ಡ್ರಗ್ಸ್ ಪ್ರಕರಣದಲ್ಲಿ‌ ಸ್ಟಾರ್‌ ದಂಪತಿಗಳೇ ಪ್ರಮುಖ‌ ಸಾಕ್ಷಿ: ನಟಿ ರಾಗಿಣಿ, ಸಂಜನಾಗೆ ಇನ್ನಷ್ಟು ಸಂಕಷ್ಟ

ದಿಗಂತ್ ಹಾಗೂ ಐಂದ್ರಿತಾ ನೀಡಿದ ಹೇಳಿಕೆಯನ್ನು ಸಿಸಿಬಿ ಕ್ರಾಸ್‌ ಚೆಕ್‌ ಮಾಡುತ್ತಿದೆ. ದಂಪತಿಯ ಮೊಬೈಲ್ ಜಫ್ತಿ ಮಾಡಿ ಟೆಕ್ನಿಕಲ್ ಸೆಲ್​​ಗೆ ರವಾನೆ ಮಾಡಿದ್ದು, ಮೊಬೈಲ್​​ನಲ್ಲಿ ಸಿಗುವ ಮಾಹಿತಿ ಮೇರೆಗೆ ಮುಂದಿನ ತನಿಖೆ ಹೇಗಿರಲಿದೆ ಎಂಬುದು ನಿರ್ಧಾರವಾಗಲಿದೆ.

news18-kannada
Updated:September 17, 2020, 9:41 PM IST
ಡ್ರಗ್ಸ್ ಪ್ರಕರಣದಲ್ಲಿ‌ ಸ್ಟಾರ್‌ ದಂಪತಿಗಳೇ ಪ್ರಮುಖ‌ ಸಾಕ್ಷಿ: ನಟಿ ರಾಗಿಣಿ, ಸಂಜನಾಗೆ ಇನ್ನಷ್ಟು ಸಂಕಷ್ಟ
ಸಂಜನಾ, ರಾಗಿಣಿ
  • Share this:
ಬೆಂಗಳೂರು(ಸೆ.17): ಡ್ರಗ್ಸ್ ಪ್ರಕರಣದಲ್ಲಿ ಚಂದನವನದ ನಟಿಯರು ಸಾಲು ಸಾಲಾಗಿ ಬಂಧನಕ್ಕೊಳಗಾಗಿ ಜೈಲು ಸೇರುತ್ತಿದ್ದಾರೆ. ಸ್ಟಾರ್ ದಂಪತಿಗೂ ಸಿಸಿಬಿ ಬಲೆ ಬೀಸಿದ್ದು ಈಗಾಗಲೇ ವಿಚಾರಣೆ ಎದುರಿಸಿದ್ದಾರೆ. ಇದೀಗ ಈ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ದಿಗಂತ್, ಐಂದ್ರಿತಾ ರೇ ಡ್ರಗ್ಸ್ ಪ್ರಕರಣದ ಪ್ರಮುಖ ಸಾಕ್ಷಿಗಳಾಗಲು ಒಪ್ಪಿದ್ದಾರಂತೆ. ಇದರಿಂದ ರಾಗಿಣಿ, ಸಂಜನಾಗೆ ಮುಳುವಾದ್ರೆ, ಸಿನಿ ದಂಪತಿಗಳು ಸೇಫ್ ಆಗುವ ಸಾಧ್ಯತೆಗಳಿವೆ. ಇವರ ಮೊಬೈಲ್​​ಗಳು ಸಿಸಿಬಿ ಟೆಕ್ನಿಕಲ್ ಎವಿಡೆನ್ಸ್ ಹೋಗಿರುವುದರಿಂದ 'ಮನಸಾರೆ'ಯ ಮನಸುಗಳ ಹೃದಯ ಲಬ್ ಡಬ್ ಎನ್ನುತ್ತಿದೆ. ಚಂದನವನದಲ್ಲಿ ಈಗಾಗಲೇ ಸಿಸಿಬಿ ನಟಿ ರಾಗಿಣಿ, ಸಂಜನಾ ಅರೆಸ್ಟ್ ಮಾಡಿ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ. ಡ್ರಗ್ಸ್ ಪ್ರಕರಣದಲ್ಲಿ ಬಿಗ್ ಟ್ವಿಸ್ಟ್  ಸಿಕ್ಕಿದೆ. ಇದೀಗ ಈ ಪ್ರಕರಣದಲ್ಲಿ ಸ್ಟಾರ್‌ ದಂಪತಿ ಸೇಫ್, ಬಂಧಿತ ನಟಿಯರಿಗೆ ಶಾಕ್ ಕೊಡುವ ಸಾಧ್ಯತೆ ಹೆಚ್ಚಾಗಿ ಕಂಡುಬರುತ್ತದೆ‌.

ನಟಿ ಐಂದ್ರಿತಾ ರೇ, ನಟ ದಿಗಂತ್ ಡ್ರಗ್ಸ್​ ಕೇಸ್​​ನ ಪ್ರಮುಖ ಸಾಕ್ಷಿಗಳಾಗಲಿದ್ದಾರಂತೆ. ಡ್ರಗ್ಸ್ ಕೇಸ್ ಪ್ರಕರಣದಲ್ಲಿ ಸಿನಿ ದಂಪತಿ ಪ್ರಮುಖ ಸಾಕ್ಷಿಯಾಗುವ ಎಲ್ಲ ಅವಕಾಶಗಳಿವೆ ಎಂದು ಸಿಸಿಬಿ ನಂಬಲರ್ಹ ಮೂಲಗಳಿಂದ ಮಾಹಿತಿ ಲಭ್ಯವಾಗುತ್ತಿದೆ. ಡ್ರಗ್ಸ್ ಪ್ರಕರಣದಲ್ಲಿ ಬಂಧನದ ಹೊರತಾಗಿ ವಿಟ್ನೆಸ್​​ಗೆ ಮಾತ್ರ ಸ್ಟಾರ್ ದಂಪತಿ ಸೀಮಿತವಾಗಿ, 'ಸಾಕ್ಷಿಯಾಗಲು ನಾವು ರೆಡಿಯಿದ್ದೇವೆ. ಇವತ್ತೇ ಸಹಿ ಹಾಕ್ತೇವೆ' ಹೀಗಂತ ಸಿಸಿಬಿಗೆ ವಿಚಾರಣೆ‌ ಹಾಜರಾದ ಮೊದಲ ದಿನವೇ ಆಂಡಿ, ದೂದ್ ಪೇಡಾ ಆಸಕ್ತಿ ತೋರಿಸಿದ್ದಾರಂತೆ. ಈ ಮೂಲಕ ಡ್ರಗ್ಸ್ ಪ್ರಕರಣದಲ್ಲಿ ತಾವು ಸೇಫ್ ಆಗಲು ಪ್ಲಾನ್ ಮಾಡಿದ್ದಾರೆ.

ದಿಗಂತ್, ಐಂದ್ರಿತಾ ರೇ ವಿಚಾರಣೆಯಲ್ಲಿ ಸಾಕ್ಷಿಗಳಾಗಲು ಒಪ್ಪಿಕೊಳ್ಳುತ್ತಿದ್ದಂತೆ ಸಿಸಿಬಿ ಅಧಿಕಾರಿಗಳು 'ಮತ್ತೊಮ್ಮೆ ವಿಚಾರಣೆಗೆ ಬರುವವರಿಗೆ ನಿಮಗೆ ಅವಕಾಶ. ನಿಮ್ಮ ನಿರ್ಧಾರ, ನಿಮ್ಮ ತೀರ್ಮಾನ ಅಂದೇ ತಿಳಿಸಿ' ಎಂದು ಸ್ಟಾರ್‌ ದಂಪತಿಗೆ ಹೇಳಿ ಕಳುಹಿಸಿದ್ದಾರಂತೆ. ಇದರಿಂದ ಸಹಜವಾಗಿಯೇ ನಟಿ ರಾಗಿಣಿ, ಸಂಜನಾಗೆ ಮತ್ತಷ್ಟು ಸಂಕಷ್ಟ ಎದುರಾಗಿದೆ. ಯಾಕಂದ್ರೆ ನಟಿ ರಾಗಿಣಿ, ಸಂಜನಾ, ಉಳಿದ ಆರೋಪಿಗಳ ಜೊತೆ ಪಾರ್ಟಿಯಲ್ಲಿ ನೇರವಾಗಿ ಭಾಗಿಯಾದವರು ಇದೇ ಸಿನಿ ದಂಪತಿಗಳು. ದಿಗಂತ್, ಐಂದ್ರತಾ ರೇ ಹೇಳಿಕೆ ಈ ಪ್ರಕರಣದ‌ ಪ್ರಮುಖ ಸಾಕ್ಷಿಯಾಗುತ್ತೆ.

ಸಿಸಿಬಿ ನೀಡಿದ ನೋಟೀಸ್ ಸಂಬಂಧ ಮನಸಾರೆ ಜೋಡಿಗೆ ಫೋನ್‌ ಮಾಡಿದರೂ ರಿಸೀವ್ ಮಾಡಿದ್ದಿಲ್ಲ. ಯಾವಾಗ ನೋಟೀಸ್ ಪ್ರತಿ ವಾಟ್ಸಪ್​​ ನೋಡಿದ್ರೋ ವಾಪಾಸ್ ಪೋನ್ ಮಾಡಿ ವಿಚಾರಣೆಗೆ ಬರ್ತೇವೆ ಎಂದೇಳಿ ಕೇರಳದಿಂದ ಓಡೋಡಿ ಬಂದಿದ್ದರು‌. ವಿಚಾರಣೆ ವೇಳೆ ಸಿಸಿಬಿ ಅಧಿಕಾರಿಗಳಿಗೆ ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ. ಇಷ್ಟೆಲ್ಲ ಆದ್ರೂ ಸ್ಟಾರ್ ದಂಪತಿಗಳಿಗೆ ಆತಂಕ‌ ಕಡಿಮೆಯಾಗಿಲ್ಲ.‌ ದಿಗಂತ್ ಐಂದ್ರಿತಾಗೆ ಸಿಸಿಬಿಯಿಂದ‌ ಬುಲಾವ್ ಬರೋ ಹಿನ್ನೆಲೆ ಅದ್ಯಾವ ಆಯಾಮದಲ್ಲಿ ಪ್ರಶ್ನೆಗಳನ್ನ ಕೇಳ್ತಾರೋ ಅನ್ನೋ ಆತಂಕ ದಂಪತಿಯನ್ನು ಕಾಡುತ್ತಿದೆ.‌

ಇದನ್ನೂ ಓದಿ: ಯೋಗೇಶ್​ ಗೌಡ ಹತ್ಯೆ ಕೇಸ್​​: ತನಿಖೆ ತೀವ್ರಗೊಳಿಸಿದ ಸಿಬಿಐ; ಪತ್ನಿ ಮಲ್ಲಮ್ಮ ಸೇರಿ ಹಲವರ ವಿಚಾರಣೆ

ಈ ಮಧ್ಯೆ ವಿಚಾರಣೆ ವೇಳೆ ದಿಗಂತ್ ಹಾಗೂ ಐಂದ್ರಿತಾ ನೀಡಿದ ಹೇಳಿಕೆಯನ್ನು ಸಿಸಿಬಿ ಕ್ರಾಸ್‌ ಚೆಕ್‌ ಮಾಡುತ್ತಿದೆ. ದಂಪತಿಯ ಮೊಬೈಲ್ ಜಫ್ತಿ ಮಾಡಿ ಟೆಕ್ನಿಕಲ್ ಸೆಲ್​​ಗೆ ರವಾನೆ ಮಾಡಿದ್ದು, ಮೊಬೈಲ್​​ನಲ್ಲಿ ಸಿಗುವ ಮಾಹಿತಿ ಮೇರೆಗೆ ಮುಂದಿನ ತನಿಖೆ ಹೇಗಿರಲಿದೆ ಎಂಬುದು ನಿರ್ಧಾರವಾಗಲಿದೆ.
Published by: Ganesh Nachikethu
First published: September 17, 2020, 9:40 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading