ವಿನೋದ್​ ಪ್ರಭಾಕರ್​ ಆರೋಗ್ಯ ವಿಚಾರಿಸಿದ ಡಿಬಾಸ್​ ದರ್ಶನ್​

ದಾಸ ತನ್ನವರಿಗೆ ಅಗತ್ಯವಿದ್ದರೆ, ತನ್ನೆಲ್ಲ ಕೆಲಸಗಳನ್ನೂ ಬಿಟ್ಟು ಅವರ ಬಳಿಗೆ ಓಡಿ ಹೋಗುತ್ತಾರೆ. ಇದಕ್ಕೆ ಅಭಿಮಾನಿಗಳು ದರ್ಶನ್​ರನ್ನು ದಾಸ ಎನ್ನುವುದು. 

Anitha E | news18
Updated:April 6, 2019, 4:00 PM IST
ವಿನೋದ್​ ಪ್ರಭಾಕರ್​ ಆರೋಗ್ಯ ವಿಚಾರಿಸಿದ ಡಿಬಾಸ್​ ದರ್ಶನ್​
ದರ್ಶನ್​-ವಿನೋದ್​ ಪ್ರಭಾಕರ್​
  • News18
  • Last Updated: April 6, 2019, 4:00 PM IST
  • Share this:
- ಅನಿತಾ ಈ, 

ಚಂದನವನದಲ್ಲಿ ಡಿಬಾಸ್​ ದರ್ಶನ್ ಹಾಗೂ ವಿನೋದ್​ ಪ್ರಭಾಕರ್ ಅವರ ಸ್ನೇಹದ ಬಗ್ಗೆ ಹೇಳಬೇಕಾಗಿಲ್ಲ. ಇತ್ತೀಚೆಗೆ ವಿನೋದ್​ ಸಿನಿಮಾ ಚಿತ್ರೀಕರಣದ ವೇಳೆ ಬಿದ್ದು ಪೆಟ್ಟು ಮಾಡಿಕೊಂಡಿದ್ದರು.

ಇದನ್ನೂ ಓದಿ: ಡಿ-ಬಾಸ್​, ಕಿಚ್ಚ, ನವರಸ ನಾಯಕನ ಜತೆ ಯುಗಾದಿಗೆ ಶುಭ ಕೋರಿದ ​ಟಾಲಿವುಡ್​ ತಾರೆಯರು

ಮಾಗಡಿ ರಸ್ತೆಯಲ್ಲಿರುವ ಸಾಮಿಲ್​ನಲ್ಲಿ ನಡೆಯುತ್ತಿದ್ದ 'ವರದ' ಚಿತ್ರದಲ್ಲಿನ ಸಾಹಸ ದೃಶ್ಯದ ವೇಳೆ ಸ್ಟಂಟ್​ ಮಾಡುವಾಗ ವಿನೋದ್​ ಪ್ರಭಾಕರ್​ ಅವರ ಕಾಲಿಗೆ ಪೆಟ್ಟಾಗಿತ್ತು. ಇದರಿಂದಾಗಿ ಸದ್ಯ ಚಿಕಿತ್ಸೆ ಪಡೆಯುತ್ತಿರುವ ವಿನೋದ್​ ಮನೆಯಲ್ಲಿ ವಿಶ್ರಾಂತಿಯಲ್ಲಿದ್ದಾರೆ.

ಸ್ನೇಹಿತನಿಗೆ ಪೆಟ್ಟಾದ ವಿಷಯ ತಿಳಿಯುತ್ತಿದ್ದಂತೆಯೇ ದಾಸ ಎಲ್ಲ ಕೆಲಸ ಬಿಟ್ಟು, ವಿನೋದ್​ ಆರೋಗ್ಯ ವಿಚಾರಿಸಲು ಹೋಗಿದ್ದಾರೆ. ಇನ್ನು ಸದ್ಯ ಒಡೆಯ ಸಿನಿಮಾದ ಜತೆಗೆ ಹಲವಾರು ಸಿನಿಮಾಗಳಲ್ಲಿ ವ್ಯಸ್ತವಾಗಿರುವ ದರ್ಶನ್​, ಮಂಡ್ಯದಲ್ಲಿ ಸುಮಲತಾರ ಪರವಾಗಿ ಚುನಾವಣಾ ಪ್ರಚಾರದಲ್ಲೂ ತೊಡಗಿದ್ದಾರೆ.

ಇದನ್ನೂ ಓದಿ: ಕಿಚ್ಚ ಕ್ರಿಯೇಷನ್ಸ್​ ಯೂಟ್ಯೂಬ್​ ಚಾನಲ್​: ಸುದೀಪಿಯನ್ಸ್​ಗೆ ಸಿಕ್ತು ಸುದೀಪ್​-ಪ್ರಿಯಾ ಕಡೆಯಿಂದ ಯುಗಾದಿ ಗಿಫ್ಟ್​

ದಾಸ ತನ್ನವರಿಗೆ ಅಗತ್ಯವಿದ್ದರೆ, ತನ್ನೆಲ್ಲ ಕೆಲಸಗಳನ್ನೂ ಬಿಟ್ಟು ಅವರ ಬಳಿಗೆ ಓಡಿ ಹೋಗುತ್ತಾರೆ. ಇದಕ್ಕೆ ಅಭಿಮಾನಿಗಳು ದರ್ಶನ್​ರನ್ನು ದಾಸ ಎನ್ನುವುದು.PHOTOS: ಸೀರೆಯಲ್ಲಿ ಮಿಂಚಿದ ಗ್ಲಾಮರ್​ ಗೊಂಬೆ ರಾಗಿಣಿ ದ್ವಿವೇದಿ
First published: April 6, 2019, 3:59 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading