ರೆಬೆಲ್ ಸ್ಟಾರ್ ಅಂಬಿ- ಸುಮಲತಾರ ಏಕೈಕ ಸಂತಾನ ಅಭಿಷೇಕ್ ಅಂಬರೀಷ್. ಅಭಿ ಅಭಿನಯದ ಚೊಚ್ಚಲ ಸಿನಿಮಾ 'ಅಮರ್' ಇನ್ನೇನು ಇದೇ ತಿಂಗಳ ಅಂತ್ಯಕ್ಕೆ ಅಂದರೆ ಮೇ 31ಕ್ಕೆ ತೆರೆಗಪ್ಪಳಿಸಲು ಸಿದ್ದವಾಗಿದೆ.
ಈ ಸಿನಿಮಾದಲ್ಲಿ ದರ್ಶನ್ ಸಹ ಅತಿಥಿ ಪಾತ್ರದಲ್ಲಿ ಅಭಿನಯಿಸುತ್ತಿರುವ ವಿಷಯ ಗೊತ್ತೇ ಇದೆ. ಅಂಬಿ ವಿಧಿವಶರಾದ ನಂತರ ಸುಮಲತಾರಿಗೆ ದೊಡ್ಡ ಮಗನಾಗಿ ಅಭಿಗೆ ಅಣ್ಣನಾಗಿ ದಾಸ ತನ್ನ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ.
ಇದನ್ನೂ ಓದಿ: ಡಿಬಾಸ್ರ 'ರಾಬರ್ಟ್' ಅಡ್ಡಾಗೆ ಕಾಲಿಡಲಿರುವ ನಾಯಕಿ ಯಾರು ಗೊತ್ತಾ..?
'ಅಮರ್' ಸಿನಿಮಾದಲ್ಲಿ ವಿಶೇಷ ಪಾತ್ರದ ಜತೆಗೆ ಗುಳಿಕೆನ್ನೆ ಸುದಂರಿ ರಚಿತಾರಾಮ್ ಅವರೊಂದಿಗೆ ವಿಶೇಷ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಅದು ಕೂಡ ಕೊಡವ ಶೈಲಿಯ 'ಜೋರು ಪಟ್ಟು' ಹಾಡಿಗೆ. ಈ ಹಾಡು ನಾಳೆಯಿಂದ (ಮೇ. 18) ನಿಮ್ಮ ಬೆರಳ ತುದಿಯಲ್ಲೇ ನಲಿದಾಡಲಿದೆ.
ಹೌದು, ಈ ವಿಶೇಷ ಹಾಡನ್ನು ಆನಂದ್ ಆಡಿಯೋದವರು ನಾಳೆ ಬಿಡುಗಡೆ ಮಾಡುವುದಾಗಿ ಟ್ವೀಟ್ ಮಾಡಿದ್ದಾರೆ.
The song with the guest appearance of #ChallengingStar @dasadarshan from #Amar will be out tmrw exclusively on #AnandAudio @ArjunjanyaAJ
Stay tuned.. https://t.co/IKwWnRKH9C pic.twitter.com/l2P8orjzRg
— Anand Audio (@aanandaaudio) May 17, 2019
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ