ಮಾಸ್​ ನಟ 'ದರ್ಶನ್​'ರಿಂದ ಫ್ಯಾನ್ಸ್​ ಪೇಜ್ ಅಡ್ಮಿನ್​ಗಳಿಗೆ ಕ್ಲಾಸ್

news18
Updated:July 25, 2018, 7:42 PM IST
ಮಾಸ್​ ನಟ 'ದರ್ಶನ್​'ರಿಂದ ಫ್ಯಾನ್ಸ್​ ಪೇಜ್ ಅಡ್ಮಿನ್​ಗಳಿಗೆ ಕ್ಲಾಸ್
news18
Updated: July 25, 2018, 7:42 PM IST
-ನ್ಯೂಸ್ 18 ಕನ್ನಡ

ಸ್ಯಾಂಡಲ್​ವುಡ್ ನಟ ದರ್ಶನ್ ತನ್ನ ಫ್ಯಾನ್ಸ್​ ಪೇಜ್ ಅಡ್ಮಿನ್​ಗಳನ್ನು ಮನೆಗೆ ಕರೆಸಿಕೊಂಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳ ಕಿತ್ತಾಟ ತಾರಕ್ಕೇರುತ್ತಿರುವುದು ದರ್ಶನ್ ಗಮನಿಸಿದ್ದು, ಈ ಬಗ್ಗೆ ಅಡ್ಮಿನ್​ಗಳೊಂದಿಗೆ ಚರ್ಚಿಸಿ  ಕಿವಿಮಾತು ಹೇಳಿದ್ದಾರೆ. ನನ್ನ ಹೆಸರಿನ ಪೇಜ್​ಗಳಲ್ಲಿ ಯಾವುದೇ ನಟರನ್ನು ಹೀಯಾಳಿಸಿ ಪೋಸ್ಟ್​ಗಳನ್ನು ಹಾಕಬೇಡಿ ಎಂದು ದರ್ಶನ್ ಸೂಚಿಸಿದ್ದಾರೆ.ಎಲ್ಲರೂ ಒಟ್ಟಾಗಿ ಕೈ ಜೋಡಿಸಿದರೆ ಮಾತ್ರ ಕನ್ನಡ ಚಿತ್ರರಂಗ ಬೆಳವಣಿಗೆ ಆಗುತ್ತದೆ. ಯಾವುದೇ ಕಾರಣಕ್ಕೂ ನನ್ನ ಅಭಿಮಾನಿಗಳು ಇತರೆ ನಟ-ನಟಿಯರನ್ನು ಟ್ರೋಲ್ ಮಾಡುವುದಾಗಲಿ, ಅವರ ಹೆಸರು ಬಳಸಿ ಕಿತ್ತಾಡುವುದಾಗಲಿ ಮಾಡಬಾರದು ಎಂದು ಅಡ್ಮಿನ್​ಗಳಿಗೆ ತಾಕೀತು ಮಾಡಿದ್ದಾರೆ.ಅಲ್ಲದೆ ಇತರೆ ನಟರ ಅಭಿಮಾನಿಗಳಿಗೆ ನೋವಾಗುವಂತಹ ಯಾವುದೇ ಪೋಸ್ಟ್​ಗಳನ್ನು ನನ್ನ ಅಭಿಮಾನಿಗಳ ಪುಟದಲ್ಲಿ ಶೇರ್ ಆಗದಂತೆ ನೋಡಿಕೊಳ್ಳಬೇಕೆಂದು ದರ್ಶನ್ ತಿಳಿಸಿದ್ದಾರೆ.ಸಾಮಾಜಿಕ ತಾಣದಲ್ಲಿ ಕಾಣಿಸಿಕೊಂಡ 'ಬಾಸ್' ವಿವಾದ ಹಲವು ಆಯಾಮಗಳನ್ನು ಪಡೆದುಕೊಂಡಿತ್ತು. ಇಲ್ಲಿ ನಟ ಶಿವರಾಜ್ ಕುಮಾರ್, ಯಶ್ ಹೆಸರುಗಳು ಕೇಳಿ ಬಂದು ಅಭಿಮಾನಿಗಳ ನಡುವೆ ವಿತಂಡ ವಾದಗಳು ಹುಟ್ಟಿಕೊಂಡಿದ್ದವು. ಅಷ್ಟೇ ಅಲ್ಲದೆ ನಟರ  ಹೆಸರಿನಲ್ಲಿ ಅಭಿಮಾನಿಗಳು ಪರಸ್ಪರ ಕೆಸರೆರಚಾಟದಲ್ಲಿ ತೊಡಗಿದ್ದು, ದರ್ಶನ್ ಅವರಿಗೆ ನೋವುಂಟು ಮಾಡಿತ್ತು.ಇಂತಹ ಹಲವು ವಿವಾದಗಳಿಗೆ ತೆರೆ ಎಳೆಯುವ ಪ್ರಯತ್ನವಾಗಿ ನಟ ದರ್ಶನ್ ಖುದ್ದು ಅಭಿಮಾನಿ ಪಡೆಗಳ ಮುಖ್ಯಸ್ಥರನ್ನು ಕರೆಸಿ ಮಾತನಾಡಿದ್ದಾರೆ. ಚಾಲೆಂಜಿಂಗ್​ ಸ್ಟಾರ್ ಅವರ ಈ ನಡೆಯು ಕನ್ನಡ ಚಿತ್ರರಂಗದ ಪಾಲಿಗೆ ಒಳ್ಳೆಯ ಬೆಳವಣಿಗೆ ಎನ್ನಬಹುದು.'ಕುರುಕ್ಷೇತ್ರ' ಸಿನಿಮಾವನ್ನು ಪೂರ್ತಿಗೊಳಿಸಿರುವ ಚಾಲೆಂಜಿಂಗ್ ಸ್ಟಾರ್ ಸದ್ಯ 'ಯಜಮಾನ'ನ ಚಿತ್ರೀಕರಣದಲ್ಲಿದ್ದಾರೆ. ಇದರ ನಡುವೆ 'ಚೌಕ' ಚಿತ್ರದ ಬಳಿಕ ತರುಣ್ ಸುಧೀರ್ ಆ್ಯಕ್ಷನ್ ಕಟ್​ ಹೇಳಲಿರುವ 'ರಾಬರ್ಟ್'​ ಚಿತ್ರಕ್ಕೆ ದರ್ಶನ್ ನಾಯಕ ಎಂಬ ಮಾತುಗಳು ಕೇಳಿ ಬರುತ್ತಿದೆ. 'ಚೌಕ'ದಲ್ಲಿ 'ರಾಬರ್ಟ್'​ ಎಂಬ ವಿಶೇಷ ಪಾತ್ರದಲ್ಲಿ ದರ್ಶನ್ ಕಾಣಿಸಿಕೊಂಡಿದ್ದರು. ಇದುವೇ ಚಾಲೆಂಜಿಂಗ್ ಸ್ಟಾರ್​ ಅವರ 53 ನೇ ಚಿತ್ರದ ಟೈಟಲ್ ಆಗಲಿದೆ ಎನ್ನಲಾಗುತ್ತಿದೆ.
First published:July 25, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ