Actor Doddanna: ಹಿರಿಯ ನಟ ದೊಡ್ಡಣ್ಣ ಕುರಿತ ಸುಳ್ಳು ಸುದ್ದಿ: ಸ್ಪಷ್ಟನೆ ನೀಡಲು ಅವರೇ ಬರಬೇಕಾಯಿತು 

ಇವತ್ತು ಬೆಳಗ್ಗೆಯಿಂದಲೇ ಸಾಮಾಜಿಕ ಜಾಲತಾಣಗಳಲ್ಲಿ ಹಿರಿಯ ನಟ ದೊಡ್ಡಣ್ಣ ಅವರ ಕುರಿತು ಸುಳ್ಳು ಸುದ್ದಿ ಹಬ್ಬಿತ್ತು. ನಟ ದೊಡ್ಡಣ್ಣ ಇನ್ನಿಲ್ಲ ಎಂಬಂತೆ ಬಿಂಬಿಸಿ ಸೋಷಿಯಲ್ ಮೀಡಿಯಾದಲ್ಲಿ ಅವರ ಫೋಟೋ ಶೇರ್ ಮಾಡಲಾಗಿತ್ತು. ಈ ಫೇಕ್ ಸುದ್ದಿ ಸಂಬಂಧ ದೊಡ್ಡಣ್ಣ ಅವರೇ ಸ್ಪಷ್ಟನೆ ನೀಡಿದ್ದಾರೆ.

ನಟ ದೊಡ್ಡಣ್ಣ

ನಟ ದೊಡ್ಡಣ್ಣ

  • Share this:
ಸಾಮಾಜಿಕ ಜಾಲತಾಣಗಳಿಂದ ಎಷ್ಟು ಉಪಯೋಗವಿದೆಯೋ ಅದಕ್ಕಿಂತ ಹೆಚ್ಚು ದುರುಪಯೋಗಗಳೂ ಇವೆ. ಅದಕ್ಕೆ ಉತ್ತಮ ಉದಾಹರಣೆ ಅಂದರೆ ಸುಳ್ಳು ಸುದ್ದಿಗಳು. ಸುಳ್ಳು ಪೋಸ್ಟ್​ಗಳನ್ನು ಯಾರೋ ಫೇಕ್ ಅಕೌಟ್ ಸೃಷ್ಟಿಸಿ ಪೋಸ್ಟ್ ಮಾಡಿದರೆ, ಅದು ನೂರಾರು, ಸಾವಿರಾರು ಬಾರಿ ಶೇರ್ ಆಗಿ ಲಕ್ಷಾಂತರ ಜನರನ್ನು ತಲುಪಿ, ಅದೇ ನಿಜವೇನೋ ಎನ್ನುವಷ್ಟರ ಮಟ್ಟಿಗೆ ಜನರನ್ನು ತಲುಪಿರುತ್ತದೆ. ಅಂತಹ ಹಲವಾರು ನಿದರ್ಶನಗಳು ನಮ್ಮ ಕಣ್ಣ ಮುಂದಿವೆ. ಅದರಲ್ಲಂತೂ ಹೆಚ್ಚಾಗಿ ರಾಜಕಾರಿಣಿಗಳು ಹಾಗೂ ಸೆಲೆಬ್ರಿಟಿಗಳು ಸಾವಿಗೀಡಾಗಿದ್ದಾರೆ ಎಂಬ ಸುಳ್ಳು ಸುದ್ದಿಗಳಂತೂ ಆಗೊಮ್ಮೆ ಈಗೊಮ್ಮೆ ಗೊಂದಲ ಸೃಷ್ಟಿಸುತ್ತಲೇ ಇರುತ್ತವೆ. ಅಂತಹ ಫೇಕ್ ಸುದ್ದಿಗಳಿಗೆ ಇಂದು ಸ್ಯಾಂಡಲ್‌ವುಡ್ ಹಿರಿಯ ನಟ ದೊಡ್ಡಣ್ಣ ಬಲಪಶು ಆಗಿದ್ದಾರೆ.

ಹೌದು, ಇವತ್ತು ಬೆಳಗ್ಗೆಯಿಂದಲೇ ಸಾಮಾಜಿಕ ಜಾಲತಾಣಗಳಲ್ಲಿ ಹಿರಿಯ ನಟ ದೊಡ್ಡಣ್ಣ ಅವರ ಕುರಿತು ಸುಳ್ಳು ಸುದ್ದಿ ಹಬ್ಬಿತ್ತು. ನಟ ದೊಡ್ಡಣ್ಣ ಇನ್ನಿಲ್ಲ ಎಂಬಂತೆ ಬಿಂಬಿಸಿ ಸೋಷಿಯಲ್ ಮೀಡಿಯಾದಲ್ಲಿ ಅವರ ಫೋಟೋ ಶೇರ್ ಮಾಡಲಾಗಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಈ ಫೇಕ್ ಪೋಸ್ಟ್ ವೈರಲ್ ಆಗಲು ಹೆಚ್ಚು ಸಮಯ ಬೇಕಾಗಲಿಲ್ಲ. ಕೊನೆಗೆ ಖುದ್ದು ದೊಡ್ಡಣ್ಣ ಅವರಿಗೆ ಚಿತ್ರರಂಗದ ಆಪ್ತರು, ಮಾಧ್ಯಮದವರು, ಸಂಬಂಧಿಕರು, ಗೆಳೆಯರು ಹೀಗೆ ನೂರಾರು ಕರೆಗಳು ಬರತೊಡಗಿದವು. ಎಲ್ಲರ ಕರೆಗಳಿಗೆ ಉತ್ತರಿಸಿ ಬೇಸತ್ತ ಅವರು ತಾವೇ ಒಂದು ವಿಡಿಯೋ ಮಾಡಿ ಹರಿಬಿಟ್ಟಿದ್ದಾರೆ. ಅದರಲ್ಲಿ ಫೇಕ್ ಸುದ್ದಿ ಸಂಬಂಧ ಸ್ಪಷ್ಟನೆ ನೀಡಿದ್ದಾರೆ.






`ಇವತ್ತು ಬೆಳಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಯಾರೋ ಕಿಡಿಗೇಡಿಗಳು ನನ್ನ ಫೋಟೋ ಹಾಕಿ ದೊಡ್ಡಣ್ಣ ನಿಧನರಾಗಿದ್ದಾರೆ ಎಂಬ ರೀತಿಯಲ್ಲಿ RIP ಎಂದು ಹಾಕಿದ್ದಾರೆ. ಹಾಗಾಗಿ ನನಗೆ ಟಿವಿ, ಮಾಧ್ಯಮ, ಅಭಿಮಾನಿಗಳು ಹೀಗೆ ಎಲ್ಲರಿಂದ ನೂರಾರು ಕರೆಗಳು ಬರುತ್ತಿವೆ. ಎಲ್ಲರಿಗೂ ಹೇಳೋದಕ್ಕೆ ಇಷ್ಟಪಡುತ್ತೇನೆ, ನಾನು ಮನೆಯಲ್ಲೇ ಇದ್ದೇನೆ, ಆರೋಗ್ಯವಾಗಿದ್ದೀನಿ, ಆರಾಮಾಗಿದ್ದೀನಿ. ಯಾರೂ ಭಯ ಪಡುವಂಥದ್ದೇನೂ ಇಲ್ಲ. ಕನ್ನಡ ನಾಡಿನ ಎಲ್ಲ ತಂದೆ ತಾಯಂದಿರ ಆಶೀರ್ವಾದ ನನ್ನ ಮೇಲೆ ಇರುವವರೆಗೂ ನಿಮ್ಮ ದೊಡ್ಡಣ್ಣನಿಗೆ ಏನೂ ಆಗಲ್ಲ. ಆಯಸ್ಸು ಜಾಸ್ತಿ ಆಯಿತು, ಯಾವುದೋ ಒಂದು ಕಂಟಕ ಬಗೆಹರಿಯಿತು ಅಂತ ನಾನು ಅಂದುಕೊಡಿಂದ್ದೇನೆ. ಈ ಮೂಲಕ ನಾನು ಆರೋಗ್ಯವಾಗಿದೀನಿ ಅಂತ ಮತ್ತೊಮ್ಮೆ, ಮಗದೊಮ್ಮೆ ಹೇಳಲು ಇಷ್ಟಪಡುತ್ತೇನೆ' ಎಂದು ವಿಡಿಯೋ ಮೂಲಕ ಹಿರಿಯ ನಟ ದೊಡ್ಡಣ್ಣ ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: Shama Sikander: ಚರ್ಮದ ಸುಕ್ಕು ತೆಗೆಸಿಕೊಂಡರೆ ಅದು ಪ್ಲಾಸ್ಟಿಕ್‌ ಸರ್ಜರಿಯಾಗೋದಿಲ್ಲ: ನಟಿ ಶಮಾ ಸಿಕಂದರ್

ಹಾಗಂತ ಈ ರೀತಿ ಕನ್ನಡ ತಾರೆಯರು ವಿಧಿವಶರಾದ ಬಗ್ಗೆ ಸೋಷಿಯಲ್ ಮೀಡಿಯಾಗಳಲ್ಲಿ ಕಿಡಿಗೇಡಿಗಳು ಸುಳ್ಳು ಸುದ್ದಿ ಹಬ್ಬಿಸಿರುವುದು ಇದೇ ಮೊದಲೇನಲ್ಲ. ಈ ಹಿಂದೆಯೂ ಹಿರಿಯ ನಟ, ನಿರ್ಮಾಪಕ ದ್ವಾರಕೀಶ್ ಹಾಗೂ ಹಿರಿಯ ನಟಿ ಲೀಲಾವತಿ ಅವರ ಕುರಿತೂ ಈ ರೀತಿಯ ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು.

ಇನ್ನು, ಬಾಲಿವುಡ್‌ನಲ್ಲಂತೂ ಪ್ರತಿ ವರ್ಷ ಸೆಲೆಬ್ರಿಟಿಗಳು ಸ್ಪಷ್ಟನೆ ನೀಡುತ್ತಲೇ ಇರುತ್ತಾರೆ. ಹಿರಿಯ ನಟ ದಿಲೀಪ್ ಕುಮಾರ್, ಗಾಯನ ಲೋಕದ ದಿಗ್ಗಜೆ ಲತಾ ಮಂಗೇಷ್ಕರ್, ಬಿಗ್‌ಬಿ ಅಮಿತಾಭ್ ಬಚ್ಚನ್, ಕತ್ರಿನಾ ಕೈಫ್, ಆಯುಷ್ಮಾನ್ ಖುರಾನಾ, ಸೂಪರ್‌ಸ್ಟಾರ್ ರಜಿನಿಕಾಂತ್, ಶಾರುಖ್ ಖಾನ್ ಕುರಿತೂ ಈ ಹಿಂದೆ ನಿಧನ ಹೊಂದಿದ್ದಾರೆ ಎಂದು ಸುಳ್ಳು ಸುದ್ದಿಗಳು ಹಬ್ಬಿದ್ದವು. ಇನ್ನು ಇತ್ತೀಚೆಗಷ್ಟೇ ಖ್ಯಾತ ಬಾಲಿವುಡ್ ಗಾಯಕ ಲಕ್ಕಿ ಅಲಿ ಕೂಡ ವಿಧಿವಶರಾಗಿದ್ದಾರೆ ಎಂದು ಫೇಕ್ ಪೋಸ್ಟ್​ಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದವು. ಲಕ್ಕಿ ಅಲಿ ಪುತ್ರಿ ನಫೀಸಾ ಅಲಿ ಖುದ್ದು ಅದೆಲ್ಲಾ ಸುಳ್ಳು ಎಂದು ಸ್ಪಷ್ಟತೆ ನೀಡಿದ್ದರು.
Published by:Anitha E
First published: