ಅದ್ಧೂರಿಯಾಗಿ ನೆರವೇರಿದ ಧ್ರುವ ಸರ್ಜಾ- ಪ್ರೇರಣಾ ನಿಶ್ಚಿತಾರ್ಥ; ಸ್ಯಾಂಡಲ್​ವುಡ್​ ತಾರೆಯರು ಹಾಜರು

ಇಂದು ಬೆಳಿಗ್ಗೆ 11ಕ್ಕೆ ಬನಶಂಕರಿಯ ಧರ್ಮಗಿರಿ ದೇವಾಲಯದಲ್ಲಿನಿಶ್ಚಿತಾರ್ಥ ನಡೆದಿದೆ. ಈ ಜೋಡಿಯ ನಿಶ್ಚಿತಾರ್ಥಕ್ಕೆ ನಟ ಅರುಣ್ ಸಾಗರ್ ಅವರ ಕುಸುರಿಯಲ್ಲಿ ತೆಂಗಿನಗರಿಯ ವೇದಿಕೆ ಸಜ್ಜಾಗಿದೆ.

Anitha E | news18
Updated:December 9, 2018, 3:01 PM IST
ಅದ್ಧೂರಿಯಾಗಿ ನೆರವೇರಿದ ಧ್ರುವ ಸರ್ಜಾ- ಪ್ರೇರಣಾ ನಿಶ್ಚಿತಾರ್ಥ; ಸ್ಯಾಂಡಲ್​ವುಡ್​ ತಾರೆಯರು ಹಾಜರು
ಧ್ರುವಾ-ಪ್ರೇರಣಾ ನಿಶ್ಚಿತಾರ್ಥದ ಕ್ಷಣ
Anitha E | news18
Updated: December 9, 2018, 3:01 PM IST
ಧ್ರುವ ಸರ್ಜಾ ಹಾಗೂ ಪ್ರೇರಣಾ ವಿವಾಹದ ಕುರಿತು ಇತ್ತೀಚೆಗಷ್ಟೆ ಸುದ್ದಿಯಾಗಿತ್ತು. ಸದ್ಯದಲ್ಲೇ ಅವರು ಹಣೆಮಣೆ ಏರಲಿದ್ದು, ಇಂದು ಅವರ ನಿಶ್ಚಿತಾರ್ಥ ನೆರವೇರಿದೆ.

ಧ್ರುವ ತನ್ನ ಬಾಲ್ಯದ ಗೆಳತಿ ಪ್ರೇರಣಾರೊಂದಿಗೆ ಇಂದು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.  ಬೆಂಗಳೂರಿನ ಬನಶಂಕರಿಯಲ್ಲಿ ಸರಳವಾಗಿ ಕುಟುಂಬದ ಆಪ್ತರು ಹಾಗು ಚಿತ್ರರಂಗದ ಕೆಲವರು ಗಣ್ಯರ ಸಮ್ಮುಖದಲ್ಲಿ ಅವರು ನಿಶ್ಚಿತಾರ್ಥ ನೆರವೇರಿಸಿಕೊಂಡರು. ನಿರ್ದೇಶಕ ಬಹದ್ಧೂರ್ ಚೇತನ್, 'ಚಾಲೆಂಜಿಂಗ್​ ಸ್ಟಾರ್​' ದರ್ಶನ್​, ಆಯೋಗ್ಯ ಚಿತ್ರದ ಖ್ಯಾತಿಯ ಮಹೇಶ್,ನಿರ್ದೇಶಕ ಹರ್ಷ ಸೇರಿ ಅನೇಕರು ನಿಶ್ಚಿತಾರ್ಥದಲ್ಲಿ ಪಾಲ್ಗೊಂಡಿದ್ದರು.

 ಧ್ರುವ ಕುಟುಂಬದವರು ಆಂಜನೇಯ ಭಕ್ತರು. ಹಾಗಾಗಿ ಇಂದು ಬೆಳಿಗ್ಗೆ 11ಕ್ಕೆ ಬನಶಂಕರಿಯ ಧರ್ಮಗಿರಿಯ ಆಂಜನೇಯ ಸ್ವಾಮಿ ದೇವಾಲಯದಲ್ಲಿನಿಶ್ಚಿತಾರ್ಥ ನೆರವೇರಿತು. ಧ್ರುವ ಮಾವ ಅರ್ಜುನ್ ಸರ್ಜಾ ಅಲಂಕಾರದ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ಕಲಾ ನಿರ್ದೇಶಕ ಅರುಣ್ ಸಾಗರ್ ಕೈಚಳಕದಲ್ಲಿ ಅದ್ದೂರಿ ಸೆಟ್ ಮೂಡಿ ಬಂದಿದೆ. ಪ್ರೇರಣಾ ಉಡಲಿರುವ ಸೀರೆ ಕೋಲ್ಕತ್ತದಲ್ಲಿ ವಿನ್ಯಾಸ ಗೊಂಡಿದೆ. ವಿಶೇಷ ಎಂದರೆ, ಧ್ರುವ ಬರೋಬ್ಬರಿ 21 ಲಕ್ಷ ರೂ. ಉಂಗುರವನ್ನು ಪ್ರೇರಣಾ ಅವರಿಗೆ ತೊಡಿಸಿದ್ದಾರೆ.

ಇನ್ನು, ಆಗಮಿಸಿದ ಅತಿಥಿಗಳಿಗೆ ವಿಶೇಷ ಅಡುಗೆ ಮಾಡಲಾಗಿದೆ. ಸಿಹಿ ಕಡುಬು, ಹೋಳಿಗೆ, ಪನ್ನೀರ್ ಕಾರ್ನ್, ಜಾಮೂನ್, ವೈಟ್ ರೈಸ್ ಸಾಂಬರ್ ಸೇರಿ ಅನೇಕ ವಿಶೇಷ ತಿಂಡಿಗಳನ್ನು ಮಾಡಲಾಗಿದೆ.  ಇತ್ತೀಚೆಗೆ ಅವರ ಜನ್ಮ ದಿನದಂದು ಮಾತನಾಡಿದ್ದ ಧ್ರುವ, 'ಮುಂದಿನ ಹುಟ್ಟುಹಬ್ಬದೊಳಗೆ ನಾನು ಹಸೆಮಣೆ ಏರುತ್ತೇನೆ. ನಾನು ವಿವಾಹವಾದರೆ ಅದು ಪ್ರೇಮವಿವಾಹವೇ' ಎಂದು ಹೇಳಿಕೊಂಡಿದ್ದರು. ಈಗ ಅವರು ನುಡಿದಂತೆ ನಡೆಯುತ್ತಿದ್ದಾರೆ.

First published:December 7, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ