ಸ್ನಾನದ ಕೋಣೆಯಲ್ಲಿ ಇದ್ದಕ್ಕಿದಂತೆ ಕುಸಿದು ಬಿದ್ದ ಹಿರಿಯ ನಟ ದೊಡ್ಡಣ್ಣ

news18
Updated:September 4, 2018, 3:26 PM IST
ಸ್ನಾನದ ಕೋಣೆಯಲ್ಲಿ ಇದ್ದಕ್ಕಿದಂತೆ ಕುಸಿದು ಬಿದ್ದ ಹಿರಿಯ ನಟ ದೊಡ್ಡಣ್ಣ
news18
Updated: September 4, 2018, 3:26 PM IST
ನ್ಯೂಸ್​ 18 ಕನ್ನಡ 

ಹಿರಿಯ ನಟ ದೊಡ್ಡಣ್ಣ ಇಂದು ಬೆಳಿಗ್ಗೆ ಸ್ನಾನದ ಕೋಣೆಯಲ್ಲಿ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು ಹತ್ತಿರದ ಆಸ್ಪತ್ರೆಗೆ ಸೇರಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

ನಿನ್ನೆ (ಸೆ.8)ಯಷ್ಟೆ ರಾಯಚೂರಿನಲ್ಲಿರುವ ಸೂಗೂರೇಶ್ವರ ದೇವರ ದರ್ಶನಕ್ಕೆಂದು ದೊಡ್ಡಣ್ಣ ಕುಟುಂಬ ಸಮೇತರಾಗಿ ಬಂದಿದ್ದರು. ನಿನ್ನೆ ದೇವರ ದರ್ಶನ ಮಾಡಿದ ನಂತರ ಉಳಿದುಕೊಂಡಿದ್ದ ವಸತಿ ಗೃಹಕ್ಕೆ ತೆರಳಿದ್ದರು.ನಂತರ ಇಂದು ಬೆಳಿಗ್ಗೆ 6 ಗಂಟೆಗೆ ವಸತಿಗೃಹದಲ್ಲಿರುವ ಸ್ನಾನದ ಕೋಣೆಗೆ ಹೋದಾಗ ಅಲ್ಲಿ ಇದ್ದಕ್ಕಿದ್ಧಂತೆ ಕುಸಿದು ಬಿದ್ದಿದ್ದಾರೆ. ತಕ್ಷಣವೇ ಅವರನ್ನು ರಾಯಚೂರಿನ ಶಕ್ತಿನಗರದ ಆರ್​ಟಿಪಿಎಸ್ ಆಸ್ಪತ್ರೆಗೆ ದಾಖಲಿಸಲಾಯಿತು.

ಸದ್ಯ ಆಸ್ಪತ್ರೆಯಲ್ಲಿ ದೊಡ್ಡಣ್ಣ ಚಿಕಿತ್ಸೆ ಪಡೆಯುತ್ತಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯ ಡಾ.ರಮೇಶ ಜಗ್ಲಿ ತಿಳಿಸಿದ್ದಾರೆ. 

 
Loading...

 
First published:September 4, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ