ ಇರ್ಫಾನ್​ಗೆ ಹಾಲಿವುಡ್​ನಿಂದ ಕರೆ ಬಂದಿತ್ತು. ಮರು ಮಾತನಾಡದೆ ಇರ್ಫಾನ್​​ ಖಾನ್​ ಇದನ್ನು ಒಪ್ಪಿದ್ದರು.

ಇರ್ಫಾನ್​ ಖಾನ್​ ಸಿನಿಮಾಗಳಲ್ಲಿ ನಟಿಸಿಲ್ಲ, ಬದಲಿಗೆ ಪ್ರತಿ ಪಾತ್ರವನ್ನೂ ಜೀವಿಸಿದ್ದರು. ಹೀಗಾಗಿ, ಅವರ ನಟನೆಯನ್ನು ಹಾಲಿವುಡ್​ ಚಿತ್ರರಂಗ ಗುರುತಿಸಿ ಅವರಿಗೆ ಅವಕಾಶ ನೀಡಿತ್ತು. ಹಾಲಿವುಡ್​ನಲ್ಲಿ ನಟಿಸಿದ್ದೇನೆ ಎನ್ನುವ ಅಹಂ ಅನ್ನು ಇರ್ಫಾನ್​ ಎಂದಿಗೂ ತೋರಲಿಲ್ಲ. ಹಾಲಿವುಡ್​ ಸಿನಿಮಾ ಒಪ್ಪಿದ ನಂತರ ಅವರು ಬಾಲಿವುಡ್​ ತೊರೆಯಲಿಲ್ಲ. ಎರಡನ್ನೂ ಸರಿದೂಗಿಸಿಕೊಂಡು ಹೋಗಿದ್ದರು. ಎಲ್ಲರ ಜೊತೆ ಸಾಮಾನ್ಯರಂತೆ ಇರುತ್ತಿದ್ದುದು ಅವರ ಹೆಚ್ಚುಗಾರಿಕೆ.

2001ರಲ್ಲಿ ತೆರೆಕಂಡ ದಿ ವಾರಿಯರ್​ ಚಿತ್ರದ ಮೂಲಕ ಇರ್ಫಾನ್​ ಹಾಲಿವುಡ್​ ಪ್ರವೇಶ ಮಾಡಿದ್ದರು. ವಾರಿಯರ್ ಪಾತ್ರದ ಮೂಲಕ ಅವರು ಎಲ್ಲರ ಮನ ಗೆದ್ದರು. 2006ರಲ್ಲಿ ಮತ್ತೆ ಹಾಲಿವುಡ್​ನಿಂದ ಅವರಿಗೆ ಆಫರ್​ ಬಂದಿತ್ತು. ನೇಮ್​ ಸೇಕ್​ ಚಿತ್ರದ ಮೂಲಕ ಅವರು ಮತ್ತೆ ಹಾಲಿವುಡ್​ ಪ್ರವೇಶ ಪಡೆದರು. ದಿ ಡಾರ್ಜಲಿಂಗ್​ ಲಿಮಿಟೆಡ್​ (2007) ಹೆಸರಿನ ಚಿತ್ರದಲ್ಲೂ ನಟಿಸಿದ್ದರು.ಆಸ್ಕರ್​ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದ ಸ್ಲಂ ಡಾಗ್​ ಮಿಲಿಯನೇರ್​ (2008) ಚಿತ್ರದಲ್ಲಿ ಇರ್ಫಾನ್​ ಪೊಲೀಸ್​ ಇನ್ಸ್​ಪೆಕ್ಟರ್​ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

ಇದನ್ನೂ ಓದಿ: ಕ್ಯಾನ್ಸರ್​ನಿಂದ ಬಳಲುತ್ತಿದ್ದ ಬಾಲಿವುಡ್​ ಖ್ಯಾತ ನಟ ಇರ್ಫಾನ್​ ಖಾನ್​ ನಿಧನ

ಹಾಲಿವುಡ್​ನ ಖ್ಯಾತ ಸೀರಿಸ್​ ಸ್ಪೈಡರ್​ ಮ್ಯಾನ್​, ಜ್ಯುರಾಸಿಕ್​ ವರ್ಡ್​​ ಚಿತ್ರದ ಒಂದು ಭಾಗವಾಗಿದ್ದು ಇರ್ಫಾನ್ ಹೆಚ್ಚುಗಾರಿಕೆ​. 2012ರಲ್ಲಿ ತೆರೆಕಂಡ ದಿ ಅಮೇಜಿಂಗ್​ ಸ್ಪೈಡರ್​ ಮ್ಯಾ​ನ್​ ಹಾಗೂ 2015ರ ಜ್ಯುರಾಸಿಕ್​ ವರ್ಲ್ಡ್​ ಸಿನಿಮಾದಲ್ಲಿ ಇರ್ಫಾನ್​ ಖಾನ್​ ಬಣ್ಣ ಹಚ್ಚಿದ್ದರು. ಲೈಫ್​ ಆಫ್​ ಪೈ ಅವರು ನಟಿಸಿದ ಅತ್ಯದ್ಭುತ ಚಿತ್ರಗಳಲ್ಲಿ ಒಂದು. ‘ಇನ್​ಫರ್ನೊ’ ಅವರು ಇಂಗ್ಲಿಷ್​ ನಟಿಸಿದ ಕೊನೆಯ ಸಿನಿಮಾ.
First published: