Bollywood: ಶಿವನೇ ಶಂಭುಲಿಂಗ.. ಒಂದ್​ ಸಿನಿಮಾಗೆ ಈ ಪಾಟಿನಾ ದುಡ್ಡು ತಗೋಳೋದು ಈ ನಟಿಮಣಿಯರು?

ಚಿತ್ರದಿಂದ ಚಿತ್ರಕ್ಕೆ ನೇಮ್(Name), ಫೇಮ್(Fame) ಹೆಚ್ಚಿಸಿಕೊಳ್ಳುತ್ತಿರುವ ಈ ನಟಿಯರು ಸಂಭಾವನೆ ವಿಚಾರದಲ್ಲೂ ಒಂದು ಕೈ ಮೇಲಿದ್ದಾರೆ. ಬಾಲಿವುಡ್(Bollywood) ನಲ್ಲಿ ಸ್ಟಾರ್ ನಾಯಕಿಯರು ಕೋಟಿಗಟ್ಟಲೇ ಸಂಭಾವನೆ(Remuneration) ಪಡೆಯುತ್ತಾರೆ

ಬಾಲಿವುಡ್​ ನಟಿಯರು

ಬಾಲಿವುಡ್​ ನಟಿಯರು

  • Share this:
ದೀಪಿಕಾ ಪಡುಕೋಣೆ(Deepika Padukone), ಕತ್ರಿನಾ ಕೈಫ್(Katrina Kaif), ಆಲಿಯಾ ಭಟ್(Alia Bhatt), ಕರೀನಾ ಕಪೂರ್(Kareena Kapoor) ಬಾಲಿವುಡ್​(Bollywood)ನ ಮೋಸ್ಟ್ ಬ್ಯುಸಿಯಸ್ಟ್ ಹಿರೋಯಿನ್ಸ್. ತಮ್ಮ ನೋಟ, ಮೈಮಾಟ ಅಭಿನಯದ ಮೂಲಕ ಸಿನಿ ರಸಿಕರ ಮನ ಗೆದ್ದಿದ್ದಾರೆ. ಚಿತ್ರದಿಂದ ಚಿತ್ರಕ್ಕೆ ನೇಮ್(Name), ಫೇಮ್(Fame) ಹೆಚ್ಚಿಸಿಕೊಳ್ಳುತ್ತಿರುವ ಈ ನಟಿಯರು ಸಂಭಾವನೆ ವಿಚಾರದಲ್ಲೂ ಒಂದು ಕೈ ಮೇಲಿದ್ದಾರೆ. ಬಾಲಿವುಡ್(Bollywood) ನಲ್ಲಿ ಸ್ಟಾರ್ ನಾಯಕಿಯರು ಕೋಟಿಗಟ್ಟಲೇ ಸಂಭಾವನೆ(Remuneration) ಪಡೆಯುತ್ತಾರೆ..ಹಾಗಾದರೆ ಯಾವೆಲ್ಲಾ ಬಾಲಿವುಡ್ ಬೆಡಗಿಯರು, ಎಷ್ಟೆಷ್ಟು ಸಂಭಾವನೆ ಪಡೆಯುತ್ತಾರೆ ಎಂಬ ಡಿಟೇಲ್ಸ್ ನಿಮಗಾಗಿ ಇಲ್ಲಿದೆ.

ಡಿಪ್ಪಿ, ಆಲಿಯಾ ಸಂಭಾವನೆ ಎಷ್ಟು ಗೊತ್ತಾ?

ಸಂಭಾವನೆ ಹೆಚ್ಚು ಪಡೆಯುವವರ ಪಟ್ಟಿಯಲ್ಲಿ ದೀಪಿಕಾ ಮತ್ತು ಆಲಿಯಾ ಭಟ್ ಪ್ರಸ್ತುತ ಮುಂಚೂಣಿಯಲ್ಲಿದ್ದಾರೆ. ಹಲವು ಅಂಶಗಳ ಆಧಾರದ ಮೇಲೆ ಈ ಇಬ್ಬರು ಸಿನಿಮಾದಿಂದ ಸಿನಿಮಾಕ್ಕೆ ಸಂಭಾವನೆಯನ್ನು ಬದಲಾಯಿಸುವುದರ ಜೊತೆಗೆ ಹೆಚ್ಚಿಸಿಕೊಳ್ಳುತ್ತಾರೆ. ಇಬ್ಬರು ನಟಿ ಮಣಿಯರು ಚಲನಚಿತ್ರಕ್ಕೆ ಸಹಿ ಮಾಡಲು ಬರೋಬ್ಬರಿ 15 ಕೋಟಿ ರೂಪಾಯಿ ಶುಲ್ಕ ವಿಧಿಸುತ್ತಾರೆ ಎಂದು ಮೂಲಗಳು ಖಚಿತಪಡಿಸಿವೆ.

‘ಗೆಹರಾಯಿಯಾ' ಚಿತ್ರಕ್ಕೆ ತಲಾ 15 ಕೋಟಿ ಪಡೆದ ಡಿಪ್ಪಿ!

ದೀಪಿಕಾ ಪಡುಕೋಣೆ 'ಪಠಾಣ್' ಮತ್ತು 'ಗೆಹರಾಯಿಯಾ' ಚಿತ್ರಕ್ಕೆ ತಲಾ 15 ಕೋಟಿ ರೂ. ಪಡೆದುಕೊಂಡಿದ್ದಾರೆ. (ನಿರ್ಮಾಪಕರು OTT ಬಿಡುಗಡೆಗೆ ಆಯ್ಕೆ ಮಾಡಿದ ನಂತರ ಅದನ್ನು 12 ರಿಂದ 15 ಕೋಟಿ ರೂ.ಗೆ ಹೆಚ್ಚಿಸಲಾಯಿತು, ಆಲಿಯಾ ಭಟ್ 'ಡಾರ್ಲಿಂಗ್ಸ್‌' ಚಿತ್ರಕ್ಕೆ 15 ಕೋಟಿ ರೂ. ಪಡೆದಿದ್ದಾರೆ ಮತ್ತು ಸಂಜಯ್ ಲೀಲಾ ಬನ್ಸಾಲಿಯವರ ಮಹಾಕಾವ್ಯವಾದ 'ಗಂಗೂಬಾಯಿ' ಮತ್ತು ಕರಣ್ ಜೋಹರ್ ನಿರ್ದೇಶನದ 'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿಯ' ಸಿನಿಮಾದಲ್ಲಿ ನಟಿ ತಮ್ಮ ಸಂಭಾವನೆಯನ್ನು ಕೊಂಚ ಕಡಿಮೆ ಮಾಡಿಕೊಂಡಿದ್ದಾರಂತೆ.

ಇದನ್ನೂ ಓದಿ:ಬಿಳಿ ಬಿಕಿನಿಯಲ್ಲಿ ಅನನ್ಯಾ ಸೌಂದರ್ಯ ಪ್ರದರ್ಶನ, ಫೋಟೋ ಕಂಡು ಪಡ್ಡೆ ಹೈಕ್ಳು ಸ್ಟನ್​!

ದೀಪಿಕಾ ಮತ್ತು ಆಲಿಯಾ ತಾವು ಅಭಿನಯಿಸುವ ಸಿನಿಮಾಕ್ಕೆ ನ್ಯಾಯ ಒದಗಿಸುವ ಸಾಮರ್ಥ್ಯದ ಜೊತೆಗೆ ತಮ್ಮ ಸ್ಟಾರ್ ಪವರ್ ಅನ್ನು ಉಳಿಸಿಕೊಳ್ಳುತ್ತಿದ್ದಾರೆ. ಮತ್ತೊಂದೆಡೆ, ‘ಗೆಹರಾಯಿಯಾ’  ಲಾಭದಿಂದ ದೀಪಿಕಾ ಬ್ಯಾಕೆಂಡ್ ಪಾಲನ್ನು ಪಡೆದಿದ್ದಾರೆ, ಈ ಕ್ರಮ ಅವರ ಮುಂದಿನ ಚಲನಚಿತ್ರಗಳಿಗೆ ಅನ್ವಯವಾಗುವ ಸಾಧ್ಯತೆ ಇದೆ.

ಕತ್ರಿನಾ, ಕರೀನಾ ಕಪೂರ್ ಸಂಭಾವನೆ ಎಷ್ಟು?

ಹೆಚ್ಚು ಸಂಭಾವನೆ ಪಡೆಯುವರಲ್ಲಿ ಕತ್ರಿನಾ ಕೈಫ್ ಮತ್ತು ಕರೀನಾ ಕಪೂರ್ ಎರಡನೇ ಸ್ಥಾನದಲ್ಲಿ ನಿಲ್ಲುತ್ತಾರೆ. ಈ ಇಬ್ಬರು ನಟಿಯರು ಚಿತ್ರರಂಗದಲ್ಲಿ 17 ಮತ್ತು 20 ವರ್ಷಗಳನ್ನು ಕಳೆದಿರುವ ಸೀನಿಯರ್ ಹೀರೋಯಿನ್ಸ್. ಬಹಳ ಸಮಯದಿಂದ ಚಿತ್ರರಂಗದಲ್ಲಿದ್ದರೂ ಇವರಿಗಿರುವ ಡಿಮ್ಯಾಂಡ್ ಚೂರು ಕಡಿಮೆಯಾದಂತಿಲ್ಲ. ಆ್ಯಕ್ಟಿಂಗ್ ವಿಚಾರದಲ್ಲಿಇಬ್ಬರೂ ನಟಿಯರು ಎತ್ತಿದ ಕೈ. ಇನ್ನೂ ನಟನೆಗೆ ತಕ್ಕಂತೆ ಹಣವನ್ನು ಸಹ ಪಡೆಯುತ್ತಾರೆ. ಇಬ್ಬರ ಸಂಭಾವನೆ ಅವರ ಬೇಡಿಕೆಗೆ ಸಾಕ್ಷಿಯಾಗಿದೆ.

12 ಕೋಟಿ ಪಡೆಯುತ್ತಾರೆ ಕತ್ರಿನಾ ಕೈಫ್​!

ಇತ್ತೀಚಿನ ವರದಿಗಳ ಪ್ರಕಾರ ಕತ್ರಿನಾ ಕೈಫ್ 'ಜೀ ಲೆ ಝರಾ' ಚಿತ್ರಕ್ಕಾಗಿ ಸುಮಾರು 12 ಕೋಟಿ ರೂಪಾಯಿಗಳನ್ನು ಪಡೆದರು, ಆದರೆ ಕರೀನಾ ಕಪೂರ್ ನಿರ್ದೇಶಕ ಸುಜೋಯ್ ಘೋಷ್ ಅವರ ಇನ್ನೂ ಹೆಸರಿಸದ ಥ್ರಿಲ್ಲರ್ ಚಿತ್ರಕ್ಕೆ 12 ಕೋಟಿ ರೂ. ಪಡೆದುಕೊಂಡಿದ್ದಾರೆ. ಇದರ ನಂತರದ ಸಾಲಿನಲ್ಲಿ ಪ್ರಿಯಾಂಕಾ ಚೋಪ್ರಾ ಮತ್ತು ಅನುಷ್ಕಾ ಶರ್ಮಾ ಇದ್ದಾರೆ. ಇಬ್ಬರೂ ಬಾಲಿವುಡ್‌ನಲ್ಲಿ ಕಡಿಮೆ ಸಕ್ರಿಯವಾಗಿದ್ದು, ಇಬ್ಬರು ಸಹಿ ಮಾಡಿದ ಕೊನೆಯ ಚಿತ್ರಕ್ಕಾಗಿ ಭಾರಿ ಹಣವನ್ನು ಗಳಿಸಿದರು. ಪ್ರಿಯಾಂಕಾ ಚೋಪ್ರಾ 'ಜೀ ಲೆ ಝರಾ' ಚಿತ್ರಕ್ಕೆ 10 ಕೋಟಿ ರೂಪಾಯಿ ಪಡೆದಿದ್ದರೆ, 'ಸ್ಕೈ ಈಸ್ ಪಿಂಕ್‌' ಗೆ 8 ಕೋಟಿ ರೂಪಾಯಿಗೆ ಅನುಷ್ಕಾ ಸಹಿ ಹಾಕಿದ್ದಾರೆ.

ಇದನ್ನೂ ಓದಿ: Urfi Javed ಹೊಸ ಅವತಾರ ನೋಡಿ ಕಣ್ಣು ದಾನಕ್ಕೆ ಮುಂದಾದ ನೆಟ್ಟಿಗರು.. ಹೆವ್ವಿ ಕ್ವಾಟ್ಲೆ ಅಂತೆ!

ಶ್ರದ್ಧಾ ಕಪೂರ್ ರಣಬೀರ್ ಕಪೂರ್ ಜೊತೆ 'ಲವ್ ರಂಜನ್' ಚಿತ್ರದ ಭಾಗವಾಗಲು 7 ಕೋಟಿ ರೂ, 'ಲೂಪ್ ಲಪೇಟಾ' ಚಿತ್ರಕ್ಕಾಗಿ ತಾಪ್ಸಿ ಪನ್ನು ರೂ 5 ಕೋಟಿ, ಕಳೆದ ಕೆಲವು ವರ್ಷಗಳಿಂದ ವಿದ್ಯಾ ಬಾಲನ್ ತನ್ನ ಎಲ್ಲಾ ಚಿತ್ರಗಳಿಗೆ ರೂ 4 ಕೋಟಿ ಗಳಿಸಿದ್ದಾರೆ.. ಕೃತಿ ಸನೋನ್ 4 ಕೋಟಿ, ಕಿಯಾರಾ ಅಡ್ವಾಣಿ ರಾಜ್ ಮೆಹ್ತಾ ನಿರ್ದೇಶನದ ಜಗ್ ಜಗ್ ಜೀಯೋಗೆ 2.50 ಕೋಟಿ ರೂ. ಜಾಕ್ವೆಲಿನ್ ಫರ್ನಾಂಡೀಸ್ ಮತ್ತು ದಿಶಾ ಪಟಾನಿ ಪ್ರತಿ ಚಿತ್ರಕ್ಕೆ 2.50 ಮತ್ತು 2.00 ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ. ಜಾನ್ವಿ ಕಪೂರ್ ಮತ್ತು ಸಾರಾ ಅಲಿ ಖಾನ್ 2 ಕೋಟಿ ಪಡೆಯುತ್ತಿದ್ದಾರೆ.
Published by:Vasudeva M
First published: