ಸಿನಿಮಾ ಸ್ಟಾರ್ಗಳು ಪ್ರತಿ ಸಲ ತಮ್ಮ ಹುಟ್ಟುಹಬ್ಬವನ್ನು ಅಭಿಮಾನಿಗಳೊಂದಿಗೆ ಸೇರಿ ಆಚರಿಸಿಕೊಳ್ಳುತ್ತಿದ್ದರು. ಆದರೆ ಈ ಸಲ ಕೊರೋನಾದಿಂದಾಗಿ ಎಲ್ಲಕ್ಕೂ ಬ್ರೇಕ್ ಬಿದ್ದಿದೆ. ಲಾಕ್ಡೌನ್ ಸಡಿಲಗೊಂಡರೂ ಜನರಲ್ಲಿ ಸೋಂಕು ಹರಡುತ್ತಿದೆ. ಇದೇ ಕಾರಣದಿಂದಾಗಿ ಸ್ಟಾರ್ಗಳು ತಮ್ಮ ಹುಟ್ಟುಹಬ್ಬದ ಆಚರಣೆಯನ್ನು ನಿಲ್ಲಿಸಿದ್ದಾರೆ. ನಟ ಧನಂಜಯ್ ಸಹ ಈ ಸಲ ತಮ್ಮ ಹುಟ್ಟುಹಬ್ಬವನ್ನು ಆಚರಿಸದಂತೆ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ. ಇದೇ 23 ಕ್ಕೆ ಧನಂಜಯ ಅವರ ಹುಟ್ಟುಹಬ್ಬವಿದ್ದು, ಅದನ್ನು ಡಾಲಿ ಉತ್ಸವ ಎಂದು ಆಚರಿಸಲು ಅಭಿಮಾನಿಗಳು ಸಿದ್ಧತೆ ಮಾಡಿಕೊಂಡಿದ್ದರು. ಆದರೆ ಈಗ ಅದಕ್ಕೆ ಬ್ರೇಕ್ ಬಿದ್ದಿದೆ.
![Dhananjayas new movie Rathnan Prapancha post is out now]()
ಧನಂಜಯ ಅವರ ರತ್ನನ್ಪ್ರಪಂಚ ಚಿತ್ರದ ಪೋಸ್ಟರ್
ತಮ್ಮ ಹುಟ್ಟುಹಬ್ಬದ ಆಚರಣೆ ಕುರಿತಾಗಿ ಧನಂಜಯ್ ಕೆಲವೇ ಗಂಟೆಗಳ ಹಿಂದೆಯಷ್ಟೆ ತಮ್ಮ ಫೇಸ್ಬುಕ್ನಲ್ಲಿ ಒಂದು ವಿಡಿಯೋ ಹಂಚಿಕೊಂಡಿದ್ದಾರೆ. 'ನನಗೆ ಗೊತ್ತು... ನೀವು ಈಗಾಗಲೇ ಸೆಲಬ್ರೇಷನ್ ಶುರು ಮಾಡಿದ್ದೀರಿ. ನಿಮ್ಮ ಪ್ರೀತಿ ನಿಮ್ಮ ಅಭಿಮಾನಕ್ಕೆ ನಾ ಎಂದಿಗೂ ಚಿರಋಣಿ. ಪ್ರತಿ ವರ್ಷದ ನನ್ನ ಹುಟ್ಟುಹಬ್ಬ ನಿಮ್ಮೊಡನೆ ನನಗರಿವಿಲ್ಲದಂತೆಯೇ ಕಳೆದು ಹೋಗುತ್ತಿತ್ತು. ಆದರೆ ಈ ವರ್ಷ ಸಾಮಾಜಿಕ ಕಳಕಳಿಯ ದೃಷ್ಟಿಯಿಂದ ಯಾವುದೇ ಆಚರಣೆಯಿರಿವುದಿಲ್ಲ' ಎಂದಿದ್ದಾರೆ.
ಅಷ್ಟೇಅಲ್ಲ, ಧನಂಜಯ್ ಈ ಸಲ ಮನೆಯಲ್ಲೂ ಇರುವುದಿಲ್ಲವಂತೆ. ಮನೆಯ ಸುತ್ತ ತುಂಬ ವಯಸ್ಸಾದ ಜೀವಗಳಿರುವುದರಿಂದ, ಯಾರಿಗೂ ನಮ್ಮಿಂದ ತೊಂದರೆ ಆಗುವುದು ಬೇಡ. ಎಲ್ಲಿದ್ದೀರೊ ಅಲ್ಲಿಂದಲೇ ವಿಶ್ ಮಾಡಿ, ಆಶೀರ್ವದಿಸಿ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.
ಧನಂಜಯ್ ಕೈಯಲ್ಲಿ ಈಗ ಸಾಕಷ್ಟು ಸಿನಿಮಾಗಳಿವೆ. ಪುನೀತ್ ಅಭಿನಯದ ಯುವರತ್ನ ಹಾಗೂ ದುನಿಯಾ ವಿಜಿ ಅವರ ಸಲಗ ಚಿತ್ರಗಳಲ್ಲಿ ನಟಿಸಿದ್ದಾರೆ. ಇತ್ತೀಚೆಗಷ್ಟೆ ಅವರ ಹೊಸ ಸಿನಿಮಾ ರತ್ನನ್ಪ್ರಪಂಚ ಚಿತ್ರದ ಪೋಸ್ಟರ್ ರಿಲೀಸ್ ಆಗಿದೆ. ರೋಹಿತ್ ಪಡಕಿ ನಿರ್ದೇಶನ ಈ ಸಿನಿಮಾದಲ್ಲಿ ಧನಂಜಯ್ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ