Danish Sait: ಖಡಕ್ ಪೊಲೀಸ್ ಆಫೀಸರ್ ಪಾತ್ರದಲ್ಲಿ ಡ್ಯಾನಿಶ್ ಸೇಠ್, ಮಾರ್ಚ್ 4ಕ್ಕೆ ತೆರೆ ಮೇಲೆ ‘ಸೋಲ್ಡ್’

ಕಾಡಿಮಿ ಸಿನಿಮಾಗಳ ಮೂಲಕ ಗಮನಸೆಳೆದ ನಟ ದಾನೀಶ್ ಸೇಠ್ ಇದೀಗ ಪೊಲೀಸ್ ಪಾತ್ರದಲ್ಲಿ ಮಿಂಚಲಿದ್ದಾರೆ. ಅವರ ಚಿತ್ರ ತೆರೆ ಮೇಲೆ ಬರಲು ರೆಡಿಯಾಗಿದೆ

ನಟ ಡ್ಯಾನಿಸ್​ ಸೇಠ್​

ನಟ ಡ್ಯಾನಿಸ್​ ಸೇಠ್​

  • Share this:
ಡ್ಯಾನಿಶ್​ ಸೇಠ್ (Danish sait) ಹೆಸರು ಕೇಳಿದ್ರೆ ನೆನಪಾಗೋದು ಕಾಮಿಡಿ ವಿಡಿಯೋಗಳು, ಕಾಮಿಡಿ ಚಿತ್ರಗಳು. ಅವರ ಕಾಮಿಡಿ ವಿಡಿಯೋಗಳಂತೂ ಸಖತ್​ ವೈರಲ್​ ಆಗುತ್ತೆ. ಅವರ ಮಾತಿನ ಶೈಲಿಯೇ ವಿಭಿನ್ನವಾಗಿದ್ದು, ಕಾಮಿಡಿ (Comedy) ವಿಡಿಯೋಗಳ ಮೂಲಕವೇ ಅವರು ಜನರಿಗೆ ಹತ್ತಿರವಾಗಿದ್ದಾರೆ. ಬೆಂಗಳೂರಿನಲ್ಲಿ ನೆಲೆಸಿರುವ ಡ್ಯಾನಿಶ್​ ಸೇಠ್ ಪ್ರಸಿದ್ಧ ರೇಡಿಯೋ ಜಾಕಿ ಆಗಿ ಕೆಲಸ ಮಾಡಿದ್ರು. ಇವರು IPL ನಲ್ಲಿ ಬೆಂಗಳೂರು ತಂಡದ ಇನಸೈಡರ್ Mr.ನ್ಯಾಗ್ಸ್​ ಆಗಿಯೂ ಖ್ಯಾತರಾಗಿದ್ರು. ಇತ್ತೀಚಿಗೆ ಅವರು ಸಿನಿಮಾದಲ್ಲಿ ಬ್ಯೂಸಿ ಆಗಿದ್ದಾರೆ. 'ಹಂಬಲ್ ಪೊಲಿಟಿಷಿಯನ್ ನಾಗರಾಜ್', (Humble Politician Nograj) 'ಫ್ರೆಂಚ್ ಬಿರಿಯಾನಿ' (French Biryani) ಕಾಮಿಡಿ ಚಿತ್ರದ ಮಾಡಿ ಜನರ ಮನಗೆದ್ದಿದ್ದ ಡ್ಯಾನಿಶ್ ಸೇಠ್​ ಇದೀಗ ಖಡಕ್​ ಪೊಲೀಸ್​ ಆಫೀಸರ್​ (Police Officer) ಆಗಿ ಬಣ್ಣ ಹಚ್ಚಿದ್ದಾರೆ. ಅದು ಯಾವ ಚಿತ್ರ, ಸಿನಿಮಾ ರಿಲೀಸ್​ ಯಾವಾಗ ಅಂತ ತಿಳಿದುಕೊಳ್ಳಿ.

ಪೊಲೀಸ್​ ಆಫೀಸರ್​ ಪಾತ್ರದಲ್ಲಿ ಡ್ಯಾನೀಶ್​ ಸೇಠ್​

ಸಾದ್ ಖಾನ್ ನಿರ್ದೇಶನದ `ಹಂಬಲ್ ಪಾಲಿಟಿಷಿಯನ್ ನೊಗರಾಜ್' ಚಿತ್ರ ಇವರ ಮೊದಲ ಚಿತ್ರ. ಈ ಕಾಮಿಡಿ ಸಿನಿಮಾಗೂ ಒಳ್ಳೆಯ ರೆಸ್ಪಾನ್ಸ್​ ಸಿಕ್ಕಿತ್ತು. ಬಳಿಕ ಪುನೀತ್​ ರಾಜ್​ಕುಮಾರ್​ ಅವರ PRK ಪ್ರೊಡಕ್ಷನ್​ ನ ಫ್ರೆಂಚ್ ಬಿರಿಯಾನಿ ಚಿತ್ರದ ಮೂಲಕ ಜನರನ್ನೂ ನಕ್ಕು ನಲಿಸಿದ್ರು ಡ್ಯಾನೀಸ್​ ಸೇಠ್​ ಆದರೆ, ಇದೇ ಮೊದಲ ಬಾರಿಗೆ ಅವರು ಇಂಟೆನ್ಸ್ ಆಗಿರುವ ಒಂದು ಪೊಲೀಸ್ ಆಫೀಸರ್ ಪಾತ್ರ ಮಾಡಿದ್ದಾರೆ. ಸೋಲ್ಡ್​ ಚಿತ್ರದಲ್ಲಿ ಡ್ಯಾನಿಶ್​ ಅವರು ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಳ್ತಿದ್ದಾರೆ.

ಮಾರ್ಚ್​ 4 ರಂದು ತೆರೆ ಮೇಲೆ ‘ಸೋಲ್ಡ್​’

ಮಕ್ಕಳ ಕಿಡ್ನ್ಯಾಪ್​ ಆಧರಿತ ಚಿತ್ರ ಕಥೆ ಹೊಂದಿರೋ 'ಸೋಲ್ಡ್' ತೆರೆಗೆ ಬರಲು ರೆಡಿಯಾಗಿದೆ.  ಸದ್ದಿಲ್ಲದೇ ಶೂಟಿಂಗ್ ಮುಗಿಸಿರುವ ಈ ಸಿನಿಮಾವು ಮಾರ್ಚ್‌ 4ರಂದು ತೆರೆಗೆ ಬರಲು ಸಜ್ಜಾಗಿದೆ. ಇತ್ತೀಚೆಗಷ್ಟೇ ಡ್ಯಾನಿಶ್​ ಅವರ 'ಒನ್ ಕಟ್ ಟು ಕಟ್' ಸಿನಿಮಾವು ಓಟಿಟಿಯಲ್ಲಿ ರಿಲೀಸ್ ಆಗಿತ್ತು. ಅದು ತೆರೆಕಂಡು ಒಂದು ತಿಂಗಳಿಗೆ ಸರಿಯಾಗಿ ಮತ್ತೊಂದು ಸಿನಿಮಾ ರಿಲೀಸ್‌ಗೆ ಸಿದ್ಧವಾಗಿದೆ.

ಇದನ್ನೂ ಓದಿ: Weekend Planner: ಈ ವಾರ ಸಿನಿರಸಿಕರಿಗೆ ಹಬ್ಬ.. ಯಾವುದನ್ನು ನೋಡೋದು? ಯಾವುದನ್ನು ಬಿಡೋದು?

ಸೋಲ್ಡ್‌ಗೆ ಪ್ರೇರಣಾ ನಿರ್ದೇಶಕಿ

ಕನ್ನಡದಲ್ಲಿ ಸಿನಿಮಾ ನಿರ್ದೇಶಕಿಯರ ಸಂಖ್ಯೆ ಕೊಂಚ ಕಡಿಮೆ ಇದೆ. ಇದೀಗ ಪ್ರೇರಣಾ ಅಗರ್‌ವಾಲ್‌ 'ಸೋಲ್ಡ್‌'ಗೆ ನಿರ್ದೇಶನ ಮಾಡುವ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟಿದ್ದಾರೆ. ಸಾಕಷ್ಟು ಕಿರುಚಿತ್ರಗಳನ್ನು ನಿರ್ದೇಶಿಸಿ ಅನುಭವವಿರುವ ಅವರು ಮೊದಲ ಯತ್ನದಲ್ಲೇ ಒಂದು ಸಸ್ಪೆನ್ಸ್ ಥ್ರಿಲ್ಲರ್ ಮಾದರಿಯ ಸಿನಿಮಾವನ್ನು ಕೈಗೆತ್ತಿಕೊಂಡಿರುವುದು ವಿಶೇಷ. ಮಾನವ ಕಳ್ಳ ಸಾಗಾಣಿಕೆಯ ಕುರಿತ ಕಥೆಯನ್ನು ಹೊಂದಿರುವ ಈ ಸಿನಿಮಾದಲ್ಲಿ ಪ್ರಸ್ತುತ ಸಮಾಜದಲ್ಲಿ ನಡೆಯುತ್ತಿರುವ ಹಲವು ಅಂಶಗಳನ್ನು ಹೇಳಲಾಗಿದೆಯಂತೆ.ಸಸ್ಪೆನ್ಸ್ ಥ್ರಿಲ್ಲರ್ ಮೂವಿ

ದೀಪಂ ಕೊಹ್ಲಿ ಈ ಚಿತ್ರದ ನಿರ್ಮಾಪಕರು. ಚಿತ್ರದಲ್ಲೊಂದು ಪಾತ್ರಕ್ಕೂ ಅವರು ಜೀವ ತುಂಬಿದ್ದಾರೆ. 'ನಮ್ಮ ಚಿತ್ರತಂಡದಲ್ಲಿರುವ ಎಲ್ಲಾ ಸದಸ್ಯರು 28ರ ಆಸುಪಾಸಿನ‌ ವಯಸ್ಸಿನವರು. ಒಂದು ಉತ್ಸಾಹಿ ಯುವ ತಂಡದಿಂದ ಉತ್ತಮ ಚಿತ್ರವೊಂದು ತಯಾರಾಗಿದೆ. ಮಾರ್ಚ್ 4ರಂದು 'ಸೋಲ್ಡ್' ಸಿನಿಮಾವನ್ನು ರಾಜ್ಯಾದ್ಯಂತ ಬಿಡುಗಡೆ ಮಾಡಲು ಸಕಲ ಸಿದ್ಧತೆ ಮಾಡಿಕೊಂಡಿದ್ದೇವೆ' ಎಂದು ನಿರ್ಮಾಪಕ ದೀಪಂ ಕೊಹ್ಲಿ ಹೇಳುತ್ತಾರೆ. ಚಿತ್ರದಲ್ಲಿ ಕೇವಲ ಒಂದೇ ಒಂದು ಹಾಡು ಇದೆಯಂತೆ. ಅದಕ್ಕೆ ಜೀತ್ ಸಿಂಗ್ ಸಂಗೀತ ನೀಡಿದ್ದಾರೆ. ಈ ಸಿನಿಮಾದ ಛಾಯಾಗ್ರಹಣವನ್ನು ಸಮೀರ್ ದೇಶಪಾಂಡೆ ಮಾಡಿದ್ದಾರೆ.

ಇದನ್ನೂ ಓದಿ: Puneeth Rajkumar ಅಲ್ಲ ಇವರು ಜ್ಯೂ.'ಅಪ್ಪು'! 'ಮಾರಕಾಸ್ತ್ರ' ಹಿಡಿದು ಬರ್ತಿದ್ದಾರೆ ಆನಂದ್

ಡ್ಯಾನಿಶ್ ಜೊತೆಗೆ ರುಚಿತಾ ಎನ್ನುವ ತನಿಖಾ ಪತ್ರಕರ್ತೆಯ ಪಾತ್ರಕ್ಕೆ ನಟಿ ಕಾವ್ಯಾ ಶೆಟ್ಟಿ ಬಣ್ಣ ಹಚ್ಚಿದ್ದಾರೆ. ಶಿವಾನಿ ಆರ್. ಬಲ್ಲುಕರಾಯ, ಭರತ್ ಜೆ.ಬಿ., ಸಿದ್ಧಾರ್ಥ್ ಮಾಧ್ಯಮಿಕ, 'ಉಗ್ರಂ' ಮಂಜು, ಭವಾನಿ ಪ್ರಕಾಶ್, ಹನುಮಂತೇ ಗೌಡ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಸ್ಲಮ್‌ಗಳು ಸೇರಿದಂತೆ ಕೆಲವು ಲೈವ್‌ ಲೊಕೇಷನ್‌ಗಳಲ್ಲಿ ಸಿನಿಮಾವನ್ನು ನೈಜವಾಗಿ ಶೂಟಿಂಗ್ ಮಾಡಲಾಗಿದೆಯಂತೆ. ಒಂದು ಮಗುವಿನ ಕಿಡ್ನ್ಯಾಪ್ ಸುತ್ತ ಇಡೀ ಕಥೆ ಸಾಗಲಿದ್ದು, ಸೋಲ್ಡ್​ ಚಿತ್ರದ ಟ್ರೇಲರ್​ ಕೂಡ ಸಖತ್​ ಆಗಿಯೇ ಸದ್ದು ಮಾಡ್ತಿದೆ.
Published by:Pavana HS
First published: