Duniya Vijay: ಸರ್ಕಾರದ ಕೋವಿಡ್ ಮಾರ್ಗಸೂಚಿಗೆ ನಟ ದುನಿಯಾ ವಿಜಯ್, ಡಾಲಿ ಧನಂಜಯ್ ಬೇಸರ!

ಚಿತ್ರಮಂದಿರಗಳಲ್ಲಿ ಶೇ. 50 ಸೀಟು ಭರ್ತಿಗೆ ಮಾತ್ರ ಅವಕಾಶ ಮಾಡಿರೊ ಸರ್ಕಾರದ ನಿರ್ಧಾರ ಸರಿಯಲ್ಲ. ಸರ್ಕಾರ ಏಕಾಏಕಿ ತೆಗೆದುಕೊಂಡಿರೋ ನಿರ್ಧಾರದ ಬಗ್ಗೆ ತೀವ್ರ ಬೇಸರವಾಗಿದೆ ಎಂದು ದುನಿಯಾ ವಿಜಯ್ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ದುನಿಯಾ ವಿಜಯ್ ಮತ್ತು ಡಾಲಿ ಧನಂಜಯ್.

ಪತ್ರಿಕಾಗೋಷ್ಠಿಯಲ್ಲಿ ದುನಿಯಾ ವಿಜಯ್ ಮತ್ತು ಡಾಲಿ ಧನಂಜಯ್.

  • Share this:
ಹುಬ್ಬಳ್ಳಿ - ಸಲಗ ಕ್ರಿಕೆಟ್‌ ಕಪ್ ಹಿನ್ನೆಲೆಯಲ್ಲಿ ಚಿತ್ರನಟ ದುನಿಯಾ ವಿಜಿ ಮತ್ತು ನಟ ಡಾಲಿ ಧನಂಜಯ್  ಹುಬ್ಬಳ್ಳಿಗೆ ಭೇಟಿ ನೀಡಿದ್ದರು. ಈ ವೇಳೆ ಮಾತನಾಡಿದ ದುನಿಯಾ ವಿಜಯ್, ಸರ್ಕಾರದ ಹೊಸ ಮಾರ್ಗಸೂಚಿಗಳ ಬಗ್ಗೆ ಬೇಸರ ವ್ಯಕ್ತಪಡಿಸಿದರು. ಅಲ್ಲದೆ, ಸೆಲ್ಫೀಗಾಗಿ ದುಂಬಾಲು ಬೀಳದಂತೆ ಪ್ರೇಕ್ಷಕರಿಗೆ ಮನವಿ ಮಾಡಿದ್ದಾರೆ. ಸಿನೆಮಾ ಪ್ರಚಾರಕ್ಕೆ ವಿಭಿನ್ನ ಪ್ರಯತ್ನ ಮಾಡಿರೋದು ಸ್ವಾಗತಾರ್ಹ . ನಾನು ಮತ್ತು ಡಾಲಿ ಧನಂಜಯ ಇಬ್ಬರೂ ನಾಯಕರಾಗಿರೊ ಚಿತ್ರ ಸಲಗ ಆಗಿದೆ. 14 ವರ್ಷಗಳ ಹಿಂದೆ ನಾನು ನೌಕರರು ನಾಯಕನಟ ನಾಗಿ ಹೊರಹೊಮ್ಮಿದ್ದೆ. ಕನ್ನಡ ಪ್ರೇಕ್ಷಕರು ನಮ್ಮನ್ನು ಬೆಳೆಸಿದ್ದಾರೆ. ಅವರೆಲ್ಲರಿಗೂ ನಾವು ಚಿರ ಋಣಿ. ಸಲಗ ಚಿತ್ರವೂ ಯಶಸ್ಸು ಕಾಣಲಿದೆ ಎಂದರು.

ಸರ್ಕಾರದ ಹೊಸ ಮಾರ್ಗಸೂಚಿಗಳಿಗೆ ಇದೇ ಸಂದರ್ಭದಲ್ಲಿ ದುನಿಯಾ ವಿಜಯ್ ಬೇಸರ ವ್ಯಕ್ತಪಡಿಸಿದರು. ಚಿತ್ರಮಂದಿರಗಳಲ್ಲಿ ಶೇ. 50 ಸೀಟು ಭರ್ತಿಗೆ ಮಾತ್ರ ಅವಕಾಶ ಮಾಡಿರೊ ಸರ್ಕಾರದ ನಿರ್ಧಾರ ಸರಿಯಲ್ಲ. ಸರ್ಕಾರ ಏಕಾಏಕಿ ತೆಗೆದುಕೊಂಡಿರೋ ನಿರ್ಧಾರದ ಬಗ್ಗೆ ತೀವ್ರ ಬೇಸರವಾಗಿದೆ. ಬೇರೆ ಯಾವುದಕ್ಕೂ ನಿಯಮಗಳನ್ನು ಹಾಕಿಲ್ಲ. ಸಿನೆಮಾ ಮಂದಿರಗಳಲ್ಲಿ ಶೇ. 50 ರಷ್ಟು ಆಸನದ ವ್ಯವಸ್ಥೆಗೆ ಅವಕಾಶ ನೀಡಲಾಗಿದೆ. ಜೊತೆಗೆ ಜಿಮ್ ಬಂದ್ ಮಾಡಿಸಲಾಗಿದೆ.

ಸಿನೆಮಾ ಮಂದಿರ ಮತ್ತು ಜಿಮ್ ಗಳು ಮಾತ್ರ ಕೊರೋನಾ ಹರಡೋ ಕೇಂದ್ರ ಅನಿಸ್ತಿದೆ ಎಂದು ಸರ್ಕಾರದ ನಿರ್ಧಾರಕ್ಕೆ ದುನಿಯಾ ವಿಜಿ ವ್ಯಂಗ್ಯವಾಡಿದರು. ಸರ್ಕಾರ ಯಾಕೆ ಈ ರೀತಿ ಮಾಡ್ತಿದೆಯೋ ಗೊತ್ತಿಲ್ಲ. ಸರ್ಕಾರದ ನಿರ್ಧಾರನಮಗ್ಯಾರಿಗೂ ಒಪ್ಪಿಗೆಯಿಲ್ಲ. ಏಪ್ರಿಲ್ 7 ರವರೆಗೆ ಮಾತ್ರ ಶೇ. 100 ಸೀಟು ಮಾತ್ರ ಭರ್ತಿಗೆ ಅವಕಾಶ ನೀಡಲಾಗಿದೆ. ನಂತರದಲ್ಲಿ ಶೇ. 50 ರಷ್ಟು ಸೀಟಿಗೆ ನಿರ್ಬಂಧ ಹಾಕಲಾಗಿದೆ.

ಆದರೆ ರಾಜಕೀಯ ಸಮಾವೇಶ ಇತ್ಯಾದಿಗಳಿಗೆ ಯಾವುದೇ ನಿರ್ಬಂಧವಿಲ್ಲ. ಮತ್ತೊಮ್ಮೆ ಸರ್ಕಾರದ ಜೊತೆ ನಾವು ಮಾತುಕತೆ ಮಾಡ್ತೇವೆ. ಸರ್ಕಾರದ ಮನವೊಲಿಕೆಗೆ ಯತ್ನಿಸ್ತೇವೆ. ಸರ್ಕಾರ ನಮ್ಮ ಬೇಡಿಕೆಗೆ ಒಪ್ಪಿಗೆ ಸೂಚಿಸ್ತೆ ಅನ್ನೋ ಭರವಸೆಯಿದೆ ಎಂದು ವಿಜಯ್ ತಿಳಿಸಿದ್ದಾರೆ.

ಸೆಲ್ಫೀ ಬೇಡವೆಂದು ಕೈ ಮುಗಿದ ವಿಜಿ:

ಹತ್ತಿರ ಬಂದು ಸೆಲ್ಫೀ ತಗೋಬೇಡಿ ಎಂದು ಚಿತ್ರನಟ ದುನಿಯಾ ವಿಜಯ್ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ. ನಾನು ಹೋದಲ್ಲೆಲ್ಲ ಜನ ಮುಗಿಬೀಳುತ್ತಿದ್ದಾರೆ. ಅಭಿಮಾನದಿಂದ ಸೆಲ್ಫಿ ತೆಗೆದುಕೊಳ್ಳಲು ಮುಂದಾಗುತ್ತಿದ್ದಾರೆ. ಅವರ ಅಭಿಮಾನಕ್ಕೆ ಧನ್ಯವಾದಗಳು. ಆದರೆ ಇದರಿಂದ ಎಲ್ಲರಿಗೂ ತೊಂದರೆಯಾಗಲಿದೆ.

ಇದನ್ನೂ ಓದಿ: ಸಿದ್ದರಾಮಯ್ಯ ಹೇಳಿದ ತಕ್ಷಣ ವೇದಾಂತ ಅಲ್ಲ: ಸಿಡಿ ಪ್ರಕರಣದ ಬಗ್ಗೆ ಸಚಿವ ಬಿ.ಸಿ. ಪಾಟೀಲ್ ಹೇಳಿದ್ದೇನು? 

ಚಿತ್ರನಟರಿಂದಲೇ ಹೆಚ್ಚು ಕೊರೋನಾ ವ್ಯಾಪಕಗೊಳ್ಳುತ್ತಿದೆ ಅಂತ ಸರ್ಕಾರ ಹೇಳುತ್ತಿದೆ. ಹೀಗಾಗಿ ಅಭಿಮಾನಿಗಳು ಅರ್ಥಮಾಡಿಕೊಳ್ಳಿ. ಕೈ ಮುಗಿದು ಕೇಳಿಕೊಳ್ಳುತ್ತೇನೆ ಹತ್ತಿರಕ್ಕೆ ಬಂದು ಸೆಲ್ಫಿ ತಗೋಬೇಡಿ. ದೂರದಿಂದಲೇ ಫೋಟೊ ತೆಗೆಸಿಕೊಂಡು ಸಹಕರಿಸಿ ಎಂದುಹುಬ್ಬಳ್ಳಿಯಲ್ಲಿ ದುನಿಯಾ ವಿಜಿ ಮನವಿ ಮಾಡಿದರು. ಕೊರೋನಾ ಎರಡನೇ ಅಲೆ ಅಬ್ಬರದ ಹಿನ್ನೆಲೆಯಲ್ಲಿ ವಿಜಿ ಮನವಿ ಮಾಡಿದ್ದಾರೆ.

ಸರ್ಕಾರದ ನಿರ್ಧಾರಕ್ಕೆ ಧನಂಜಯ್ ವಿರೋಧ:

ಸರ್ಕಾರದಿಂದ ಥಿಯೇಟರ್ ಗಳಲ್ಲಿ ಶೇ. 50 ರಷ್ಟು ಆಸನಗಳಿಗೆ ನಿರ್ಬಂಧಿಸಿರೊ ನಿರ್ಧಾರವನ್ನು ಮರು ಪರಿಶೀಲಿಸುವಂತೆ ಚಿತ್ರನಟ ಡಾಲಿ ಧನಂಜಯ್ ಆಗ್ರಹಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಸರ್ಕಾರದ ನಿರ್ಧಾರದಿಂದ ಚಿತ್ರೋದ್ಯಮದ ಮೇಲೆ ದೊಡ್ಡ ಹೊಡೆತ ಬೀಳಲಿದೆ. ನಮ್ಮನ್ನೆ ನಂಬಿ ನಿರ್ಮಾಪಕರು ಬಂಡವಾಳ ಹೂಡಿರುತ್ತಾರೆ. ಸರ್ಕಾರದ ನಿರ್ಧಾರದಿಂದ ನಷ್ಟ ಅನುಭವಿಸಬೇಕಾಗುತ್ತೆ. ಕೂಡಲೇ ಸರ್ಕಾರ ತನ್ನ ನಿರ್ಧಾರ ಮರುಪರಿಶೀಲಿಸಬೇಕೆಂದು ಡಾಲಿ ಧನಂಜಯ್ ಆಗ್ರಹಿಸಿದ್ದಾರೆ.

(ವರದಿ - ಶಿವರಾಮ ಅಸುಂಡಿ)
Published by:MAshok Kumar
First published: