ಕನ್ನಡದಲ್ಲಿ ಪ್ಯಾನ್ (Pan India Film) ಇಂಡಿಯಾ ಕಲ್ಪನೆ ದೊಡ್ಡಮಟ್ಟದಲ್ಲಿಯೇ ಇದೆ. ಅದು ಚಾಲ್ತಿಯಲ್ಲೂ ಬಂದಿದೆ. ಕೆಜಿಎಫ್ ಸಿನಿಮಾ ಬಂದ್ಮೇಲೆ ಅದಕ್ಕೆ ಇನ್ನಷ್ಟು ಮತ್ತಷ್ಟು ಅನ್ನೋ ಹೈಪ್ ಬಂದಿದೆ. ದೊಡ್ಡ ಮಟ್ಟದಲ್ಲಿಯೇ ಈ ಹಿಂದೆ ಅನೇಕ ಕನ್ನಡ (Kannada Cinema) ಸಿನಿಮಾ ಬಂದಿವೆ. ಆದರೆ ಕೆಜಿಎಫ್ (KGF) ತೋರಿಸಿಕೊಟ್ಟ ಪ್ಯಾನ್ ಇಂಡಿಯಾ ದಾರಿ ಭಾರೀ ಪ್ರಭಾವ ಬೀರಿದೆ. ಅದೆಷ್ಟು ಅಂದ್ರೆ, ಒಂದ್ ಪ್ಯಾನ್ ಇಂಡಿಯಾ ಸಿನಿಮಾ ಮಾಡ್ಬೇಕ್ರಿ ಅನ್ನೋ ಮಟ್ಟಿಗೇನೆ ಈ ಮಾತು ಗಾಂಧಿನಗರದಲ್ಲಿ ಕೇಳಿ ಬರುತ್ತದೆ. Pan India Cinema ಅನ್ನೋದು ಕನ್ನಡದಲ್ಲಿ ಒಂದು ಟ್ರೆಂಡ್ ರೀತಿನೇ ಆದಂತಿದೆ. ಇದರ ಸುತ್ತ ಇಲ್ಲೊಂದು ವಿಶ್ಲೇಷನಾತ್ಮಕ ಸ್ಟೋರಿ ಇದೆ ಓದಿ.
ಪ್ಯಾನ್ ಇಂಡಿಯಾ ಕಲ್ಪನೆ ನಿಜಕ್ಕೂ ಮಾಯಾಮೃಗವೇ?
ವಿಕ್ರಾಂತ್ ರೋಣ ಕೂಡ ದೊಡ್ಡ ಮಟ್ಟದಲ್ಲಿಯೇ ತೆರೆಗೆ ಬಂದಿದೆ. ಅಷ್ಟೇ ಯಾಕೆ? ಉಪೇಂದ್ರ ಅವರ ಕಬ್ಜ ಕೂಡ ಪ್ಯಾನ್ ಇಂಡಿಯಾ ಮಟ್ಟದಲ್ಲಿಯೇ ರಿಲೀಸ್ಗೆ ಸಿದ್ದತೆ ಮಾಡಿಕೊಳ್ಳುತ್ತಿದೆ. ಆ ಹಿನ್ನೆಲೆಯಲ್ಲಿ ಇತ್ತೀಚಿಗೆ ಬಂದ ಬನಾರಸ್ ಕೂಡ ಎಲ್ಲ ಭಾಷೆಯಲ್ಲಿ ರಿಲೀಸ್ ಆಯಿತು.
ಪ್ಯಾನ್ ಇಂಡಿಯಾ ಅನ್ನೋದು ಅತಿ ದೊಡ್ಡ ಕನಸು. ದೊಡ್ಡ ಮಟ್ಟದಲ್ಲಿಯೇ ತಮ್ಮ ಚಿತ್ರ ಎಲ್ಲೆಡೆ ಹೋಗಬೇಕು ಅನ್ನೋದು ಒಳ್ಳೆ ಕನಸೇ ಆಗಿದೆ. ಆದರೆ ಅದು ಎಲ್ಲರಿಗೂ ಆಗೋದಿಲ್ಲ ಅನ್ನೋದು ಅಷ್ಟೇ ಸತ್ಯ.
ಕಾಂತಾರ ಪ್ಯಾನ್ ಇಂಡಿಯಾ ಸಿನಿಮಾ ಅಲ್ವಾ?
ಆದರೆ, ಕಂಟೆಂಟ್ ಗಟ್ಟಿ ಇದ್ರೆ, ಜನಕ್ಕೆ ಅದು ಇಷ್ಟ ಆದ್ರೆ ಮುಗಿತು ನೋಡಿ, ಅದು ಪ್ಯಾನ್ ಇಂಡಿಯಾ ಮಟ್ಟದಲ್ಲಿಯೇ ಹೋಗಿ ಬಿಡುತ್ತದೆ. ಇದಕ್ಕೆ ಒಳ್ಳೆ ಉದಾಹರಣೆ ಕಾಂತಾರವೇ ಆಗಿದೆ.
ಕಾಂತಾರ ಕೊಟ್ಟ ರಿಷಬ್ ಶೆಟ್ರ ಕಲ್ಪನೆಯಲ್ಲಿ ಪ್ಯಾನ್ ಇಂಡಿಯಾ ಬೇರೇನೆ ಇದೆ. ಇವರ ಕಲ್ಪನೆಯಲ್ಲಿ ಪ್ಯಾನ್ ಇಂಡಿಯಾ ಅನ್ನೋದು ಭಾರೀ ದುಡ್ಡು ಹಾಕಿ ಸಿನಿಮಾ ಮಾಡೋದು ಅಲ್ವೇ ಅಲ್ಲ.
ಕಥೆ ಬೇಡುವಷ್ಟು ದುಡ್ಡು ಹಾಕಬೇಕು- ರಿಷಬ್ ಶೆಟ್ಟಿ
ಕಥೆ ಬೇಡೋವಷ್ಟು ದುಡ್ಡು ಹಾಕಿ ಸಿನಿಮಾ ಮಾಡ್ಬೇಕು. ಅದನ್ನ ಗೆಲ್ಲಿಸಬೇಕು. ಭಾರೀ ದುಡ್ಡು ಹಾಕಿ ಸಿನಿಮಾ ಗೆಲ್ಲಿಸುತ್ತೇನೆ ಅನ್ನೋದರಲ್ಲಿ ನಂಬಿಕೇನೆ ಇಲ್ಲ ಅನ್ನೋದು ರಿಷಬ್ ಶೆಟ್ರ ಮಾತಾಗಿದೆ.
ಗೋವಾ ಫಿಲ್ಮಂ ಫೆಸ್ಟಿವಲ್ನಲ್ಲಿ ರಿಷಬ್ ಮಾತು
ಪ್ಯಾನ್ ಇಂಡಿಯಾ ಅನ್ನೋದಕ್ಕೆ ಪ್ರತಿ ನಿರ್ದೇಶಕರಲ್ಲೂ ಪ್ರತಿ ನಿರ್ಮಾಪಕರಲ್ಲೂ ಒಂದೊಂದು ಕಲ್ಪನೆ ಇದೆ. ಅದೇ ರೀತಿ ನಟ-ನಿರ್ದೇಶಕ ರಿಷಬ್ ಶೆಟ್ಟಿ ಅವರಿಗೂ ಪ್ಯಾನ್ ಇಂಡಿಯಾ ಸಿನಿಮಾ ಅನ್ನೋದ್ರ ಬಗ್ಗೆ ಅವರದೇ ಒಂದು ಕಲ್ಪನೆ ಇದೆ.
ಪ್ಯಾನ್ ಇಂಡಿಯಾ ಅನ್ನೋದು ನನ್ನ ಕಲ್ಪನೆಯಲ್ಲಿ ವಿಭಿನ್ನ
ಅದನ್ನ ಗೋವಾ ಇಂಟರ್ ನ್ಯಾಷನಲ್ ಫಿಲ್ಮಂ ಫೆಸ್ಟಿವಲ್ ನಲ್ಲಿ ಹೇಳಿಕೊಂಡಿದ್ದಾರೆ. ಇಲ್ಲಿ ನಡೆದ ಸಂವಾದದಲ್ಲಿ ರಿಷಬ್ ತಮ್ಮ ಪ್ಯಾನ್ ಇಂಡಿಯಾ ಕಲ್ಪನೆ ಬಗ್ಗೆ ಹೇಳಿದ್ದಾರೆ.
ಪ್ಯಾನ್ ಇಂಡಿಯಾ ಅನ್ನೋದಕ್ಕೆ ನಿರ್ದಿಷ್ಟ ಸೂತ್ರ ಇಲ್ಲ. ಒಂದು ಸಿನಿಮಾ ಎಲ್ಲ ಭಾಷೆಯನ್ನ ಮೀರಿ ಜನರಿಗೆ ತಲುಪಿದ್ರೆ, ಅದುವೇ ಪ್ಯಾನ್ ಇಂಡಿಯಾ ಸಿನಿಮಾ ಎಂದು ರಿಷಬ್ ಪ್ಯಾನ್ ಇಂಡಿಯಾ ಬಗ್ಗೆ ಹೇಳಿಕೊಂಡಿದ್ದಾರೆ.
ನನಗೆ ಸ್ಥಳೀಯ ಕಥೆಗಳ ಬಗ್ಗೆ ನಂಬಿಕೆ ಜಾಸ್ತಿ
ರಿಷಬ್ ಶೆಟ್ಟಿ ಅವರಿಗೆ ಸ್ಥಳೀಯ ಕಥೆಗಳ ಬಗ್ಗೆ ನಂಬಿಕೆ ಜಾಸ್ತಿ ಇದೆ. ಕಾಂತಾರದಲ್ಲಿ ಇರೋ ಬಹುತೇಕ ಪಾತ್ರಗಳು ಬಹುತೇಕ ಆಚರಣೆಗಳು ರಿಷಬ್ ಬಾಲ್ಯದಲ್ಲಿ ಕಂಡಿರೋ ವಿಷಯಗಳೇ ಆಗಿವೆ. ಅವುಗಳನ್ನ ಸ್ವಲ್ಪ ಪಟ್ಟಿಗೆ ಕಾಂತಾರದಲ್ಲಿ ತಂದಿದ್ದಾರೆ.
ಕಾಂತಾರ ಬಾಲಿವುಡ್ ನಲ್ಲೂ ಸಕ್ಸಸ್ ಆಗಿದೆ. ಈ ಹಿನ್ನೆಲೆಯಲ್ಲಿ ಇಲ್ಲಿಗೆ ಹೋದಾಗಲೇ ರಿಷಬ್ ಇದನ್ನೇ ಹೇಳಿದ್ದರು. ನಾನು ರಿಜಿನಲ್ ಕಂಟೆಂಟ್ ತಂದಿದ್ದೇನೆ. ಅದನ್ನ ಬಾಲಿವುಡ್ ನ ಜನ ಒಪ್ಪಿದ್ದಾರೆ ಅನ್ನೋದು ಅತಿ ದೊಡ್ಡ ಖುಷಿ ಅಂತಲೇ ಹೇಳಿಕೊಂಡಿದ್ದರು.
ಇದನ್ನೂ ಓದಿ: Vaishnavi Gowda: ಯಾರು ವೈಷ್ಣವಿ ಗೌಡ? ಒಂದು ಫೋಟೋ ಮಾಡಿದ ಅವಾಂತರವಿದು
ಅದೇ ವಿಷಯವನ್ನ ಗೋವಾ ಫಿಲ್ಮ್ ಫೆಸ್ಟಿವಲ್ ಸಂವಾದದಲ್ಲೂ ರಿಷಬ್ ಹೇಳಿಕೊಂಡಿದ್ದಾರೆ. ಇನ್ನೂ ರಿಷಬ್ ತಮ್ಮ ಈ ಕಾಂತಾರದ ಮೂಲಕ ತಮ್ಮೊಳಗೆ ಇದ್ದ ಆ್ಯಂಗ್ರಿ ಯಂಗ್ ಮ್ಯಾನ್ ಅನ್ನ ಕೂಡ ತೋರಿಸಿದ್ದಾರೆ.
ಒಟ್ಟಾರೆ, ಕಾಂತಾರ ಸಿನಿಮಾ ಅತಿ ದೊಡ್ಡ ಸಕ್ಸಸ್ ಅನ್ನೇ ರಿಷಬ್ ಶೆಟ್ಟಿಗೆ ಕೊಟ್ಟಿದೆ. ಜೊತೆಗೆ ಸ್ಥಳೀಯ ಕಂಟೆಂಟ್ಗಳು ಗೆಲ್ಲುತ್ತವೆ ಅನ್ನೋ ನಂಬಿಕೆಯನ್ನೂ ಬಲವಾಗಿಸಿವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ