Dhyan: ಒಂದು ಕಾಲದಲ್ಲಿ ಬ್ಯುಸಿ ನಟನಾಗಿ ಮಿಂಚಿದ ಧ್ಯಾನ್ ಈಗ ಏನು ಮಾಡ್ತಿದ್ದಾರೆ ಗೊತ್ತೇ?

Actor Dhyan: ಕನ್ನಡ ಹಾಗೂ ಹಿಂದಿ ಸಿನಿಮಾಗಳನ್ನು ನಟಿಸುವಾಗಲೇ ಇದ್ದಕ್ಕಿದ್ದಂತೆ ಚಿತ್ರರಂಗದಿಂದ ಕಣ್ಮರೆಯಾದ ಧ್ಯಾನ್ ಈಗ ಎಲ್ಲಿದ್ದಾರೆ?, ಏನು ಕೆಲಸ ಮಾಡುತ್ತಿದ್ದಾರೆ?, ಇಲ್ಲಿದೆ ಮಾಹಿತಿ.

ನಟ ಧ್ಯಾನ್.

ನಟ ಧ್ಯಾನ್.

 • Share this:
  ಸಮೀರ್ ದತ್ತಾ‌ನಿ. ಬಹುಶಃ ಈ ಹೆಸರು ಕನ್ನಡ ಚಿತ್ರ ರಸಿಕರಿಗೆ ಅಚ್ಟೊಂದು ಪರಿಚಿಯ ಇರಲಾರದು. ಇದು ಯಾವುದೇ ಒಬ್ಬ ಉದ್ಯಮಿಯ ಹೆಸರಲ್ಲ ಬದಲಿಗೆ ಸ್ಯಾಂಡಲ್​ವುಡ್​ನಲ್ಲಿ ಅಂದದ ನಟನಾಗಿ, ಯುವತಿಯರ ಹೃದಯಕ್ಕೆ ಕನ್ನ ಹಾಕಿದ ನಟ ಧ್ಯಾನ್. 2001ರಲ್ಲಿ ‘ನನ್ನ ಪ್ರೀತಿಯ ಹುಡುಗಿ’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ನಟ ಧ್ಯಾನ್​, ಹಿಂದಿ ಚಿತ್ರರಂಗದಲ್ಲಿ ಸಮೀರ್ ದತ್ತಾನಿ ಎಂದೇ ಗುರುತಿಸಿಕೊಂಡಿದ್ದಾರೆ. ಕನ್ನಡ ಪ್ರೇಕ್ಷಕನಿಗೆ ಧ್ಯಾನ್​ ಅಂತಾನೇ ಚಿರಪರಿಚಿತನಾದ ನಟ ಇವರು. ಧ್ಯಾನ್ ಎಂದೊಡನೆ ಮೊನಾಲಿಸಾ, ಅಮೃತಧಾರೆ ಸಿನಿಮಾಗಳು ತಕ್ಷಣ ಕಣ್ಣ ಮುಂದೆ ಬರುತ್ತವೆ. ಮುಂಬೈ ಮೂಲದ ಗುಜರಾತಿ ಕುಟುಂಬಕ್ಕೆ ಸೇರಿದ ಈ ಡ್ಯಾಶಿಂಗ್​ ಹುಡುಗನಿಗೆ ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಅಮೃತ ಧಾರೆ’ ಚಿತ್ರ ಧ್ಯಾನ್‌ಗೆ ಹೆಸರು ತಂದುಕೊತು. ನಂತರ ಸಿಹಿಮುತ್ತು’, ‘ಓ ಮನಸೇ’, ‘ಉದ್ಯಾನ್ ಎಕ್ಸ್‌ಪ್ರೆಸ್’, ‘ಮಥುರಾ ನಗರಿ’ ಎಂಬ ಕನ್ನಡ ಸಿನಿಮಾಗಳಲ್ಲಿ ಹಾಗೂ ಹಿಂದಿಯ ‘ವೆಲ್ ಡನ್ ಅಬ್ಬಾ’ ಹಾಗೂ ‘ಐ ಹೇಟ್ ಲವ್ ಸ್ಟೋರೀಸ್’ ಚಿತ್ರಗಳಲ್ಲೂ ಧ್ಯಾನ್ ಅಭಿನಯಿಸಿದ್ದಾರೆ.

  Once upon a time he was a star, Do you know what Dhyan Sameer Dattani is doing now? here is the detail
  ಹೆಂಡತಿ ರಿತಿಕಾ ಜೊತೆ ಧ್ಯಾನ್.


  ನಿರ್ದೇಶಕ ಸಂತೋಷ್ ಆನಂದ್​ ರಾಮ್​ ಮನೆಗೆ ಎಂಟ್ರಿ ಕೊಟ್ಟ ರಾಜಕುಮಾರ: ಶುಭ ಕೋರಿದ ಸೆಲೆಬ್ರಿಟಿಗಳು..!

  ಧ್ಯಾನ್ ಅವರು ನ್ಯಾಷನಲ್ ಲೆವೆಲ್ ಸ್ಕೇಟರ್ ಕೂಡಾ ಹೌದು. ಕನ್ನಡ ಕೆಲವು ಸಿನಿಮಾಗಳಲ್ಲಿ ನಾಯಕ ನಟನಾಗಿ ನಟಿಸಿ ಹೆಸರು ಮಾಡಿದರು. ಅತ್ತ ಬಾಲಿವುಡ್​ನಲ್ಲಿ ಕೂಡಾ ಒಂಬತ್ತು ಸಿನಿಮಾ ಮಾಡಿದರು. ಆದರೆ ದಿನಗಳೆದಂತೆ ಅವರಿಗೆ ಅವಕಾಶಗಳು ಕಡಿಮೆಯಾದವು. ಧ್ಯಾನ್ ಕೊನೆಯದಾಗಿ ನಮಗೆ ಕಂಡಿದ್ದು 2014 ರಲ್ಲಿ ಮಿಸ್ಟರ್ ಅಂಡ್ ಮಿಸೆಸ್ ರಾಮಾಚಾರಿ ಮತ್ತು 2015 ರಲ್ಲಿ ಐ ಲವ್ ಯೂ ಆಲಿಯಾ ಸಿನಿಮಾದಲ್ಲಿ‌ ಅತಿಥಿ ನಟನಾಗಿ. ಅದಾದ ನಂತರ ಅವರು ಮತ್ತಾವುದೋ ಸಿನಿಮಾದಲ್ಲಿ ಕಾಣಿಸಿಕೊಂಡಿಲ್ಲ.

  ಕನ್ನಡ ಹಾಗೂ ಹಿಂದಿ ಚಿತ್ರರಂಗದಲ್ಲಿ ಸಿನಿಮಾಗಳನ್ನು ನಟಿಸುವಾಗಲೇ ಇದ್ದಕ್ಕಿದ್ದಂತೆ ಚಿತ್ರರಂಗದಿಂದ ಧ್ಯಾನ್ ಕಣ್ಮರೆಯಾದರು. ಅನಂತರ ಎಲ್ಲೂ ಕೂಡಾ ಅವರ ಸುದ್ದಿ ಇಲ್ಲ. ಹಾಗಾದ್ರೆ ಅವರು ಈಗ ಏನು ಕೆಲಸ ಮಾಡುತ್ತಿದ್ದಾರೆ..?, ಎಲ್ಲಿದ್ದಾರೆ?, ಅವರ ಹಂಡತಿ ಯಾರು ಗೊತ್ತಾ..?

  ಧ್ಯಾನ್ 2011 ರಲ್ಲಿ ರಿತಿಕಾ ಎನ್ನುವವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಡೆಹರಾಡೂನ್​ನಲ್ಲಿ ಇವರ ಕಲ್ಯಾಣ ಜರುಗಿತು. ಸ್ಯಾಂಡಲ್​ವುಡ್, ಬಾಲಿವುಡ್ ಸೆಲೆಬ್ರಿಟಿಗಳು ಇವರ ಆರತಕ್ಷತೆಯಲ್ಲಿ ಪಾಲ್ಗೊಂಡು ಇವರಿಗೆ ಶುಭ ಹಾರೈಸಿದರು.

  ಆದರೆ ಬರಬರುತ್ತಾ ಧ್ಯಾನ್ ಅವರಿಗೆ ಅವಕಾಶಗಳು ಕಡಿಮೆಯಾಗಿಯೋ ಅಥವಾ ಅವರದೇ ಸ್ವಯಿಚ್ಛೆಯಿಂದಲೋ ಚಿತ್ರರಂಗದಿಂದ ಮಾಯವಾದ ಧ್ಯಾನ್ ಆನಂತರ ಯಾವುದೇ ಸಿನಿಮಾಗಳಲ್ಲಿಯೂ ಕಾಣಿಸಿಕೊಳ್ಳಲಿಲ್ಲ.

  Jogi Prem: ಸಾಮಾಜಿಕ ಜಾಲತಾಣದಲ್ಲಿ ಜೋಗಿ ಜಾತ್ರೆ: ಅಭಿಮಾನಿಗಳ ಸಂಭ್ರಮಕ್ಕೆ ಜೊತೆಯಾದ ನಿರ್ದೇಶಕ ಪ್ರೇಮ್​..!

  ಇನ್ನು ಧ್ಯಾನ್ ಅವರ ಕುಟುಂಬ ಟೆಕ್ಸ್ ಟೈಲ್ ಬಿಜಿನೆಸ್ ಮಾಡುತ್ತಿದ್ದು ಧ್ಯಾನ್ ಅವರು ಸಹ ಅದನ್ನೇ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ ಎಂದು ತಿಳಿದು ಬಂದಿದೆ. ಅಷ್ಟೇ ಅಲ್ಲದೇ ಧ್ಯಾನ್ ಅವರು ಮುಂಬೈನಲ್ಲಿ ಕಾಲಾ ಗೋಡಾ ಎನ್ನುವ ಚೈನೀಸ್ ರೆಸ್ಟೋರೆಂಟ್ ಮಾಲೀಕರು ಕೂಡಾ ಆಗಿದ್ದಾರೆ.
  Published by:Vinay Bhat
  First published: