ಕಾಂತಾರ (Kantara) ಸಿನಿಮಾ ಮೂಲಕ ಕಮಾಲ್ ಮಾಡಿದ ರಿಷಬ್ ಶೆಟ್ಟಿ (Rishab Shetty) ಇದೀಗ ಪ್ಯಾನ್ ಇಂಡಿಯಾ ಸ್ಟಾರ್ (Pan India Star) ಆಗಿ ಮಿಂಚುತ್ತಿದ್ದಾರೆ. ಕನ್ನಡದಲ್ಲಿ ಮಾತ್ರವಲ್ಲ ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿಯಲ್ಲೂ ಕಾಂತಾರ ಸಿನಿಮಾ ಸೂಪರ್ ಹಿಟ್ ಮೂವಿಯಾಗಿದ್ದು, ಬಾಕ್ಸ್ ಆಫೀಸ್ನನ್ನು (Box office) ಕೊಳ್ಳೆ ಹೊಡೆದು ಇತಿಹಾಸ ನಿರ್ಮಿಸಿದೆ. ಕಾಂತಾರ ಸಿನಿಮಾವನ್ನು ನಿರ್ದೇಶಿಸಿ ನಟಿಸಿರುವ ರಿಷಬ್ ಶೆಟ್ಟಿ, ಇಡೀ ದೇಶವೇ ಕನ್ನಡ ಸಿನಿಮಾದತ್ತ ತಿರುಗಿ ನೋಡುವಂತೆ ಮಾಡಿದ್ದಾರೆ. ಕಾಂತಾರ ಸಿನಿಮಾ ಗುಂಗಿನಿಂದ ಜನರು ಇನ್ನು ಹೊರ ಬಂದಿಲ್ಲ. ಇದೀಗ ರಿಷಬ್ ಶೆಟ್ಟಿ ಫಿಲ್ಸ್ಮ್ ಹೊಸ ಪ್ರಾಜೆಕ್ಟ್ ಅನೌನ್ಸ್ ಮಾಡಿದೆ.
ರಿಷಬ್ ಶೆಟ್ಟಿ ಹೊಸ ಪ್ರಾಜೆಕ್ಟ್
ರಿಷಬ್ ಶೆಟ್ಟಿ ಫಿಲ್ಸ್ಮ್ ಹೊಸ ಪ್ರಾಜೆಕ್ಟ್ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಅಲೆಗಳು ಹೇಳಿದ ಕಥೆ ಯನ್ನು ಪ್ರಸ್ತುತ ಪಡಿಸುತ್ತಿದ್ದು, ಅತೀ ಶೀಘ್ರದಲ್ಲಿ ಯೂಟ್ಯೂಬ್ ತೀರಕ್ಕೆ ಅಪ್ಪಳಿಸಲಿದೆ ಎಂದು ತಿಳಿಸಿದ್ದಾರೆ.
ಇದು 'ಅಲೆಗಳು ಹೇಳಿದ ಕಥೆ'
ಅಲೆಗಳು ಹೇಳಿದ ಕಥೆ, ಈ ಟೈಟಲ್ ನೋಡಿದ್ರೆ ಇದು ಕರಾವಳಿ ಭಾಗದ ಕಥೆಯನ್ನೇ ಆಧರಿಸಿ ಸಿದ್ಧಪಡಿಸಲಾಗಿದೆ. ಕಾಂತಾರ ಕೂಡ ದಕ್ಷಿಣ ಕನ್ನಡದ ದೈವಾರಾಧನೆಯ ಕಥಾಹಂದರವನ್ನೇ ಒಳಗೊಂಡಿತ್ತು ಇದೀಗ ರಿಷಬ್ ಮತ್ತೆ ಕರಾವಳಿ ಭಾಗದ ಕಥೆಯನ್ನು ಹೇಳಲು ಹೊರಟಿದ್ದಾರೆ.
ಕಿರುಚಿತ್ರನಾ? ಸಿನಿಮಾನಾ? ವೆಬ್ ಸೀರೀಸಾ?
ಅಲೆಗಳು ಹೇಳಿದ ಕಥೆ ಬಗ್ಗೆ ಚಿತ್ರತಂಡ ಗುಟ್ಟು ಬಿಟ್ಟುಕೊಟ್ಟಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಹಂಚಿಕೊಂಡಿರುವ ಸಿನಿಮಾ ತಂಡ, ಇದು ಕಿರುಚಿತ್ರನಾ, ಸಿನಿಮಾನಾ ಅಥವಾ ವೆಬ್ ಸೀರೀಸಾ ಎನ್ನುವ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. ಅಲೆಗಳು ಹೇಳಿದ ಕಥೆ ನೇರವಾಗಿ ಯೂಟ್ಯೂಬ್ ಗೆ ಅಪ್ಪಳಿಸುತ್ತೆ ಎಂದು ಪೋಸ್ಟ್ನಲ್ಲಿ ಬರೆದಿದ್ದಾರೆ.
ರಿಷಬ್ ಶೆಟ್ಟಿ ಪ್ಯಾನ್ ಇಂಡಿಯಾ ಸ್ಟಾರ್
‘ರಿಷಬ್ ಶೆಟ್ಟಿ’… ಸದ್ಯ ಕರ್ನಾಟಕದಲ್ಲಿ ಅಷ್ಟೇ ಅಲ್ಲ, ಇಡೀ ಭಾರತದಲ್ಲಿ, ಅದರಲ್ಲೂ ಚಿತ್ರರಂಗದಲ್ಲಿ (Film Industry) ಗಟ್ಟಿಯಾಗಿ ಕೇಳಿ ಬರುತ್ತಿರುವ ಹೆಸರು. ರಿಷಬ್ ಶೆಟ್ಟಿ (Rishabh Shetty) ನಿರ್ದೇಶಕ, ನಿರ್ಮಾಪಕ, ಸಿನಿಮಾ ತೆರೆ ಹಿಂದಿನ ತಂತ್ರಜ್ಞನಷ್ಟೇ ಅಲ್ಲ ಅವರೊಳಗೊಬ್ಬ ‘ಹೀರೋ’ (Hero) ಇದ್ದಾನೆ ಎನ್ನುವುದು ಕನ್ನಡ ಸಿನಿ ರಸಿಕರಿಗೆ ಎಂದೋ ಗೊತ್ತಾಗಿತ್ತು. ಆದರೆ ಅವರೊಳಗೊಬ್ಬ ಅದ್ಭುತ ಕಲಾವಿದನಿದ್ದಾನೆ, ಆತ ಅಮೋಘವಾಗಿ ಅಭಿನಯಿಸಬಲ್ಲ ಎಂಬುದು ಇತ್ತೀಚಿಗಷ್ಟೇ ತೆರೆ ಕಂಡ ಅವರದ್ದೇ ನಟನೆ, ನಿರ್ದೇಶನದ ‘ಕಾಂತಾರ’ (Kantara) ಸಿನಿಮಾದಿಂದ ಪ್ರೂವ್ ಆಗಿದೆ.
ಹೌದು, ಕಾಂತಾರ ಸಿನಿಮಾ ಭಾರತೀಯ ಚಿತ್ರರಂಗದಲ್ಲಿ ಧೂಳೆಬ್ಬಿಸುತ್ತಿದೆ. ಬಹು ಬಜೆಟ್ನ, ಜನಪ್ರಿಯ ಹೀರೋಗಳ ಸಿನಿಮಾಗಿಂತ ಜಾಸ್ತಿಯೇ ಸೌಂಡು ಮಾಡ್ತಿದೆ. ‘ಕಾಂತಾರ’ವನ್ನು ಕಣ್ತುಂಬಿಕೊಂಡ ಪ್ರೇಕ್ಷಕರು ‘ಶಿವ’ನಾಗಿ (Shiva) ಅಭಿನಯಿಸಿದ ರಿಷಬ್ ಶೆಟ್ಟಿ ಎಂಬ ಕಲಾವಿದನಿಗೆ ತಲೆ ಬಾಗುತ್ತಿದ್ದಾರೆ. ಕಾಂತಾರದ ಸಕ್ಸಸ್ ಮೂಲಕ ‘ರಿಷಬ್’ ಎಂಬ ಹೊಸ ಹೆಸರು ಭಾರತೀಯ ಚಿತ್ರರಂಗದಲ್ಲಿ ಮಿನುಗುತ್ತಿದೆ.
ಡಾ. ರಾಜ್ಕುಮಾರ್, ಉಪ್ಪಿ ಸಿನಿಮಾಗಳಿಂದ ಸ್ಫೂರ್ತಿ
ರಿಷಬ್ ಶೆಟ್ಟಿಗೆ ಬಾಲ್ಯದಿಂದಲೂ ಡಾ. ರಾಜ್ಕುಮಾರ್ ಎಂದರೆ ಪ್ರೀತಿ, ಅಭಿಮಾನವಂತೆ. ಅವರ ಸಿನಿಮಾಗಳನ್ನು ನೋಡುತ್ತಲೇ ಬೆಳೆದವರಂತೆ. ಇನ್ನು ಕುಂದಾಪುರ ಮೂಲದವರೇ ಆಗಿರುವ ರಿಯಲ್ ಸ್ಟಾರ್ ಉಪೇಂದ್ರ ಅಂದ್ರೆ ಅಚ್ಚುಮೆಚ್ಚಂತೆ. ನಮ್ಮ ಊರಿನ ಜನ ಬೆಂಗಳೂರಿಗೆ ಹೋಗಿ ಸಾಧನೆ ಮಾಡಿದ್ದಾರೆ, ಅವರಂತೆ ನಾವೂ ಸಿನಿಮಾದಲ್ಲಿ ಏನಾದರೂ ಸಾಧಿಸಬೇಕು ಎನ್ನುವುದು ರಿಷಬ್ ಬಾಲ್ಯದ ಕನಸು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ