Dhananjaya: ಅಭಿಮಾನಿಗಳೇ ಕ್ಷಮಿಸಿ, ಈ ವರ್ಷ ಹುಟ್ಟುಹಬ್ಬ ಆಚರಿಸಲ್ಲ, ಮನೆಯಲ್ಲೂ ನಾನು ಇರಲ್ಲ

ಪುನೀತ್ ರಾಜ್​ಕುಮಾರ್ ಅವರು ತಮ್ಮನ್ನು ಅಗಲಿದ ನೋವು ಇನ್ನು ಕಾಡ್ತಿದೆ. ಹೀಗಾಗಿ ಈ ವರ್ಷ ನಾನು ಹುಟ್ಟುಹಬ್ಬ ಆಚರಿಸಿಕೊಳ್ಳೋದಿಲ್ಲ ಎಂದು ನಟ ಧನಂಜಯ್ ಹೇಳಿದ್ದಾರೆ. ಅಭಿಮಾನಿಗಳಿಗೆ ವಿಡಿಯೋ ಸಂದೇಶ ಕೂಡ ನೀಡಿದ್ದಾರೆ.

ಡಾಲಿ ಧನಂಜಯ್

ಡಾಲಿ ಧನಂಜಯ್

  • Share this:
ಪುನೀತ್ ರಾಜ್​ಕುಮಾರ್ (Puneeth Rajkumar)​ ಅವರ ಅಗಲಿಕೆ ನೋವಿನಲ್ಲಿರೋ ​ ಇಡೀ ಸ್ಯಾಂಡಲ್​ವುಡ್ ಅವರ ಸ್ಮರಣಾರ್ಥ ಅನೇಕ ಕಾರ್ಯಕ್ರಮ ನಡೆಸಿಕೊಟ್ಟಿದೆ. ಅನೇಕ ನಟ-ನಟಿಯರು ಈ ವರ್ಷ ತಮ್ಮ ಹುಟ್ಟುಹಬ್ಬ ಆಚರಿಕೊಂಡಿಲ್ಲ, ಈ ಸಾಲಿಗೆ ಇದೀಗ ಧನಂಜಯ್​ ಅವರು ಸೇರಿದ್ದಾರೆ. ಪುನೀತ್ ರಾಜ್​ಕುಮಾರ್ ಅವರು ತಮ್ಮನ್ನು ಅಗಲಿದ ನೋವು ಇನ್ನು ಕಾಡ್ತಿದೆ. ಹೀಗಾಗಿ ಈ ವರ್ಷ ನಾನು ಹುಟ್ಟುಹಬ್ಬ ಆಚರಿಸಿಕೊಳ್ಳೋದಿಲ್ಲ ಎಂದು ನಟ ಧನಂಜಯ್ (Dhananjaya) ಹೇಳಿದ್ದಾರೆ. ಅಭಿಮಾನಿಗಳಿಗೆ ವಿಡಿಯೋ ಸಂದೇಶ ಕೂಡ ನೀಡಿದ್ದಾರೆ. ಈ ವಿಡಿಯೋವನ್ನು ತಮ್ಮ ಇನ್ಟಾಗ್ರಾಮ್ (Instagram) ಪೇಜ್​ನಲ್ಲಿ ಶೇರ್ ಮಾಡಿದ್ದಾರೆ.

ಈ ವರ್ಷ ಹುಟ್ಟುಹಬ್ಬ ಆಚರಿಸಿಕೊಳ್ಳೋದಿಲ್ಲ

ನನ್ನ ಅಭಿಮಾನಿಗಳು, ಪ್ರೀತಿ ಪಾತ್ರರೆಲ್ಲರಿಗೂ ನಮಸ್ಕಾರ. ಬಹಳ ಖುಷಿಯಾಗುತ್ತದೆ. ನನ್ನ ಹುಟ್ಟುಹಬ್ಬ  ಕೆಲ ದಿನಗಳು ಇರುವಾಗ್ಲೆ ಅಭಿಮಾನಿಗಳಿ ಸೆಲೆಬ್ರೆಷನ್ ಶುರು ಮಾಡುತ್ತೀರಾ. ಈಗಾಗಲೇ ಬೆಂಗಳೂರಿನಲ್ಲೂ ರಕ್ತದಾನ ಶಿಬಿರ, ನೇತ್ರದಾನ ನೋಂದಣಿ ಶಿಬಿರ ಎಲ್ಲಾ ನಡೆಸಿದ್ರೆ, ಬೆಳಗಾವಿ ಸೇರಿದಂತೆ ಬೇರೆ ಬೇರೆ ಕಡೆಗಳಲ್ಲಿ ನಡೆಸಿದ್ದೀರಾ. ನನಗೂ ನಿಮ್ಮ ಜೊತೆ ಸೇರಿ ಹುಟ್ಟುಹಬ್ಬ ಆಚರಿಸಲು ಆಸೆ. ಕಳೆದೆರಡು ವರ್ಷಗಳಿಂದ ಕೊರೊನಾ ಕಾರಣ ಸೆಲೆಬ್ರೇಟ್ ಮಾಡಲು ಸಾಧ್ಯವಾಗಲಿಲ್ಲ.






ಈ ವರ್ಷ ಕೂಡ ಬರ್ತ್‌ಡೇ ಸೆಲೆಬ್ರೆಷನ್ ಮಾಡುವ ಪರಿಸ್ಥಿತಿಯಲ್ಲಿ ನಾನು ಕೂಡ ಇಲ್ಲ. ನಮ್ಮ ನಾಡು ಕೂಡ ಇಲ್ಲ. ಯಾಕೆಂದರೆ ಅಪ್ಪು ಅವರು ನಮ್ಮನ್ನು ಅಗಲಿ ಇನ್ನು ವರ್ಷ ಕೂಡ ಆಗಿಲ್ಲ. ಶಿವಣ್ಣ ಸೇರಿದಂತೆ ಯಾರು ಹುಟ್ಟುಹಬ್ಬ ಆಚರಿಸಿಕೊಂಡಿಲ್ಲ. ಕೊರೊನಾ ಕಾರಣಕ್ಕೆ 2 ವರ್ಷ ಹುಟ್ಟುಹಬ್ಬ ಆಚರಿಸಿಕೊಂಡಿಲ್ಲ  ಹಾಗಾಗಿ ಈ ವರ್ಷ ಕೂಡ ಬರ್ತ್‌ಡೇ ಆಚರಣೆ ಇರಲ್ಲ. ಹೇಗೆ ಎರಡು ವರ್ಷ ಕ್ಷಮಿಸಿ ಪ್ರೀತಿಸಿದ್ರೋ ಹಂಗೆ ಈ ವರ್ಷ ಕೂಡ ಕ್ಷಮಿಸಿ. ಮುಂದಿನ ವರ್ಷ ಎಲ್ಲರೂ ಸೇರಿ ಬರ್ತ್‌ಡೇ ಆಚರಿಸೋಣ ಎಂದು ಧನಂಜಯ ಹೇಳಿದ್ದಾರೆ.

ನಾನು ಬೆಂಗಳೂರಲ್ಲೇ ಇರೋದಿಲ್ಲ

ಮುಂದಿನ ವರ್ಷ ಒಳ್ಳೆ ಕೆಲಸಗಳ ಮೂಲಕ ಹುಟ್ಟುಹಬ್ಬ ಆಚರಿಸೋಣ. ನಾನು ಕೂಡ ನಿಮ್ಮ ಜೊತೆ ನಿಮ್ಮ ಜೊತೆ ಸೇರಿಕೊಳ್ಳುತ್ತೇನೆ. ಹಾಗಾಗಿ ಈ ವರ್ಷ ಎಲ್ಲಿದ್ದಿರೋ ಅಲ್ಲಿಂದಲೇ ಶುಭಾಶಯ ಕೋರಿ. ನನ್ನ ಹುಟ್ಟುಹಬ್ಬಕ್ಕೆ ತರುತ್ತಿದ್ದ ಕೇಕ್, ಹಾರ, ಶಾಲೂ ಮತ್ತೊಂದು ಎಲ್ಲದಕ್ಕೂ ಖರ್ಚು ಮಾಡುತ್ತಿದ್ದ ದುಡ್ಡಲ್ಲಿ ಒಂದಿಷ್ಟು ಅವಶ್ಯಕ ಇರುವ ಜೀವಗಳಿಗೆ ನಿಮ್ಮ ಕೈಲಾದ ಸಹಾಯ ಮಾಡಿ. ಅದರ ಮೂಲಕ ಹುಟ್ಟುಹಬ್ಬ ಆಚರಿಸೋಣ. ಅವರ ಪ್ರಾರ್ಥನೆಗಳು ನನ್ನನ್ನು ಕಾಯುತ್ತದೆ. ನಿಮ್ಮನ್ನು ಕಾಯುತ್ತದೆ.

ಈ ವರ್ಷ ಬರ್ತ್‌ಡೇ ಆಚರಣೆ ಇರಲ್ಲ. ನಾನು ಸಹ ಬೆಂಗಳೂರಿನಲ್ಲಿ ಇರುವುದಿಲ್ಲ. ಮನೆ ಬಳಿ ಸಿಗುವುದಕ್ಕೂ ಆಗುವುದಿಲ್ಲ. ನಾನು ಆ ದಿನ ಸ್ನೇಹಿತರ ಜೊತೆ ಹೊರಗೆ ಹೋಗುತ್ತಿದ್ದೇನೆ. ಖಂಡಿತ ಹುಟ್ಟುಹಬ್ಬ ಮುಗಿದ ಮೇಲೆ ಯಾವುದಾದರೂ ಕಾರ್ಯಕ್ರಮದಲ್ಲಿ ಎಲ್ಲರೂ ಸಿಗೋಣ. ಥ್ಯಾಂಕ್ಯೂ ಎಂದು ಅಭಿಮಾನಿಗಳಿಗೆ ನಟ ಧನಂಜಯ್ ಅಭಿಮಾನಿಗಳಿಗೆ ವೀಡಿಯೋ ಸಂದೇಶ್​ ಕಳುಹಿಸಿದ್ದಾರೆ.

'ಡಾಲಿ' ಧನಂಜಯ್ , ರಚಿತಾ ರಾಮ್ , ಅಚ್ಯುತ್ ಕುಮಾರ್ , ಸುಹಾಸಿನಿ ನಟಿಸಿರುವ 'ಮಾನ್ಸೂನ್ ರಾಗ'  ಸಿನಿಮಾದ ಟ್ರೇಲರ್ ಹಾಗೂ ಥೀಮ್ ಸಾಂಗ್ ಎಲ್ಲರ ಗಮನಸೆಳೆದಿದೆ. ಈ ಸಿನಿಮಾವನ್ನು 'ಪುಷ್ಪಕ ವಿಮಾನ' ಖ್ಯಾತಿಯ ಎಸ್. ರವೀಂದ್ರನಾಥ್ ಅವರು ನಿರ್ದೇಶನ ಮಾಡಿದ್ದು, ವಿಖ್ಯಾತ್ ನಿರ್ಮಾಣ ಮಾಡಿದ್ದಾರೆ. ಈ ಸಿನಿಮಾಗೆ ಅನೂಪ್ ಸೀಳಿನ್ ಅವರ ಸಂಗೀತ ನಿರ್ದೇಶನವಿದೆ. ಎಲ್ಲ ಅಂದುಕೊಂಡಂತೆ ಆಗಿದ್ದರೆ, ಇದೇ ಆಗಸ್ಟ್ 19ರಂದು 'ಮಾನ್ಸೂನ್ ರಾಗ' ಸಿನಿಮಾವು ಅದ್ದೂರಿಯಾಗಿ ತೆರೆಗೆ ಬರಬೇಕಿತ್ತು. ಅದಕ್ಕಾಗಿ ಚಿತ್ರತಂಡ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿತ್ತು. ಆದರೆ ಈಗ ಎಲ್ಲವೂ ಬದಲಾಗಿದೆ. 'ಮಾನ್ಸೂನ್ ರಾಗ' ಸಿನಿಮಾ ಬಿಡುಗಡೆ ದಿನಾಂಕವನ್ನು ಪೋಸ್ಟ್‌ಪೋನ್ ಮಾಡಲಾಗಿದೆ.
Published by:Pavana HS
First published: