ಮಾಜಿ ಗರ್ಲ್​ಫ್ರೆಂಡ್​ Bipasha Basu ಜತೆಗಿನ ಬ್ರೇಕಪ್​ ಬಗ್ಗೆ ದ ಎಂಪೈರ್​ ನಟ Dino Morea ಹೇಳಿದ್ದು ಹೀಗೆ..!

ದ ಎಂಪೈರ್​ ನಟ ಡಿನೊ ಮೊರಿಯಾ ಅವರು ಇತ್ತೀಚೆಗಷ್ಟೆ ಒಟಿಟಿ ಮೂಲಕ ರಿಲೀಸ್ ಆಗಿರು ದ ಎಂಪೈರ್​ ನಿಂದಾಗಿ ಸಖತ್ ಸುದ್ದಿಯಲ್ಲಿದ್ದಾರೆ. ಈ ನಟ ಇತ್ತೀಚೆಗೆ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ್ದು, ಅದರಲ್ಲಿ ತಮ್ಮ ಮಾಜಿ ಪ್ರೇಯಸಿ ಬಿಪಾಶಾ  ಬಸು ಅವರ ಬಗ್ಗೆ ಹಾಗೂ ತಮ್ಮ ಬ್ರೇಕಪ್​ ಕುರಿತಾಗಿ ಮಾತನಾಡಿದ್ದಾರೆ. 

ಬಿಪಾಶಾ ಬಸು ಹಾಗೂ ಡಿನೊ ಮೊರಿಯಾ

ಬಿಪಾಶಾ ಬಸು ಹಾಗೂ ಡಿನೊ ಮೊರಿಯಾ

  • Share this:
ಸಿನಿರಂಗದಲ್ಲಿ ಪ್ರೀತಿ-ಪ್ರೇಮ-ಬ್ರೇಕಪ್​ ಇವೆಲ್ಲ ಕಾಮನ್​. ಕೆಲವರು ಪ್ರೀತಿಸಿದವರ ಜೊತೆ ಮದುವೆಯಾಗಿ ಜೀವನ ಕಳೆಯುತ್ತಾರೆ. ಮತ್ತೆ ಕೆಲವರು ಕಾರಣಾಂತರಗಳಿಂದ ದೂರಾಗುತ್ತಾರೆ. ಇನ್ನು ಬಿಪಾಶಾ ಬಸು (Bipasha Basu ) ಅವರ ಲವ್​ ಸ್ಟೋರಿ ಹಾಗೂ ಬ್ರೇಕಪ್​ಗಳ ಬಗ್ಗೆ ಪ್ರತ್ಯೇಕವಾಗಿ ಹೇಳಬೇಕಿಲ್ಲ. ವೃತ್ತಿ ಜೀವನದ ಆರಂಭದ ದಿನಗಳಲ್ಲಿ ನಟ ಡಿನೊ ಮೊರಿಯಾ  (Dino Morea) ಮತ್ತು ಬಾಲಿವುಡ್​ನ ಕೃಷ್ಣ ಸುಂದರಿ ನಟಿ ಬಿಪಾಶಾ ಬಸು ಪ್ರೇಮಿಗಳಾಗಿದ್ದರು (Love Story) ಎಂಬುವುದು ಈಗ ಹಳೆಯ ಸಂಗತಿ. ಡಿನೊ ಬಾಲಿವುಡ್‍ನಲ್ಲಿ (Bollywood) ಅಂತಹ ಯಶಸ್ಸು ಕಾಣಲು ಸಾಧ್ಯವಾಗಲಿಲ್ಲವಾದರೂ, ನೀಳಕಾಲಿನ ಕೃಷ್ಣ ಸುಂದರಿ ಬಿಪಾಶಾ ತುಂಬಾ ಸಮಯ ಬಾಲಿವುಡ್‍ನಲ್ಲಿ ಮಿಂಚಿದರು. ಈಗಲೂ ಬಿಪಾಶಾ ಆಗೊಮ್ಮೆ ಈಗೊಮ್ಮೆ ಸುದ್ದಿಯಲ್ಲಿರುತ್ತಾರೆ. ಅದೇನೇ ಇದ್ದರೂ, ಬಿಪಾಶಾ ಬಸು ಅವರ ಬ್ರೇಕಪ್​ ಸುದ್ದಿ ಮಾತ್ರ ಆಗಾಗ ಸದ್ದು ಮಾಡುತ್ತಲೇ ಇರುತ್ತದೆ. 

ದ ಎಂಪೈರ್​ ನಟ ಡಿನೊ ಮೊರಿಯಾ ಅವರು ಇತ್ತೀಚೆಗಷ್ಟೆ ಒಟಿಟಿ ಮೂಲಕ ರಿಲೀಸ್ ಆಗಿರು ದ ಎಂಪೈರ್​ ನಿಂದಾಗಿ ಸಖತ್ ಸುದ್ದಿಯಲ್ಲಿದ್ದಾರೆ. ಈ ನಟ ಇತ್ತೀಚೆಗೆ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ್ದು, ಅದರಲ್ಲಿ ತಮ್ಮ ಮಾಜಿ ಪ್ರೇಯಸಿ ಬಿಪಾಶಾ  ಬಸು ಅವರ ಬಗ್ಗೆ ಹಾಗೂ ತಮ್ಮ ಬ್ರೇಕಪ್​ ಕುರಿತಾಗಿ ಮಾತನಾಡಿದ್ದಾರೆ.Bipasha Basu, Dino Morea, Karan Singh Grover, ಬಿಪಾಶಾ ಬಸು, ಡಿನೋ ಮೊರಿಯಾ, ಕರಣ್ ಸಿಂಗ್ ಗ್ರೋವರ್, Dino Morea and Bipasha Breakup, Dino Morea and Bipasha love story, ಬಿಪಾಶಾ ಬಸು ಬಗ್ಗೆ ಮಾಜಿ ಪ್ರಿಯತಮ ಡಿನೊ ಮಾರಿಯೋ ಹೇಳಿದ್ದೇನು ಹೀಗೆ, ಬಿಪಾಶಾ-ಡಿನೋ ಮಾರಿಯೋ ಲವ್​ ಸ್ಟೋರಿ, Actor Dino Morea talked about his ex girlfriend actress Bipasha Basu
ಬಿಪಾಶಾ ಬಸು ಹಾಗೂ ಡಿನೊ ಮೊರಿಯಾ


ಸಂದರ್ಶನದಲ್ಲಿ ಮಾತನಾಡಿರುವ ಡಿನೊ ತಾನು ಮತ್ತು ಬಿಪಾಶಾ ಬಸು ಈಗಲೂ ಒಬ್ಬರನ್ನೊಬ್ಬರು ಗೌರವಿಸುತ್ತೇವೆ ಎಂದು ಹೇಳಿಕೊಂಡಿದ್ದಾರೆ. ತನಗೇನೂ ಮುನಿಸು, ಬಿಗುಮಾನ ಇಲ್ಲ ಎನ್ನುತ್ತಾರೆ ಡಿನೋ ಮೋರಿಯಾ.

ಇದನ್ನೂ ಓದಿ: Drugs Case ಅನುಶ್ರೀಗೆ ಬಿಗ್ ರಿಲೀಫ್: ಆರೋಪಿಗಳ ಪಟ್ಟಿಯಿಂದ ಹೆಸರು ಕೈ ಬಿಟ್ಟ ಸಿಸಿಬಿ ಪೊಲೀಸರು..?

ಆಗಿನ ಕಾಲಕ್ಕೆ ಹಾಟ್​ ಕಪಲ್​ ಎನಿಸಿಕೊಂಡಿದ್ದ ಡಿನೊ ಮೊರಿಯಾ ಹಾಗೂ ಬಿಪಾಶಾ ಬಸು 1996 ರಿಂದ 2002ರವರೆಗೆ ಪರಸ್ಪರ ಡೇಟಿಂಗ್ ಮಾಡುತ್ತಿದ್ದರು. 2002ರಲ್ಲಿ ಅವರಿಬ್ಬರೂ ರಾಝ್​ ಸಿನಿಮಾದಲ್ಲಿ ನಟಿಸುವಾಗಲೂ ಇವರ ನಡುವೆ ಪ್ರೇಮ ಸಂಬಂಧ ಇತ್ತು. ಆದರೆ, 2002ರಲ್ಲಿ ಬಿಡುಗಡೆಯಾಗಿದ್ದ ಗುನಾ ಚಿತ್ರದ ಶೂಟಿಂಗ್ ಸಂದರ್ಭದಲ್ಲಿ ಅವರಿಬ್ಬರ ಆ ಪ್ರೇಮ ಸಂಬಂಧ ಮುರಿದು ಬಿದ್ದಿತ್ತು.

“ನನ್ನ ಮತ್ತು ಬಿಪಾಶಾ ನಡುವೆ ರಾಝ್‌, ಗುನಾ ಚಿತ್ರದವರೆಗೆ ಇದ್ದ ಸಮೀಕರಣ ಈಗಲೂ ಬದಲಾಗಿಲ್ಲ. ಅದು ಯಾವತ್ತೂ ಬದಲಾಗಿತ್ತು ಎಂದು ನನಗೆ ಅನಿಸಿಲ್ಲ. ಹೌದು, ನಾವು ರಾಝ್‌ ಚಿತ್ರದ ಶೂಟಿಂಗ್ ಮಾಡುತ್ತಿದ್ದಾಗ ಡೇಟಿಂಗ್ ಮಾಡುತ್ತಿದ್ದೆವು. ಗುನಾ ಚಿತ್ರದ ಸಂದರ್ಭದಲ್ಲಿ ಡೇಟಿಂಗ್ ಮಾಡುತ್ತಿರಲಿಲ್ಲ. ಆದರೆ ನನಗನಿಸುವುದೇನೆಂದರೆ, ನಾವಿಬ್ಬರು ವೃತ್ತಿಪರ ಕಲಾವಿದರು ಮತ್ತು ಸೆಟ್‍ನಲ್ಲಿ ಹಾಗೂ ಚಿತ್ರರಂಗದಲ್ಲಿ ವೃತ್ತಿಪರರಾಗಿಯೇ ಇರಲು ಬಯಸುತ್ತೇವೆ” ಎಂದು ಡಿನೊ ಮೊರಿಯಾ ಹೇಳಿದ್ದಾರೆ.

ಬ್ರೇಕಪ್​ ನಂತರದ ದಿನಗಳ ಬಗ್ಗೆ ಡಿನೊ ಮೊರಿಯಾ ಹೇಳಿದ್ದು ಹೀಗೆ..!

“ನಾವಿಬ್ಬರು ನಮ್ಮ ವೈಯಕ್ತಿಕ ಜೀವನವನ್ನು ಕೆಲಸದ ನಡುವೆ ಬರಲು ಬಿಟ್ಟಿಲ್ಲ. ನಾವು ಅದನ್ನು ನಮ್ಮ ವೃತ್ತಿಯಿಂದ ಹೊರಗೆ ಇಟ್ಟಿದ್ದೇವೆ. ನಾವಿಬ್ಬರೂ ಎಲ್ಲವನ್ನು ವೃತ್ತಿಪರವಾಗಿಯೇ ನಿರ್ವಹಿಸಿದ್ದೇವೆ ಎಂದು ನನಗನಿಸುತ್ತದೆ. ಆಕೆಯೊಂದಿಗೆ ನನ್ನ ಸ್ನೇಹ ಸಂಬಂಧ ಹಾಗೆಯೇ ಇದೆ. ಅಂದರೆ, ನಾವಿಬ್ಬರೂ ಒಬ್ಬರನ್ನೊಬ್ಬರು ಗೌರವಿಸುತ್ತೇವೆ ಮತ್ತು ಈಗಲೂ ಸ್ನೇಹದಿಂದ, ಅತ್ಯಂತ ಸ್ನೇಹದಿಂದ ಇದ್ದೇವೆ. ವಾಸ್ತವದಲ್ಲಿ ನಾವಿಬ್ಬರು ಹೆಚ್ಚು ಮಾತನಾಡುವುದಿಲ್ಲ, ಆದರೆ ಆಗೊಮ್ಮೆ ಈಗೊಮ್ಮೆ ಮಾತನಾಡುತ್ತೇವೆ. ನಮ್ಮ ನಡುವೆ ಒಳ್ಳೆಯ ನೆನಪುಗಳಿವೆ, ಹಾಗಾಗಿ ಸಮೀಕರಣವೂ ಚೆನ್ನಾಗಿದೆ” ಎನ್ನುತ್ತಾರೆ ಡಿನೊ.

ಇದನ್ನೂ ಓದಿ: RIP Aruna Bhatia: ಅಕ್ಷಯ್​ ಕುಮಾರ್​ ತಾಯಿ ಅರುಣಾ ಭಾಟಿಯಾ ಇನ್ನಿಲ್ಲ

ಡಿಮೊ ಮೊರಿಯಾ ಮತ್ತು ಬಿಪಾಶಾ ಬಸು ತಮ್ಮ ಪ್ರೇಮ ಸಂಬಂಧವನ್ನು ಮುರಿದುಕೊಂಡ ನಂತರವೂ, ಒಳ್ಳೆಯ ಸ್ನೇಹಿತರಾಗಿ ಉಳಿದಿದ್ದಾರೆ. ಗುನಾ ಸಿನಿಮಾದ ನಂತರವೂ, ರಕ್ತ್, ಇಶ್ಕ್ ಹೈ ತುಮ್ಸೆ ಮತ್ತು ಚೆಹರಾ ಮುಂತಾದ ಸಿನಿಮಾಗಳಲ್ಲಿ ಜೊತೆಯಾಗಿ ನಟಿಸಿದ್ದರು. ಬಿಪಾಶಾ ಬಸು ಕೊನೆಯದಾಗಿ 2015ರಲ್ಲಿ ಅಲೋನ್ ಎಂಬ ಸಿನಿಮಾದಲ್ಲಿ ನಟಿಸಿದ್ದರು. ಅದೇ ಚಿತ್ರದಲ್ಲಿ ಅವರ ಜೊತೆ ನಟಿಸಿದ್ದ ಕರಣ್ ಸಿಂಗ್ ಗ್ರೋವರನ್ನು ಬಿಪಾಶಾ ಮದುವೆಯಾದರು. ಅಲೋನ್ ಚಿತ್ರದಲ್ಲಿ ಡಿನೊ ಮೊರಿಯಾ ಕೂಡ ವಿಶೇಷ ಪಾತ್ರದಲ್ಲಿ ನಟಿಸಿದ್ದರು.
Published by:Anitha E
First published: