ದರ್ಶನ್​ ಅವರನ್ನು ನೋಡಲು ರೇಷ್ಮೆ ನಗರಕ್ಕೆ ಹರಿದು ಬಂದ ಜನಸ್ತೋಮ..!

news18
Updated:August 17, 2018, 4:05 PM IST
ದರ್ಶನ್​ ಅವರನ್ನು ನೋಡಲು ರೇಷ್ಮೆ ನಗರಕ್ಕೆ ಹರಿದು ಬಂದ ಜನಸ್ತೋಮ..!
news18
Updated: August 17, 2018, 4:05 PM IST
ಆನಂದ್ ಸಾಲುಂಡಿ, ನ್ಯೂಸ್​ 18 ಕನ್ನಡ 

ಕ್ರೇಜ್ ಅಂದ್ರೆ ದರ್ಶನ್, ದರ್ಶನ್ ಅಂದ್ರೆ ಕ್ರೇಜ್. ಸ್ಯಾಂಡಲ್‍ವುಡ್‍ನ ಕ್ರೇಜ್ ಕಾ ಬಾಪ್ ದರ್ಶನ್. ದರ್ಶನ್ ಎಲ್ಲೇ ಹೋಗಲಿ, ದೇವರನ್ನ ಕಾಣೋಕೆ ಬರೋ ಭಕ್ತರ ದಂಡಿನಂತೆ ಅಲ್ಲಿ ಜನ ಜಾತ್ರೆಯೆ ನೆರೆದಿರುತ್ತದೆ. ಮೊನ್ನೆ ರಾಮನಗರದಲ್ಲಿ ಅದು ಮತ್ತೊಮ್ಮೆ ಸಾಬೀತಾಗಿದೆ. ಆ ಕುರಿತ ಒಂದು ವರದಿ ಇಲ್ಲಿದೆ.

ದರ್ಶನ್ ಎಲ್ಲಾದರೂ ಮಾತಿಗೆ ನಿಂತಾಗ ಸಾಮಾನ್ಯವಾಗಿ ಹೇಳಿರುತ್ತಾರೆ. ನಾನು ಚಿತ್ರರಂಗಕ್ಕೆ ಬಂದು ಗಳಿಸಿರೋ ಆಸ್ತಿ ಅಂದರೆ, ಅದು ನನ್ನ ಅಭಿಮಾನಿಗಳು ಅಂತ. ನಿಜವಾಗಲೂ ದರ್ಶನ್ ಗಳಿಸಿರೋ ಆಸ್ತಿ ಎಷ್ಟು ಅಂತ ತಿಳೀಬೇಕಂದರೆ ನೀವು ಅವರ ಕಾರ್ಯಕ್ರಮಕ್ಕೆ ಒಮ್ಮೆಯಾದರೂ ಹೋಗಿ.

ನೋಡದ ಕಡೆಎಲ್ಲ ಬರೀ ಜನರೇ ಕಾಣಿಸ್ತಾರೆ. ಈ ಜನಸ್ತೋಮಕ್ಕೆ ಸಾಕ್ಷಿಯಾಗಿದ್ದು ರೇಷ್ಮೆ ನಗರ ರಾಮನಗರ. ಮೊನ್ನೆ ದರ್ಶನ್ ಖಾಸಾಗಿ ಮಳಿಗೆಯೊಂದರ ಉದ್ಘಾಟನೆಗೆ ಅಂತ ರಾಮನಗರಕ್ಕೆ ಭೇಟಿಕೊಟ್ಟಿದ್ದರು.

ದರ್ಶನ್ ಬರುವ ವಿಚಾರವನ್ನ ಮೊದಲೇ ತಿಳಿದಿದ್ದ ಅಭಿಮಾನಿಗಳು, ದೇವರ ದರ್ಶನಕ್ಕೆ ನುಗ್ಗೋ ಭಕ್ತರಂತೆ ಸಾಗರೋಪಾದಿಯಲ್ಲಿ ಬಂದಿದ್ದರು. ಇಡೀ ರಸ್ತೆ ಕೇವಲ ದರ್ಶನ್ ಅಭಿಮಾನಿಗಳಿಂದಲೇ ತುಂಬಿ ತುಳುಕ್ತಾ ಇತ್ತು. ಈ ಮೂಲಕ ಸ್ಯಾಂಡಲ್‍ವುಡ್‍ನ ಮಾಸ್ ಮಹರಾಜ ದರ್ಶನ್ ಎಲ್ಲೇ ಹೋದರೂ, ಅಲ್ಲಿ ಜನಜಾತ್ರೆಯೇ ನೆರೆಯುತ್ತೆ ಅನ್ನೋದು ಮತ್ತೆ ಸಾಬೀತಾಯಿತು.

 
First published:August 16, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...