‘ರಾಜಕುಮಾರ’ ಸಿನಿಮಾ ಹಿಟ್ ಆದ ನಂತರದಲ್ಲಿ ನಟ ಪುನೀತ್ ರಾಜ್ಕುಮಾರ್ ಹಾಗೂ ನಿರ್ದೇಶಕ ಸಂತೋಷ್ ಆನಂದ್ ರಾಮ್ ಜೋಡಿ ‘ಯುವರತ್ನ’ ಚಿತ್ರಕ್ಕಾಗಿ ಮತ್ತೆ ಒಂದಾಗಿದೆ. ಈ ಚಿತ್ರದಲ್ಲಿ ಪುನೀತ್ ಕಾಲೇಜು ಮೆಟ್ಟಿಲೇರಲಿದ್ದಾರೆ ಎನ್ನುವ ವಿಚಾರ ಸಾಕಷ್ಟು ಕುತೂಹಲ ಮೂಡಿಸಿತ್ತು. ಈಗ ಈ ಕುತೂಹಲವನ್ನು ದುಪ್ಪಟ್ಟು ಮಾಡುವ ಕೆಲಸ ಮಾಡಿದ್ದಾರೆ ನಿರ್ದೇಶಕರು. ಅದಕ್ಕೆ ಕಾರಣ, ಈ ಚಿತ್ರಕ್ಕೆ ಹೊಸ ಹೀರೋ ಒಬ್ಬನ ಎಂಟ್ರಿ ಆಗಿದೆ!
ಅಷ್ಟಕ್ಕೂ ಯಾರು ಆ ಹೀರೋ? ದಿಗಂತ್ ಮಂಚಾಲೆ. ಕಳೆದ ವರ್ಷದ ಆರಂಭದಲ್ಲಿ ದಿಗಂತ್ ನಟನೆಯ ‘ಫಾರ್ಚುನರ್’ ಸಿನಿಮಾ ತೆರೆಕಂಡಿತ್ತು. ನಂತರ ಅವರ ಯಾವ ಸಿನಿಮಾಗಳೂ ತೆರೆಗೆ ಬಂದಿಲ್ಲ. ಈಗ ದಿಗಂತ್ ಸೈಲೆಂಟ್ ಆಗಿ ‘ಯುವರತ್ನ’ ಚಿತ್ರ ತಂಡ ಸೇರಿಕೊಂಡಿದ್ದಾರೆ. ಈ ಮೂಲಕ ಇದೇ ಮೊದಲ ಬಾರಿಗೆ ಇಬ್ಬರೂ ಒಟ್ಟಿಗೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಇದು ಸಹಜವಾಗಿಯೇ ದಿಗಂತ್ ಅಭಿಮಾನಿಗಳ ಸಂತಸವನ್ನು ಹೆಚ್ಚಿಸಿದೆ.
ದಿಗಂತ್ ಚಿತ್ರತಂಡ ಸೇರಿಕೊಂಡ ಬಗ್ಗೆ ಚಿತ್ರದ ನಿರ್ದೇಶಕ ಸಂತೋಷ್ ಆನಂದ್ ರಾಮ್ ಟ್ವಿಟ್ಟರ್ನಲ್ಲಿ ಅಧಿಕೃತಪಡಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, “ದಿಗಂತ್ ಯುವರತ್ನ ತಂಡ ಸೇರಿಕೊಳ್ಳುತ್ತಿದ್ದಾರೆ. ಅವರ ಪಾತ್ರ ತುಂಬಾ ವಿಶೇಷ ವಾಗಿದೆ. ನಿಮಗೆ ಅದು ನಿಜಕ್ಕೂ ಇಷ್ಟವಾಗಲಿದೆ,” ಎಂದು ಬರೆದುಕೊಂಡಿದ್ದಾರೆ.
Welcome Brother To Team #YuvaRathnaa ! Diganth’s character will be special 🙌 you guys will experience it ✌️ @diganthmanchale @PuneethRajkumar @hombalefilms @VKiragandur @Karthik1423 pic.twitter.com/LHx5BSUE3B
— Santhosh Ananddram (@SanthoshAnand15) July 16, 2019
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ