Sexual Harassment: ನಟಿಗೆ ಲೈಂಗಿಕ ಕಿರುಕುಳ ನೀಡಿದ ಯುವಕರ ಗುಂಪು! ಬಟ್ಟೆ ಹರಿದು ವಿಡಿಯೋ ಚಿತ್ರಿಸಿದ ಕಿರಾತಕರು

Sexual Harassment: ಟಿವಿ ತಾರೆಯೊಬ್ಬರು ರಾತ್ರಿ ಪ್ರಯಾಣದ ವೇಳೆ ಲೈಂಗಿಕ ಕಿರುಕುಳ ಎದುರಿಸಿದ್ದು, ಆಕೆಯ ಬಟ್ಟೆ ಹರಿದು ಕಿರಾತಕರು ವಿಡಿಯೋ ಚಿತ್ರೀಕರಿಸಿದ್ದಾರೆ. ನಿರೂಪಕಿ ಈ ಘಟನೆಯಿಂದ ನೊಂದು ತನಗಾದ ಬೇಸರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾಳೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
    ದಿನನಿತ್ಯ ಒಂದಲ್ಲಾ ಒಂದು ಲೈಂಗಿಕ ಕಿರುಕುಳ (Sexual Harassment) ಪ್ರಕರಣಗಳು ಬೆಳಕಿಗೆ ಬರುತ್ತಿರುತ್ತವೆ. ಎಷ್ಟೇ ಕಾನೂನು ಕಠಿಣಗೊಳಿಸಿದರು, ಶಿಕ್ಷೆ ವಿಧಿಸಿದರು ಇಂತಹ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿಲ್ಲ. ಅದರಂತೆ ಟಿವಿ ತಾರೆಯೊಬ್ಬರು (TV Star) ರಾತ್ರಿ ಪ್ರಯಾಣದ ವೇಳೆ ಲೈಂಗಿಕ ಕಿರುಕುಳ ಎದುರಿಸಿದ್ದು, ಆಕೆಯ ಬಟ್ಟೆ ಹರಿದು ಕಿರಾತಕರು ವಿಡಿಯೋ (Video) ಚಿತ್ರೀಕರಿಸಿದ್ದಾರೆ. ನಿರೂಪಕಿ ಈ ಘಟನೆಯಿಂದ ನೊಂದು ತನಗಾದ ಬೇಸರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾಳೆ.

    ಬ್ರಿಟನ್‌ನಲ್ಲಿ (Britain) ಈ ಘಟನೆ ನಡೆದಿದೆ. ಟಿವಿ ತಾರೆ ಲೊಟ್ಟಿ ಲಯನ್ ರೈಲ್ವೇ ನಿಲ್ದಾಣದಲ್ಲಿ ನಿಂತಿದ್ದರು. ಈ ವೇಳೆ ಅಲ್ಲಿದ್ದ ಯುವಕರ ಗುಂಪೊಂದು ಹತ್ತಿರ ಬಂದು ಕೆಟ್ಟದ್ದಾಗಿ ನಡೆದುಕೊಳ್ಳಲು ಯತ್ನಿಸಿತ್ತು. ನಂತರ ರೈಲಿನಲ್ಲಿ ಚಳಿಸುವ ವೇಳೆಯೂ ಲೈಂಗಿಕ ಕಿರುಕುಳವನ್ನು ನೀಡಲು ಪ್ರಾರಂಭಿಸಿದರು. ಯುವಕರ ಗುಂಪಿನಲ್ಲಿದ್ದ ವ್ಯಕ್ತಿಯೋರ್ವ ನಟಿಯ ಟಾಪ್ ಹರಿದು ಹಾಕಿದ್ದಾನೆ. ಈ ವೇಳೆ ಉಳಿದವರು ಘಟನೆಯನ್ನು ತಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ.

    ನಗುತ್ತಾ ವಿಡಿಯೋ ಚಿತ್ರೀಕರಿಸಿದರು

    ದಿ ಸನ್ ವರದಿಯ ಪ್ರಕಾರ, 21 ವರ್ಷದ ಲೊಟ್ಟಿ ಲಯನ್ ರೈಲು ನಿಲ್ದಾಣದ ಪ್ಲಾಟ್‌ಫಾರ್ಮ್‌ನಲ್ಲಿ ಫೋನಿನಲ್ಲಿ ಮಾತನಾಡುತ್ತಾ ತನ್ನ ರೈಲಿಗಾಗಿ ಕಾಯುತ್ತಿದ್ದಳು. ಆ ವೇಳೆ ಯುವಕನೋರ್ವ ಅವಳ ಬಳಿಗೆ ಬಂದು ಏನು ಮಾತನಾಡದೆ ಆಕೆ ಮೈ ಮೇಲೆ ಕೈ ಹಾಕಿ ಹಿಡಿದು ಎಳೆದನು. ಯುವಕನ ಹಿಂಭಾಗದಲ್ಲಿ ನಿಂತಿದ್ದ ಸ್ನೇಹಿತರ ಗುಂಪು ಅದನ್ನು ಕಂಡು ನಗಲು ಪ್ರಾರಂಭಿಸಿದರು. ಕೆಲವರು ವಿಡಿಯೋ ಮಾಡಲು ಆರಂಭಿಸಿದರು.

    ಇದನ್ನು ಓದಿ:ಕಿಚ್ಚನ ಬಳಿಕ ರಾಜಮೌಳಿ ಸಿನಿಮಾದಲ್ಲಿ ಮತ್ತೊಬ್ಬ ಕನ್ನಡ ನಟ​: RRR​ ಚಿತ್ರದಲ್ಲಿ ಅರುಣ್​ ಸಾಗರ್​!

    ರೈಲಿನ ಒಳಕ್ಕೂ ಕಿರುಕುಳ ನೀಡಿದ ಕಿರಾತಕರು

    ಹಠಾತ್ ಘಟನೆಯಿಂದ ನೊಂದ ಲೊಟ್ಟಿ ಲಯನ್​ ಕಣ್ಣೀರು ಸುರಿಸಿದಳು. ಯುವಕರ ವಿಚಿತ್ರ ವರ್ತನೆಯ ಬಳಿಕ ಅಲ್ಲಿಂದ ಪರಾರಿಯಾಗಿದ್ದಾರೆ. ಏನು ಮಾಡಬೇಕೆಂದು ಲೊಟ್ಟಿಗೆ ತಿಳಿಯದೆ ಆಗ ತಾನೆ ಬಂದ ರೈಲಿಗೆ ಹತ್ತಿದಳು. ರೈಲಿನಲ್ಲಿ ಸಾಕಷ್ಟು ಜನಸಂದಣಿ ಇತ್ತು, ಈಗ ಸುರಕ್ಷಿತವಾಗಿದ್ದೇನೆ ಎಂದುಕೊಂಡಳು. ಆದರೆ ಸ್ವಲ್ಪ ಸಮಯದ ನಂತರ ಆಕೆ ಕತ್ತು ತಿರುಗಿಸಿ ನೋಡಿದಾಗ ತನಗೆ ತೊಂದರೆ ನೀಡಿದ ಯುವಕ ರೈಲಿನ ಒಳಕ್ಕೆ ಕಾಣಿಸಿಕೊಂಡ.

    ರೈಲ್ವೆ ಸಿಬ್ಬಂದಿ ನೆರವಾದರು

    ರೈಲಿನಲ್ಲಿ ಜನಸಂದಣಿಯ ಹೆಚ್ಚಾಗಿತ್ತಾದರು ಯುವಕರ ಕಿರುಕುಳ ನೀಡುವುದನ್ನು ಅಲ್ಲಿಯೂ ಮುಂದುವರಿಸಿದರು. ಆ ಗುಂಪಿನಲ್ಲಿದ್ದ ಒಬ್ಬ ಮತ್ತೆ ನನ್ನ ಬಳಿಗೆ ಬಂದು ಕಿರುಕುಳ ನೀಡಲು ಪ್ರಾರಂಭಿಸಿದ. ಆತನ ಉಳಿದ ಸ್ನೇಹಿತರು ತಮ್ಮ ಮೊಬೈಲ್‌ಗಳಲ್ಲಿ ರೆಕಾರ್ಡ್ ಮಾಡುತ್ತಲೇ ಇದ್ದರು. ಈ ಘಟನೆಯ ಬಗ್ಗೆ ರೈಲ್ವೆ ಕಂಡಕ್ಟರ್‌ಗೆ ತಿಳಿದಾಗ, ಅವರು ತಕ್ಷಣ ನನ್ನ ಬಳಿಗೆ ಬಂದರು ಮತ್ತು ಸುರಕ್ಷಿತವದ ಬೋಗಿಗೆ ಕರೆದೊಯ್ದರು. ಈ ವೇಳೆ ಯುವಕರು ಪರಾರಿಯಾಗಿದ್ದರು. ನಂತರ ಲೊಟ್ಟಿ ಲಯನ್ ಪೊಲೀಸರಿಗೂ ದೂರು ನೀಡಿದ್ದಾರೆ.

    ಇದನ್ನು ಓದಿ: ಫೋಟೋ ವಿಚಾರಕ್ಕೆ ಪಬ್​ನಲ್ಲಿ `ಕಿರಿಕ್​’: ಬಿಯರ್​ ಬಾಟಲ್​ನಿಂದ ಬಿಗ್ ಬಾಸ್ ಸ್ಪರ್ಧಿ ಮೇಲೆ ಹಲ್ಲೆ



    ಪೊಲೀಸ್ ದೂರು ಅಗತ್ಯ

    ಈ ಭಯಾನಕ ಘಟನೆಯು ಮಾರ್ಚ್ 24 ರಂದು ರಾತ್ರಿ 10 ಗಂಟೆಗೆ ಸಂಭವಿಸಿದೆ.  ಲೊಟ್ಟಿ ಲಯನ್​ ತನಗಾದ ಅನುಭವವನ್ನು  ಟಿಕ್‌ಟಾಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದರೊಂದಿಗೆ ರಾತ್ರಿ ರೈಲಿನಲ್ಲಿ ಒಂಟಿಯಾಗಿ ಪ್ರಯಾಣಿಸುವ ಮಹಿಳೆಯರು ಹೆಚ್ಚಿನ ಎಚ್ಚರಿಕೆ ವಹಿಸುವಂತೆ ಮನವಿ ಮಾಡಿದ್ದಾರೆ. ಇಂತಹ ಘಟನೆಗಳ ಬಗ್ಗೆ ಪೊಲೀಸ್ ದೂರು ನೀಡುವುದು ಅವಶ್ಯಕ, ಇಲ್ಲದಿದ್ದರೆ ಅಪರಾಧಿಗಳು ಹೆಚ್ಚಾಗುತ್ತಾರೆ ಎಂದು ಲೊಟ್ಟಿ ಲಯನ್ ಹೇಳಿದ್ದಾರೆ.
    Published by:Harshith AS
    First published: