ಚಮಕ್ ಕೊಟ್ಟ ಜೋಡಿಯ ಸಖತ್ ಸಿನಿಮಾ

ಟಾಲಿವುಡ್-ಕಾಲಿವುಡ್​ನಲ್ಲಿ ಮಿಂಚಿರುವ ನಟಿ ಸುರಭಿ ಕನ್ನಡಕ್ಕೆ ಪದಾರ್ಪಣೆ ಮಾಡಲಿದ್ದಾರೆ. ಇನ್ನು ಚಿತ್ರವನ್ನು ಭರಾಟೆಯ ಭರ್ಜರಿ ನಿರ್ಮಾಪಕ ಸುಪ್ರೀತ್ ನಿರ್ಮಿಸಲಿದ್ದಾರೆ.

zahir | news18-kannada
Updated:February 25, 2020, 1:59 PM IST
ಚಮಕ್ ಕೊಟ್ಟ ಜೋಡಿಯ ಸಖತ್ ಸಿನಿಮಾ
Ganesh
  • Share this:
2017ರಲ್ಲಿ ಸ್ಯಾಂಡಲ್​ವುಡ್​ಗೆ 'ಚಮಕ್' ಕೊಟ್ಟ ಜೋಡಿ ಸಿಂಪಲ್ ಸುನಿ ಹಾಗೂ ಗೋಲ್ಡನ್ ಸ್ಟಾರ್ ಗಣೇಶ್ ಮತ್ತೆ ಒಂದಾಗುತ್ತಿದ್ದಾರೆ. ಮೂರು ವರ್ಷಗಳ ಹಿಂದೆ ಕಾಮಿಡಿ-ರೊಮ್ಯಾನ್ಸ್ ಕಥಾಹಂದರದ ಮೂಲಕ ಮೋಡಿ ಮಾಡಿದ್ದ ಈ ಜೋಡಿ ಮತ್ತೆ ಒಂದಾದರೆ ಸಿನಿಮಾ ಸಖತ್ತಾಗೆ ಇರುತ್ತೆ. ಹೀಗಾಗಿಯೇ ಈ ಬಾರಿ ಸಖತ್ ಸಿನಿಮಾವನ್ನೇ ಗೋಲ್ಡನ್ ಗಣಿಗಾಗಿ ಸಿಂಪಲ್ ಸುನಿ ಕೈಗೆತ್ತಿಕೊಂಡಿದ್ದಾರೆ.

ಅಂದರೆ ಸುನಿ ನಿರ್ದೇಶಿಸಲಿರುವ ಹೊಸ ಸಿನಿಮಾಗೆ ಸಖತ್ ಎಂಬ ಟೈಟಲ್ ಫೈನಲ್ ಮಾಡಲಾಗಿದೆ. ಶೀರ್ಷಿಕೆ ಕೇಳಿದಾಕ್ಷಣ ಮತ್ತದೇ ಚಮಕ್ ನೆನಪಿಗೆ ಬರುವಂತಿದೆ. ಅಂದರೆ ಈ ಬಾರಿ ಕೂಡ ಟೈಟಲ್ ಮೂಲಕವೇ ಸುನಿ ಮತ್ತೊಂದು ಹಾಸ್ಯ ಪ್ರಧಾನ ಸಿನಿಮಾ ಜನರ ಮುಂದಿಡಲಿರುವುದನ್ನು ಸ್ಪಷ್ಟಪಡಿಸಿದ್ದಾರೆ.

ಅಂದಹಾಗೆ ಸಖತ್​ ಚಿತ್ರಕ್ಕೆ ಸಖತ್ತಾಗಿರುವ ನಾಯಕಿಯನ್ನೇ ಸುನಿ ಆಯ್ಕೆ ಮಾಡಿಕೊಂಡಿದ್ದು, ಈ ಚಿತ್ರದ ಮೂಲಕ ಟಾಲಿವುಡ್-ಕಾಲಿವುಡ್​ನಲ್ಲಿ ಮಿಂಚಿರುವ ನಟಿ ಸುರಭಿ ಕನ್ನಡಕ್ಕೆ ಪದಾರ್ಪಣೆ ಮಾಡಲಿದ್ದಾರೆ. ಇನ್ನು ಚಿತ್ರವನ್ನು ಭರಾಟೆಯ ಭರ್ಜರಿ ನಿರ್ಮಾಪಕ ಸುಪ್ರೀತ್ ನಿರ್ಮಿಸಲಿದ್ದಾರೆ.

ಸಿಂಪಲ್ ಸುನಿ-ಗೋಲ್ಡನ್ ಗಣಿ


ಸದ್ಯ ಗೋಲ್ಡನ್ ಗಣಿ ಯೋಗರಾಜ್ ಭಟ್ಟರ ಗಾಳಿಪಟ 2 ಚಿತ್ರದಲ್ಲಿ ಬ್ಯುಸಿಯಾಗಿದ್ದು, ಈ ಚಿತ್ರದ ಬಳಿಕ ಸುನಿಯೊಂದಿಗೆ ಸಖತ್ ಶುರು ಮಾಡಲಿದ್ದಾರೆ ಎಂದು ಹೇಳಲಾಗಿದೆ.

ಇದನ್ನೂ ಓದಿ: ರಶ್ಮಿಕಾ ಮಂದಣ್ಣ ಮುಂದಿನ ಕನ್ನಡ ಸಿನಿಮಾ ಯಾವುದು? ಬಿಟ್ಟು ಕೊಟ್ರು ಒಂದು ಸಣ್ಣ ಸುಳಿವು

 
First published: February 25, 2020, 1:59 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading