Dhanush-Aishwarya Rajinikanth: ನಟ ಧನುಷ್ ಮಾಜಿ ಪತ್ನಿಗೆ ಮಾಡಿದ್ದ ಟ್ವೀಟ್ ಎಂತದ್ದು ಗೊತ್ತೇ? ಇದಕ್ಕೆ ಐಶ್ವರ್ಯಾ ಏನ್ ಹೇಳಿದ್ರು ನೋಡಿ

ನಟ ಧನುಷ್ ತನ್ನಿಂದ ಬೇರ್ಪಟ್ಟ ನಂತರವೂ ಹೆಂಡತಿಯ ಕೆಲಸಕ್ಕೆ ಮುಕ್ತವಾಗಿಯೇ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಂಚಿಕೊಳ್ಳುವುದರ ಮೂಲಕ ಮೆಚ್ಚುಗೆಯನ್ನು ವ್ಯಕ್ತ ಪಡಿಸಿದ್ದಾರೆ.

ಧನುಷ್- ಐಶ್ವರ್ಯಾ

ಧನುಷ್- ಐಶ್ವರ್ಯಾ

  • Share this:
ಈ ವರ್ಷದ ಜನವರಿಯಲ್ಲಿ ತಮಿಳು ನಟ ಧನುಷ್ (Dhanush)  ತಮ್ಮ ಪತ್ನಿ, ಚಲನಚಿತ್ರ ನಿರ್ಮಾಪಕಿ ಐಶ್ವರ್ಯಾ ರಜನೀಕಾಂತ್ (Aishwarya Rajinikanth) ಅವರೊಂದಿಗಿನ ವೈವಾಹಿಕ ಜೀವನದಿಂದ ಹೊರ ಬಂದಿದ್ದರು. ಇದು ಅವರ ಎಲ್ಲಾ ಅಭಿಮಾನಿಗಳಿಗೆ ಆಘಾತಕಾರಿ ಸುದ್ದಿ ಆಗಿತ್ತು ಎಂದು ಹೇಳಿದರೆ ತಪ್ಪಾಗುವುದಿಲ್ಲ. ಐಶ್ವರ್ಯಾ ಮತ್ತು ಧನುಷ್ ಬೇರ್ಪಡುವ ನಿರ್ಧಾರದಿಂದ ಐಶ್ವರ್ಯಾ ಅವರ ತಂದೆ ಮತ್ತು ನಟ ರಜನೀಕಾಂತ್ (Rajinikanth) ಅವರು ತೀವ್ರವಾಗಿ ಬೇಸರಗೊಂಡಿದ್ದರು ಎಂದು ವರದಿಯೊಂದು ಹೇಳಿತ್ತು. ಧನುಷ್ ಅವರೊಂದಿಗೆ ತಮ್ಮ ಮಗಳ ವೈವಾಹಿಕ ಜೀವನವನ್ನು (Life) ಸರಿಪಡಿಸಬೇಕೆಂದು ರಜನೀಕಾಂತ್ ತುಂಬಾನೇ ಪ್ರಯತ್ನ ಪಟ್ಟಿದ್ದರು ಎಂದು ತಿಳಿದುಬಂದಿತ್ತು. ಆದರೆ ಇದೀಗ ನಟ ಧನುಷ್ ಅವರ ಕುಟುಂಬವು ಸಹ ಈ ಇಬ್ಬರು ದಂಪತಿಗಳು ಏನೇ ಸಮಸ್ಯೆ ಇದ್ದರೂ ಸರಿಪಡಿಸಿಕೊಂಡು ಸಂಸಾರ ಮುಂದುವರೆಸಿಕೊಂಡು ಹೋಗುವಂತೆ ಒತ್ತಡ ಹೇರುತ್ತಿದೆ ಎಂದು ತಿಳಿದುಬಂದಿದೆ.

ಆದರೆ ಇದೀ  ನಟ ಧನುಷ್ ತನ್ನಿಂದ ಬೇರ್ಪಟ್ಟ ನಂತರವೂ ಹೆಂಡತಿಯ ಕೆಲಸಕ್ಕೆ ಮುಕ್ತವಾಗಿಯೇ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಂಚಿಕೊಳ್ಳುವುದರ ಮೂಲಕ ಮೆಚ್ಚುಗೆಯನ್ನು ವ್ಯಕ್ತ ಪಡಿಸಿದ್ದಾರೆ.

ಪತ್ನಿಯ ಕೆಲಸಕ್ಕೆ ಧನುಷ್ ಸಾಥ್:

ಇದು ನೆಟ್ಟಿಗರನ್ನು ಒಂದು ಕ್ಷಣ ಬೆಚ್ಚಿ ಬೀಳಿಸಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಏಕೆ ಅಂತೀರಾ? ಹೊಸ ಸಂಗೀತ ವೀಡಿಯೋ 'ಪಯಾನಿ'ಯ ಬಗ್ಗೆ ಸಾಮಾಜಿಕ ಮಾಧ್ಯಮವಾದ ಟ್ವಿಟರ್ ನಲ್ಲಿ ಅಭಿನಂದಿಸಿದ್ದು ಧನುಷ್ ಗುರುವಾರ ಅಭಿಮಾನಿಗಳನ್ನು ಸ್ವಲ್ಪ ಯೋಚಿಸುವಂತೆ ಮಾಡಿದ್ದಂತೂ ನಿಜ ಎನ್ನಬಹುದು. ಈ ವರ್ಷದ ಜನವರಿಯಲ್ಲಿ ಮಾಜಿ ದಂಪತಿಗಳು ತಮ್ಮ ಬೇರ್ಪಡುವಿಕೆಯನ್ನು ಘೋಷಿಸಿದಾಗಿನಿಂದ ಧನುಷ್ ಸಾಮಾಜಿಕ ಮಾಧ್ಯಮದಲ್ಲಿ ಅಷ್ಟೊಂದು ಸಕ್ರಿಯರಾಗಿಲ್ಲ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: Dhanush ಮತ್ತು ಐಶ್ವರ್ಯಾ ವಿಚ್ಛೇದನದ ಬಗ್ಗೆ ಆಪ್ತ ಗೆಳೆಯ ಹೇಳಿದ ಶಾಕಿಂಗ್ ಸುದ್ದಿ!

ಐಶ್ವರ್ಯಾ ಅವರ ಸಂಗೀತ ವೀಡಿಯೋವನ್ನು ಹಿಂದಿ, ತೆಲುಗು, ಮಲಯಾಳಂ ಮತ್ತು ತಮಿಳು ನಾಲ್ಕು ಭಾಷೆಗಳಲ್ಲಿ ಗುರುವಾರ ಬಿಡುಗಡೆ ಮಾಡಲಾಯಿತು. ವೀಡಿಯೋದ ತಮಿಳು ಲಿಂಕ್ ಅನ್ನು ಹಂಚಿಕೊಂಡಿರುವ ಧನುಷ್, "ನಿಮ್ಮ ಸಂಗೀತ ವೀಡಿಯೋಕ್ಕಾಗಿ ಅಭಿನಂದನೆಗಳು ನನ್ನ ಸ್ನೇಹಿತೆ, ದೇವರು ನಿಮ್ಮನ್ನು ಆಶೀರ್ವದಿಸಲಿ" ಎಂದು ಬರೆದುಕೊಂಡಿದ್ದಾರೆ.

ಧನುಷ್​ಗೆ ಧನ್ಯವಾದ ತಿಳಿಸಿದ ಐಶ್ವರ್ಯಾ:

ಧನುಷ್ ಅವರು ತಮ್ಮಿಂದ ಬೇರ್ಪಟ್ಟ ಹೆಂಡತಿಯನ್ನು ಸ್ನೇಹಿತೆ ಎಂದು ಕರೆದದ್ದನ್ನು ನೋಡಿದ ನೆಟ್ಟಿಗರು ಸ್ವಲ್ಪ ಮಟ್ಟಿಗೆ ಶಾಕ್ ಅಗಿದ್ದಂತೂ ನಿಜ ಎಂದು ಹೇಳಬಹುದು. ಈ ಟ್ವೀಟ್ ಗೆ ಪ್ರತಿಕ್ರಿಯೆಯಾಗಿ ಐಶ್ವರ್ಯಾ ಅವರು ಸಹ "ಧನ್ಯವಾದಗಳು ಧನುಷ್... ಗಾಡ್ ಸ್ಪೀಡ್" ಎಂದು ಬರೆದಿದ್ದಾರೆ. ಇದು ಧನುಷ್ ಮತ್ತು ಐಶ್ವರ್ಯಾ ಅವರ ವಿಚ್ಛೇದನದ ನಂತರ ಇವರಿಬ್ಬರ ನಡುವೆ ಸಾಮಾಜಿಕ ಮಾಧ್ಯಮದಲ್ಲಿ ನಡೆದ ಮೊದಲನೆಯ ಸಂದೇಶ ವಿನಿಮಯ ಎಂದು ಹೇಳಲಾಗುತ್ತಿದೆ.

ಅನಾರೋಗ್ಯದ ಕಾರಣದಿಂದಾಗಿ ಐಶ್ವರ್ಯಾ ಅವರನ್ನು ಇತ್ತೀಚೆಗೆ ಮತ್ತೆ ಆಸ್ಪತ್ರೆಗೆ ದಾಖಲಿಸಲಾಯಿತು. ಅದಕ್ಕೂ ಮೊದಲು ಸಹ ಇವರು ಕೋವಿಡ್-19 ರೋಗದಿಂದ ಬಳಲುತ್ತಿದ್ದು ಆಗ ಸಹ ಕೆಲವು ದಿನಗಳವರೆಗೆ ಆಸ್ಪತ್ರೆಯಲ್ಲಿದ್ದರು.

18 ವರ್ಷದ ದಾಂಪತ್ಯ ಅಂತ್ಯ:

ಜನವರಿಯಲ್ಲಿ, ಐಶ್ವರ್ಯಾ ಮತ್ತು ಧನುಷ್ ತಮ್ಮ ಬೇರ್ಪಡುವಿಕೆಯನ್ನು ಘೋಷಿಸಿದ್ದರು. 18 ವರ್ಷಗಳ ವೈವಾಹಿಕ ಜೀವನದಿಂದ ಹೊರ ಬಂದಿರುವ ದಂಪತಿಗಳು ತಮ್ಮ ಬೇರ್ಪಡುವಿಕೆಯನ್ನು ದೃಢೀಕರಿಸುವ ಜಂಟಿ ಹೇಳಿಕೆಯನ್ನು ಬಿಡುಗಡೆ ಮಾಡಿದ್ದರು. ‘ಸ್ನೇಹಿತರಾಗಿ, ದಂಪತಿಗಳಾಗಿ, ಹೆತ್ತವರಾಗಿ ಮತ್ತು ಪರಸ್ಪರ ಹಿತೈಷಿಗಳಾಗಿ ಹದಿನೆಂಟು ವರ್ಷಗಳ ಒಗ್ಗಟ್ಟು. ಪ್ರಯಾಣವು ಬೆಳವಣಿಗೆ, ತಿಳುವಳಿಕೆ, ಹೊಂದಾಣಿಕೆ ಮತ್ತು ಹೊಂದಿಕೊಳ್ಳುವಿಕೆಯಾಗಿದೆ. ಇಂದು ನಮ್ಮ ಮಾರ್ಗಗಳು ಬೇರೆ ಬೇರೆ ಆಗಿವೆ‘ ಎಂದು ಹೇಳಿದ್ದರು.

ಇದನ್ನೂ ಓದಿ: Dhanush-Aishwarya Rajinikanth: ‘ನನ್ನ ಮಗ-ಸೊಸೆ ಬೇರೆಯಾಗಿಲ್ಲ‘ ಅಚ್ಚರಿ ಹೇಳಿಕೆ ಕೊಟ್ಟ ಧನುಷ್ ತಂದೆ

ನಾವು ದಂಪತಿಗಳಾಗಿ ಬೇರ್ಪಡಲು ನಿರ್ಧರಿಸಿದ್ದೇವೆ ಮತ್ತು ನಾವಿಬ್ಬರೂ ನಮ್ಮನ್ನು ಇನ್ನೂ ಚೆನ್ನಾಗಿ ಅರ್ಥ ಮಾಡಿಕೊಳ್ಳಲು ಸಮಯ ತೆಗೆದುಕೊಳ್ಳಲು ನಿರ್ಧರಿಸಿದ್ದೇವೆ ಎಂದು ಸಹ ಅವರ ಹೇಳಿದ್ದರು. ಈ ಸುದ್ದಿಯಿಂದ ಅಭಿಮಾನಿಗಳು ಆಘಾತಕ್ಕೊಳಗಾದರೆ, ಧನುಷ್ ಅವರ ತಂದೆ ಅವರು ಐಶ್ವರ್ಯಾ ಮತ್ತು ಧನುಷ್ ಅವರ ಬೇರ್ಪಡುವಿಕೆಯನ್ನು "ಕುಟುಂಬದ ಜಗಳ" ಎಂದು ಪರಿಗಣಿಸಿದ್ದಾರೆ.
Published by:shrikrishna bhat
First published: