HBD Nikhil: ನಿಖಿಲ್​ಗೆ ಸಿಕ್ತು ಹುಟ್ಟುಹಬ್ಬದ ಗಿಫ್ಟ್​: ಬಿಡುಗಡೆಯಾಯ್ತು ಹೊಸ ಚಿತ್ರದ ಪೋಸ್ಟರ್​..!

HBD Nikhil: ಸೀತಾರಾಮ ಕಲ್ಯಾಣ ಸಿನಿಮಾದ ನಂತರ ನಿಖಿಲ್​ ಕುಮಾರಸ್ವಾಮಿ ತಮ್ಮ ಯಾವುದೇ ಚಿತ್ರದ ಬಗ್ಗೆ ಮಾತನಾಡಿರಲಿಲ್ಲ. ಅದಕ್ಕೆ ಹುಟ್ಟುಹಬ್ಬದಂದು ಉತ್ತರ ಕೊಟ್ಟಿದ್ದಾರೆ.

Anitha E | news18-kannada
Updated:January 22, 2020, 1:55 PM IST
HBD Nikhil: ನಿಖಿಲ್​ಗೆ ಸಿಕ್ತು ಹುಟ್ಟುಹಬ್ಬದ ಗಿಫ್ಟ್​: ಬಿಡುಗಡೆಯಾಯ್ತು ಹೊಸ ಚಿತ್ರದ ಪೋಸ್ಟರ್​..!
ಹುಟ್ಟುಹಬ್ಬದ ಸಂಭ್ರಮದಲ್ಲಿ ನಿಖಿಲ್​ ಕುಮಾರಸ್ವಾಮಿ
  • Share this:
ನಿಖಿಲ್​ ಕುಮಾರಸ್ವಾಮಿ ಇಂದು ಮೂವತ್ತನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಸ್ಯಾಂಡಲ್​ವುಡ್​ ಜಾಗ್ವಾರ್​ಗೆ ಹುಟ್ಟುಹಬ್ಬದಂದು ಭರ್ಜರಿ ಉಡುಗೊರೆ ಸಿಕ್ಕಿದೆ.

'ಸೀತಾರಾಮ ಕಲ್ಯಾಣ' ಸಿನಿಮಾದ ನಂತರ ನಿಖಿಲ್​ ಕುಮಾರಸ್ವಾಮಿ ತಮ್ಮ ಯಾವುದೇ ಚಿತ್ರದ ಬಗ್ಗೆ ಮಾತನಾಡಿರಲಿಲ್ಲ. ಅದಕ್ಕೆ ಹುಟ್ಟುಹಬ್ಬದಂದು ಉತ್ತರ ಕೊಟ್ಟಿದ್ದಾರೆ.

  View this post on Instagram
 

ಎಲ್ಲರಿಗೂ ಶುಭೋದಯ, ನನ್ನ ಹುಟ್ಟು ಹಬ್ಬಕ್ಕೆ ಶುಭ ಕೋರುವ ಪ್ರತಿಯೊಬ್ಬರಿಗೂ ನನ್ನ ಕೋಟಿ ಕೋಟಿ ಪ್ರೀತಿಯ ವಂದನೆಗಳು. ಬಹಳಷ್ಟು ಜನ ನನ್ನ ಮುಂದಿನ ಸಿನಿಮಾ ಯಾವುದು, ಯಾವಾಗ ಅನ್ನುವ ನಿರೀಕ್ಷೆಗೆ ಈ ಸ್ಟಿಲ್ಲನ್ನು ನನ್ನ ಸಿನಿಮಾ ಟೀಂ ನನ್ನ ಹುಟ್ಟು ಹಬ್ಬದ ದಿನ ಇಂದು ಬಿಡುಗಡೆ ಮಾಡಿದ್ದಾರೆ. ನಿಮ್ಮ ಪ್ರೀತಿ ವಿಶ್ವಾಸಕ್ಕೆ ನಾನು ಸದಾ ಚಿರರುಣಿ.


A post shared by Nikhil Kumar (@nikhilgowda_jaguar) on


'ಹುಟ್ಟುಹಬ್ಬಕ್ಕೆ ಶುಭಕೋರಿದ ಎಲ್ಲರಿಗೂ ವಂದನೆಗಳು. ಬಹಳಷ್ಟು ಜನ ನನ್ನ ಮುಂದಿನ ಸಿನಿಮಾ ಯಾವುದು, ಯಾವಾಗ ಎಂದು ಕೇಳುತ್ತಿದ್ದರು. ಅದಕ್ಕೆ 'ಪ್ರೊಡಕ್ಷನ್​ ನಂ 1'  ಚಿತ್ರತಂಡ ಈ ಸ್ಟಿಲ್​ ಅನ್ನು ನನ್ನ ಹುಟ್ಟುಹಬ್ಬದಂದೆ ಬಿಡುಗಡೆ ಮಾಡಿದ್ದಾರೆ. ನಿಮ್ಮ ವಿಶ್ವಾಸಕ್ಕೆ ನಾನು ಸದಾ ಚಿರಋಣಿ' ಎಂದು ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್​ ಮಾಡಿದ್ದಾರೆ.

ಇದನ್ನೂ ಓದಿ: Manvita: ಏನಾಯ್ತು ಕೆಂಡ ಸಂಪಿಗೆಯ ಮಾನ್ವಿತಾಗೆ...!

ಜೆಪಿ ನಗರದ ತಮ್ಮ ನಿವಾಸದಲ್ಲಿ ಅಭಿಮಾನಿಗಳೊಂದಿಗೆ ಕೇಕ್​ ಕತ್ತರಿಸುವ ಮೂಲಕ ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಇದೇ ವೇಳೆ ನಿಖಿಲ್​ ಅವರ ಹೊಸ ಸಿನಿಮಾಗಳ ಪ್ರಕಟಣೆ ಮಾಡಲಾಗಿದೆ.

ಅಭಿಮಾನಿಗಳೊಂದಿಗೆ ಕೇಕ್​ ಕತ್ತರಿಸಿ ಹುಟ್ಟುಹಬ್ಬ ಆಚರಿಸಿಕೊಂಡ ನಿಖಿಲ್​ ಕುಮಾರಸ್ವಾಮಿ


ಟಾಲಿವುಡ್​ನ ವಿಜಯ್ ಕುಮಾರ್ ಕೊಂಡ ನಿರ್ದೇಶನದಲ್ಲಿ ಬರಲಿರುವ ಚಿತ್ರದ  'ಪ್ರೊಡಕ್ಷನ್​ ನಂ 1' ಪೋಸ್ಟರ್​  ಇಂದು ಬಿಡುಗಡೆಯಾಗಿದೆ. ಇದರಲ್ಲಿ ನಿಖಿಲ್​ ಬಾಸ್ಕೆಟ್​ ಬಾಲ್​ ಆಡುತ್ತಿರುವ ಚಿತ್ರವಿದೆ. ಇದಕ್ಕೆ ಅರ್ಜುನ್​ ಜನ್ಯ ಸಂಗೀತ ನೀಡಲಿದ್ದಾರೆ.

ಇದನ್ನೂ ಓದಿ: ದೀಪಿಕಾರ ಟಿಕ್​ಟಾಕ್​ ಚಾಲೆಂಜ್​ಗೆ ವಿರೋಧ: ಸ್ಟಾರ್​ ನಟಿಗೆ ನಾಚಿಕೆ ಆಗೋಲ್ವಾ ಎಂದ ನೆಟ್ಟಿಗರು..!

ಉಳಿದಂತೆ ನಿರ್ಮಾಪಕ ಮುನಿರತ್ನ ನಿರ್ಮಾಣದಲ್ಲೂ ಒಂದು ಸಿನಿಮಾ ಬರಲಿದೆಯಂತೆ. ನಿಖಿಲ್​ಗೆ ಹುಟ್ಟುಹಬ್ಬದ ಉಡುಗೊರೆಯಾಗಿ ಮುನಿರತ್ನ ಈ ದೊಡ್ಡ ಆಫರ್ ಕೊಟ್ಟಿದ್ದಾರೆ ಎನ್ನಲಾಗುತ್ತಿದೆ.

Nikhil Kumaraswamy in Munirathana's New Movie
ಮುನಿರತ್ನ ನಿರ್ಮಾಣದ 'ಧನುಷ್​ ಐಪಿಎಸ್​' ಚಿತ್ರದಲ್ಲಿ ನಿಖಿಲ್​ ಕುಮಾರಸ್ವಾಮಿ


ಈ ಚಿತ್ರದ ಶೀರ್ಷಿಕೆ ಇರುವ ಪೋಸ್ಟರ್​ ಸಹ ಬಿಡುಗಡೆಯಾಗಿದೆ. ಅದೇ 'ಧನುಷ್​ ಐಪಿಎಸ್​'. ಇದರಲ್ಲಿ ನಿಖಿಲ್​ ಐಪಿಎಸ್​ ಅಧಿಕಾರಿಯ ಪಾತ್ರದಲ್ಲಿ ನಟಿಸಲಿದ್ದಾರಂತೆ. ಉಳಿದಂತೆ ಈ ಸಿನಿಮಾ ಕುರಿತಾಗಿ ಯಾವುದೇ ಮಾಹಿತಿ ಹೊರ ಬಿದ್ದಿಲ್ಲ. ಈ ಹಿಂದೆ ಮುನಿರತ್ನ ನಿರ್ಮಾಣದ 'ಕುರುಕ್ಷೇತ್ರ'ದಲ್ಲಿ ಅಭಿಮನ್ಯು ಪಾತ್ರದಲ್ಲಿ ನಟಿಸಿದ್ದರು.

 Nikhil Kumaraswamy: ನಿಖಿಲ್​ ಕುಮಾರಸ್ವಾಮಿ ರಿಲ್ಯಾಕ್ಸ್​ ಮೂಡ್​ಗೆ ಜಾರಿದಾಗ..!
First published: January 22, 2020, 1:55 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading