ನಟ ಹರ್ಷನ ಮೇಲೆ ಹಲ್ಲೆ: ನಾಗಮಂಗಲದ ಹೋಟೆಲ್​ನಲ್ಲಿ ನಡೆದ ಘಟನೆ

news18
Updated:June 28, 2018, 6:27 PM IST
ನಟ ಹರ್ಷನ ಮೇಲೆ ಹಲ್ಲೆ: ನಾಗಮಂಗಲದ ಹೋಟೆಲ್​ನಲ್ಲಿ ನಡೆದ ಘಟನೆ
news18
Updated: June 28, 2018, 6:27 PM IST
ನ್ಯೂಸ್​ 18 ಕನ್ನಡ 

ಚಂದನವನದ ನಟನ ಮೇಲೆ ಪುಂಡರಿಂದ ನಡೆದಿದೆ ಹಲ್ಲೆ. 'ಗಜಪಡೆ' ಖ್ಯಾತಿಯ ನಟ ಹರ್ಷನ ಮೇಲೆ ಹೋಟೆಲೊಂದರ ಹುಡುಗರು ಹಲ್ಲೆ ನಡೆಸಿದ್ದಾರೆ. ನಾಗಮಂಗಲದ ಹೋಟೆಲ್​​​​ ಒಂದರಲ್ಲಿ ಈ ಘಟನೆ ನಡೆದಿದೆ.

ಸ್ನೇಹಿತನ ಮದುವೆಗೆ ಮೈಸೂರಿಗೆ ತೆರಳಿದ್ದ ನಟ ಹರ್ಷ, ಮದುವೆ ಮುಗಿಸಿ ಸ್ನೇಹಿತರ ಜೊತೆ ಮೈಸೂರಿನಿಂದ ಹಿಂತಿರುಗಿ ಬರುವಾಗ ಈ ಘಟನೆ ನಡೆದಿದೆ ಎನ್ನಲಾಗುತ್ತಿದೆ.  ನಾಗಮಂಗಲದ ಬೆಳ್ಳೂರ್​ ಕ್ರಾಸ್​ ಬಳಿ ಊಟಕ್ಕೆ ಕಾರ್​ ನಿಲ್ಲಿಸಿದ್ದ ಹರ್ಷ ಹಾಗೂ ಸ್ನೇಹಿತರು ​​ಹೋಟೆಲೊಂದಕ್ಕೆ ಹೋಗಿದ್ದಾರೆ. ಅಲ್ಲಿ ಊಟ ಸರ್ವ್​ ಮಾಡುವ ವಿಚಾರಕ್ಕೆ ಮಾತಿನ ಚಕಮಕಿ ನಡೆದಿದೆ.

ಮಾತು ಮಿತಿ ಮೀರಿ ಹೋಟೆಲ್​​ ಹುಡುಗರು ನಟ ಹರ್ಷ ಅವರ ಮೇಲೆ ದಾಳಿ ಮಾಡಿದ್ದಾರೆ. ನಂತರ ಅಲ್ಲೇ ಹರ್ಷ ಹಾಗೂ ಸ್ನೇಹಿತರನ್ನು ಬಂಧನದಲ್ಲಿರಿಸಿಕೊಂಡು ಹೋಟೆಲ್​ ಹುಡುಗರ ಹಿಂಸೆ ನೀಡಿದ್ದಾರೆ.

'ವರ್ಧನ', 'ಗಜಪಡೆ', 'ರಾಜಾಹುಲಿ' ಸೇರಿದಂತೆ ಹಲವು ಸಿನಿಮಾಗಳಲ್ಲಿ ಹರ್ಷ ಅಭಿನಯಿಸಿದ್ದಾರೆ.

 
First published:June 28, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ