Kishore Pattikonda: ಈಗ ಹೇಗಿದ್ದಾರೆ ಜೇಮ್ಸ್ ಚಿತ್ರದ ನಿರ್ಮಾಪಕ ಕಿಶೋರ್? ಹೆಲ್ತ್ ಬುಲೆಟಿನ್ ಬಿಡುಗಡೆ

ಕಿಶೋರ್ ಪತ್ತಿಕೊಂಡ ಅವರ ಆರೋಗ್ಯದಲ್ಲಿ ಏರುಪೇರಾದ ಹಿನ್ನಲೆ ಇಂದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೀಗಾಗಿ ಧೀರೇನ್‌ ರಾಮ್‌ಕುಮಾರ್‌ ಅವರು ಕಿಶೋರ್ ಪತ್ತಿಕೊಂಡ ಅವರ ಆರೋಗ್ಯ ವಿಚಾರಿಸಲು ಆಸ್ಪತ್ರೆಗೆ ತೆರಳಿದ್ದಾರೆ.

ಕಿಶೋರ್ ಪತ್ತಿಕೊಂಡ

ಕಿಶೋರ್ ಪತ್ತಿಕೊಂಡ

  • Share this:
ನಟ ಪುನೀತ್ ರಾಜ್ ಕುಮಾರ್ (Puneeth Rajkumar) ಅಭಿನಯದ ಕೊನೆಯ ಚಿತ್ರ ಜೇಮ್ಸ್ (james) ಬಿಡುಗಡೆಯಾಗಿ 100 ದಿನಗಳು ಯಶಸ್ವಿ ಪ್ರದರ್ಶನ ಕಂಡಿದೆ. ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದ ಸ್ಯಾಂಡಲ್ ವುಡ್‌ನ ಪ್ರಸಿದ್ದ ನಿರ್ಮಾಪಕ ಕಿಶೋರ್ ಪತ್ತಿಕೊಂಡ (Kishore Pathikonda) ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ಸದ್ಯ ಅವರನ್ನು ಆಸ್ಪತ್ರೆಅಗೆ ದಾಖಲಾಗಿದ್ದಾರೆ. ಸದ್ಯ ಧೀರೇನ್‌ ರಾಮ್‌ಕುಮಾರ್‌ ಅವರು ಕಿಶೋರ್ ಪತ್ತಿಕೊಂಡ ಅವರ ಅರೋಗ್ಯ ವಿಚಾರಿಸಲು ಆಸ್ಪತ್ರೆಗೆ ಬಂದಿದ್ದು, ಆರೋಗ್ಯದ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಕಿಶೋರ್ ಪತ್ತಿಕೊಂಡ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡಿದ್ದು, ಔಟ್ ಆಫ್ ಡೇಂಜರ್ ಎಂದು ವೈದ್ಯರು ತಿಳಿಸಿದ್ದಾರೆ ಎಂದು ಧೀರೆನ್ ರಾಮ್‌ಕುಮಾರ್ ಹೇಳಿದ್ದಾರೆ.

ಕಿಶೋರ್ ಪತ್ತಿಕೊಂಡ ಹೆಲ್ತ್ ಬುಲೆಟಿನ್ ಬಿಡುಗಡೆ:

ಸದ್ಯ, ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿರುವ ನಿರ್ಮಾಪಕ ಕಿಶೋರ್​ ಅವರ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಲಾಗಿದೆ. ಶೇಷಾದ್ರಿಪುರಂನ ಅಪೋಲೋ ಆಸ್ಪತ್ರೆಯಿಂದ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಲಾಗಿದ್ದು, ಕಿಶೋರ್ ಪತ್ತಿಕೊಂಡ ಆಸ್ಪತ್ರೆ ಗೆ ಬಂದಾಗ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು. ಮೆದುಳಿನ ಎಡಭಾಗದಲ್ಲಿ ರಕ್ತಸ್ರಾವವಾಗುತ್ತಿದ್ದರಿಂದ ವೈದ್ಯರು ಸರ್ಜರಿ ಮಾಡಿದ್ದಾರೆ. ನಂತರ ಇಂದು ಬೆಳಿಗ್ಗಿನ ಜಾವ ಐಸಿಯುಗೆ ಶಿಫ್ಟ್ ಮಾಡಲಾಗಿದ್ದು, ಈಗ ಸದ್ಯ ಐಸಿಯು ನಲ್ಲಿ ಚಿಕಿತ್ಸೆ ಮುಂದುವರಿದಿದೆ‘ ಎಂದು ಹೆಲ್ತ್ ಬುಲೆಟಿನ್ ನಲ್ಲಿ ತಿಳಿಸಲಾಗಿದೆ.

ಕಿಶೋರ್ ಪತ್ತಿಕೊಂಡ ಔಟ್ ಆಫ್ ಡೇಂಜರ್:

ಇನ್ನು, ಕಿಶೋರ್ ಪತ್ತಿಕೊಂಡ ಅವರ ಆರೋಗ್ಯದಲ್ಲಿ ಏರುಪೇರಾದ ಹಿನ್ನಲೆ ಇಂದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೀಗಾಗಿಧೀರೆನ್ ರಾಮ್‌ಕುಮಾರ್ ಅವರು ಕಿಶೋರ್ ಪತ್ತಿಕೊಂಡ ಅವರ ಆರೋಗ್ಯ ವಿಚಾರಿಸಲು ಆಸ್ಪತ್ರೆಗೆ ತೆರಳಿದ್ದಾರೆ. ಈ ವೇಳೆ ಮಾಧ್ಯಮಗಳಿಗೆ ಕಿಶೋರ್ ಅವರ ಆರೋಗ್ಯದ ಕುರಿತು ಮಾತಿ ಹಂಚಿಕೊಂಡಿರುವ ಧೀರೇನ್‌ ರಾಮ್‌ಕುಮಾರ್‌, ‘ಕಿಶೋರ್ ಅವರಿಗೆ ಬಿ ಪಿ ಏರುಪೇರ್ ಆಗಿತ್ತು. ನಿನ್ನೆ ಮನೆಯಲ್ಲಿ ಬಿಪಿ ವೇರಿಯೇಷನ್ ಆದ ಹಿನ್ನಲೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಇದೀಗ ಮೆದುಳಿನ ಸರ್ಜರಿ ಆಗಿದೆ ಮೆಡಿಕೇಷನ್ ನಡಿತಿದೆ. ಸದ್ಯ ಕಿಶೋರ್​ ಅವರು ಪ್ರಜ್ಞಾಹೀನರಾಗಿದ್ದು, ಟ್ರಿಂಟ್ ಮೆಂಟ್ ನಡಿತಿದ್ದು, 24 ಗಂಟೆಗಳಲ್ಲಿ ಗೊತ್ತಾಗುತ್ತೆ. ಇದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆಯುತ್ತದೆ. ಅಲ್ಲದೇ ಕಿಶೋರ್​ ಅವರು ಔಟ್ ಆಫ್ ಡೇಂಜರ್ ಎಂದು ವೈದ್ಯರು ಹೇಳಿದ್ದಾರೆ.

ಧೀರೆನ್ ರಾಮ್‌ಕುಮಾರ್ ಚಿತ್ರಕ್ಕೆ ಕಿಶೋರ್ ಬಂಡವಾಳ:

ಧೀರೆನ್ ರಾಮ್‌ಕುಮಾರ್ ಅವರು ಸದ್ಉ ಶಿವ 143 ಸಿನಿಮಾದಲ್ಲಿ ನಟಿಸುತ್ತಿದ್ದು, ಈ ಸಿನಿಮಾದ ನಂತರ ನಿರ್ದೇಶಕ ಶಂಕರ್‌ ನಿರ್ದೇಶನದಲ್ಲಿ ದೊಡ್ಮನೆಯ ಕುಡಿ ಧೀರೇನ್‌ ರಾಮ್‌ಕುಮಾರ್‌ ಸಿನಿಮಾ ಮಾಡಲಿದ್ದಾರೆ. ಈ ಚಿತ್ರಕ್ಕೆ ಪುನೀತ್ ರಾಜ್ ಕುಮಾರ್ ನಟನೆಯ ಕೊನೆಯ ಸಿನಿಮಾ ಜೇಮ್ಸ್ ನಿರ್ಮಾಣ ಮಾಡಿದ್ದ ಕಿಶೋರ್ ಪತ್ತೆಕೊಂಡ ಧೀರೆನ್ ರಾಮ್‌ಕುಮಾರ್ ಅವರಿಗೂ ಬಂಡವಾಳ ಹೂಡಲಿದ್ದಾರೆ.

ಇದನ್ನೂ ಓದಿ: James Movie: ಜೇಮ್ಸ್ ಸಿನಿಮಾ ನಿರ್ಮಾಪಕ ಕಿಶೋರ್ ಆರೋಗ್ಯದಲ್ಲಿ ಏರುಪೇರು, ಆಸ್ಪತ್ರೆಗೆ ದಾಖಲು

ಶತದಿನೋತ್ಸವ ಆಚರಿಸಿದ ‘ಜೇಮ್ಸ್‘:

ಹೌದು, ಪುನೀತ್ ರಾಜ್​ಕುಮಾರ್ ಅಭಿನಯದ ಕೊನೆಯ ಚಿತ್ರ ‘ಜೇಮ್ಸ್‘ ಚಿತ್ರ ರಾಜ್ಯಾದ್ಯಂತ ಭರ್ಜರಿ ಪ್ರದರ್ಶನ ಕಂಡಿತ್ತು. ಅಲ್ಲದೇ ಚಿತ್ರವು 100 ದಿನಗಳನ್ನು ಕಂಪ್ಲಿಟ್​ ಮಾಡುವ ಮೂಲಕ ಶತದಿನೋತ್ಸವ ಆಚರಿಸಿತ್ತು. ಜೇಮ್ಸ್ ಸಿನಿಮಾದ ಬಿಡುಗಡೆಯನ್ನು ಅಭಿಮಾನಿಗಳು ಹಬ್ಬದಂತೆ ಆಚರಿಸಿದ್ದರು. ಕರ್ನಾಟಕ ಮಾತ್ರವಲ್ಲದೇ ಅಕ್ಕ ಪಕ್ಕದ ರಾಜ್ಯಗಳಲ್ಲಿ ಸಹ ಜೇಮ್ಸ್ ಬಿಡುಗಡೆಯಾಗಿತ್ತು. ಆಂಧ್ರ ಮತ್ತು ತೆಲಂಗಾಣದಲ್ಲಿ 300 ಕ್ಕೂ ಹೆಚ್ಚಿನ ಚಿತ್ರಮಂದಿರಗಳಲ್ಲಿ ಜೇಮ್ಸ್ ರಿಲೀಸ್ ಆಗಿತ್ತು.

ಇದನ್ನೂ ಓದಿ: Naga Chaitanya: ಡಬಲ್ ಮೀನಿಂಗ್ ಬಗ್ಗೆ ಈ ರೀತಿ ಹೇಳಿದ್ರಾ ನಾಗ ಚೈತನ್ಯ? ವೈರಲ್ ಆಯ್ತು ಚೈ ಕಾಮೆಂಟ್

ಅಪ್ಪು ಅಭಿನಯದ ಜೇಮ್ಸ್, ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ದಾಖಲೆ ಬರೆದಿದ್ದು, ಜೇಮ್ಸ್ ಸ್ಯಾಟಲೈಟ್ ರೈಟ್ಸ್ ಕನ್ನಡದಲ್ಲಿ ಬರೋಬ್ಬರಿ 13.80 ಕೋಟಿಗೆ ಮಾರಾಟವಾಗಿದೆ. ಈ ಹಿಂದೆ ರಾಕಿಂಗ್ ಸ್ಟಾರ್​ ಯಶ್​ ಅಭಿನಯದ ಕೆಜಿಎಫ್​ ಸ್ಯಾಟಲೈಟ್ ರೈಟ್ಸ್ ಬರೋಬ್ಬರಿ 6 ಕೋಟಿಗೆ ಮಾರಾಟವಾಗಿ ದಾಖಲೆ ಮಾಡಿತ್ತು. ಮೂಲಗಳ ಪ್ರಕಾರ ವಿವಿಧ ಭಾಷೆಗಳು ಸೇರಿ 80 ಕೋಟಿಗೆ ಟಿವಿ ರೈಟ್ಸ್ ಗೆ ಸೇಲಾಗಿದೆ ಎನ್ನಲಾಗಿದೆ.
Published by:shrikrishna bhat
First published: