Actor Dhanveer: ಶೂಟಿಂಗ್ ವೇಳೆ ಗಾಯ ಮಾಡಿಕೊಂಡ ನಟ ಧನ್ವೀರ್! ಈಗ ಹೇಗಿದೆ ಗೊತ್ತಾ 'ವಾಮನ'ನ ಆರೋಗ್ಯ?
ಧನ್ವೀರ್ ಗೌಡ ಅಭಿನಯದ ವಾಮನ ಸಿನಿಮಾದ ಚಿತ್ರೀಕರಣ ನಡೆಯುತ್ತಿತ್ತು. ಇಲ್ಲಿ ಫೈಟಿಂಗ್ ಸೀನ್ಗಳನ್ನು ಚಿತ್ರೀಕರಿಸಲಾಗ್ತಿತ್ತು. ಈ ವೇಳೆ ರೋಪ್ ನಿಂದ ಕೆಳಗೆ ಬಿದ್ದು ಧನ್ವೀರ್ ಗೌಡ ಗಾಯಗೊಂಡಿದ್ದಾರೆ.
ಕನ್ನಡದ ಭರವಸೆಯ ಯುವ ನಟ (Hero), ಬಜಾರ್ (Bazaar), ಶೋಕ್ದಾರ್ ಖ್ಯಾತಿಯ ನಟ ಧನ್ವೀರ್ ಗೌಡ (Dhanveer Gowda) ಗಾಯಗೊಂಡಿದ್ದಾರೆ. ಶೂಟಿಂಗ್ (Shooting) ವೇಳೆ ಧನ್ವೀರ್ ಗೌಡ ತಮ್ಮ ಕೈಗೆ ಪೆಟ್ಟು (Injury) ಮಾಡಿಕೊಂಡಿದ್ದಾರೆ. ಶಂಕರ್ ರಾಮನ್ (Shankar Raman) ಸಾರಥ್ಯದಲ್ಲಿ ಮೂಡಿ ಬರ್ತಿರುವ ವಾಮನ (Vamana) ಸಿನಿಮಾದ (Cinema) ಫೈಟಿಂಗ್ ದೃಶ್ಯಗಳ(Fighting Scene) ಚಿತ್ರೀಕರಣದ ವೇಳೆ ಅವಘಡ ಸಂಭವಿಸಿದೆ. ಗಾಯಗೊಂಡು, ಕೈಗೆ ಬ್ಯಾಂಡೇಸ್ ಹಾಕಿರುವ ಚಿತ್ರಗಳು (Photos) ಸೋಶಿಯಲ್ ಮೀಡಿಯಾದಲ್ಲಿ (Social Media) ಶೇರ್ (Share) ಆಗಿವೆ. ಅವರ ಆರೋಗ್ಯ (Health) ಹೇಗಿದೆ? ವೈದ್ಯರು (Doctor) ಏನು ಹೇಳಿದ್ದಾರೆ ಅಂತೆಲ್ಲ ಅಭಿಮಾನಿಗಳು (Fans) ಗಾಬರಿಗೊಂಡಿದ್ದಾರೆ.
ವಾಮನ ಸಿನಿಮಾ ಚಿತ್ರೀಕರಣದ ವೇಳೆ ಅವಘಡ
ಬೆಂಗಳೂರಿನ ಯಲಹಂಕದಲ್ಲಿ ಧನ್ವೀರ್ ಗೌಡ ಅಭಿನಯದ ವಾಮನ ಸಿನಿಮಾದ ಚಿತ್ರೀಕರಣ ನಡೆಯುತ್ತಿತ್ತು. ಇಲ್ಲಿ ಫೈಟಿಂಗ್ ಸೀನ್ಗಳನ್ನು ಚಿತ್ರೀಕರಿಸಲಾಗ್ತಿತ್ತು. ಈ ವೇಳೆ ರೋಪ್ ನಿಂದ ಕೆಳಗೆ ಬಿದ್ದ ಧನ್ವೀರ್ ಗೌಡ ಗಾಯಗೊಂಡಿದ್ದಾರೆ. ಅವರ ಕೈಗೆ ಪೆಟ್ಟಾಗಿದೆ. ತಕ್ಷಣ ಆಸ್ಪತ್ರೆಗೆ ತೆರಳಿ ಧನ್ವೀರ್ ಚಿಕಿತ್ಸೆ ಪಡೆದುಕೊಂಡಿದ್ದಾರೆ.
ನಟ ಧನ್ವೀರ್ ಗೌಡಗೆ ಏನಾಗಿದೆ?
ವಾಮನ ಶೂಟಿಂಗ್ ವೇಳೆ ಆದ ಅನಾಹುತದಿಂದ ಧನ್ವೀರ್ ಗೆ ಪಿಂಗರ್ ಫ್ಯಾಕ್ಚರ್ ಆಗಿದೆ. ಹೀಗಿದ್ದರೂ ಸಹ ಧನ್ವೀರ್ ಬ್ರೇಕ್ ಪಡೆದುಕೊಂಡು ಶೂಟಿಂಗ್ ನಲ್ಲಿ ಭಾಗಿಯಾಗಿದ್ದಾರೆ. ಜಯತೀರ್ಥ ಆಕ್ಷನ್ ಕಟ್ ಹೇಳಿರುವ ಕೈವ ಸಿನಿಮಾದ ಶೂಟಿಂಗ್ ಗೆ ಡೇಟ್ ಫಿಕ್ಸ್ ಆಗಿದೆ. ಹೀಗಾಗಿ ಈ ಚಿತ್ರೀಕರಣಕ್ಕೆ ಯಾವುದೇ ತೊಂದರೆ ಆಗಬಾರದು ಅಂತಾ ಧನ್ವೀರ್ ಏಟಾದರು ವಾಮನ ಚಿತ್ರೀಕರಣ ಮುಂದುವರೆಸಿದ್ದಾರೆ.
ವಾಮನನಾಗಿ ಕಾಣಿಸಿಕೊಳ್ಳಲಿರುವ ಧನ್ವೀರ್
'ಶೋಕ್ದಾರ್' ಖ್ಯಾತಿಯ ಧನ್ವೀರ್ ಗೌಡ ನಟನೆಯ ಮೂರನೇ ಸಿನಿಮಾ 'ವಾಮನ' ಆಗಿದೆ. ಬಜಾರ್ ಸಿನಿಮಾ ಮೂಲಕ ಬಣ್ಣದ ಲೋಕದಲ್ಲಿ ಅದೃಷ್ಟ ಪರೀಕ್ಷೆಗಿಳಿದ ಧ್ವನೀರ್, ಮೊದಲ ಸಿನಿಮಾದಲ್ಲಿಯೇ ಸಕ್ಸಸ್ ಸಿಕ್ಸರ್ ಬಾರಿಸಿದ್ದರು. ಇದಾದ ಬಳಿಕ ಶ್ರೀಲಿಲಾ ಜೊತೆ ಬೈ ಟು ಲವ್ ಸಿನಿಮಾದಲ್ಲಿ ನಟಿಸಿದರು. ಅದು ವೀಕ್ಷಕರಿಂದ ಮೆಚ್ಚುಗೆ ಪಡೆಯಿತು. ಇದೀಗ ಮೂರನೇ ಸಿನಿಮಾ ವಾಮನದಲ್ಲಿ ನಟಿಸುತ್ತಿದ್ದಾರೆ ಧನ್ವೀರ್.
ಈಗಾಗಲೇ ಧ್ವನೀರ್ ಮೂರನೇ ಸಿನಿಮಾದ ಟೈಟಲ್ ಹಾಗೂ ಫಸ್ಟ್ ಲುಕ್ ರಿವೀಲ್ ಆಗಿದೆ. ಈ ಸಿನಿಮಾದ ಫಸ್ಟ್ ಲುಕ್ನಲ್ಲಿ ಕೈಯಲ್ಲಿ ಚಾಕು ಹಿಡಿದು ಖಡಕ್ ಲುಕ್ ನಲ್ಲಿ ಧನ್ವೀರ್ ಮಿಂಚಿದ್ದರು. ಕನ್ನಡ ಮತ್ತು ತೆಲುಗು ಚಿತ್ರಗಳಿಗೆ ಸ್ಕ್ರಿಪ್ಟ್ ರೈಟರ್ ಆಗಿರುವ ಶಂಕರ್ ರಾಮನ್ ಈಗ ನಿರ್ದೇಶಕರಾಗಿದ್ದಾರೆ.
ಹೊಸ ರೂಪದಲ್ಲಿ ಬರುತ್ತಿದೆ ವಾಮನ
ಸಿನಿಮಾ ಬದುಕಿನ 13 ವರ್ಷದ ಅನುಭವವನ್ನೂ ಈ ಸಿನಿಮಾಗೆ ಧಾರೆ ಎರೆಯುತ್ತಿರುವ ಶಂಕರ್ ರಾಮನ್, ಮಾಫಿಯಾ ಲೋಕದ ಕಥೆ ಜೊತೆ ಆಕ್ಷನ್ ಎಂಟರ್ ಟ್ರೈನರ್ ವಾಮನ ಸಿನಿಮಾವನ್ನು ಧನ್ವೀರ್ಗೆ ಸಿದ್ಧಪಡಿಸಿದ್ದಾರೆ. ಈಕ್ವಿನಾಕ್ಸ್ ಗ್ಲೋಬಲ್ ಎಂಟರ್ಟೈನ್ಮೆಂಟ್ಸ್ ಪ್ರೊಡಕ್ಷನ್ ನಡಿ ಧನ್ವೀರ್ ಮೂರನೇ ಸಿನಿಮಾಗೆ ಚೇತನ್ ಕುಮಾರ್ ಗೌಡ ಬಂಡವಾಳ ಹೂಡಲಿದ್ದಾರೆ.
ನನ್ನ ಮೂರನೇ ಸಿನಿಮಾ 'ವಾಮನ' ನನ್ನ ಎರಡನೇ ಸಿನಿಮಾಗೆ ತದ್ವಿರುದ್ಧವಾದ ಸಬ್ಜೆಕ್ಟ್. ಕಂಪ್ಲೀಟ್ ರಾ ಆಗಿದೆ ಅದು ಅಂತ ಧನ್ವೀರ್ ಈ ಹಿಂದೆ ಹೇಳಿದ್ದರು. ಸಮಾಜಕ್ಕೆ ಸಂದೇಶ ನೀಡುವಂತಹ ವಿಷಯ ಅದರಲ್ಲಿದೆ. ಮುಂದಿನ ದಿನಗಳಲ್ಲಿಯೂ ನಾನು ಯಾವುದೇ ಸಿನಿಮಾ ಮಾಡಿದರೂ ಸಮಾಜಕ್ಕೆ ಸಂದೇಶ ನೀಡುವಂತಹ ವಿಷಯಗಳನ್ನು ಆಯ್ಕೆ ಮಾಡುತ್ತೇನೆ. ಒಬ್ಬ ನಟನನ್ನು ಜನರು ನೋಡುತ್ತಾರೆ ಎಂದರೆ ಆತನ ಸಿನಿಮಾಗಳಿಂದ ಸಮಾಜಕ್ಕೆ ಒಂದು ಕೊಡುಗೆ ಇರಬೇಕು ಎಂಬುದು ನನ್ನಾಸೆ ಅಂತ ಧನ್ವೀರ್ ಗೌಡ ಹೇಳಿದ್ದಾರೆ.
Published by:Annappa Achari
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ