Actor Diganth: ನಟ ದಿಗಂತ್ಗೆ ಗಂಭೀರ ಪೆಟ್ಟು; ನಿರ್ದೇಶಕ ಯೋಗರಾಜ್ ಭಟ್ ಹೇಳಿದ್ದೇನು?
ನಟ ದಿಗಂತ್ - ನಿರ್ದೇಶಕ ಯೋಗರಾಜ್ ಭಟ್ ಜೋಡಿ ಭಾರೀ ಜನಪ್ರಿಯತೆ ಗಳಿಸಿತ್ತು. ನಟ ದಿಗಂತ್ಗೆ ಭಾರೀ ಪೆಟ್ಟು ಬಿದ್ದಿರುವ ಕುರಿತು ಅವರ ಆಪ್ತ, ನಿರ್ದೇಶಕ ಯೋಗರಾಜ್ ಭಟ್ ಪ್ರತಿಕ್ರಿಯಿಸಿದ್ದಾರೆ.
ನಟ ದಿಗಂತ್ ಕುತ್ತಿಗೆಗೆ ಗಂಭೀರ ಪೆಟ್ಟು ಬಿದ್ದಿದೆ. ಗಾಳಿಪಟ 2 ಸಿನಿಮಾ ಬಿಡುಗಡೆಗೆ ಸಜ್ಜಾದ ಈ ಹಂತದಲ್ಲೇ ನಟ ದಿಗಂತ್ಗೆ ಈ ರೀತಿ ಗಂಭೀರ ಗಾಯ ಆಗಿರುವುದು ನೋವಾಗಿದೆ. ಇಂತಹ ಘಟನೆ ನಡೆಯಬಾರದಿತ್ತು. ನಾನು ಈಗಲೇ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ಹೋಗುತ್ತಿದ್ದೇನೆ ಎಂದು ನಿರ್ದೇಶಕ ಯೋಗರಾಜ್ ಭಟ್ (Yogaraj Bhat) ತಿಳಿಸಿದ್ದಾರೆ. ನಟ ದಿಗಂತ್ ಕುತ್ತಿಗೆಗೆ ಬಲವಾದ ಪೆಟ್ಟು ಬಿದ್ದಿದೆ. ಗೋವಾದ ಸಮುದ್ರ ತಟದಲ್ಲಿ ಸೋಮರ್ ಸಾಲ್ಟ್ ಹೊಡೆಯುವ ವೇಳೆ ದಿಗಂತ್ ಕುತ್ತಿಗೆಗೆ ಪೆಟ್ಟು ಬಿದ್ದಿದೆ. ಕುಟುಂಬದ ಜೊತೆ ನಟ ದಿಗಂತ್ ಗೋವಾ ಪ್ರವಾಸಕ್ಕೆ (Goa Tour) ತೆರಳಿದ್ದರು. ಈ ವೇಳೆ ದಿಗಂತ್ (Actor Diganth) ಕುತ್ತಿಗೆಗೆ ಬಲವಾದ ಪೆಟ್ಟು ಬಿದ್ದಿದೆ. ದಿಗಂತ್ ಕುತ್ತಿಗೆಗೆ ಬಲವಾದ ಪೆಟ್ಟು ಬಿದ್ದಿರುವ ಬಗ್ಗೆ ದಿಗಂತ್ ಆಪ್ತರಿಂದ ನ್ಯೂಸ್ 18ಗೆ ಮಾಹಿತಿ ದೊರೆತಿದೆ.
ನಟ ದಿಗಂತ್ಗೆ ಕುಟುಂಬ ಸಮೇತ ಗೋವಾ ಪ್ರವಾಸಕ್ಕೆ ತೆರಳಿದ್ದರು. ಆದರೆ ಗೋವಾದಲ್ಲಿ ಈ ಅವಘಡ ಸಂಭವಿಸಿದೆ. ಸಮ್ಮರ್ ಶಾಟ್ ಮಾಡುವ ವೇಳೆ ದಿಗಂತ್ ಅವರ ಕತ್ತಿಗೆ ಬಲವಾದ ಪೆಟ್ಟು ಬಿದ್ದಿದೆ ಎಂದು ತಿಳಿದುಬಂದಿದೆ. ಈಕುರಿತು ಇನ್ನಷ್ಟು ಮಾಹಿತಿ ಅಪ್ಡೇಟ್ ಆಗಬೇಕಿದೆ.
ಹಿಂದೊಮ್ಮೆ ನಡೆದಿತ್ತು ದುರ್ಘಟನೆ
ಕೆಲವು ವರ್ಷಗಳ ಹಿಂದೆ ವಿದೇಶದಲ್ಲಿ ದಿಗಂತ್ ಚಿತ್ರವೊಂದರ ಚಿತ್ರೀಕರಣ ನಡೆಸುವಾಗ ದುರ್ಘಟನೆಯೊಂದು ನಡೆದಿತ್ತು. ಈ ಚಿತ್ರೀಕರಣದ ವೇಳೆ ದಿಗಂತ್ ಕಣ್ಣೊಂದಕ್ಕೆ ಹಾನಿಯಾಗಿತ್ತು. ಸ್ವತಃ ದಿಗಂತ್ ಅವರೇ ಈ ಘಟನೆಯನ್ನು ತಿಳಿಸಿದ್ದರು.
ಇತ್ತೀಚಿಗೆ ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ ಬಿಡುಗಡೆ
ದೂದ್ಪೇಡಾ ದಿಗಂತ್ ಎಂದೇ ಹೆಸರುವಾಸಿಯಾಗಿರುವ ನಟ ದಿಗಂತ್ ತಮ್ಮ ನಟನೆಯಿಂದಲೇ ಹೆಸರುವಾಸಿಯಾದವರು. ಇತ್ತೀಚಿಗೆ ಅವರ ನಟನೆಯ ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ ಸಿನಿಮಾ ಬಿಡುಗಡೆಗೊಂಡಿತ್ತು.
ಏನಿದು ಸಮ್ಮರ್ ಶಾಟ್ ಸರಿಯಾಗಿ ಸಮ್ಮರ್ ಶಾಟ್ ಮಾಡದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ. ಅದನ್ನು ಎಲ್ಲೆಂದೆರಲ್ಲಿ ಮಾಡುವುದು ನಿಜಕ್ಕೂ ಡೇಂಜರ್. ಅದರಲ್ಲೂ ಎಲ್ಲಾ ಚೆನ್ನಾಗಿ ಕಲಿತಿದ್ದ ದಿಗಂತ್ ಅವರು ಎಡವಿದ್ದೆಲ್ಲಿ ಎನ್ನುವ ಪ್ರಶ್ನೆ ಉದ್ಭವವಾಗಿದೆ. ಗೋವಾ ಟ್ರಿಪ್ಗೆ ತೆರಳಿದ್ದು. ಇಲ್ಲಿ ಸಮುದ್ರ ತೀರದಲ್ಲಿ ಸಮ್ಮರ್ ಶಾಟ್ ಮಾಡುತ್ತಿದ್ದ ಸಂದರ್ಭದಲ್ಲಿ ಅವರ ಕುತ್ತಿಗೆಗೆ ಬಲವಾದ ಪೆಟ್ಟು ಬಿದ್ದಿದೆ ಎನ್ನಲಾಗಿದೆ . ಒಂದೇ ಒಂದು ಚೂರು ಕೂಡ ಎಡವಿದರು ಅಪಾಯ ಕಟ್ಟಿಟ್ಟ ಬುತ್ತಿ. ಪ್ರಾಣಕ್ಕೆ ಕುತ್ತು ತರುತ್ತೆ ಈ ಸಮ್ಮರ್ ಶಾಟ್ ಈ ಹಿಂದೆ ಸಮ್ಮರ್ ಶಾಟ್ ಮಾಡಲು ಹೋದ ಯುವಕನೊಬ್ಬ ಮೃತಪಟ್ಟಿದ್ದ.
ದಿಗಂತ್ಗೆ ಪ್ರಕೃತಿ ಎಂದರೆ ಬಲು ಇಷ್ಟ. ಹೆಚ್ಚು ಸೈಕ್ಲಿಂಗ್ ಮಾಡುವ ಇವರು ನಟ ಪುನೀತ್ ರಾಜ್ಕುಮಾರ್ಗೂ ಸೈಕ್ಲಿಂಗ್ ಹುಚ್ಚು ಹಿಡಿಸಿದ್ರಂತೆ. ಯುವ ರತ್ನ ಸಿನಿಮಾ ಶೂಟಿಂಗ್ಗೆ ಬೆಂಗಳೂರಿನಿಂದ ಮೈಸೂರಿಗೆ ಸೈಕಲ್ನಲ್ಲೇ ಸವಾರಿ ಮಾಡುತ್ತಿದ್ದರಂತೆ
Published by:guruganesh bhat
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ