ಬೆಂಗಳೂರು: ನಿನ್ನೆ ಗೋವಾದಲ್ಲಿ (Goa) ಕುತ್ತಿಗೆಗೆ ಗಂಭೀರ ಗಾಯ ಮಾಡಿಕೊಂಡಿದ್ದ ಸ್ಯಾಂಡಲ್ವುಡ್ ನಟ ದಿಗಂತ್ (Diganth) ಆರೋಗ್ಯದ ಕುರಿತು ಆಸ್ಪತ್ರೆಯವರು ಹೆಲ್ತ್ ಬುಲೆಟಿನ್ (Diganth Health Report) ರಿಲೀಸ್ ಮಾಡಿದ್ದಾರೆ. ಗೋವಾದಿಂದ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ಏರ್ ಲಿಫ್ಟ್ ಮಾಡಿದ ಬಳಿಕ ನಿನ್ನೆ ದಿಗಂತ್ಗೆ 3 ಗಂಟೆಗಳ ಕಾಲ ಆಪರೇಷನ್ ಮಾಡಲಾಗಿದೆ. ಸರ್ಜರಿ ಬಳಿಕ ದಿಗಂತ್ ಆರೋಗ್ಯದಲ್ಲಿ ಕೊಂಚ ಚೇತರಿಕೆ ಕಂಡು ಬಂದಿದೆ ಎಂದು ವೈದ್ಯರು ತಿಳಿಸಿದ್ದಾರೆ. ವೈದ್ಯರ ತಂಡದಿಂದ ದಿಗಂತ್ಗೆ ಚಿಕಿತ್ಸೆ ನೀಡಲಾಗುತ್ತಿದೆ. ದಿಗಂತ್ ಆರೋಗ್ಯದಲ್ಲಿ ಸ್ವಲ್ಪ ಚೇತರಿಕೆ ಕಾಣುತ್ತಿದೆ. ಇನ್ನೂ ಮೂರು-ನಾಲ್ಕು ದಿನ ಆಸ್ಪತ್ರೆ ಉಳಿಯುವ ಸಾಧ್ಯತೆ ಇದೆ ಎಂದು ಮಣಿಪಾಲ್ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.
ದಿಗಂತ್ ಹೊಸ ಫೋಟೋ
ಆಪರೇಷನ್ ಬಳಿಕ ದಿಗಂತ್ ಅವರ ಹೊಸ ಫೋಟೋ ಹೊರ ಬಿದ್ದಿದೆ. ಫೋಟೋದಲ್ಲಿ ದಿಗಂತ್ ತಮ್ಸ್ ಅಪ್ ಗುರುತು ತೋರಿಸುತ್ತಿದ್ದು, ತಾನು ಚೆನ್ನಾಗಿದ್ದೇನೆ. ಸದ್ಯಕ್ಕೆ ಅಪಾಯವಿಲ್ಲ ಬೇಗನೇ ಗುಣಮುಖನಾಗಲಿದ್ದೇನೆ ಎಂಬರ್ಥದಲ್ಲಿ ಕೈ ಬೆರಳನ್ನು ತೋರಿದ್ದಾರೆ. ಈ ಫೋಟೋ ನೋಡಿದ ಅಭಿಮಾನಿಗಳಲ್ಲೂ ಒಂದು ರೀತಿಯ ಸಮಾಧಾನ ಮನೆ ಮಾಡಿದೆ. ಸದ್ಯಕ್ಕೆ ಯಾವುದೇ ಅಪಾಯವಿಲ್ಲ, ಸ್ವಲ್ಪ ದಿನಗಳ ಚಿಕಿತ್ಸೆ ಬಳಿಕ ದಿಗಂತ್ ಎಂದಿನಂತೆ ಆಗುತ್ತಾರೆ ಎಂಬ ಆಶಾಭಾವನೆ ಕುಟುಂಬಸ್ಥರು, ಚಿತ್ರರಂಗದವರು ಹಾಗೂ ಅಭಿಮಾನಿಗಳಲ್ಲಿ ಮೂಡಿದೆ.
ಇದನ್ನೂ ಓದಿ: Actor Diganth: ನಟ ದಿಗಂತ್ ಕತ್ತಿಗೆ ಬಲವಾದ ಪೆಟ್ಟು, ಗೋವಾದಿಂದ ಬೆಂಗಳೂರಿಗೆ ಏರ್ಲಿಫ್ಟ್
ನನ್ನ ಮಗನಿಗೆ ಏನು ಆಗಿಲ್ಲ
ದಿಗಂತ್ ಗೆ ಏನೂ ಆಗಲ್ಲ ಎಂದು ಡಾಕ್ಟರ್ ಹೇಳಿದ್ದಾರೆ. ನನ್ನ ಮಗ ಒಂದೆರಡು ದಿನಗಳಲ್ಲಿ ಎದ್ದು ಓಡಾಡ್ತಾನೆ ಅಂತ ಎಂದು ದಿಗಂತ್ ತಂದೆ ಹೇಳಿದ್ದಾರೆ. ಘಟನೆ ಹೇಗೆ ಆಯ್ತು ಎಂದು ನಾನು ನೋಡಿಲ್ಲ. ಓಡಾಡುವಾಗ ಬೀಳೋದು ಸಹಜ, ಚೆನ್ನಾಗಿ ಮಾತನಾಡ್ತಿದ್ದಾನೆ. ಆಪರೇಷನ್ಗೆ ಕರೆದುಕೊಂಡು ಹೋಗಿದ್ದಾರೆ. ಮೈನರ್ ಇರೋದ್ರಿಂದ ಈಗಲೇ ಆಪರೇಷನ್ ಮಾಡ್ತೀವಿ ಅಂತ ಕರೆದುಕೊಂಡು ಹೋಗಿದ್ದಾರೆ. ಮುಂದೆ ಸಮಸ್ಯೆ ಆಗಬಾರದು ಅಂತ ಈಗಲೇ ಆಪರೇಷನ್ ಮಾಡ್ತಿದ್ದಾರೆ ಎಂದು ದಿಗಂತ್ ತಂದೆ ಹೇಳಿದ್ದಾರೆ.
ಕುತ್ತಿಗೆ ಬೆನ್ನಿಗೆ ಬಲವಾದ ಪೆಟ್ಟು
ನಟ ದಿಗಂತ್ ತನ್ನ ಕುಟುಂಬಸ್ಥರ ಜೊತೆೆ ಗೋವಾಕ್ಕೆ ತೆರಳಿದ್ದ ವೇಳೆ ಘಟನೆಯಾಗಿದೆ. ಈ ಘಟನೆ ಹೇಗಾಯಿತು ತಿಳಿದಿಲ್ಲ ಕುತ್ತಿಗೆ ಬೆನ್ನಿಗೆ ಬಲವಾದ ಪೆಟ್ಟು ಬಿದ್ದಿದೆ. ದಿಗಂತ್ ಚೇತರಿಸಿಕೊಳ್ಳುತ್ತಿದ್ದಾರೆ.' ಎಂದು ಐಂದ್ರಿತಾ ತಾಯಿ ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ: Actor Diganth: ಸ್ಯಾಂಡಲ್ವುಡ್ ಕ್ಯೂಟ್ ಕಪಲ್ ಐಂದ್ರಿತಾ-ದಿಗಂತ್! ಅಪರೂಪದ ಫೋಟೋಗಳು ಇಲ್ಲಿವೆ ನೋಡಿ
ಸೋಮರ್ ಸಾಲ್ಟ್ ಮಾಡುವಾಗ ಘಟನೆ
ದಿಗಂತ್ ತಮ್ಮ ಪತ್ನಿ ಐಂದ್ರಿತಾ ರೈ ಅವರೊಂದಿಗೆ ರಜೆಗಾಗಿ ಗೋವಾಕ್ಕೆ ಬಂದಿದ್ದರು. ಫಿಟ್ನೆಸ್ ಫ್ರೀಕ್ ಆಗಿರುವ ಮತ್ತು ಸಾಹಸ ಕ್ರೀಡೆಗಳನ್ನು ಇಷ್ಟಪಡುವ ದಿಗಂತ್ ಸಮ್ಮರ್ಸಾಲ್ಟ್ ಮಾಡುವಾಗ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತದೆ.
ಏನಿದು ಸೋಮರ್ ಸಾಲ್ಟ್
ಸರಿಯಾಗಿ ಸೋಮರ್ ಸಾಲ್ಟ್ ಮಾಡದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ. ಅದನ್ನು ಎಲ್ಲೆಂದೆರಲ್ಲಿ ಮಾಡುವುದು ನಿಜಕ್ಕೂ ಡೇಂಜರ್. ಅದರಲ್ಲೂ ಎಲ್ಲಾ ಚೆನ್ನಾಗಿ ಕಲಿತಿದ್ದ ದಿಗಂತ್ ಅವರು ಎಡವಿದ್ದೆಲ್ಲಿ ಎನ್ನುವ ಪ್ರಶ್ನೆ ಉದ್ಭವವಾಗಿದೆ. ಗೋವಾ ಟ್ರಿಪ್ಗೆ ತೆರಳಿದ್ದು. ಇಲ್ಲಿ ಸಮುದ್ರ ತೀರದಲ್ಲಿ ಸಮ್ಮರ್ ಶಾಟ್ ಮಾಡುತ್ತಿದ್ದ ಸಂದರ್ಭದಲ್ಲಿ ಅವರ ಕುತ್ತಿಗೆಗೆ ಬಲವಾದ ಪೆಟ್ಟು ಬಿದ್ದಿದೆ ಎನ್ನಲಾಗಿದೆ . ಒಂದೇ ಒಂದು ಚೂರು ಕೂಡ ಎಡವಿದರು ಅಪಾಯ ಕಟ್ಟಿಟ್ಟ ಬುತ್ತಿ. ಪ್ರಾಣಕ್ಕೆ ಕುತ್ತು ತರುತ್ತೆ ಈ ಸಮ್ಮರ್ ಶಾಟ್ ಈ ಹಿಂದೆ ಸಮ್ಮರ್ ಶಾಟ್ ಮಾಡಲು ಹೋದ ಯುವಕನೊಬ್ಬ ಮೃತಪಟ್ಟಿದ್ದ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ