ಈಗಾಗಲೇ ಬಾಲಿವುಡ್ ನಟ ಹೃತಿಕ್ ರೋಷನ್ (Hrithik Roshan) ಮತ್ತು ಅವರ ಮಾಜಿ ಪತ್ನಿಯಾದ ಸುಸೇನ್ ಖಾನ್ (Sussanne Khan) ಅವರು ವಿಚ್ಛೇದನೆ ಪಡೆದು ಅನೇಕ ವರ್ಷಗಳೇ ಕಳೆದಿವೆ. ನಟ ಹೃತಿಕ್ ಮತ್ತು ಸುಸೇನ್ ಇಬ್ಬರು ದಂಪತಿಗಳಾಗಿ ಒಟ್ಟಿಗೆ ಇರದಿರಬಹುದು, ಆದರೆ ಅವರು ತಮ್ಮ ಮಕ್ಕಳಿಗೆ (Children) ಸಹ-ಪೋಷಕರಾಗಿ ಮುಂದುವರೆದಿದ್ದಾರೆ. ಈ ಇಬ್ಬರು ವಿಚ್ಛೇದನೆ ಪಡೆದು ಬೇರೆ ಬೇರೆ ಆದರೂ ಸಹ ಇಬ್ಬರು ಇಂದಿಗೂ ಉತ್ತಮ ಬಾಂಧವ್ಯವನ್ನು (Attachment) ಹೊಂದಿದ್ದಾರೆ. ವಾಸ್ತವವಾಗಿ, ಇಬ್ಬರೂ ಆಗಾಗ್ಗೆ ಊಟಕ್ಕೆ ಹೋಗುತ್ತಾರೆ. ಇಷ್ಟೇ ಅಲ್ಲದೆ ಈ ಇಬ್ಬರು ತಮ್ಮ ತಮ್ಮ ಗೆಳೆಯರೊಂದಿಗೆ (Friends) ಒಂದಲ್ಲ ಒಂದು ಸ್ಥಳದಲ್ಲಿ ಭೇಟಿಯಾಗುತ್ತಲೇ ಇರುತ್ತಾರೆ.
ಮತ್ತೊಮ್ಮೆ ಮಾಜಿ ಪತ್ನಿಯನ್ನು ಭೇಟಿಯಾದ ಹೃತಿಕ್ ರೋಷನ್
ಇದೀಗ ಮತ್ತೆ ಈ ಇಬ್ಬರು ಎಂದರೆ ನಟ ಹೃತಿಕ್ ಮತ್ತು ಅವರ ಮಾಜಿ ಪತ್ನಿಯಾದ ಸುಸೇನ್ ಖಾನ್ ಅವರು ಒಂದೇ ಸ್ಥಳದಲ್ಲಿ ಕಾಣಿಸಿಕೊಂಡಿದ್ದಾರೆ. ಹೃತಿಕ್ ಮತ್ತು ಸುಸೇನ್ ತಮ್ಮ ಸ್ನೇಹಿತರೊಂದಿಗೆ ಊಟದ ಸೆಷನ್ ನಂತರ ಒಟ್ಟಾಗಿ ಕಾಣಿಸಿಕೊಂಡರು. ಇಬ್ಬರೂ, ಬಾಲಿವುಡ್ ನಟಿ ಸೋನಾಲಿ ಬೇಂದ್ರೆ, ಅವರ ಪತಿ ಗೋಲ್ಡಿ ಬೆಹ್ಲ್, ಗಾಯತ್ರಿ ಜೋಶಿ ಮತ್ತು ಅವರ ಪತಿ ವಿಕಾಸ್ ಒಬೆರಾಯ್ ಅವರೊಂದಿಗೆ ಸಂತೋಷದಿಂದ ಫೋಟೋಗಳಿಗೆ ಪೋಸ್ ನೀಡಿದ್ದನ್ನು ನಾವು ನೋಡಬಹುದು.
ಇದನ್ನೂ ಓದಿ: Urfi-Rakhi Sawant: ಉರ್ಫಿ ಜಾವೇದ್ ಫೇಮಸ್ ಆಗಿದ್ದು ನನ್ನಿಂದ; ಆಕೆ ನನ್ನನ್ನೇ ಫಾಲೋ ಮಾಡ್ತಿದ್ದಾಳೆ ಎಂದ ರಾಖಿ ಸಾವಂತ್!
ಭಾನುವಾರದಂದು ಮಧ್ಯಾಹ್ನದ ಹೊತ್ತಿನಲ್ಲಿ ಊಟಕ್ಕೆ ಅಂತ ತಮ್ಮ ಸ್ನೇಹಿತರೊಂದಿಗೆ ಬಂದವರು ಊಟದ ಟೇಬಲ್ ಮೇಲೆ ಭೇಟಿಯಾದರು. ಇವರೊಂದಿಗೆ ಸೋನಾಲಿ ಬೇಂದ್ರೆ, ಗೋಲ್ಡಿ ಬೆಹ್ಲ್, ಗಾಯತ್ರಿ ಜೋಶಿ ಮತ್ತು ಅವರ ಪತಿ ವಿಕಾಸ್ ಒಬೆರಾಯ್ ಸಹ ಇದ್ದರು. ಹೃತಿಕ್ ಮತ್ತು ಸುಸೇನ್ ಕಪ್ಪು ಬಟ್ಟೆಯನ್ನು ಧರಿಸಿದ್ದರು. ಊಟದ ನಂತರ ಈ ಇಬ್ಬರು ತಮ್ಮ ಸ್ನೇಹಿತರೊಂದಿಗೆ ಪ್ಯಾಪ್ ಗಳಿಗೆ ಪೋಸ್ ನೀಡಿದರು. ಅಲ್ಲದೆ, ಹೃತಿಕ್ ಗೆ ಸುಸೇನ್ ಮುದ್ದಾಗಿ ವಿದಾಯ ಹೇಳುವ ವಿಡಿಯೋ ಸಹ ಸಾಮಾಜಿಕ ಮಾಧ್ಯಮಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಈ ವಿಡಿಯೋ ಹಂಚಿಕೊಂಡು ಒಂದು ದಿನ ಸಹ ಆಗಿಲ್ಲ, ಆಗಲೇ 66,000ಕ್ಕೂ ಹೆಚ್ಚು ಲೈಕ್ ಗಳನ್ನು ಗಳಿಸಿದೆ.
ಹೃತಿಕ್ ಅವರ ‘ವಿಕ್ರಮ್ ವೇದಾ’ ಟೀಸರ್
ಹೃತಿಕ್ ಮತ್ತು ಸೈಫ್ ಅಲಿ ಖಾನ್ ಅಭಿನಯದ ‘ವಿಕ್ರಮ್ ವೇದಾ’ ಚಿತ್ರದ ಟೀಸರ್ ಅನ್ನು ಬುಧವಾರ ಅನಾವರಣಗೊಳಿಸಲಾಯಿತು. 1 ನಿಮಿಷ 46 ಸೆಕೆಂಡುಗಳ ಈ ಟೀಸರ್ ಹೃತಿಕ್ ರೋಷನ್ ಮತ್ತು ಇನ್ನೊಬ್ಬ ಬಾಲಿವುಡ್ ನಟ ಸೈಫ್ ಅಲಿ ಖಾನ್ ಅವರಿಗೆ "ಏಕ್ ಕಹಾನಿ ಸುನಾಯೆ, ಸರ್?" ಎಂದು ಹೇಳುವುದರೊಂದಿಗೆ ಪ್ರಾರಂಭವಾಯಿತು. ಶಿಳ್ಳೆಗೆ ಯೋಗ್ಯವಾದ ಸಂಭಾಷಣೆಗಳು, ಆಕ್ಷನ್ ದೃಶ್ಯಗಳು ಮತ್ತು ಭಾವನೆಗಳಿಂದ ತುಂಬಿರುವ, ಉತ್ತಮ ಹಿನ್ನೆಲೆ ಸಂಗೀತ ಸೇರಿದಂತೆ ಚಿತ್ರದ ಬಗ್ಗೆ ಎಲ್ಲವನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಸೆಪ್ಟೆಂಬರ್ 30 ರವರೆಗೆ ಕಾಯಬೇಕು.
ಇದನ್ನೂ ಓದಿ: Shilpa Shetty-Raj Kundra: ಮುಖ ಮುಚ್ಚಿಕೊಂಡು ಹೋಗಿ ಗಣಪತಿ ತಂದ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ!
ತಮ್ಮ ಚಿತ್ರದ ಟೀಸರ್ ಅನ್ನು ಹಂಚಿಕೊಂಡ ಹೃತಿಕ್ ಅವರು "ಏಕ್ ಕಹಾನಿ ಸುನಾಯೇ? ವಿಕ್ರಮ್ ವೇದಾ ಚಿತ್ರದ ಟೀಸರ್ ಔಟ್.. ಚಿತ್ರ ಸೆಪ್ಟೆಂಬರ್ 30, 2022 ರಂದು ವಿಶ್ವದಾದ್ಯಂತದ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ” ಅಂತ ಪೋಸ್ಟ್ ಗೆ ಶೀರ್ಷಿಕೆಯನ್ನು ಸಹ ನಟ ಬರೆದು ಕೊಂಡಿದ್ದಾರೆ.
ಈ ಚಿತ್ರದ ಕಥೆ ಏನು ಗೊತ್ತೇ?
‘ವಿಕ್ರಮ್ ವೇದಾ’ ಚಿತ್ರದ ಕಥೆಯು ಬೈತಾಳ್ ಪಚಿಸಿಯಿಂದ ಪ್ರೇರಿತವಾಗಿದೆ. ದರೋಡೆಕೋರ ವೇದಾ ನನ್ನು ಕೊಲ್ಲುವ ಕಾರ್ಯಾಚರಣೆಯನ್ನು ಪ್ರಾರಂಭಿಸುವ ಪೊಲೀಸ್ ಇನ್ಸ್ಪೆಕ್ಟರ್ ವಿಕ್ರಮ್ ಆಗಿದ್ದಾರೆ. ಆದರೆ ಈ ದರೋಡೆಕೋರ ತನ್ನ ಕಥೆಯನ್ನು ಪೊಲೀಸ್ ಗೆ ಹೇಳಿ ಅವರಿಗಿದ್ದ ಒಳ್ಳೆಯದು ಮತ್ತು ಕೆಟ್ಟದ್ದರ ಬಗ್ಗೆ ಗ್ರಹಿಕೆಗಳನ್ನು ಬದಲಾಯಿಸುವ ಕಥೆಯನ್ನು ಈ ಚಿತ್ರ ಹೊಂದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ