• Home
  • »
  • News
  • »
  • entertainment
  • »
  • Diganth New Film Teaser: ತಿಮ್ಮಯ್ಯ & ತಿಮ್ಮಯ್ಯ ಟೀಸರ್ ರಿಲೀಸ್; ಇದು ಅಜ್ಜ-ಮೊಮ್ಮಗನ ಅದ್ಭುತ ಪಯಣ

Diganth New Film Teaser: ತಿಮ್ಮಯ್ಯ & ತಿಮ್ಮಯ್ಯ ಟೀಸರ್ ರಿಲೀಸ್; ಇದು ಅಜ್ಜ-ಮೊಮ್ಮಗನ ಅದ್ಭುತ ಪಯಣ

ತಿಮ್ಮಯ್ಯ ತಿಮ್ಮಯ್ಯ ಚಿತ್ರ ಭಾವನಾತ್ಮಕ ಸಿನಿಮಾ

ತಿಮ್ಮಯ್ಯ ತಿಮ್ಮಯ್ಯ ಚಿತ್ರ ಭಾವನಾತ್ಮಕ ಸಿನಿಮಾ

ಅನಂತ್​​ ನಾಗ್ ಸಿನಿಮಾಗಳಲ್ಲಿ ಅಜ್ಜನ ಪಾತ್ರಗಳು ಕಡಿಮೆ ಆಗಿವೆ. ಆದರೆ ತಿಮ್ಮಯ್ಯ ತಿಮ್ಮಯ್ಯ ಸಿನಿಮಾದಲ್ಲಿ ಅನಂತ್​ ನಾಗ್ ಅಜ್ಜನ ಪಾತ್ರ ಮಾಡಿದ್ದಾರೆ. ಮೊಮ್ಮಗನ ಜೊತೆಗಿನ ಭಾವನಾತ್ಮಕ ಸಂಬಂಧಗಳ ಕಥೆಯನ್ನ ಇಲ್ಲಿ ಅಭಿನಯಿಸಿದ್ದಾರೆ.

  • News18 Kannada
  • Last Updated :
  • Bangalore [Bangalore], India
  • Share this:

    ಕನ್ನಡದಲ್ಲಿ ತಿಮ್ಮಯ್ಯ & ತಿಮ್ಮಯ್ಯ (Thimayya & Thimayya) ಹೆಸರಿನ ಸಿನಿಮಾ ರೆಡಿ ಆಗಿದೆ. ಅಷ್ಟೇನೂ ಸುದ್ದಿ ಮಾಡದೆ ಇರೋ ಈ ಚಿತ್ರ, ಮೊದಲ ಟೀಸರ್​ನಿಂದಲೇ ಹೆಚ್ಚು ಗಮನ ಸೆಳೆದಿದೆ. ಅಜ್ಜ ಮತ್ತು ಮೊಮ್ಮಗನ ಕಥೆಯ ಈ ಚಿತ್ರದಲ್ಲಿ ಒಂದು ಭಾವನಾತ್ಮಕ ಪಯಣ ಇದೆ. ಸಿನಿಮಾ (Film Lovers) ಪ್ರೇಮಿಗಳಿಗೆ ಈ ಮೂಲಕ ಅನಂತ್​ ನಾಗ್ ಅಜ್ಜನಾಗಿ ಬರ್ತಿದ್ದಾರೆ. ಮೊಮ್ಮನಾಗಿಯೇ ದಿಗಂತ್ (Diganth) ಇಲ್ಲಿ ಅಭಿನಯಿಸಿದ್ದಾರೆ. ಸಿನಿಮಾ ಪ್ರೇಮಿಗಳಿಗೆ ಈ ಒಂದು ಸಿನಿಮಾ ಹೊಸ ಫೀಲ್ ಕೊಡಲಿದೆ. ಚಿತ್ರದ ಮೊದಲ ಟೀಸರ್​ ನಲ್ಲಿ ಅಜ್ಜ-ಮೊಮ್ಮಗನ ಹಾಸ್ಯದ ಪರಿ ಇತ್ತು. ಆದರೆ ಇವತ್ತು ರಿಲೀಸ್ ಆಗಿರೋ (Teaser Released) ಟೀಸರ್​ ನಲ್ಲಿ ಅಜ್ಜ-ಮೊಮ್ಮಗನ ಭಾವನಾತ್ಮಕ ಸಂಬಂಧದ ಚಿತ್ರಣವೇ ಇದೆ.


    ತಿಮ್ಮಯ್ಯ ತಿಮ್ಮಯ್ಯ ಅನಂತ್​​ನಾಗ್ ಅಜ್ಜನಾದ ಹೊಸ ಕಥೆ
    ತಿಮ್ಮಯ್ಯ ತಿಮ್ಮಯ್ಯ ಒಂದು ಹೊಸ ರೀತಿಯ ಸಿನಿಮಾನೇ ಆಗಿದೆ. ಅಜ್ಜಿ ಮೊಮ್ಮಗ, ಅಜ್ಜಿ ಮೊಮ್ಮಗಳು ಇಲ್ಲವೆ ಅಜ್ಜ-ಅಜ್ಜಿಯ ಕಥೆ ನೋಡಿದ್ದೇವೆ. ಆದರೆ ಇಲ್ಲಿ ಅಜ್ಜ ಮತ್ತು ಮೊಮ್ಮಗನ ಕಥೆ ಇದೆ.


    ಈ ಸಿನಿಮಾದ ಕಥೆಯಲ್ಲಿ ಸೀನಿಯರ್ ತಿಮ್ಮಯ್ಯ ಮತ್ತು ಜೂನಿಯರ್ ತಿಮ್ಮಯ್ಯನ ಭಾವನಾತ್ಮಕ ಪಯಣದ ಇದೆ. ಇದರ ಝಲಕ್ ಅನ್ನ ನಾವು ಚಿತ್ರದ ಎರಡನೇ ಟೀಸರ್​ ನಲ್ಲಿ ಕಾಣಬಹುದು. ಮೊದಲ ಟೀಸರ್​​ ನಲ್ಲಿ ಈ ಅಜ್ಜ-ಮೊಮ್ಮಗನ ಹಾಸ್ಯದ ಕಿಕ್ ಇತ್ತು.


    ಅನಂತ್​ ನಾಗ್ ಅಜ್ಜನಾಗಿ ಸೂಪರೋ ಸೂಪರ್
    ಅನಂತ್ ನಾಗ್ ಅಭಿನಯದಲ್ಲಿ ಸದಾ ಪಕ್ವತೆ ಇರುತ್ತದೆ. ಅನುಭವದ ಆಧಾರದ ಮೇಲೆ ಅಷ್ಟೇ ಸಹಜವಾಗಿಯೇ ಅನಂತ್​ ನಾಗ್ ಇಲ್ಲೂ ಅಭಿನಯಿಸಿದ್ದಾರೆ. ತಿಮ್ಮಯ್ಯ ತಿಮ್ಮಯ್ಯ ಸಿನಿಮಾ ಅದರ ಝಲಕ್​ ನಿಮಗೆ ಸಿಗುತ್ತದೆ.


    Kannada Actor Diganth New Film Teaser Released
    ತಿಮ್ಮಯ್ಯ ತಿಮ್ಮಯ್ಯ ಅನಂತ್​​ನಾಗ್ ಅಜ್ಜನಾದ ಹೊಸ ಕಥೆ


    ಅನಂತ್​​ ನಾಗ್ ಸಿನಿಮಾಗಳಲ್ಲಿ ಅಜ್ಜನ ಪಾತ್ರಗಳು ಕಡಿಮೆ ಆಗಿವೆ. ಆದರೆ ತಿಮ್ಮಯ್ಯ ತಿಮ್ಮಯ್ಯ ಸಿನಿಮಾದಲ್ಲಿ ಅನಂತ್​ ನಾಗ್ ಅಜ್ಜನ ಪಾತ್ರ ಮಾಡಿದ್ದಾರೆ. ಮೊಮ್ಮಗನ ಜೊತೆಗಿನ ಭಾವನಾತ್ಮಕ ಸಂಬಂಧಗಳ ಕಥೆಯನ್ನ ಇಲ್ಲಿ ಅಭಿನಯಿಸಿದ್ದಾರೆ.




    ತಿಮ್ಮಯ್ಯ ತಿಮ್ಮಯ್ಯ ಸಿನಿಮಾದಲ್ಲಿ ಸೂಪರ್ ದಿಗಂತ್
    ದೂದ್​ ಪೇಡ ದಿಗಂತ್ ತಮ್ಮ ಚಿತ್ರ ಪಯಣದಲ್ಲಿ ರೋಮ್ಯಾಂಟಿಕ್ ಲವ್ ಸ್ಟೋರಿ ಚಿತ್ರಗಳನ್ನೆ ಮಾಡಿದ್ದಾರೆ. ಹಾಸ್ಯ ಸ್ಪರ್ಶ ಇರೋ ಚಿತ್ರಗಳಲ್ಲೂ ಅಭಿನಯಿಸಿರೋದು ಇದೆ.
    ಆದರೆ ಅಜ್ಜ-ಮೊಮ್ಮಗನ ಭಾವನಾತ್ಮಕ ಸಂಬಂಧದ ಕಥೆಯಲ್ಲಿ ಅಭಿನಯಿಸಿರೋದು ಇದೇ ಫಸ್ಟ್ ಅಂತಲೇ ಹೇಳಬಹುದು. ತಿಮ್ಮಯ್ಯ ತಿಮ್ಮಯ್ಯ ಆ ಸಾಲಿನ ದಿಗಂತ್ ಚಿತ್ರ ಜೀವನದ ವಿಶೇಷ ಸಿನಿಮಾ ಅಂತಲೇ ಹೇಳಬಹುದು.


    ತಿಮ್ಮಯ್ಯ ತಿಮ್ಮಯ್ಯ ಸಿನಿಮಾದಲ್ಲಿ ಶುಭ್ರಾ ಅಯ್ಯಪ್ಪ
    ಕನ್ನಡದ ನಟಿ ಶುಭ್ರಾ ಅಯ್ಯಪ್ಪ ಕೂಡ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಸುಮಾರು ದಿನಗಳ ಗ್ಯಾಪ್ ಬಳಿಕ ಶುಭ್ರಾ ಅಯ್ಯಪ್ಪ ಈ ಚಿತ್ರದ ಮೂಲಕ ಕನ್ನಡಕ್ಕೆ ವಾಪಾಸ್ ಆಗಿದ್ದಾರೆ. ದಿಗಂತ್ ಜೋಡಿಯಾಗಿಯೂ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.




    ತಿಮ್ಮಯ್ಯ ತಿಮ್ಮಯ್ಯ ಚಿತ್ರದಲ್ಲಿ ದಿಗಂತ್ ಪತ್ನಿ ಐಂದ್ರಿತಾ ರೇ
    ತಿಮ್ಮಯ್ಯ ತಿಮ್ಮಯ್ಯ ಸಿನಿಮಾದಲ್ಲಿ ಐಂದ್ರಿತಾ ರೇ ಕೂಡ ಅಭಿನಯಿಸಿದ್ದಾರೆ. ದಿಗಂತ್ ಪೇರ್ ಆಗಿಯೇ ನಟಿಸ್ತಿರೋದು ಎಂದಿನಂತೆ ವಿಶೇಷವೇ ಸರಿ. ಆದರೆ ಸಿನಿಮಾದ ಎರಡು ಟೀಸರ್​​ ರಿಲೀಸ್ ಆದ್ರೂ ಐಂದ್ರಿತಾ ರೇ ಅವರನ್ನ ತೋರಿಸಿಲ್ಲ ಅಷ್ಟೆ.


    ತಿಮ್ಮಯ್ಯ ತಿಮ್ಮಯ್ಯ ಚಿತ್ರ ರಿಲೀಸ್ ಯಾವಾಗ?
    ತಿಮ್ಮಯ್ಯ ತಿಮ್ಮಯ್ಯ ಚಿತ್ರ ಮುಂದಿನ ತಿಂಗಳು ಬಿಡುಗಡೆ ಆಗುತ್ತಿದೆ. ಡಿಸೆಂಬರ್ ಮೊದಲ ವಾರದಂದು ಚಿತ್ರ ತೆರೆಗೆ ಬರುತ್ತಿದೆ. ಚಿತ್ರದ ಎರಡನೇ ಟೀಸರ್​ನಲ್ಲಿಯ ಈ ವಿಷಯವನ್ನ ಸಿನಿಮಾ ತಂಡ ರಿವೀಲ್ ಮಾಡಿದೆ. ಅದರಂತೆ ಡಿಸೆಂಬರ್ 2 ರಂದು ರಾಜ್ಯದೆಲ್ಲೆಡೆ ತಿಮ್ಮಯ್ಯ ತಿಮ್ಮಯ್ಯ ಸಿನಿಮಾ ರಿಲೀಸ್ ಆಗುತ್ತಿದೆ.


    ಇದನ್ನೂ ಓದಿ: Krishna: ನಟ ಮಹೇಶ್ ಬಾಬು ತಂದೆ ಸೂಪರ್ ಸ್ಟಾರ್ ಕೃಷ್ಣ ಆಸ್ಪತ್ರೆಗೆ ದಾಖಲು, ಸ್ಥಿತಿ ಗಂಭೀರ


    ತಿಮ್ಮಯ್ಯ ತಿಮ್ಮಯ್ಯ ಹಿಂದಿನ ಟೆಕ್ನಿಕಲ್ ಶಕ್ತಿ ಯಾವುದು?
    ತಿಮ್ಮಯ್ಯ ತಿಮ್ಮಯ್ಯ ಚಿತ್ರಕ್ಕೆ ಸಂಜಯ್ ಶರ್ಮಾ ನಿರ್ದೇಶನದ ಇದೆ. ಅನೂಪ್ ಸಿಳೀನ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಪ್ರಮೋದ್ ಮರವಂತೆ ಲಿರಿಕ್ಸ್ ಬರೆದಿದ್ದಾರೆ. ಬಾಲಕೃಷ್ಣ ತೋಟಾ ಕ್ಯಾಮೆರಾ ವರ್ಕ್ ಮಾಡಿದ್ದಾರೆ. ರಾಜೇಶ್ ಶರ್ಮಾ ಈ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ.

    First published: