ಕಾಮಿಡಿ ಟೈಮ್​ ಗಣೇಶ್​ ಗೋಲ್ಡನ್​ ಸ್ಟಾರ್​ ಆಗಿ 13 ವರ್ಷಗಳೇ ಕಳೆದಿವೆ..!

ನಟ ಗಣೇಶ್​ ಕಿರುತೆರೆಯ ಕಾಮಿಡಿ ಟೈಮ್​ನಿಂದ ಬೆಳ್ಳಿತೆರೆಗೆ ನಾಯಕನಾಗಿ ಎಂಟ್ರಿಕೊಟ್ಟು ಇಂದಿಗೆ 13 ವರ್ಷ. ಚೆಲ್ಲಾಟ ಸಿನಿಮಾದಿಂದ ನಾಯಕನಾಗಿ ಸಿನಿ ಪಯಣ ಆರಂಭಿಸಿದ ಗಣೇಶ್​ ಹಿಂದೆ ತಿರುಗಿಯೇ ನೋಡಿಲ್ಲ.

Anitha E | news18
Updated:April 21, 2019, 4:03 PM IST
ಕಾಮಿಡಿ ಟೈಮ್​ ಗಣೇಶ್​ ಗೋಲ್ಡನ್​ ಸ್ಟಾರ್​ ಆಗಿ 13 ವರ್ಷಗಳೇ ಕಳೆದಿವೆ..!
ಗೋಲ್ಡನ್​ ಸ್ಟಾರ್​ ಗಣೇಶ್​
  • News18
  • Last Updated: April 21, 2019, 4:03 PM IST
  • Share this:
-ಅನಿತಾ ಈ, 

ನಮಸ್ಕಾರ... ನಮಸ್ಕಾರ... ನಮಸ್ಕಾರ ಎನ್ನುತ್ತಾ ಕಿರುತೆರೆಯಲ್ಲಿ ಪ್ರೇಕ್ಷಕರ ಹೊಟ್ಟೆ ಹುಣ್ಣಾಗುವಷ್ಟು ನಗಿಸುತ್ತಿದ್ದ ಕಾಮಿಡಿ ಟೈಮ್​ ಗಣೇಶ್​ ಗೋಲ್ಡನ್​ ಸ್ಟಾರ್​​ ಆಗಿ ಇಂದಿಗೆ 13 ವರ್ಷ.

ಇದನ್ನೂ ಓದಿ: ರಾಯಚೂರಿನ ವಿದ್ಯಾರ್ಥಿನಿ ಅನುಮಾನಾಸ್ಪದ ಸಾವು: ಯೋಗರಾಜ್​ ಭಟ್ಟರ ಮನಮುಟ್ಟುವ ಪತ್ರ

ಕಿರುತೆರೆಯಿಂದ ಬೆಳ್ಳಿ ತೆರೆಗೆ ಬಂದ ನಂತರ ಗಣೇಶ್​ ಸೆಸಿದ್ದು ಬರೋಬ್ಬರಿ 13 ವರ್ಷ. ಸಿನಿಮಾಗಳಲ್ಲಿ ಚಿಕ್ಕ ಪುಟ್ಟ ಪಾತ್ರಗಳ ಮೂಲಕ ದೊಡ್ಡ ಪರದೆ ಮೇಲೆ ಕಾಣಿಸಿಕೊಳ್ಳುತ್ತಿದ್ದ ಗಣೇಶ್​ 'ಚೆಲ್ಲಾಟ' ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಾಯಕರಾಗಿ ಕಾಣಿಸಿಕೊಂಡರು.

ಸಿನಿ ರಂಗದಲ್ಲಿ 13 ವರ್ಷ ಕಳೆದ ಅವರು ಆ ಸಂಭ್ರಮವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ತಮ್ಮ ಟ್ವಿಟರ್​ ಮೂಲಕ ತಮ್ಮ ಯಶಸ್ಸಿನ ಪಯಣದಲ್ಲಿ ಮೆಟ್ಟಿಲುಗಳಾದ ಎಲ್ಲರಿಗೂ ಹಾಗೂ ಅಭಿಮಾನಿಗಳಿಗೆ ಧನ್ಯವಾದ ಕೋರಿದ್ದಾರೆ.'ಚೆಲ್ಲಾಟ'ದ ನಂತರ 'ಚೆಲುವಿನ ಚಿತ್ತಾರ', 'ಮುಂಗಾರು ಮಳೆ', 'ಗಾಳಿಪಟ', 'ಮಳೆಯಲಿ ಜೊತೆಯಲಿ' ಸೇರಿದಂತೆ ಹಲವಾರು ಹಿಟ್​ ಸಿನಿಮಾಗಳನ್ನು ಚಂದನವನಕ್ಕೆ ಕೊಟ್ಟಿದ್ದಾರೆ. ಸದ್ಯ ತಮಿಳಿನ ಹಿಟ್​ ಚಿತ್ರ '96'ನ ಕನ್ನಡ ರಿಮೇಕ್​ '99'ರಲ್ಲಿ ಅಭಿನಯಿಸುತ್ತಿದ್ದು, ಇದು ಮುಂದಿನ ತಿಂಗಳು ಅಂದರೆ ಮೇ 1ರಂದು ತೆರೆಗಪ್ಪಳಿಸಲಿದೆ.

PHOTOS: ಫೋಟೋ ಶೂಟ್​ಗಳಲ್ಲಿ ಬ್ಯುಸಿಯಾದ ನಗು ಮೊಗದ ಶಾಲಿನಿ ಪಾಂಡೆ
First published:April 21, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading