HOME » NEWS » Entertainment » ACTOR DARSHAN THINKS ABOUT OUR FARMERS SAYS DIRECTOR PAVAN WADEYAR AE

Darshan: ಅನ್ನದಾತನ ಬಗ್ಗೆ ಕಾಳಜಿ ಇರುವ ದರ್ಶನ್​ರನ್ನು ಹೊಗಳಿದ ನಿರ್ದೇಶಕ ಪವನ್​ ಒಡೆಯರ್​..!

ಕೃಷಿ ಮಸೂದೆ ವಿರೋಧಿಸಿ ಎಲ್ಲೆಡೆ ರೈತರು ಪ್ರತಿಭಟನೆ ಮಾಡುತ್ತಿದ್ದಾರೆ. ನಿನ್ನೆಯಷ್ಟೆ ಬಂದ್ ಮಾಡುವ ಮೂಲಕ ರೈತರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದರು. ಇದೇ ವೇಳೆ  ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಮಂದಿ ಸೆಲೆಬ್ರಿಟಿಗಳು ಸಹ ರೈತರಪರ ಬೆಂಬಲ ವ್ಯಕ್ತಪಡಿಸಿದ್ದಾರೆ. ಹೀಗಿರುವಾಗಲೇ ನಿರ್ದೇಶಕ ಪವನ್​ ಒಡೆಯರ್​ ಸಹ ಡಿಬಾಸ್​ ದರ್ಶನ್​ ಅವರಿಗೆ ಅನ್ನದಾತನ ಬಗ್ಗೆ ಇರುವ ಕಾಳಜಿ ಬಗ್ಗೆ ಮಾತನಾಡಿದ್ದಾರೆ. 

Anitha E | news18-kannada
Updated:September 29, 2020, 9:47 AM IST
Darshan: ಅನ್ನದಾತನ ಬಗ್ಗೆ ಕಾಳಜಿ ಇರುವ ದರ್ಶನ್​ರನ್ನು ಹೊಗಳಿದ ನಿರ್ದೇಶಕ ಪವನ್​ ಒಡೆಯರ್​..!
ದರ್ಶನ್ ಹಾಗೂ ಪವನ್​ ಒಡೆಯರ್​
  • Share this:
ಚಾಲೆಂಜಿಂಗ್​ ಸ್ಟಾರ್ ದರ್ಶನ್​ ಅವರಿಗೆ ಅನ್ನದಾತ ಹಾಗೂ ಜಾನುವಾರುಗಳ ಬಗ್ಗೆ ಎಷ್ಟು ಕಾಳಜಿ ಇದೆ ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ತಮ್ಮ ತೋಟದಲ್ಲಿ ರೈತನಂತೆ ಕೆಲಸ ಮಾಡುವ ದರ್ಶನ್​, ತಾವು ಸಾಕಿರುವ ಜಾನುವಾರುನ್ನು ಅಷ್ಟೇ ಪ್ರೀತಿಯಿಂದ ನೋಡಿಕೊಳ್ಳುತ್ತಾರೆ. ಅಲ್ಲದೆ ತಮ್ಮ ಸಿನಿಮಾಗಳಲ್ಲೂ ರೈತರ ಸಮಸ್ಯೆಗಳ ಬಗ್ಗೆ ಸಾಕಷ್ಟು ಗಂಭೀರವಾಗಿ ಚಿತ್ರೀಕರಿಸುತ್ತಾರೆ. ಅವರು ಅಭಿನಯಿಸಿರುವ ಹಲವಾರು ಸಿನಿಮಾಗಳಲ್ಲಿ ರೈತರ ಸಮಸ್ಯೆಗಳನ್ನು ತೋರಿಸಿರುವ ಬಗ್ಗೆ ನೋಡಬಹುದಾಗಿದೆ. ಅನ್ನದಾತರ ಪರ ಅವಕಾಶ ಸಿಕ್ಕಲ್ಲಿ  ಕಾಳಜಿ ತೋರುತ್ತಿರುತ್ತಾರೆ. ಕಳೆದ ವರ್ಷ ಯಾವುದೋ ಸಮಾರಂಭದಲ್ಲಿ ರೈತರ ಸಾಲ ಮನ್ನಾ ಬೇಡ, ಅನ್ನದಾತ ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗುವಂತೆ ಮಾಡಿ, ಬೇಕಾದರೆ ಅವರೇ ಸರ್ಕಾರಕ್ಕೆ ಸಾಲ ಕೊಡ್ತಾರೆ ಎಂಬ ಮಾತುಗಳನ್ನ ಹೇಳಿದ್ದರು ದರ್ಶನ್​. ಹೀಗಿರುವಾಗಲೇ ನಟ ದರ್ಶನ್​ ಅವರಿಗೆ ರೈತರ ಪರ ಕಾಳಜಿ ಎಷ್ಟಿದೆ ಎಂದು ನಿರ್ದೇಶಕ ಪವನ್​ ಒಡೆಯರ್​ ಹೇಳಿಕೊಂಡಿದ್ದಾರೆ. 

ಕೃಷಿ ಮಸೂದೆ ವಿರೋಧಿಸಿ ಎಲ್ಲೆಡೆ ರೈತರು ಪ್ರತಿಭಟನೆ ಮಾಡುತ್ತಿದ್ದಾರೆ. ನಿನ್ನೆಯಷ್ಟೆ ಬಂದ್ ಮಾಡುವ ಮೂಲಕ ರೈತರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದರು. ಇದೇ ವೇಳೆ  ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಮಂದಿ ಸೆಲೆಬ್ರಿಟಿಗಳು ಸಹ ರೈತರಪರ ಬೆಂಬಲ ವ್ಯಕ್ತಪಡಿಸಿದ್ದಾರೆ. ಹೀಗಿರುವಾಗಲೇ ನಿರ್ದೇಶಕ ಪವನ್​ ಒಡೆಯರ್​ ಸಹ ಡಿಬಾಸ್​ ದರ್ಶನ್​ ಅವರಿಗೆ ಅನ್ನದಾತನ ಬಗ್ಗೆ ಇರುವ ಕಾಳಜಿ ಬಗ್ಗೆ ಮಾತನಾಡಿದ್ದಾರೆ.

ಕೊರೋನಾ ಜಾಗೃತಿ ಕುರಿತಾದ ಹಾಡಿನ ಚಿತ್ರೀಕರಣದ ಬಗ್ಗೆ ಮಾತನಾಡಲು ದರ್ಶನ್​ ಅವರ ಮನೆಗೆ ನಿರ್ದೇಶಕ ಪವನ್​ ಒಡೆಯರ್​ ಹೋಗಿದ್ದರಂತೆ. ಆಗ ದರ್ಶನ್​ ಅವರನ್ನು ಭೇಟಿ ಮಾಡಿ, ಮಾತನಾಡಲಾರಂಭಿಸುತ್ತಿದ್ದಂತೆಯೇ ದಚ್ಚು, ಮೊದಲು ಕೊರೋನಾ ಬಗ್ಗೆ ಹೇಳುತ್ತಾ, ರೈತರು ಹಾಗೂ ಕೂಲಿ ಕಾರ್ಮಿಕರ ಪಾಡೇನು ಅಂತ ಬೇಸರ ವ್ಯಕ್ತಪಡಿಸಿದರಂತೆ. ಹೀಗೆ ರೈತರು ಹಾಗೂ ಜಾನುವಾರುಗಳ ಬಗ್ಗೆಯೇ ಅರ್ಧ ಗಂಟೆ ಮಾತನಾಡಿದ್ದರಂತೆ. ಇದು ದರ್ಶನ್​ ಅವರಿಗೆ ರೈತರು ಹಾಗೂ ಜಾನುವಾರುಗಳ ಬಗ್ಗೆ ಇರುವ ಕಾಳಜಿ ಎಂದು ಪವನ್​ ಹೇಳಿಕೊಂಡಿದ್ದಾರೆ.

Challenging Star Darshan Supporting Farmers Protest
ವಿನೀಶ್​ ಹಾಗೂ ದರ್ಶನ್​

ಪವನ್​ ಒಡೆಯರ್​ ದರ್ಶನ್​ ಬಗ್ಗೆ ಹೇಳಿರುವ ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದರ ಜೊತೆಗೆ ದರ್ಶನ್​ ಹಾಗೂ ಅವರ ಮನಗ ವಿನೀಶ್​ ಅವರು ಹಸಿರು ಶಾಲು ಹೊದ್ದಿರುವ ಹಳೇ ಫೋಟೋ ಸಹ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ. ಇದು ದರ್ಶನ್​ ಅವರ ಹುಟ್ಟುಹಬ್ಬದ ಸಮಯದಲ್ಲಿ ರೈತರೊಂದಿಗೆ ತೆಗೆದುಕೊಂಡಿರುವ ಚಿತ್ರ ಎಂದೂ ಹೇಳಲಾಗುತ್ತಿದೆ.
Published by: Anitha E
First published: September 29, 2020, 9:47 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories